For Quick Alerts
ALLOW NOTIFICATIONS  
For Daily Alerts

ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಡೆಬಿಟ್ ಕಾರ್ಡ್: ಯಶಸ್ವಿ ಪ್ರಯೋಗ

|

ಬೆಂಗಳೂರು, ಫೆಬ್ರವರಿ 4: ಕಾಲೇಜ್ ಕ್ಯಾಂಪಸ್‌ಗಳು ಬದಲಾಗುತ್ತಿವೆ. ಆಧುನಿಕತೆ ಬೆಳೆದಂತೆ ಕ್ಯಾಂಪಸ್ ವಾತಾವರಣವೂ ಆಧುನಿಕಗೊಳ್ಳುತ್ತಿವೆ. ಜತೆಗೆ ಡಿಜಿಟಲೀಕರಣವೂ ಆಗುತ್ತಿವೆ.

ಕ್ಯಾಂಪಸ್ ಎಂದರೆ ಬರಿ ಓದುವ ಅಥವಾ ಕ್ರೀಡೆಯ ಸ್ಥಳವಲ್ಲ. ಅದು ವಿದ್ಯಾರ್ಥಿಗಳಿಗೆ ಕ್ರೇಜ್ ಹುಟ್ಟುಹಾಕುವ 'ಅಡ್ಡಾ' ಕೂಡ. ಅನೇಕ ಚಟುವಟಿಕೆಗಳು ನಡೆಯುತ್ತಲೇ ಇರುವ ಕ್ಯಾಂಪಸ್ ವ್ಯವಹಾರದ ತಾಣ ಕೂಡ. ಹೀಗಾಗಿ ಇತರೆ ವ್ಯಾಪಾರ ವಾಣಿಜ್ಯ ತಾಣಗಳಂತೆಯೇ ಕಾಲೇಜ್ ಕ್ಯಾಂಪಸ್‌ಗಳಲ್ಲಿಯೂ ಬ್ಯಾಂಕಿಂಗ್ ವ್ಯವಹಾರಗಳು ಭರ್ಜರಿಯಾಗಿ ನಡೆಯುತ್ತವೆ.

ದಿವಾಳಿಯತ್ತ ಅನಿಲ್ ಅಂಬಾನಿ ರಿಲಯನ್ಸ್: ಷೇರು ಮೌಲ್ಯವೂ ಕುಸಿತ

ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬ್ಯಾಂಕುಗಳು ಶಿಕ್ಷಣ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಮಾಮೂಲಿ ಡೆಬಿಟ್ ಕಾರ್ಡ್‌ನಂತೆ ಮತ್ತು ಮೈಕ್ರೊ ಪೇಮೆಂಟ್‌ಗಳಿಗಾಗಿ ಬಳಸುವಂತಹ ಡೆಬಿಟ್ ಕಂ ಎನ್ಎಫ್‌ಸಿ ಕಾರ್ಡ್‌ಗಳನ್ನು ವಿತರಿಸುತ್ತಿವೆ.

ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಡೆಬಿಟ್ ಕಾರ್ಡ್: ಯಶಸ್ವಿ ಪ್ರಯೋಗ

 

ಈ ಕಾರ್ಡ್‌ಗಳು ಗುರುತಿನ ಚೀಟಿಯಾಗಿಯೂ ಬಳಕೆಯಾಗಬಹುದು. ವಿದ್ಯಾರ್ಥಿಗಳ ಹೆಸರು, ಫೋಟೊ, ನೋಂದಣಿ ಸಂಖ್ಯೆಯನ್ನು ಒಳಗೊಂಡಿರುತ್ತದೆ. ಗ್ರಂಥಾಲಯದಲ್ಲಿ ಪುಸ್ತಕ ಪಡೆಯಲು ಗ್ರಂಥಾಲಯ ಸದಸ್ಯತ್ವ ಕಾರ್ಡ್‌ ಆಗಿ, ಜಿಮ್, ತರಗತಿಗಳು, ಲ್ಯಾಬ್‌ಗಳ ಹಾಜರಾತಿ ಕಾರ್ಡ್‌ ಆಗಿ ಅಥವಾ ಕ್ಯಾಂಟೀನ್ ಬಸ್ ಮುಂತಾದ ಕಾಲೇಜು ಸೌಲಭ್ಯಗಳನ್ನು ಪಡೆದುಕೊಳ್ಳಲು ಬಿಲ್ಲಿಂಗ್ ಕಾರ್ಡ್ ಆಗಿ ಮತ್ತು ಪ್ರಿಪೇಯ್ಡ್/ಡೆಬಿಟ್ ಕಾರ್ಡ್ ಆಗಿಯೂ ಬಳಕೆಯಾಗುತ್ತದೆ.

ಡಿಸಿಬಿ ಬ್ಯಾಂಕ್, ವಿಸಾ ಮತ್ತು ಮನಿ ಮ್ಯಾನೇಜ್‌ಮೆಂಟ್ ಆಪ್ ಸ್ಲೊಂಕಿಟ್ ಜತೆಗೂಡಿ ಮೊಬೈಲ್ ವ್ಯಾಲೆಟ್‌ಗೆ ಸಂಪರ್ಕಿಸುವ ಪ್ರಿಪೇಯ್ಡ್ ಕಾರ್ಡ್‌ಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿವೆ. ವಿದ್ಯಾರ್ಥಿಗಳು ಇದರಲ್ಲಿ ತಮ್ಮ ಬ್ಯಾಲೆನ್ಸ್ ಪರಿಶೀಲಿಸಬಹುದು ಮತ್ತು ತಿಂಗಳ ಖರ್ಚಿನ ಬಜೆಟ್ ಲೆಕ್ಕಹಾಕಬಹುದು.

ದಕ್ಷಿಣ ಭಾರತದ ಟಾಪ್ 20 ಶ್ರೀಮಂತ ನಟರು, ನಂಬರ್ 1 ಯಾರು ಗೊತ್ತೆ?

ಈ ಮೊಬೈಲ್ ವ್ಯಾಲೆಟ್/ಆಪ್‌ ವಿದ್ಯಾರ್ಥಿಗಳಿಗೆ ಪರೀಕ್ಷೆಯ ದಿನಗಳು, ಶುಲ್ಕ ಮುಂತಾದವುಗಳ ಮಾಹಿತಿ ನೀಡಲು ಶಿಕ್ಷಣ ಸಂಸ್ಥೆಗಳಿಗೆ ಸಹ ನೆರವಾಗಲಿದೆ.

ಐಸಿಐಸಿಐ, ಕರೂರ್ ವೈಶ್ಯ, ಸಿಟಿ ಯೂನಿಯನ್ ಬ್ಯಾಂಕ್, ಡಿಸಿಬಿಗಳು ಈ ಸೌಲಭ್ಯ ನೀಡುತ್ತಿವೆ. ಸದ್ಯ ಇವು ವಿಐಟಿ ಕ್ಯಾಂಪಸ್, ಐಐಟಿ-ಮದ್ರಾಸ್, ಐಎಸ್‌ಬಿ ಮತ್ತು ಸಸ್ತ್ರ ಯುನಿವರ್ಸಿಟಿಗಳಲ್ಲಿ ಲಭ್ಯ.

ಮಧ್ಯಂತರ ಬಜೆಟ್ 2019: ಮೋದಿ ಸರ್ಕಾರದ ಕೊನೆ ಬಜೆಟ್ ಜನಪ್ರಿಯ ಯೋಜನೆಗಳ ಸಂಪೂರ್ಣ ಮಾಹಿತಿ..

ಮುಂಬೈ ಮತ್ತು ದೆಹಲಿಯಲ್ಲಿನ ಪಾಲಿಟೆಕ್ನಿಕ್ ಕಾಲೇಜುಗಳು ಕಲಾ ಮತ್ತು ವಿಜ್ಞಾನ ಹಾಗೂ ಎಂಜಿನಿಯರಿಂಗ್ ಕಾಲೇಜುಗಳು ಸೇರಿ 12 ಕಾಲೇಜುಗಳು ಈಗ ನಮ್ಮೊಂದಿಗೆ ಒಪ್ಪಂದ ಮಾಡಿಕೊಂಡಿವೆ. 75 ಸಾವಿರ ವಿದ್ಯಾರ್ಥಿಗಳು ನಮ್ಮ ಜಾಲದಲ್ಲಿದ್ದಾರೆ. 2018ರ ಏಪ್ರಿಲ್-ಮೇನಲ್ಲಿ ಇದನ್ನು ಆರಂಭಿಸಿದ್ದು, 2 ಲಕ್ಷ ವ್ಯವಹಾರಗಳನ್ನು ನಡೆಸಲಾಗಿದೆ ಎಂದು ಡಿಸಿಬಿ ಬ್ಯಾಂಕ್‌ನ ರಿಟೇಲ್ ಮತ್ತು ಎಸ್‌ಎಂಇ ಬ್ಯಾಂಕಿಂಗ್‌ನ ಅಧ್ಯಕ್ಷ ಪ್ರವೀಣ್ ಕುಟ್ಟಿ ತಿಳಿಸಿದ್ದಾರೆ.

English summary

banks facilities to college students debit cards micro payments

Banks visa and Slonkit App together have issued a multipurpose card can be used as debit card, identity card and attendence card for students in many institutions
Story first published: Monday, February 4, 2019, 18:40 [IST]
Company Search
Enter the first few characters of the company's name or the NSE symbol or BSE code and click 'Go'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more