For Quick Alerts
ALLOW NOTIFICATIONS  
For Daily Alerts

ಮಧ್ಯಂತರ ಬಜೆಟ್ 2019: ಮಧ್ಯಮ ವರ್ಗ, ರೈತರು, ಸ್ಟಾರ್ಟಅಪ್ ವಲಯಕ್ಕೆ ಬಂಪರ್ ಕೊಡುಗೆ!

|

ಪ್ರಧಾನಿ ನರೇಂದ್ರ ಮೋದಿಯವರು ಸ್ಟಾರ್ಟಅಪ್ ಕ್ಷೇತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದು, ಕಾಲಕಾಲಕ್ಕೆ ಉತ್ತೇಜನ ನೀಡುತ್ತಾ ಬಂದಿದ್ದಾರೆ. ಕೇಂದ್ರ ಸರ್ಕಾರ ತನ್ನ ಆಡಳಿತಾವಧಿಯ ಕೊನೆಯ ಬಜೆಟ್ ಅನ್ನು ಫೆಬ್ರವರಿ 1 ರ ಶುಕ್ರವಾರದಂದು ಮಂಡಿಸಲಿದೆ.

ನವೋದ್ಯಮ (ಸ್ಟಾರ್ಟಅಪ್) ಕ್ಷೇತ್ರ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸರ್ಕಾರ ಬರುವ ಮಧ್ಯಂತರ ಬಜೆಟ್ 2109 ರಲ್ಲಿ ಹೆಚ್ಚಿನ ಕೊಡುಗೆಗಳನ್ನು ನೀಡಬಹುದು ಎಂದು ನಿರೀಕ್ಷಿಸಲಾಗಿದೆ.

ಕೇಂದ್ರ ಬಜೆಟ್ 2019: ಮೋದಿ ಸರ್ಕಾರ ಬಜೆಟ್‌ನಲ್ಲಿ ಏನೇನೆಲ್ಲ ಘೋಷಿಸಬಹುದು?

ರೈತರಿಗೆ ವಿಶೇಷ ಪ್ಯಾಕೇಜ್
 

ರೈತರಿಗೆ ವಿಶೇಷ ಪ್ಯಾಕೇಜ್

ಕೃಷಿಕರ ಬಿಕ್ಕಟ್ಟನ್ನು ಪರಿಹರಿಸಲು ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಸಲುವಾಗಿ ರೈತರ ಪ್ಯಾಕೇಜ್ ಅನ್ನು ಸರ್ಕಾರ ಘೋಷಿಸುವ ನಿರೀಕ್ಷೆಯಿದೆ. ಸಾಲ ಮನ್ನಾ ಬದಲಿಗೆ ರೈತರ ಖಾತೆಗಳಿಗೆ ನಿಗದಿತ ಮೊತ್ತವನ್ನು ನೇರವಾಗಿ ಪಾವತಿಸುವ ಯೋಜನೆಯನ್ನು ಘೋಷಿಸುವ ನಿರೀಕ್ಷೆ ಇದೆ. ಜೊತೆಗೆ ಬ್ಯಾಂಕುಗಳಿಂದ ಸಾಲ ಪಡೆಯಲು ಬಯಸುವ ರೈತರಿಗೆ ಸರಳೀಕೃತ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆ ಇದೆ.

ಆದಾಯ ತೆರಿಗೆಯ ಮಿತಿ

ಆದಾಯ ತೆರಿಗೆಯ ಮಿತಿ

ಆದಾಯ ತೆರಿಗೆಯ ಮಿತಿಯನ್ನು ರೂ. 2.5 ಲಕ್ಷದಿಂದ ರೂ. 5 ಲಕ್ಷಕ್ಕೆ ಹೆಚ್ಚಿಸುವ ನಿರೀಕ್ಷೆಯಿದೆ. ಜೊತೆಗೆ ಗೃಹ ಸಾಲದ ಬಡ್ಡಿ ವಿನಾಯಿತಿ ಮಿತಿಯನ್ನು ರೂ. 2 ಲಕ್ಷದಿಂದ ರೂ. 2.50 ಲಕ್ಷ ಗಳಿಗೆ ಹೆಚ್ಚಿಸುವ ಸಾಧ್ಯತೆ ಇದೆ. ಎಂಎಸ್ಎಂಇ (MSME) ವಲಯಕ್ಕೂ ಕೆಲವು ಸಕಾರಾತ್ಮಕ ಪ್ರಕಟಣೆಯನ್ನು ನಿರೀಕ್ಷಿಸಲಾಗಿದೆ.

ಸ್ಟಾರ್ಟಅಪ್ ವಲಯದ ನಿರೀಕ್ಷೆಗಳೇನು?

ಸ್ಟಾರ್ಟಅಪ್ ವಲಯದ ನಿರೀಕ್ಷೆಗಳೇನು?

1. Angel Tax ನಲ್ಲಿ ಹೆಚ್ಚು ಸ್ಪಷ್ಟತೆ

2. ಡಿಜಿಟಲ್ ವಹಿವಾಟು ಹೆಚ್ಚಿಸಲು ನೀತಿ ಒತ್ತಡ

3. ಕನಿಷ್ಠ ಪರ್ಯಾಯ ತೆರಿಗೆಯ ಸಂಪೂರ್ಣ ನಿಷೇಧ

4.ಸರ್ಕಾರಿ ನೋಂದಾಯಿತ ಉದ್ಯಮಗಳಿಗೆ 3 ರಿಂದ 5 ವರ್ಷಗಳಿಗೆ ತೆರಿಗೆ ಲಾಭ

6. ನಿಧಿಗಳ ನಿಧಿಯಿಂದ ವಿತರಿಸುವ ಬಗ್ಗೆ ಹೆಚ್ಚು ಸ್ಪಷ್ಟತೆ

7. ESOP ಗಳ ಮೇಲೆ ತೆರಿಗೆಯ ಸ್ಪಷ್ಟತೆ

8. ಇನ್ಕ್ಯುಬೇಟರ್ ಮತ್ತು ವೇಗವರ್ಧಕಗಳನ್ನು (incubators and accelerators) ಸ್ಥಾಪಿಸುವುದು.

9. ಜಿಎಸ್ಟಿ ದರವನ್ನು ಕಡಿಮೆಗೊಳಿಸುವಿಕೆ

10. ಹೂಡಿಕೆ ಆಕರ್ಷಣೆಗಾಗಿ ಪ್ರತ್ಯೇಕವಾದ ನೀತಿ

ಆರೋಗ್ಯಕ್ಕೆ ಹೆಚ್ಚಿನ ಒತ್ತು
 

ಆರೋಗ್ಯಕ್ಕೆ ಹೆಚ್ಚಿನ ಒತ್ತು

ದೇಶದ ಬಡಜನರ ಆರೋಗ್ಯಕ್ಕಾಗಿ ಹಲವಾರು ಯೋಜನೆಗಳನ್ನು 2018 ರಲ್ಲಿನ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಈ ಬಾರಿ ಆರೋಗ್ಯ ಕ್ಷೇತ್ರಕ್ಕಾಗಿ ಮತ್ತಷ್ಟು ಕ್ರಮಗಳನ್ನು ಘೋಷಿಸುವ ಸಾಧ್ಯತೆಗಳಿವೆ. ಆದಾಯ ತೆರಿಗೆ ಕಾಯ್ದೆ 80ಡಿ ಯಡಿ ವೈದ್ಯಕೀಯ ಚಿಕಿತ್ಸೆ ಹಾಗೂ ರೋಗಪೂರ್ವ ಚೆಕ್ ಅಪ್‌ಗಳಿಗೆ ತೆರಿಗೆ ವಿನಾಯಿತಿಯನ್ನು ಹೆಚ್ಚಿಸಬಹುದಾಗಿದೆ. ಆಯುಷ್ಮಾನ್ ಯೋಜನೆಗೆ ಹೆಚ್ಚು ಒತ್ತು ನೀಡಬಹುದು.

ಬಜೆಟ್ ಮಂಡನೆ

ಬಜೆಟ್ ಮಂಡನೆ

ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ರೇಲ್ವೆ ಸಚಿವರಾದ ಪಿಯೂಷ್ ಗೋಯಲ್ ಅವರು ಹಂಗಾಮಿ ಹಣಕಾಸು ಸಚಿವರಾಗಿ ಬಜೆಟ್ ಮಂಡನೆ ಮಾಡಲಿದ್ದಾರೆ.

English summary

Interim Budget 2019: Here's what startups, Farmers, Midle class peoples are expecting

February 1 is just around the corner and the government is all set to present its last budget before the Lok Sabha election. Interim finance minister Piyush Goyal will be presenting the budget as Arun Jaitley is in the US on medical leave.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more