For Quick Alerts
ALLOW NOTIFICATIONS  
For Daily Alerts

ಹಿರಿಯ ನಾಗರಿಕರ ಪಿಂಚಣಿ ಹೆಚ್ಚಳ ಹಾಗು ಪ್ರತಿ ಜಿಲ್ಲೆಗೆ ವೃದ್ಧಾಶ್ರಮ: ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆ

|

ಹಿರಿಯ ನಾಗರಿಕರಿಗೆ ನೀಡುತ್ತಿರುವ ಪಿಂಚಣಿ ಮೊತ್ತವನ್ನು ಹೆಚ್ಚಿಸಲು ಹಾಗು ಪ್ರತಿ ಜಿಲ್ಲೆಯಲ್ಲಿ ಕನಿಷ್ಟ ಒಂದು ವೃದ್ಧಾಶ್ರಮ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಸುಪ್ರೀಂಕೋರ್ಟ್ ಗುರುವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿ ಮದನ್ ಬಿ. ಲೋಕುರ್ ಹಾಗೂ ನ್ಯಾ. ದೀಪಕ್ ಗುಪ್ತ ಅವರ ಪೀಠ ಈ ಬಗ್ಗೆ ಸೂಚನೆ ನೀಡಿದ್ದು, ಹಿರಿಯ ವೃದ್ಧಿರಿಗೆ ವಿಶೇಷ ಕಾಳಜಿ ಹಾಗು ನೆರವಿನ ಅಗತ್ಯವಿದೆ ಎಂದು ಹೇಳಿದೆ.

ಇಂದಿರಾಗಾಂಧಿ ವೃದ್ಧಾಪ್ಯ ವೇತನ
 

ಇಂದಿರಾಗಾಂಧಿ ವೃದ್ಧಾಪ್ಯ ವೇತನ

ಇಂದಿರಾಗಾಂಧಿ ವೃದ್ಧಾಪ್ಯ ವೇತನ ಯೋಜನೆ ಮುಖಾಂತರ 60 ರಿಂದ 79 ವರ್ಷದವರೆಗಿನ ಹಿರಿಯರಿಗೆ ಮಾಸಿಕ ರೂ. 200 ಹಾಗು 80 ರ ನಂತರದವರಿಗೆ ರೂ. 500 ನೀಡಲಾಗುತ್ತಿದೆ. ಈ ಯೋಜನೆ ಆರಂಭದಿಂದ ಇಲ್ಲಿಯವರೆಗೆ ಮೊತ್ತ ಪರಿಷ್ಕರಣೆಯಾಗಿಲ್ಲ. ಇದರ ಜತೆಗೆ ರಾಜ್ಯ ಸರ್ಕಾರದಿಂದಲೂ ಯೋಜನೆಗಳಿವೆ.

ವೃದ್ಧಾಪ್ಯ ವೇತನ ಹೆಚ್ಚಿಸಲು ಸೂಚನೆ

ಕೇಂದ್ರದ ಮಾಜಿ ಕಾನೂನು ಸಚಿವ ಅಶ್ವಿನಿ ಕುಮಾರ್ ಹಾಗೂ ವಕೀಲ ಸಂಜೀವ್ ಪಣಿಗ್ರಾಹಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಹಿರಿಯರ ಪಿಂಚಣಿ ವೇತನ ಹೆಚ್ಚಿಸಲು ಕೇಂದ್ರಕ್ಕೆ ಸೂಚನೆ ನೀಡುವಂತೆ ಮನವಿ ಮಾಡಿದ್ದಾರೆ.

ಹಿರಿಯ ನಾಗರಿಕರ ಸಂಖ್ಯೆ

2001 ರಲ್ಲಿ 1.98 ಕೋಟಿ ಇದ್ದ ಹಿರಿಯ ನಾಗರಿಕರ ಸಂಖ್ಯೆಯು 2011 ರಲ್ಲಿ 10.38 ಕೋಟಿಗೆ ಹೆಚ್ಚಾಗಿದೆ. 2021 ರಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ಜನರ ಸಂಖ್ಯೆ 14.3 ಕೋಟಿ ಮತ್ತು 2026 ರಲ್ಲಿ 17.3 ಕೋಟಿಗೆ ಹೆಚ್ಚಾಗುತ್ತದೆ ಎಂದು ಊಹಿಸಲಾಗಿದೆ.

Read more about: pension money finance news banking
English summary

SC asks Centre to increase pension amount for senior citizen

The Supreme Court on Thursday asked the Centre to increase the pension amount for senior citizens.
Story first published: Friday, December 14, 2018, 13:05 [IST]
Company Search
Enter the first few characters of the company's name or the NSE symbol or BSE code and click 'Go'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more