For Quick Alerts
ALLOW NOTIFICATIONS  
For Daily Alerts

ಬಾಲಿವುಡ್ ನ ಟಾಪ್ 15 ಶ್ರೀಮಂತ ನಟಿಯರು, ನಂಬರ್ 1 ಯಾರು ಗೊತ್ತೆ?

|

ಪ್ರತಿಯೊಂದು ಕ್ಷೇತ್ರದಲ್ಲೂ ಸಾಕಷ್ಟು ಸ್ಪರ್ಧೆಗಳಿದ್ದು, ಸೋಲು ಗೆಲುವುಗಳು ಜೀವನದ ಅವಿಭಾಜ್ಯ ಅಂಗವಾಗಿದೆ. ಇದಕ್ಕೆ ಬಾಲಿವುಡ್ ಕೂಡ ಹೊರತಾಗಿಲ್ಲ. ಇಲ್ಲಿ ಸಾಕಷ್ಟು ಪ್ರತಿಭಾನ್ವಿತ ನಟ/ನಟಿಯರಿದ್ದಾರೆ. ಇವರಲ್ಲಿ ಅತಿ ಹೆಚ್ಚು ಶ್ರೀಮಂತ ನಟ/ನಟಿಯರು ಯಾರು? ವಾರ್ಷಿಕವಾಗಿ ಹೆಚ್ಚು ಹಣ ಯಾರು ಗಳಿಸುತ್ತಾರೆ? ಒಂದು ಚಿತ್ರಕ್ಕೆ ಪಡೆಯುವ ಸಂಭಾವನೆ ಎಷ್ಟು? ಹೀಗೆ ಹಲವಾರು ಚರ್ಚೆಗಳು ನಡೆಯುತ್ತಿರುತ್ತವೆ.

ದಕ್ಷಿಣ ಭಾರತದ ಟಾಪ್ 20 ಶ್ರೀಮಂತ ನಟರು, ನಂಬರ್ 1 ಯಾರು ಗೊತ್ತೆ?

ದೀಪಿಕಾ ಪಡುಕೋಣೆ ($45 Million)
 

ದೀಪಿಕಾ ಪಡುಕೋಣೆ ($45 Million)

ಭಾರತದ ಮಸ್ತಾನಿ ಖ್ಯಾತಿಯ ದೀಪಿಕಾ ಪಡುಕೋಣೆ ಬಾಲಿವುಡ್ ನಲ್ಲಿ ಬಹುದೊಡ್ಡ ಮಾರುಕಟ್ಟೆಯನ್ನು ಹೊಂದಿದ್ದು, ಅವರ ವೃತ್ತಿ ಜೀವನ ಉತ್ತುಂಗದಲ್ಲಿದೆ.

2007 ರಲ್ಲಿ ಶಾರುಖ್ ಖಾನ್ ಜೊತೆಗೆ ಓಂ ಶಾಂತಿ ಓಂ ಚಿತ್ರದಲ್ಲಿ ನಟಿಸುವ ಮೂಲಕ ಬಾಲಿವುಡ್ ಪ್ರವೇಶಿಸಿದರು. ಅವರ ಮೊದಲ ಚಿತ್ರ ಉಪೇಂದ್ರರೊಂದಿಗೆ ನಟಿಸಿದ ಐಶ್ವರ್ಯ. ಚೆನ್ನೈ ಎಕ್ಸ್ಪ್ರೆಸ್, ಯೇ ಜವಾನಿ ಹೈ ದೀವಾನಿ, ರಾಮ್ ಲೀಲಾ, ಮತ್ತು ರೇಸ್ 2 ರೊಂದಿಗೆ ಒಂದೇ ವರ್ಷದಲ್ಲಿ 4 ಹಿಟ್ ಗಳನ್ನು ಹೊಂದಿದ ನಟಿಯಾಗಿದ್ದು, ವರ್ಷಕ್ಕೆ ರೂ. 600 ಕೋಟಿಗಿಂತ ಹೆಚ್ಚು ಹಣವನ್ನು ಗಳಿಸಿದ್ದಾರೆ.

ಹಾಲಿವುಡ್ ಚಿತ್ರ XXX ನಲ್ಲಿ ವಿನ್ ಡೀಸೆಲ್ ನೊಂದಿಗೆ ಪ್ರಮುಖ ನಟಿಯಾಗಿ ಕೆಲಸ ಮಾಡಿದ ನಂತರ ಬ್ರಾಂಡ್ ಮೌಲ್ಯ ಹೆಚ್ಚಾಯಿತು. ಅದು ತಕ್ಷಣದ ಯಶಸ್ಸನ್ನು ಘೋಷಿಸಿತು. ಪದ್ಮಾವತ್ ಕೂಡ ಬಾಲಿವುಡ್ ಬ್ಲಾಕ್ ಬಸ್ಟರ್ ಆಗಿತ್ತು. ಪ್ರತಿ ಚಿತ್ರಕ್ಕೆ ರೂ. 15 ಕೋಟಿ ಪಡೆಯುತ್ತಿದ್ದು, ಆಕೆಯ ಬ್ರಾಂಡ್ ಎಂಡೋರ್ಮೆಂಟ್ ಗಳು ರೂ. 8 ಕೋಟಿ ಪಡೆಯುತ್ತಾರೆ. ಇವರು ಬಾಲಿವುಡ್ ನ 10 ಅತೀ ಶ್ರೀಮಂತ ನಟರು, ನಂಬರ್ 1 ಯಾರು ಗೊತ್ತಾ?

ಪ್ರಿಯಾಂಕ ಚೋಪ್ರಾ ($40 Million)

ಪ್ರಿಯಾಂಕ ಚೋಪ್ರಾ ($40 Million)

2000ರಲ್ಲಿ ಮಿಸ್ ವರ್ಲ್ಡ್ ಪ್ರಿಯಾಂಕ ಚೋಪ್ರಾ ಕೇವಲ ಬಾಲಿವುಡ್ ನಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಖ್ಯಾತಿಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಎಬಿಸಿ ನೆಟ್ವರ್ಕ್ ನ ಜನಪ್ರಿಯ ಟೆಲಿವಿಷನ್ ಶೋ ಕ್ವಾಂಟಿಕೊದಲ್ಲಿ ಪ್ರಮುಖ ಪಾತ್ರದ ಕಾರಣ ಇಡೀ ಪ್ರಪಂಚದಲ್ಲೇ ಹೆಚ್ಚು ಸಂಭಾವನೆ ಪಡೆದ ಟಿವಿ ನಟಿಯರಲ್ಲಿ ಒಬ್ಬರಾಗಿದ್ದಾರೆ. ಅಲ್ಲದೆ ಹಾಲಿವುಡ್ ಚಿತ್ರ ಬೇವಾಚ್ ನಲ್ಲಿ ಅಭಿನಯಿಸಿರುವುದು ಅವರ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸಿದೆ. ಬಾಜಿರಾವ್ ಮಸ್ತಾನಿ, ಬರ್ಫಿ, ಕಮಿನೆ, ಐತ್ರಾಜ್, ಡಾನ್, ಮುಂತಾದವುಗಳನ್ನು ಒಳಗೊಂಡಂತೆ ಅನೇಕ ಬಾಲಿವುಡ್ ಸಿನೆಮಾಗಳಲ್ಲಿ ನಟಿಸಿದ್ದಾರೆ. ಒಂದು ಚಿತ್ರಕ್ಕಾಗಿ ರೂ. 12 ಕೋಟಿ ಮತ್ತು ಬ್ರಾಂಡ್ ಎಂಡೋರ್ಮೆಂಟ್ ಗಳು ರೂ. 5 ಕೋಟಿ ಗಳಿಸುತ್ತಾರೆ.

ಕರೀನಾ ಕಪೂರ್ ಖಾನ್ ($10-15 Million ಹಾಗು ಗಂಡನ $2 Billion ಪ್ರಾಪರ್ಟಿ)

ಕರೀನಾ ಕಪೂರ್ ಖಾನ್ ($10-15 Million ಹಾಗು ಗಂಡನ $2 Billion ಪ್ರಾಪರ್ಟಿ)

ಬಾಲಿವುಡ್ ಪ್ರಮುಖ ನಟಿಯರ ಪೈಕಿ ಒಬ್ಬಳಾದ ಕರೀನಾ ಕಪೂರ್ ಖಾನ್. ಅವರು ರೆಪ್ಯೂಜಿ ಚಿತ್ರದೊಂದಿಗೆ ಬಾಲಿವುಡ್ ಪಾದಾರ್ಪಣೆ ಮಾಡಿದ್ದರು, ತಾಷನ್ ಚಲನಚಿತ್ರದ ಮೂಲಕ ಮುನ್ನೆಲೆಗೆ ಬಂದರು. ಅವರ ಹಿಟ್ ಸಿನೆಮಾಗಳಲ್ಲಿ ಕಭಿ ಖುಷಿ ಕಬ್ಬಿ ಗಮ್, ಬಜರಂಗಿ ಭಾಯಿಜಾನ್, ಚಮೇಲಿ, ಜಬ್ ವಿ ಮೆಟ್ ಹೀಗೆ ಹಲವು ಸೇರಿವೆ. ಪ್ರತಿ ಚಿತ್ರಕ್ಕೆ ರೂ. 8-9 ಕೋಟಿ ಸಂಭಾವನೆ ಪಡೆಯುತ್ತಾಳೆ.

ಐಶ್ವರ್ಯಾ ರೈ ಬಚ್ಚನ್ ($35 Million)
 

ಐಶ್ವರ್ಯಾ ರೈ ಬಚ್ಚನ್ ($35 Million)

ಐಶ್ವರ್ಯಾ ರೈ ಬಚ್ಚನ್ ಭೂಮಿಯ ಮೇಲಿನ ಅತ್ಯಂತ ಡಿಸೈರೆಬಲ್ ಮಹಿಳೆಯರ ಪೈಕಿ ಒಬ್ಬರು. 1994 ರಲ್ಲಿ ಮಿಸ್ ವರ್ಲ್ಡ್ ಪ್ರಶಸ್ತಿ ಪಡೆದ ನಂತರ ದಕ್ಷಿಣ ಭಾರತೀಯ ಇರುವರ್ ಚಿತ್ರದಲ್ಲಿ ಅವರು ಜೀವನ ಆರಂಭಿಸಿ, ಜೀನ್ಸ್ ಚಿತ್ರದೊಂದಿಗೆ ಬಾಲಿವುಡ್ ಪ್ರವೇಶಿಸಿದರು. ದೇವದಾಸ್, ಧೂಮ್ 2, ಹಮ್ ದಿಲ್ ದೇ ಚುಕೆ ಸನಮ್, ಜೊಧಾ ಅಕ್ಬರ್ ಹೀಗೆ ಯಶಸ್ವಿ ಚಿತ್ರಗಳನ್ನು ನೀಡಿದ್ದಾರೆ.

ಪ್ರೀತಿ ಝಿಂಟಾ ($30 Million)

ಪ್ರೀತಿ ಝಿಂಟಾ ($30 Million)

ಗುಳಿ ಕೆನ್ನೆಯ ಚೆಲುವೆ ಪ್ರೀತಿ ಝಿಂಟಾ ಅವರು ಟಿವಿ ಜಾಹಿರಾತಿನೊಂದಿಗೆ ಉದ್ಯಮಕ್ಕೆ ಬಂದರು. ಅವರು ದಿಲ್ ಸೇ ಮೂಲಕ ಚಲನಚಿತ್ರಗಳಲ್ಲಿ ಪಾದಾರ್ಪಣೆ ಮಾಡಿದರು, 1999 ರಲ್ಲಿ ಸೋಲ್ಜರ್ ಅವರ ಮೊದಲ ದೊಡ್ಡ ಯಶಸ್ಸು. ಕಲ್ ಹೋ ನಾ ಹೋ, ಕೊಯಿ ಮಿಲ್ ಗಾ, ವೀರ್ ಜರಾ ಕೆಲವು ಹೆಸರಾಂತ ಚಿತ್ರಗಳಲ್ಲಿ ಕೆಲವು ಕಾಣಿಸಿಕೊಂಡರು. ಈ ದಿನಗಳಲ್ಲಿ ಅವರು ಸಿನೆಮಾದಲ್ಲಿ ಹೆಚ್ಚು ಕಾಣಿಸದಿದ್ದರೂ, ಬಾಲಿವುಡ್ ನ ಹಲವು ಶ್ರೀಮಂತ ನಟಿಯರ ಪೈಕಿ ಒಬ್ಬರು. ಬಿಸಿನೆಸ್ ನಲ್ಲಿ ತೊಡಗಿಕೊಂಡಿರುವ ಅವರು ಕಿಂಗ್ಸ್ XI ಪಂಜಾಬ್, ಐಪಿಎಲ್ ತಂಡದ ಸಹ-ಮಾಲೀಕರಾಗಿದ್ದಾರೆ.

ಅನುಶ್ಕಾ ಶರ್ಮಾ ($25 Million)

ಅನುಶ್ಕಾ ಶರ್ಮಾ ($25 Million)

ಅನುಶ್ಕಾ ಶರ್ಮಾ ಅವರು ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ರಬ್ ನೆ ಬಾನಾದಿ ಜೋಡಿ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ಅಂದಿನಿಂದಲೂ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಒಂದು ಚಿತ್ರಕ್ಕೆ ಅನುಷ್ಕಾ ಶರ್ಮಾ ರೂ. 7-9 ಕೋಟಿ ಪಡೆಯುತ್ತಾಳೆ.

ಸೋನಮ್ ಕಪೂರ್ ($15 Million)

ಸೋನಮ್ ಕಪೂರ್ ($15 Million)

ಸೋನಮ್ ಕಪೂರ್ ಸಾವರಿಯಾ ಚಿತ್ರದ ಮೂಲಕ 2007 ರಲ್ಲಿ ಉದ್ಯಮಕ್ಕೆ ಪ್ರವೇಶಿಸಿದರು. 2016 ರಲ್ಲಿ, ನೀರ್ಜಾ ಚಿತ್ರ ಅವರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ತಂದುಕೊಟ್ಟಿತು. ಬಾಲಿವುಡ್ ಉದ್ಯಮದಲ್ಲಿ ಫ್ಯಾಷನ್ ದಿವಾ ಎಂದು ಕರೆಯುತ್ತಾರೆ. ಪ್ರತಿ ಚಿತ್ರಕ್ಕೆ ರೂ. 2-3 ಕೋಟಿ ಸಂಭಾವನೆ ಪಡೆಯುತ್ತಾರೆ.

ಸೋನಾಕ್ಷಿ ಸಿನ್ಹಾ ($15 Million)

ಸೋನಾಕ್ಷಿ ಸಿನ್ಹಾ ($15 Million)

ಸೋನಾಕ್ಷಿ ಸಿನ್ಹಾ ಸಲ್ಮಾನ್ ಖಾನ್ ಜತೆಗೆ ದಬಾಂಗ್ ಚಿತ್ರದ ಮೂಲಕಗೆ ಬಾಲಿವುಡ್ ಪಾದಾರ್ಪಣೆ ಮಾಡಿದರು. ಇದು ಸೂಪರ್ ಹಿಟ್ ಬ್ಲಾಕ್ಬಸ್ಟರ್ ಆಗಿತ್ತು. ಅವರು ಉದ್ಯಮದಲ್ಲಿ ಉತ್ತಮ ಪ್ರತಿಭಾವಂತ ನಟಿಯರಲ್ಲಿ ಒಬ್ಬರಾಗಿದ್ದು, ಉತ್ತಮ ನರ್ತಕಿಯಾಗಿದ್ದಾರೆ. ಪ್ರತಿ ಚಿತ್ರಕ್ಕೆ ರೂ. 4-6 ಕೋಟಿ ಪಡೆಯುತ್ತಾರೆ.

ಕಂಗನಾ ರನೌತ್ ($10 Million)

ಕಂಗನಾ ರನೌತ್ ($10 Million)

ಕಂಗನಾ ರನೌತ್ ಅವರ ಬೋಲ್ಡ್ ವರ್ತನೆಯಿಂದಾಗಿ ಹೆಸರುವಾಸಿಯಾಗಿದ್ದು, ಅತ್ಯಂತ ಧೀರ ಮತ್ತು ಪ್ರತಿಭಾವಂತ ಭಾರತೀಯ ನಟಿಯರಲ್ಲಿ ಒಬ್ಬರು. ತನು ವೆಡ್ಸ್ ಮನು, ಕ್ವೀನ್ ಮತ್ತು ತನು ವೆಡ್ಸ್ ಮನು ರಿಟರ್ನ್ಸ್ ಮುಂತಾದ ಸಿನಿಮಾಗಳೊಂದಿಗೆ ಅವರ ಖ್ಯಾತಿಯು ಬೆಳೆಯಿತು. ಪ್ರತಿ ಚಿತ್ರಕ್ಕೆ ರೂ. 11 ಕೋಟಿ ಪಡೆಯುತ್ತಾರೆ.

ಕತ್ರಿನಾ ಕೈಫ್ ($10 Million)

ಕತ್ರಿನಾ ಕೈಫ್ ($10 Million)

ಕತ್ರಿನಾ ಕೈಫ್ ಅವರು ಮಾಡೆಲಿಂಗ್ ಮತ್ತು ನಟನೆಯಲ್ಲಿ ಅತ್ಯಂತ ಯಶಸ್ವಿ ವೃತ್ತಿಜೀವನ ಹೊಂದಿದ್ದಾರೆ. ಅವರು ಮೂಲದಿಂದ ಭಾರತೀಯರಾಗಿಲ್ಲದಿದ್ದರೂ, ಆಕೆ ದೇಶದಲ್ಲಿ ಅತ್ಯಂತ ಪ್ರೀತಿಪಾತ್ರ ನಟಿಯರಲ್ಲಿ ಒಬ್ಬರಾಗಿದ್ದು, ಎಲ್ಲ ಪ್ರಸಿದ್ಧ ನಟರೊಂದಿಗೆ ಕೆಲಸ ಮಾಡಿದ್ದಾರೆ. ಅವರು ಧೂಮ್ 3, ನಮಸ್ತೆ ಲಂಡನ್, ಮತ್ತು ಏಕ್ ಥಾ ಟೈಗರ್ ಸೇರಿದಂತೆ ಚಲನಚಿತ್ರಗಳಿಗೆ ಪ್ರಸಿದ್ಧರಾಗಿದ್ದಾರೆ. ವೆಟ್, ಸ್ಲೈಸ್, ಲಕ್ಸ್, ಮತ್ತು ಟೈಟಾನ್ ಸೇರಿದಂತೆ ಹಲವು ಟೆಲಿವಿಷನ್ ಜಾಹಿರಾತುಗಳಲ್ಲಿ ನಟಿಸಿದ್ದಾರೆ. ಅವಳು ಪ್ರತಿ ಚಿತ್ರಕ್ಕೆ ರೂ. 6-7 ಕೋಟಿ ಪಡೆಯುತ್ತಾಳೆ.

ಕಾಜೊಲ್ ($16 Million)

ಕಾಜೊಲ್ ($16 Million)

ಕಾಜೊಲ್ ದೇವಗನ್ ವಿಶ್ವದ ಪ್ರಸಿದ್ಧ ನಟಿ. ಕಾಜೊಲ್ ಬಾಲಿವುಡ್ ನ ಬಹುಮುಖ ಪ್ರತಿಭೆಯ ನಟಿ. ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

ಶ್ರುತಿ ಹಾಸನ್ ($7 million)

ಶ್ರುತಿ ಹಾಸನ್ ($7 million)

ದಕ್ಷಣ ಭಾರತದ ಪ್ರಮುಖ ನಟಿಯರಲ್ಲಿ ಒಬ್ಬರಾದ ಶ್ರುತಿ ಸ್ವಲ್ಪ ಸಮಯದ ಅವಧಿಯಲ್ಲಿ ಸ್ಟಾರ್ ಮೌಲ್ಯವನ್ನು ಹೆಚ್ಚಿಸಿಕೊಂಡಳು. ಅವರು ತೆಲುಗು ಮತ್ತು ತಮಿಳು ಚಲನಚಿತ್ರಗಳೊಂದಿಗೆ ಪ್ರಾರಂಭಿಸಿ ನಂತರ ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ಸ್ಟಾರ್ ನಟ ಕಮಲ್ ಹಾಸನ್ ಮತ್ತು ಸಾರಿಕಾ ಪುತ್ರಿ.

ಆಲಿಯಾ ಭಟ್ ($6.5 Million)

ಆಲಿಯಾ ಭಟ್ ($6.5 Million)

ಇವರು ಬಾಲಿವುಡ್ ನಟಿಯರ ಅತೀ ಶ್ರೀಮಂತ ಗಂಡಂದಿರು, ಸಂಪತ್ತು ಎಷ್ಟಿದೆ ಗೊತ್ತೆ?

ವಿದ್ಯಾ ಬಾಲನ್ ($27 Million)

ವಿದ್ಯಾ ಬಾಲನ್ ($27 Million)

ಜನಪ್ರಿಯ ಪ್ಯಾಮಿಲಿ ಟಿವಿ ಕಾರ್ಯಕ್ರಮವಾದ ಹಮ್ ಪಾಂಚ್ ಮೂಲಕ ವಿದ್ಯಾ ಬಾಲನ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಪರಿಣೀತಾ ಮೂಲಕ ಬಾಲಿವುಡ್ ಪಾದಾರ್ಪಣೆ ಮಾಡಿದರು. ಮುನ್ನಾಭಾಯ್, ದಿ ಡರ್ಟಿ ಪಿಕ್ಚರ್ ಅವರ ಜೀವನವನ್ನು ಬದಲಾಯಿಸಿತು. ವಿದ್ಯಾ ಬಾಲನ್ ನಿರ್ಮಾಪಕ ಸಿದ್ಧಾರ್ಥ ರಾಯ್ ಕಪೂರ್ ಅವರನ್ನು ವಿವಾಹವಾಗಿದ್ದಾರೆ.

Read more about: bollywood money movies finance news
English summary

Top 15 Richest Bollywood Actresses, Who is Number 1?

In order to know about the net worth as well as the incomes of the best and richest Bollywood actresses in 2018, here is a list of the top 10 richest Bollywood actresses:
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more