For Quick Alerts
ALLOW NOTIFICATIONS  
For Daily Alerts

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮೂಲಕ ಇದೀಗ ಮೂರು ಸೇವೆಗಳು ಲಭ್ಯ

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಕಳೆದ ತಿಂಗಳು ಪರಿಚಯಿಸಲಾಗಿದ್ದು, ವಿವಿಧ ರೀತಿಯ ಸೇವೆಗಳನ್ನು ಒದಗಿಸುತ್ತಿದೆ. ಇದೀಗ ಮೂರು ವಿಧದ ಉಳಿತಾಯ ಖಾತೆ ಸೌಲಭ್ಯಗಳನ್ನು ಪರಿಚಯಿಸಿದ್ದು, ಅವುಗಳೆಂದರೆ ಸಾಮಾನ್ಯ, ಡಿಜಿಟಲ್ ಮತ್ತು ಬೇಸಿಕ್.

|

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಕಳೆದ ತಿಂಗಳು ಪರಿಚಯಿಸಲಾಗಿದ್ದು, ವಿವಿಧ ರೀತಿಯ ಸೇವೆಗಳನ್ನು ಒದಗಿಸುತ್ತಿದೆ. ಇದೀಗ ಮೂರು ವಿಧದ ಉಳಿತಾಯ ಖಾತೆ ಸೌಲಭ್ಯಗಳನ್ನು ಪರಿಚಯಿಸಿದ್ದು, ಅವುಗಳೆಂದರೆ
ಸಾಮಾನ್ಯ, ಡಿಜಿಟಲ್ ಮತ್ತು ಬೇಸಿಕ್. ಈ ಮೂರು ವಿಧದ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರಗಳು ಒಂದೇ ಆಗಿದ್ದು, ವಾರ್ಷಿಕ ಶೇ. 4ರಷ್ಟಿದೆ. ಶ್ರೀಮಂತರಾಗುವವರಲ್ಲಿ ಈ ಲಕ್ಷಣಗಳು ಇರುತ್ತವೆ, ನಿಮ್ಮಲ್ಲಿ ಇವೆಯೆ ನೋಡಿ..?

ಸಂಸ್ಥೆಯ ಅಧಿಕೃತ ವೆಬ್ಸೈಟ್ ಇಂಡಿಯಾ ಪೋಸ್ಟ್-ippbonline.com. ನಲ್ಲಿ ಮಾಹಿತಿ ನೀಡಲಾಗಿದೆ.

ನಿಯಮಿತ ಉಳಿತಾಯ ಖಾತೆ

ನಿಯಮಿತ ಉಳಿತಾಯ ಖಾತೆ

ನಿಯಮಿತ ಉಳಿತಾಯ ಖಾತೆಯನ್ನು ಬ್ಯಾಂಕ್‌ನ ಕೇಂದ್ರಗಳಲ್ಲಿ ಹಾಗೂ ಮನೆ ಬಾಗಿಲಲ್ಲೇ ತೆರೆಯಬಹುದಾಗಿದೆ. ಶೂನ್ಯ ಬ್ಯಾಲೆನ್ಸ್ ನೊಂದಿಗೆ ಕೂಡಾ ಇದನ್ನು ತೆರೆಯಬಹುದಾಗಿದ್ದು, ಮಾಸಿಕ ಸರಾಸರಿ ಬ್ಯಾಲೆನ್ಸ್ ಬೇಕಿಲ್ಲ. ಈ ಖಾತೆಯನ್ನು ಹಣವನ್ನು ಸುರಕ್ಷಿತವಾಗಿರಿಸಲು, ನಗದು ಹಿಂತೆಗೆದುಕೊಳ್ಳಲು, ಹಣವನ್ನು ಠೇವಣಿ ಇಡಲು ಮತ್ತು ಸುಲಭದ ಹಣವನ್ನು ನಿರ್ವಹಿಸಲು ಬಳಸಬಹುದು.

ಡಿಜಿಟಲ್ ಉಳಿತಾಯ ಖಾತೆ

ಡಿಜಿಟಲ್ ಉಳಿತಾಯ ಖಾತೆ

ಡಿಜಿಟಲ್ ಉಳಿತಾಯ ಖಾತೆಯನ್ನು ಮೊಬೈಲ್ ಆಪ್ ಮೂಲಕ ತೆರೆಯಬಹುದಾಗಿದ್ದು, 18 ವರ್ಷ ಮೇಲ್ಪಟ್ಟವರು ತಮ್ಮ ಆಧಾರ್, ಪಾನ್ ಕಾರ್ಡ್ ದಾಖಲಾತಿ ಒದಗಿಸಿ ಖಾತೆ ತೆರೆಯಬಹುದು.
ಖಾತೆ ತೆರೆದ 12 ತಿಂಗಳೊಳಗೆ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗುತ್ತದೆ. ಬ್ಯಾಂಕ್‌ನ ಕೇಂದ್ರಗಳು ಅಥವಾ ಗ್ರಾಮೀಣ ಧನ ಸೇವಕ ಮೂಲಕ ಪೂರ್ಣಗೊಳಿಸಬಹುದು. ಬಳಿಕ ಈ ಖಾತೆ ನಿಯಮಿತ ಉಳಿತಾಯ ಖಾತೆಯಾಗಿ ಅಪ್‌ಗ್ರೇಡ್ ಆಗುತ್ತದೆ.

ಬೇಸಿಕ್ ಉಳಿತಾಯ ಖಾತೆ
 

ಬೇಸಿಕ್ ಉಳಿತಾಯ ಖಾತೆ

ಬೇಸಿಕ್ ಉಳಿತಾಯ ಖಾತೆ ಅಥವಾ ಪ್ರಾಥಮಿಕ ಉಳಿತಾಯ ಖಾತೆಯು ತೀರಾ ಕಡಿಮೆ ಶುಲ್ಕದೊಂದಿಗೆ ಪ್ರಾಥಮಿಕ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಗುರಿ ಇಟ್ಟುಕೊಂಡಿದೆ. ಈ ಖಾತೆಯ ಮೂಲಕ ತಿಂಗಳಿಗೆ ನಾಲ್ಕು ನಗದು ವಿತ್‌ಡ್ರಾವಲ್ಗಳಿಗೆ ಅವಕಾಶ ಕಲ್ಪಿಸುತ್ತದೆ. ಪ್ರಾಥಮಿಕ ಉಳಿತಾಯ ಖಾತೆಯನ್ನು ‌ಅಂಚೆ ಕಚೇರಿ ಉಳಿತಾಯ ಖಾತೆಯೊಂದಿಗೆ ಲಿಂಕ್ ಮಾಡಿಕೊಳ್ಳಬಹುದಾಗಿದೆ.

ಐಪಿಪಿಬಿ ಸೇವೆಗಳು

ಐಪಿಪಿಬಿ ಸೇವೆಗಳು

ಹಣದ ವರ್ಗಾವಣೆ, ನೇರ ಲಾಭ ವರ್ಗಾವಣೆಗಳು, ಬಿಲ್ ಮತ್ತು ಯುಟಿಲಿಟಿ ಪೇಮೇಂಟ್ಸ್ ಮತ್ತು ಆರ್ಟಿಜಿಎಸ್, ಐಎಂಪಿಎಸ್ ಮತ್ತು ನೆಪ್ಟ್ ಸೇವೆಗಳ ಜೊತೆಗೆ ಎಂಟರ್ಪ್ರೈಸ್ ಮತ್ತು ವ್ಯಾಪಾರಿ ಪಾವತಿ ಹೀಗೆ ಹಲವಾರು ಸೇವೆಗಳನ್ನು ಒದಗಿಸುತ್ತದೆ.

Read more about: post office schemes money banking
English summary

India Post Payments Bank Offers These 3 Types Of Savings Accounts

India Post Payments Bank (IPPB), which was launched last month, offers different types of savings accounts - regular, digital and basic.
Story first published: Monday, October 8, 2018, 14:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X