ಶಾಕಿಂಗ್! 77.3 ಕೋಟಿ ಇ-ಮೇಲ್, 2.1 ಕೋಟಿ ಪಾಸ್ವರ್ಡ್ ಮಾಹಿತಿ ಸೋರಿಕೆ! ನಿಮ್ಮ ಡೇಟಾ ಸೋರಿಕೆ ಆಗಿದೆಯೆ ಚೆಕ್ ಮಾಡಿ
ಇದು ಅತಿದೊಡ್ಡ ಡೇಟಾ ಸೋರಿಕೆ! ಅತಿದೊಡ್ಡ ಸಾರ್ವಜನಿಕ ದತ್ತಾಂಶ ಉಲ್ಲಂಘನೆ! ಹೌದು.. ವಿಶ್ವದ 772,904,991 ಕೋಟಿ ಇ-ಮೇಲ್ ಐಡಿ, 21,222,975 ಕೋಟಿ ಪಾಸ್ವರ್ಡ್ ಗಳ ಮಾಹಿತಿ ಸೋರಿಕೆ ಇದಾಗಿದ್ದು, ಇತ್ತೀಚೆಗಿನ ಅತಿದೊಡ್ಡ ಡೇಟಾ ಸೋರಿಕೆ ಪ್ರಕರಣ ಎನ್ನಲಾಗಿದೆ. ವೈಯಕ್ತಿಕ ಮಾಹಿತಿ ಸಂಗ್ರಹವುಳ್ಳ 87 ಗಿಗಾಬೈಟ್ ಆನ್ಲೈನ್ ಮೂಲಕ ಸೋರಿಕೆಯಾಗಿದೆ. ಸೈಬರ್ ಹ್ಯಾಕರ್ ಗಳಿಂದ ತಪ್ಪಿಸಿಕೊಳ್ಳೋದು ಹೇಗೆ?

ಟ್ರೋಯ್ ಹಂಟ್
ಡೇಟಾ ಸೋರಿಕೆ ಮಾಹಿತಿಯನ್ನು ಟ್ರೋಯ್ ಹಂಟ್ ಎಂಬ ವೆಬ್ ಸೆಕ್ಯುರಿಟಿ ರಿಸರ್ಚರ್ ಸಂಸ್ಥೆ ಬಹಿರಂಗಪಡಿಸಿದೆ. ಸೋರಿಕೆಯಾದ ಮಾಹಿತಿಗಳಲ್ಲಿ ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿದ ಅಂಶಗಳು ಇಲ್ಲ ಎನ್ನಲಾಗಿದೆ.

ನಿಮ್ಮ ಡೇಟಾ ಸೋರಿಕೆ ಆಗಿದೆಯೆ? ಇಲ್ಲಿ ಚೆಕ್ ಮಾಡಿ
ಆಸಕ್ತರು ತಮ್ಮ ಇ-ಮೇಲ್ ಐಡಿ ಮಾಹಿತಿಗಳು ಸೋರಿಕೆ ಆಗಿವೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ https://haveibeenpwned.com/ ತಿಳಿದುಕೊಳ್ಳಬಹುದು. ಈ ವೆಬ್ಸೈಟ್ ನಲ್ಲಿ ನಿಮ್ಮ ಇ-ಮೇಲ್ ಐಡಿ ನಮೂದಿಸಿ, ನಂತರ ಪಾಸ್ ವರ್ಡ್ ನಮೂದಿಸಬೇಕು.

ಜಾಗೃತಿ ವಹಿಸಿ
ಇಲ್ಲಿ ನಮೂದಿಸುವ ಪಾಸ್ವರ್ಡ್ ತಮಗೂ ಗೊತ್ತಾಗುವುದಿಲ್ಲ ಎಂದು ವೆಬ್ ಸೈಟ್ ನವರು ಹೇಳಿಕೊಂಡಿದ್ದಾರೆ. ಆದರೂ ಬಳಕೆದಾರರು ಇಮೇಲ್/ಪಾಸ್ವರ್ಡ್ ನಮೂದಿಸುವ ಮುನ್ನ ಯೋಚಿಸಿ ಮುನ್ನಡೆಯುವುದು ಉತ್ತಮ. ಇದರ ಬದಲು ಪಾಸ್ವರ್ಡ್ ಸೋರಿಕೆಯಾಗಿದೆ ಎಂಬ ಅನುಮಾನವಿದ್ದರೆ ಬದಲಿಸುವುದೇ ಸೂಕ್ತ. ಎಚ್ಚರಗೊಳ್ಳಿ..! 3ನೇ ಮಹಾಯುದ್ದ ಪ್ರಾರಂಭವಾಗಿದೆ...!?