For Quick Alerts
ALLOW NOTIFICATIONS  
For Daily Alerts

ಇ-ವ್ಯಾಲೆಟ್ (e-wallets) ಫೆಬ್ರವರಿ ಅಂತ್ಯದ ವೇಳೆಗೆ ಬಂದ್ ಆಗಲಿದೆ!

|

ಇ-ವ್ಯಾಲೆಟ್ ಜಮಾನದಲ್ಲಿರುವವರಿಗೆ ಶಾಕಿಂಗ್ ನ್ಯೂಸ್ ಕಾದಿದೆ. ಇತ್ತೀಚಿನ ದಿನಗಳಲ್ಲಿ ಇ-ವ್ಯಾಲೆಟ್ ಬಳಸುವ ಗ್ರಾಹಕರು ಹೆಚ್ಚಿದ್ದಾರೆ. ಆದರೆ ಫೆಬ್ರವರಿ ತಿಂಗಳ ನಂತರ ಹಲವು ಇ-ವ್ಯಾಲೆಟ್ ಕಂಪನಿಗಳು ತಮ್ಮ ಸೇವೆಯನ್ನು ಸ್ಥಗಿತಗೊಳಿಸುವ ಸಾಧ್ಯತೆ ಹೆಚ್ಚಾಗಿದೆ.

ಸರ್ಕಾರ ಇ ಕಾಮರ್ಸ್ ನಿಯಮಗಳನ್ನು ಬಿಗಿಗೊಳಿಸಿದ ನಂತರ ಕೆಲ ಇ-ವ್ಯಾಲೆಟ್ ಸಂಸ್ಥೆಗಳು ಅನಿಶ್ಚಿತತೆಗೆ ಸಿಲುಕಿವೆ. ಈ ಕಾರಣದಿಂದ ಲಕ್ಷಾಂತರ ಮೊಬೈಲ್ ವಾಲೆಟ್ ಗಳು ನಿಷ್ಕ್ರಿಯ ಆಗುವ ಸಾಧ್ಯತೆಯಿದೆ.

ಕೆವೈಸಿ ಕಡ್ಡಾಯ
 

ಕೆವೈಸಿ ಕಡ್ಡಾಯ

ಸುಪ್ರೀಂ ಕೋರ್ಟ್ ಗ್ರಾಹಕರ ಅಧಿಕೃತತೆಯನ್ನು ಸಾರುವ ಕೆವೈಸಿ ವ್ಯವಸ್ಥೆ ಕಡ್ಡಾಯ ಜಾರಿಗೊಳಿಸುವಂತೆ ನಿರ್ದೇಶನ ಮಾಡಿತ್ತು. ಇದರ ಆಧಾರದಲ್ಲಿ ಕೆವೈಸಿ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯ ನಡೆದಿತ್ತು. ಇ-ವ್ಯಾಲೆಟ್ ಬಳಕೆಗೆ ಕೆವೈಸಿ ಕಡ್ಡಾಯವಾಗಿರುತ್ತದೆ.

ಮೊಬೈಲ್ ಬಳಕೆದಾರರು ಅನರ್ಹರಾಗುವ ಸಾಧ್ಯತೆ

ಮೊಬೈಲ್ ಬಳಕೆದಾರರು ಅನರ್ಹರಾಗುವ ಸಾಧ್ಯತೆ

ಈ ಹಿಂದೆ ಪೂರ್ಣ ಪ್ರಮಾಣದಲ್ಲಿ ಕೆವೈಸಿ ಇಲ್ಲದಿದ್ದರೂ ಕೆಲವೊಂದು ದಾಖಲೆ ನೀಡಿದ್ದರೆ, ಒಟಿಪಿ ಆಧಾರದಲ್ಲಿ ಹಣ ವರ್ಗಾವಣೆ ಮಾಡಲು ಅವಕಾಶವಿತ್ತು. ಆದರೆ ಅದಕ್ಕೂ ನಿರ್ಬಂಧ ಹೇರಲಾಗುತ್ತಿದ್ದು, ಕೆವೈಸಿ ನೀಡದ ಮೊಬೈಲ್ ಬಳಕೆದಾರರು ಇ-ವ್ಯಾಲೆಟ್ ಸೇವೆಯನ್ನು ಬಳಸಿಕೊಳ್ಳಲು ಅನರ್ಹರಾಗುವ ಸಾಧ್ಯತೆ ಹೆಚ್ಚಾಗಿದೆ.

ಅಮೆಜಾನ್, ಪೇಟಿಎಂ ಮೇಲೆ ಹೆಚ್ಚು ಪ್ರಭಾವ

ಅಮೆಜಾನ್, ಪೇಟಿಎಂ ಮೇಲೆ ಹೆಚ್ಚು ಪ್ರಭಾವ

ಶೇ. 80 ರಷ್ಟು ಇ-ವ್ಯಾಲೆಟ್ ಬಳಕೆದಾರರು ಇನ್ನೂ ಕೆವೈಸಿ ಅನುಸರಿಸಬೇಕಿದೆ ಎಂದು ಅಂದಾಜಿಸಲಾಗಿದೆ. ಈ ಪ್ರಕ್ರಿಯೆಯು ಕಿರಿಕಿರಿಯೆನಿಸುತ್ತಿರುವುದರಿಂದ ಜನರು ಯುಪಿಐ (ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ಗೆ ವರ್ಗಾವಣೆಯಾಗುತ್ತಿದ್ದಾರೆ. ಹೆಚ್ಚು ಗ್ರಾಹಕರನ್ನು ಹೊಂದಿರುವ ಅಮೆಜಾನ್, ಪೇಟಿಎಂನಂತಹ ಸಂಸ್ಥೆಗಳ ಮೇಲೆ ಇದು ಪ್ರಭಾವ ಬೀರಲಿದೆ. ಬ್ಯಾಂಕಿಂಗ್/ಇ-ವ್ಯಾಲೆಟ್ ವ್ಯವಹಾರ ಸುರಕ್ಷತೆಗೆ ಆರ್‌ಬಿಐ ಮಾರ್ಗದರ್ಶಿ ಸೂತ್ರಗಳು

Read more about: digital payments money paytm
English summary

Most e-wallets might become invalid by February-end

A majority of digital wallets or e-wallets are likely to become invalid next month due to non-compliance of KYC norms. Supreme Court in its Aadhaar judgement barred private companies from using Aadhaar for KYC.
Story first published: Tuesday, January 29, 2019, 16:41 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more