For Quick Alerts
ALLOW NOTIFICATIONS  
For Daily Alerts

ಜಗತ್ತಿನಲ್ಲಿ ರೂಪಾಯಿಗೆ ಅತಿಹೆಚ್ಚು ಬೆಲೆ ಇರುವ 14 ದೇಶಗಳು ನಿಮಗೆ ಗೊತ್ತೆ?

|

ವಿದೇಶ ಪ್ರಯಾಣ ಮಾಡಲು ನೀವು ಬಯಸುವಿರಾ? ವಿದೇಶ ಪ್ರಯಾಣ ಕೈಗೊಂಡರೂ ಖರ್ಚು ಹೆಚ್ಚಾಗಬಾರದು ಎಂದು ಕನಸು ಕಾಣುತ್ತಿರುವಿರಾ? ಹಾಗಿದ್ದಲ್ಲಿ ಚಿಂತೆ ಬಿಡಿ. ಈಗ ಅನೇಕ ದೇಶಗಳಲ್ಲಿ ರಜೆ ಮೋಜು ಮಾಡುವುದು ಮೊದಲಿಗಿಂತ ಸಾಕಷ್ಟು ಅಗ್ಗವಾಗಿದೆ.

ಈಗಲೂ ಅನೇಕರು ದುಬಾರಿಯ ಜಾಗತಿಕ ಪ್ರವಾಸ ಕೈಗೊಳ್ಳುತ್ತಾರೆ. ಆದರೆ ಆದಷ್ಟೂ ಕಡಿಮೆ ಖರ್ಚಿನಲ್ಲಿ ವಿದೇಶಗಳಲ್ಲಿ ಪ್ರವಾಸ ಮಾಡುವ ಬಯಕೆ ನಿಮ್ಮದಾಗಿದ್ದರೆ ಅದು ಈಗ ಕೈಗೂಡಬಹುದು.

ಡಾಲರ್ ಹಾಗೂ ಪೌಂಡ್ ಎದುರು ಭಾರತೀಯ ರೂಪಾಯಿ ಇಂದಿಗೂ ದುರ್ಬಲವಾಗಿದೆ. ಆದರೆ ಹಾಗಂತ ನೀವು ನಿರಾಶರಾಗಬೇಕಿಲ್ಲ. ಜಗತ್ತಿನ 14 ಪ್ರಮುಖ ದೇಶಗಳಲ್ಲಿ ಅಲ್ಲಿನ ಕರೆನ್ಸಿಗಿಂತ ಭಾರತದ ರೂಪಾಯಿ ಹೆಚ್ಚು ಬಲಿಷ್ಠವಾಗಿರುವುದು ನಿಜವಾಗಿಯೂ ಖುಷಿಯ ಸಂಗತಿ. ಈಗ ಈ ದೇಶಗಳಲ್ಲಿ ಪ್ರವಾಸ ಮಾಡುವುದು ಸುಲಭವಾಗಿದೆ.

 

ಆಯಾ ದೇಶದ ಕರೆನ್ಸಿಗಿಂತ ಭಾರತದ ರೂಪಾಯಿ ಬಲಿಷ್ಠವಾಗಿರುವ ವಿಶ್ವದ 14 ರಾಷ್ಟ್ರಗಳ ಬಗ್ಗೆ ಇಲ್ಲಿ ತಿಳಿಸಿದ್ದೇವೆ.

1. ಇಂಡೋನೇಷ್ಯಾ

1. ಇಂಡೋನೇಷ್ಯಾ

ದ್ವೀಪಗಳ ರಾಷ್ಟ್ರ, ನೀಲಿ ಬಣ್ಣದ ಸುಂದರ ಸಮುದ್ರ ಹಾಗೂ ಹಿತವಾದ ವಾತಾವರಣ ಹೊಂದಿರುವ ಇಂಡೋನೇಷ್ಯಾದಲ್ಲಿ ಭಾರತದ ರೂಪಾಯಿ ಅಲ್ಲಿನ ಕರೆನ್ಸಿಗಿಂತ ಬಲಿಷ್ಠವಾಗಿದೆ. ಅಲ್ಲದೆ ತನ್ನ ದೇಶಕ್ಕೆ ಆಗಮಿಸುವ ಭಾರತೀಯ ಪ್ರವಾಸಿಗರಿಗೆ ಈ ದೇಶ ಅರೈವಲ್ ವೀಸಾ ನೂಡುತ್ತದೆ. ಹೀಗಾಗಿ ಹೆಚ್ಚಿನ ಖರ್ಚಿಲ್ಲದೆ ಈ ದೇಶದಲ್ಲಿ ಸುತ್ತಾಡಬಹುದು. ಬಾಲಿ ದ್ವೀಪವು ಅತಿ ಜನಪ್ರಿಯ ಪ್ರವಾಸಿ ಸ್ಥಳವಾಗಿದೆ.

1 ಐಎನ್‌ಆರ್ = 198.88 ಇಂಡೋನೇಷ್ಯಾ ರುಪಿಯಾ

2. ವಿಯೆಟ್ನಾಂ

2. ವಿಯೆಟ್ನಾಂ

ಬೌದ್ಧ ಪಗೋಡಾಗಳು, ವಿಶಿಷ್ಟ ಖಾದ್ಯಗಳು ಹಾಗೂ ನದಿಗಳಿಗೆ ಹೆಸರುವಾಸಿಯಾಗಿರುವ ವಿಯೆಟ್ನಾಂ ದೇಶವು ಪ್ರವಾಸಿಗರ ಸ್ವರ್ಗವಾಗಿದೆ. ಈ ದೇಶದ ವಿಶಿಷ್ಟ ಸಂಸ್ಕೃತಿಯನ್ನು ತಿಳಿಯಬೇಕಾದರೆ ಇಲ್ಲಿಗೆ ಭೇಟಿ ನೀಡಬೇಕು. ಭಾರತಕ್ಕೆ ತುಸು ಸನಿಹದಲ್ಲೇ ಇರುವ ಈ ದೇಶಕ್ಕೆ ಪ್ರವಾಸ ಕೈಗೊಳ್ಳುವುದು ಜೇಬಿಗೂ ಅಂಥ ದುಬಾರಿ ಏನಿಲ್ಲ. ಯುದ್ಧ ವಸ್ತು ಸಂಗ್ರಹಾಲಯ ಹಾಗೂ ಫ್ರೆಂಚ್ ಕಾಲದ ವಾಸ್ತು ಕಟ್ಟಡಗಳು ಈ ದೇಶದ ಪ್ರಮುಖ ಆಕರ್ಷಣೆಗಳಾಗಿವೆ.

1 ಐಎನ್‌ಆರ್ = 336.74 ವಿಯೆಟ್ನಾಂ ಡಾಂಗ್

3. ಕಾಂಬೊಡಿಯಾ
 

3. ಕಾಂಬೊಡಿಯಾ

ಅಂಕೋರ ವಾಟ್ ಎಂಬ ಕಲ್ಲಿನಲ್ಲಿ ಕೆತ್ತಲಾದ ದೇವಾಲಯವು ಈ ದೇಶದ ಮಹತ್ವದ ಪ್ರವಾಸಿ ಸ್ಥಳವಾಗಿದೆ. ಭಾರತೀಯರು ತೀರಾ ಹೆಚ್ಚು ಖರ್ಚಿಲ್ಲದೆ ಪ್ರವಾಸ ಮಾಡಬಹುದಾದ ದೇಶಗಳಲ್ಲೊಂದು. ರಾಯಲ್ ಪ್ಯಾಲೇಸ್, ನ್ಯಾಷನಲ್ ಮ್ಯೂಸಿಯಂ ಮತ್ತು ಪುರಾತನ ಶಿಲಾವಿಗ್ರಹಗಳು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ. ಪಾಶ್ಚಿಮಾತ್ಯ ಪ್ರವಾಸಿಗರ ಅತಿ ಮೆಚ್ಚಿನ ದೇಶವಾದ ಇದು ಇತ್ತೀಚೆಗೆ ಭಾರತೀಯ ಪ್ರವಾಸಿಗರಲ್ಲೂ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.

1 ಐಎನ್‌ಆರ್ = 60.59 ಕಾಂಬೊಡಿಯಾ ರಿಯಾಲ್

4. ಶ್ರೀಲಂಕಾ

4. ಶ್ರೀಲಂಕಾ

ಸಮುದ್ರ ದಂಡೆ, ಬೆಟ್ಟ ಗುಡ್ಡಗಳು, ಹಚ್ಚ ಹಸಿರು ವನಗಳು ಹಾಗೂ ಐತಿಹಾಸಿಕ ಸ್ಮಾರಕಗಳಿಗೆ ಹೆಸರಾಗಿರುವ ಶ್ರೀಲಂಕಾ ದೇಶವು ಭಾರತೀಯರ ಅತಿ ಮೆಚ್ಚಿನ ವಿದೇಶ ಪ್ರಯಾಣ ತಾಣವಾಗಿ ಹೊರಹೊಮ್ಮುತ್ತಿದೆ. ಪಕ್ಕದಲ್ಲೇ ಇರುವುದು ಹಾಗೂ ಸುಲಭವಾಗಿ ಹೋಗಲು ಸಾಧ್ಯವಿರುವುದು ಇದರ ವೈಶಿಷ್ಟ್ಯತೆಗಳಾಗಿವೆ. ಕಡಿಮೆ ಖರ್ಚಿನಲ್ಲಿ ವಿಮಾನ ಪ್ರಯಾಣ ಆಕರ್ಷಣೆಯಾಗಿದೆ.

1 ಐಎನ್‌ಆರ್ = 2.20 ಶ್ರೀಲಂಕಾ ರೂಪಾಯಿ

5. ನೇಪಾಳ

5. ನೇಪಾಳ

ಬೆಟ್ಟ ಗುಡ್ಡಗಳಿಂದ ಆವೃತ್ತವಾದ ನೇಪಾಳ ದೇಶವು ಅತಿ ಸುಂದರ ದೇಶಗಳಲ್ಲೊಂದಾಗಿದೆ. ಶೆರ್ಪಾಗಳ ನಾಡೆಂದು ಹೆಸರಾಗಿರುವ ಈ ದೇಶ ಮೌಂಟ್ ಎವರೆಸ್ಟ್ ಹಾಗೂ ಇನ್ನಿತರ ಏಳು ಪ್ರಮುಖ ಅತಿ ಎತ್ತರದ ಬೆಟ್ಟಗಳಿಗೆ ಹೆಸರುವಾಸಿಯಾಗಿದೆ. ಈ ದೇಶಕ್ಕೆ ಹೋಗಲು ಭಾರತೀಯರಿಗೆ ವೀಸಾ ಬೇಕಾಗಿಲ್ಲದಿರುವುದು ಮತ್ತೊಂದು ಆಕರ್ಷಣೆಯಾಗಿದೆ. ಹೀಗಾಗಿ ಮನಸ್ಸು ಬಂದಾಗ ಈ ದೇಶಕ್ಕೆ ಪ್ರವಾಸ ಹೊರಡಬಹುದು.

1 ಐಎನ್‌ಆರ್ = 1.60 ನೇಪಾಳಿ ರೂಪಾಯಿ

6. ಐಸ್ ಲ್ಯಾಂಡ್

6. ಐಸ್ ಲ್ಯಾಂಡ್

ದ್ವೀಪ ರಾಷ್ಟ್ರವಾದ ಐಸ್‌ಲ್ಯಾಂಡ್ ಈ ಜಗತ್ತಿನ ಅತಿ ಸುಂದರ ತಾಣಗಳಲ್ಲೊಂದಾಗಿದೆ. ಈ ಬೇಸಿಗೆಯ ತಾಪದಿಂದ ಪಾರಾಗಲು ನೀವು ಇಲ್ಲಿಗೆ ಭೇಟಿ ನೀಡಬಹುದು. ಜಲಪಾತಗಳು, ಹಿಮಬಂಡೆಗಳು ಹಾಗೂ ಕಪ್ಪು ಮರಳಿನ ಬೀಚ್‌ಗಳಿಗೆ ಈ ದೇಶ ಹೆಸರುವಾಸಿಯಾಗಿದೆ. ಜೊತೆಗೆ ಇಲ್ಲಿನ ನಾರ್ದರ್ನ್ ಲೈಟ್ಸ್ ಸಹ ಜನಪ್ರಿಯವಾಗಿವೆ.

1 ಐಎನ್‌ಆರ್ = 1.87 ಐಸ್ ಲ್ಯಾಂಡಿಕ್ ಕ್ರೋನಾ

7. ಹಂಗೆರಿ

7. ಹಂಗೆರಿ

ಎಲ್ಲ ಕಡೆಗಳಲ್ಲೂ ಭೂಮಿಯಿಂದ ಸುತ್ತುವರೆದಿರುವ ಹಂಗೆರಿ ದೇಶವು ತನ್ನ ವಾಸ್ತು ಕಲೆ ಹಾಗೂ ರೋಮನ್, ಟರ್ಕಿ ಪ್ರಭಾವಿತ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಇಲ್ಲಿಗೆ ಹೋದರೆ ಸುಂದರ ನದಿ ವನಗಳಿಗೆ ಭೇಟಿ ನೀಡಲು ಮರೆಯಬೇಡಿ. ಈ ದೇಶದ ರಾಜಧಾನಿ ಬುಡಾಪೆಸ್ಟ್ ಜಗತ್ತಿನ ಅತಿ ರೊಮ್ಯಾಂಟಿಕ್ ನಗರಗಳಲ್ಲೊಂದಾಗಿದೆ.

1 ಐಎನ್‌ಆರ್ = 4.10 ಹಂಗೆರಿ ಫೊರಿಂಟ್

8. ಜಪಾನ

8. ಜಪಾನ

ಭಾರತಕ್ಕಿಂತಲೂ ಅಭಿವೃದ್ಧಿ ಹೊಂದಿದ ಜಪಾನ ದೇಶದಲ್ಲಿ ಭಾರತದ ಕರೆನ್ಸಿಗೆ ಹೆಚ್ಚು ಬೆಲೆ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೆ? ಆದರೆ ಇದು ನಿಜ. ಜಪಾನ್ ಯೆನ್‌ಗಿಂತ ಭಾರತದ ರೂಪಾಯಿ ಮೌಲ್ಯ ಹೆಚ್ಚಿದೆ. ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಅಗಾಧ ಬೆಳವಣಿಗೆ ಸಾಧಿಸಿದರೂ ತನ್ನ ಸಂಪ್ರದಾಯವನ್ನು ಒಂಚೂರು ಬಿಟ್ಟು ಕೊಡದ ಜಪಾನ್ ಅತ್ಯಂತ ಸುಂದರ ದೇಶವಾಗಿದೆ. ಸ್ಮಾರಕಗಳು, ರಾಷ್ಟ್ರೀಯ ಉದ್ಯಾನಗಳು ಹಾಗೂ ಗಗನ ಚುಂಬಿ ಕಟ್ಟಡಗಳು ಈ ದೇಶದ ಆಕರ್ಷಣೆಯಾಗಿವೆ.

1 ಐಎನ್‌ಆರ್ = 1.65 ಜಪಾನಿ ಯೆನ್

9. ಪರಗ್ವೆ

9. ಪರಗ್ವೆ

ಎಲ್ಲ ಕಡೆ ಭೂಮಿಯಿಂದ ಸುತ್ತುವರೆದಿರುವ ಪರಗ್ವೆ ಸೌತ್ ಅಮೆರಿಕದಲ್ಲಿದೆ. ಇದರ ಪಕ್ಕದ ಬ್ರೆಜಿಲ್ ಹಾಗೂ ಅರ್ಜೆಂಟಿನಾ ದೇಶಗಳಿಗೆ ಸಾಕಷ್ಟು ಪ್ರವಾಸಿಗಳು ಭೇಟಿ ನೀಡಿದರೂ ಈ ದೇಶ ಇಂದಿಗೂ ಪ್ರವಾಸಿಗರ ದೃಷ್ಟಿಯಿಂದ ದೂರವೇ ಉಳಿದಿದೆ. ಆಧುನಿಕ ಹಾಗೂ ಸಾಂಪ್ರದಾಯಿಕ ಜೀವನ ಶೈಲಿಯ ವಿಶಿಷ್ಟ ಸಂಗಮವನ್ನು ಈ ದೇಶದಲ್ಲಿ ನೋಡಬಹುದು.

1 ಐಎನ್‌ಆರ್ = 82.99 ಪರಗ್ವೆ ಗೌರಾನಿ

10. ಮಂಗೊಲಿಯಾ

10. ಮಂಗೊಲಿಯಾ

ಅಲೆಮಾರಿ ಜೀವನ ಶೈಲಿಗೆ ಹೆಸರಾದ ಮಂಗೊಲಿಯಾ ದೇಶವು ಅತಿ ಸುಂದರ ಪ್ರಕೃತಿಯನ್ನು ಹೊಂದಿದೆ. ವಿಶಾಲವಾದ ಬಯಲು ಪ್ರದೇಶಗಳು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ. 'ನೀಲಿ ಆಕಾಶದ ದೇಶ' ಎಂದು ಕರೆಯಲ್ಪಡುವ ಈ ದೇಶ ಪ್ರವಾಸಿಗರ ಸ್ವರ್ಗವಾಗಿದೆ. ನಗರ ಜೀವನದ ಜಂಜಾಟದಿಂದ ದೂರವಿರಲು ಬಯಸುವವರು ಈ ದೇಶಕ್ಕೆ ಭೇಟಿ ನೀಡಿದರೆ ಖುಷಿಯಾಗುವುದು ಗ್ಯಾರಂಟಿ. ಜನಸಂಖ್ಯೆ ವಿರಳವಾಗಿರುವುದರಿಂದ ಇಲ್ಲಿ ಏಕಾಂತದ ಕ್ಷಣಗಳನ್ನು ಸವಿಯಬಹುದು.

1 ಐಎನ್‌ಆರ್ = 31.84 ಮಂಗೊಲಿಯನ್ ತುಗ್ರಿಕ್

11. ಕೊಸ್ಟಾರಿಕಾ

11. ಕೊಸ್ಟಾರಿಕಾ

ಮಧ್ಯ ಅಮೆರಿಕದಲ್ಲಿರುವ ಕೊಸ್ಟಾ ರಿಕಾ ತನ್ನ ಸುಂದರ ಬೀಚ್‌ಗಳಿಗೆ ಹೆಸರುವಾಸಿಯಾಗಿದೆ. ಜಗತ್ತಿನ ಎಲ್ಲ ಭಾಗಗಳಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಜ್ವಾಲಾಮುಖಿಗಳು, ಅರಣ್ಯಗಳು ಮತ್ತು ವನ್ಯ ಜೀವಿ ಸಂಪತ್ತು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ. ವರ್ಷದ ಎಲ್ಲ ತಿಂಗಳಲ್ಲೂ ಹಿತವಾದ ವಾತಾವರಣ ಇರುತ್ತದೆ. ಇಕೊ ಟೂರಿಸಂ ಕೊಸ್ಟಾ ರಿಕಾದ ವಿಶಿಷ್ಟತೆಯಾಗಿದೆ.

1 ಐಎನ್‌ಆರ್ = 8.20 ಕೊಸ್ಟಾ ರಿಕಾ ಕೊಲೊನ್

12. ಪಾಕಿಸ್ತಾನ

12. ಪಾಕಿಸ್ತಾನ

ಒಂದು ಕಾಲಕ್ಕೆ ಭಾರತದ ಭಾಗವೇ ಆಗಿದ್ದರೂ ಪಾಕಿಸ್ತಾನಕ್ಕೆ ಭೇಟಿ ನೀಡಲು ಭಾರತೀಯರು ಇಷ್ಟಪಡಲಾರರು. ಭಾರತೀಯ ರೂಪಾಯಿಗಿಂತ ಅಗ್ಗವಾಗಿರುವ ಪಾಕ್ ರೂಪಾಯಿ ಕಾರಣದಿಂದ ಅಗ್ಗ ದರದಲ್ಲಿ ಈ ದೇಶದಲ್ಲಿ ಪ್ರವಾಸ ಮಾಡಬಹುದು. ಸ್ವಾತ್ ವ್ಯಾಲಿ, ಕರಾಚಿ ಮತ್ತು ಲಾಹೋರ್ ಈ ದೇಶದ ಆಕರ್ಷಣೆಗಳಾಗಿವೆ.

1 ಐಎನ್‌ಆರ್ = 1.56 ಪಾಕ್ ರೂಪಾಯಿ

13. ಚಿಲಿ

13. ಚಿಲಿ

ಸಾಹಸ ಪ್ರವಾಸೋದ್ಯಮಕ್ಕೆ ಚಿಲಿ ದೇಶವು ಹೆಸರುವಾಸಿಯಾಗಿದೆ. ಉದ್ಯಾನಗಳು, ಅರಣ್ಯಗಳು ಹಾಗೂ ಅತಿ ಎತ್ತರದ ಬೆಟ್ಟ ಗುಡ್ಡಗಳು ಚಿಲಿ ದೇಶದ ಪ್ರಮುಖ ಆಕರ್ಷಣೆಗಳಾಗಿವೆ. ಈ ದೇಶದಲ್ಲಿ ಹಲವಾರು ಸಕ್ರಿಯ ಜ್ವಾಲಾಮುಖಿಗಳಿರುವುದು ವಿಶಿಷ್ಟವಾಗಿದೆ. ಇಲ್ಲಿನ ಲೇಕ್ ಡಿಸ್ಟ್ರಿಕ್ಟ್ ಮತ್ತೊಂದು ಆಕರ್ಷಣೆಯಾಗಿದೆ. ಹೊಲಗಳು, ನದಿಗಳು, ಕೊಳ್ಳಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ.

1 ಐಎನ್‌ಆರ್ = 9.79 ಚಿಲಿಯನ್ ಪಾಸೊ

14. ಸೌತ್ ಕೊರಿಯಾ

14. ಸೌತ್ ಕೊರಿಯಾ

ನಾರ್ತ ಕೊರಿಯಾಗೆ ಹೋಗಲು ಯಾರೂ ಇಷ್ಟ ಪಡುವುದಿಲ್ಲ. ಆದರೆ ಸೌತ್ ಕೊರಿಯಾ ಮಾತ್ರ ಪ್ರವಾಸಿಗರ ಅಚ್ಚುಮೆಚ್ಚಿನ ಸ್ಥಳವಾಗಿದೆ. ಸುಂದರವಾದ ಪ್ರಕೃತಿ ತಾಣಗಳಿಗೆ ಈ ದೇಶ ಹೆಸರುವಾಸಿಯಾಗಿದೆ. ಮೀನುಗಾರಿಕೆ ಗ್ರಾಮಗಳು, ಬೌದ್ಧ ದೇವಾಲಯಗಳು, ಗ್ರಾಮೀಣ ಭಾಗದ ಹಸಿರು ಬೆಟ್ಟಗಳು ಮತ್ತು ಚೆರ್ರಿ ಮರಗಳು ಈ ದೇಶದ ಆಕರ್ಷಣೆಗಳಾಗಿವೆ. ಉಷ್ಣವಲಯದ ದ್ವೀಪಗಳು ಹಾಗೂ ಅತ್ಯಾಧುನಿಕ ನಗರಗಳನ್ನು ಈ ದೇಶ ಹೊಂದಿದೆ.

1 ಐಎನ್‌ಆರ್ = 15.80 ಸೌತ್ ಕೊರಿಯನ್ ವಾನ್

English summary

14 countries you can visit where the Indian Rupee is stronger!

We list 14 countries you can visit where the Indian currency has more value. Now that’s what we call a win-win situation.
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more