For Quick Alerts
ALLOW NOTIFICATIONS  
For Daily Alerts

ಜಿಯೋ ಫೋನ್ ಉಳ್ಳವರಿಗೆ ಜಿಯೋ ರೈಲ್ ಆಪ್ ಬಿಡುಗಡೆ

|

ಭಾರತವನ್ನು ಡಿಜಿಟಲ್ ಎಂಪವರ್ ಮೆಂಟ್ ಮಾಡುವ ಸಲುವಾಗಿ ಜಿಯೋ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಲು ಮುಂದಾಗಿದೆ. ಇದರಲ್ಲಿ ತನ್ನ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲು ಮುಂದಾಗಿದೆ. ಇದೇ ಮೊದಲ ಬಾರಿಗೆ ಜಿಯೋ ಫೋನ್ ಬಳಕೆದಾರರಿಗೆ ದೊಡ್ಡ ಮಟ್ಟದಲ್ಲಿ ಸಹಾಯವನ್ನು ಮಾಡುತ್ತಿದೆ. IRCTC ಟಿಕೇಟ್ ಬುಕಿಂಗ್ ಆಯ್ಕೆಯನ್ನು ತನ್ನ ಜಿಯೋ ಪೋನ್ ಬಳಕೆದಾರರಿಗೆ ನೀಡಲು ಮುಂದಾಗಿದೆ. ಇದಕ್ಕಾಗಿ ಜಿಯೋ ರೈಲ್ ಎನ್ನುವ ಆಪ್ ವೊಂದನ್ನು ಹೊಸದಾಗಿ ಬಿಡುಗಡೆ ಮಾಡಿದೆ.

ಜಿಯೋನಿಂದ 2 ದೀರ್ಘಾವಧಿ ವ್ಯಾಲಿಡಿಟಿ ಯೋಜನೆ ಪ್ರಕಟ

ಜಿಯೋ ಆಪ್ ಸ್ಟೋರಿನಲ್ಲಿ ಹೊಸದಾಗಿ ಲಾಂಚ್ ಮಾಡಿರುವ ಜಿಯೋ ರೈಲ್ ಆಪ್ ಲಭ್ಯವಿದ್ದು, ಬಳಕೆದಾರರು ಇದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ನಿಮ್ಮ ರೈಲು ಪ್ರಯಾಣ ಸುಖಕರವಾಗಿರಲಿದೆ, ಅಲ್ಲದೇ IRCTC ಆಕೌಂಟ್ ಇಲ್ಲದೆ ಇರುವವರು ಸಹ ಈ ಆಪ್ ಮೂಲಕ ಆಕೌಂಟ್ ಕ್ರಿಯೇಟ್ ಮಾಡಿ ಟಿಕೇಟ್ ಬುಕ್ ಮಾಡಬಹುದಾಗಿದೆ.

 

ಜಿಯೋ ಅಬ್ಬರಕ್ಕೆ ಕಡಿವಾಣ ಹಾಕಲು ವೊಡಾಫೋನ್ ಭಾರಿ ಪ್ಲ್ಯಾನ್

ಜಿಯೋ ಫೋನ್ ಉಳ್ಳವರಿಗೆ ಜಿಯೋ ರೈಲ್ ಆಪ್ ಬಿಡುಗಡೆ

ಇದಲ್ಲದೇ ಈ ಆಪ್ ಮೂಲಕ ಜಿಯೋ ಫೋನ್ ಬಳಕೆದಾರರು PNR ಸ್ಟೇಟಸ್ ಸಹ ನೋಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ. ಆಪ್ ಮೂಲಕ ಟಿಕೇಟ್ ಬುಕ್ ಮಾಡಿ, ಅದರ ಸ್ಥಿತಿಗತಿಯನ್ನು ಇದರಲ್ಲಿ ನೋಡಬಹುದಾಗಿದೆ. ಇದಲ್ಲದೇ ಟ್ರೈನ್ ಎಲ್ಲಿದೇ ಎಂದು ನೋಡುವ ಅವಕಾಶವು ಇದ್ದು, ಫುಡ್ ಸಹ ಆಪ್ ನಲ್ಲಿಯೇ ಆರ್ಡರ್ ಮಾಡಬಹುದಾಗಿದೆ.

ಜಿಯೋ ಫೋನ್ ಉಳ್ಳವರಿಗೆ ಜಿಯೋ ರೈಲ್ ಆಪ್ ಬಿಡುಗಡೆ

ಈ ಆಪ್ ಬಳಕೆಯಿಂದಾಗಿ ಜಿಯೋ ಫೋನ್ ಬಳಕೆದಾರರಿಗೆ ಸಾಕಷ್ಟು ಸಹಾಯವಾಗಲಿದೆ, ಒಂದೇ ಕ್ಲಿಕ್ ನಲ್ಲಿ ಟಿಕೇಟ್ ಪಡೆಯುವುದರೊಂದಿಗೆ ಉದ್ದದ ಸರದಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಿ, ಡಿಜಿಟಲ್ ಲೈಫ್ ಅನ್ನು ಎಂಜಾಯ್ ಮಾಡಲು ಅವಕಾಶ ನೀಡಲಿದೆ.

English summary

Reliance Jio Launches JioRail App for JioPhone and JioPhone2 users

For the first time, IRCTC reserved ticket booking service is available for users on any JioPhone through the brand new JioRail app. The app will allow customers to book and cancel tickets by using debit cards, credit cards and e-wallets, check PNR status, train information, timings, routes, seat availability and several other services at a click of a button on their JioPhones.
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more