For Quick Alerts
ALLOW NOTIFICATIONS  
For Daily Alerts

ಅಂಚೆ ಇಲಾಖೆ ಗ್ರಾಹಕರಿಗೆ ಸಿಹಿಸುದ್ದಿ

|

ದೇಶದ ಜನರಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿ ತರುತ್ತದೆ. ಭಾರತೀಯ ಅಂಚೆ ಇಲಾಖೆ ಅಡಿಯಲ್ಲಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‍ಪಿಎಸ್) ಜಾರಿಗೆ ತಂದಿದ್ದು, 18 ರಿಂದ 64 ವರ್ಷದೊಳಗಿನ ಎಲ್ಲರೂ ಇದರ ಸಾಮಾಜಿಕ ಭದ್ರತೆ ಪಡೆಯಬಹುದು.

ಅಂಚೆ ಇಲಾಖೆ ಗ್ರಾಹಕರಿಗೆ ಸಿಹಿಸುದ್ದಿ

 

ಇದು ಪೆನ್ಷನ್ ಫಂಡ್ ರೆಗ್ಯುಲೇಟರಿ ಆಂಡ್ ಡೆವಲಪ್‍ಮೆಂಟ್ ಅಥಾರಿಟಿ (ಪಿಎಫ್ಆರ್ಡಿಎ) ಯಿಂದ ನಿರ್ವಹಣೆ ಹಾಗೂ ನಿಯಂತ್ರಿಸಲ್ಪಟ್ಟಿದೆ. ಇದಕ್ಕೆ ನೋಂದಾಯಿಸಲ್ಪಡುವವರಿಂದ ಪಡೆದ ಹಣಕ್ಕೆ ಹೊಂದುವ ಮೊತ್ತವನ್ನು ಸರ್ಕಾರವೂ ಭರಿಸಲಿದ್ದು, ಪ್ರತಿ ಪಿಂಚಣಿ ಖಾತೆಗೆ ಪರ್ಮನೆಂಟ್ ರಿಟೈರ್‍ಮೆಂಟ್ ಅಕೌಂಟ್ ನಂಬರ್ (ಪಿಆರ್‍ಎಎನ್) ನೀಡಲಾಗುತ್ತದೆ.

ಇದರಲ್ಲಿ ಟೈರ್ 1, ಟೈರ್ 2 ಎಂಬ ಎರಡು ವರ್ಗಗಳಿದ್ದು, ಟೈರ್ 1 ವರ್ಗದಲ್ಲಿ ಹೂಡಿದ ಹಣ ವ್ಯಕ್ತಿಗೆ 60 ವರ್ಷಗಳವರೆಗೆ ಹಿಂಪಡೆಯುವಂತಿಲ್ಲ. ಆದರೆ ಟೈರ್ 2 ಉಳಿತಾಯ ಖಾತೆ ರೀತಿಯಲ್ಲಿದ್ದು, ಇದರಲ್ಲಿ ತೊಡಗಿಸಿದ ಹಣವನ್ನು ಯಾವಾಗಲಾದರು ಹಿಂಪಡೆಯಬಹುದು. ಇನ್ನು ಎನ್‍ಪಿಎಸ್‍ನಲ್ಲಿ ತೊಡಗಿಸಿದ ಹಣಕ್ಕೆ ರೂ. 50 ಸಾವಿರವರೆಗೆ ತೆರಿಗೆ ವಿನಾಯಿತಿ ಇದೆ ಎಂದು ಇಲಾಖೆ ತಿಳಿಸಿದೆ.

English summary

Post Office National Pension System, Transaction Charges, Other Details

India Post or Department of posts, which runs the postal network of the country, also offers the facility of opening accounts under National Pension System (NPS).
Story first published: Monday, January 7, 2019, 10:36 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more