For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ಗಳು ಠೇವಣಿ ಮೇಲಿನ ಬಡ್ಡಿ ದರ ಹೆಚ್ಚಿಸುವ ಸಾಧ್ಯತೆ: ಇಲ್ಲಿದೆ ಕಾರಣ

|

ಮುಂಬೈ, ಫೆಬ್ರವರಿ 6: ಸರಾಸರಿ ಮೇಲೆ ಹೆಚ್ಚುತ್ತಿರುವ ಸಾಲದ ಪ್ರಮಾಣ 13-14% ಅನ್ನು ನಿಭಾಯಿಸಬೇಕಾದ ಕಾರಣಕ್ಕೆ ಬ್ಯಾಂಕ್ ಗಳು ಈಗ ಹೊಸದಾಗಿ 20 ಲಕ್ಷ ಕೋಟಿ ರುಪಾಯಿಯನ್ನು ಠೇವಣಿ ರೂಪದಲ್ಲಿ ಇನ್ನು ಎರಡು ಆರ್ಥಿಕ ವರ್ಷದೊಳಗೆ ಸಂಗ್ರಹಿಸಬೇಕಾಗುತ್ತದೆ ಎಂದು ರೇಟಿಂಗ್ ಸಂಸ್ಥೆ ಕ್ರಿಸಿಲ್ ಅಂದಾಜು ಮಾಡಿದೆ.

ಕಳೆದ ಕೆಲವು ವರ್ಷಗಳಿಂದ ಈ ರೀತಿ ಠೇವಣಿ ರೂಪದಲ್ಲಿ ಸಂಗ್ರಹಿಸುತ್ತಿರುವ ವಾರ್ಷಿಕ ಸರಾಸರಿ ಮೊತ್ತ 7 ಲಕ್ಷ ಕೋಟಿಗಿಂತ ಸ್ವಲ್ಪ ಹೆಚ್ಚು. ಅಂದರೆ ಈಗಿರುವ ಗುರಿ 20 ಲಕ್ಷ ಕೋಟಿ ರುಪಾಯಿಯು ಸರಾಸರಿಗಿಂತ ತುಂಬ ಹೆಚ್ಚಿದೆ. ಈ ಕಾರಣಕ್ಕೆ ಇಷ್ಟು ಕಾಲ ಬ್ಯಾಂಕ್ ಗಳು ಠೇವಣಿ ಮೇಲೆ ನೀಡುತ್ತಿದ್ದ ಬಡ್ಡಿ ದರದ ಮೇಲೆ ಒತ್ತಡ ಹೆಚ್ಚಾಗುವಂತೆ ಮಾಡುತ್ತದೆ ಎಂದು ರೇಟಿಂಗ್ ಕಂಪನಿ ಹೇಳಿದೆ.

 

ಬ್ಯಾಂಕಿಂಗ್/ಇ-ವ್ಯಾಲೆಟ್ ವ್ಯವಹಾರ ಸುರಕ್ಷತೆಗೆ ಆರ್‌ಬಿಐ ಮಾರ್ಗದರ್ಶಿ ಸೂತ್ರಗಳು

ಈ ವರ್ಷದ ಜನವರಿ ನಾಲ್ಕನೇ ತಾರೀಕಿನ ತನಕ ಬ್ಯಾಂಕ್ ಠೇವಣಿಗಳು 9.9% ಹೆಚ್ಚಳವಾಗಿದ್ದರೆ, ಸಾಲದ ಪ್ರಮಾಣ 14.5% ಹೆಚ್ಚಳವಾಗಿದೆ. ಬ್ಯಾಂಕ್ ಗಳಿಗೆ 25 ಲಕ್ಷ ಕೋಟಿ ಅಗತ್ಯವಿದ್ದು, ಅದರಲ್ಲಿ 5ರಿಂದ 6 ಲಕ್ಷ ಕೋಟಿ ಸ್ಟಾಟುಟರಿ ಲಿಕ್ವಿಡಿಟಿ ರೇಷಿಯೋ (ಎಸ್ ಎಲ್ ಆರ್) ಮೂಲಕ ದೊರೆಯುತ್ತದೆ. 20 ಲಕ್ಷ ಕೋಟಿ ರುಪಾಯಿ ಹೊಸದಾಗಿ ಠೇವಣಿ ಮೂಲಕ ಸಂಗ್ರಹಿಸಬೇಕಿದೆ.

ಬ್ಯಾಂಕ್ ಗಳು ಠೇವಣಿ ಮೇಲಿನ ಬಡ್ಡಿ ದರ ಹೆಚ್ಚಿಸುವ ಸಾಧ್ಯತೆ: ಕಾರಣ?

ಭಾರತದಲ್ಲಿ ಸಾಲದ ಹೆಚ್ಚಳ 13-14%ನಲ್ಲಿ 2019 ಮತ್ತು 2020ರಲ್ಲಿ ಆಗಬಹುದು ಎಂಬ ಅಂದಾಜಿದೆ. ಇದು 2018ಕ್ಕೆ ಹೋಲಿಸಿದರೆ ಅಂದರೆ ಆಗ 8% ಇತ್ತು. ಈಗ ತುಂಬ ವೇಗ ಪಡೆಯಲಿದೆ. ಆದ್ದರಿಂದ ಮಧ್ಯಮಾವಧಿಯಲ್ಲಿ ಠೇವಣಿ ಸಂಗ್ರಹದ ಯೋಜನೆ ಬದಲಿಸಲಿದೆ ಎಂದು ಕ್ರಿಸಿಲ್ ಹೇಳಿದೆ.

ಸಾಲದ ಮರುಲೆಕ್ಕಾಚಾರ ಅವಧಿಯಲ್ಲಿ ಹೆಚ್ಚುವರಿ ಎಸ್ ಎಲ್ ಆರ್ ಅನ್ನು ಬ್ಯಾಂಕ್ ಗಳು ಬಳಸುವುದು ಸಾಂಪ್ರದಾಯಿಕವಾಗಿ ನಡೆದುಬಂದಿದೆ. ಅದನ್ನೇ ಈ ಬಾರಿಯೂ ಮಾಡುತ್ತಾರೆ. ಸಾಲದ ಬೇಡಿಕೆಯನ್ನು ಠೇವಣಿ ಹೆಚ್ಚಳದ ಮೂಲಕ ಸರಿದೂಗಿಸಲಾಗುತ್ತದೆ. ಇನ್ನೂ ಸ್ವಲ್ಪ ಮಟ್ಟಿಗೆ ಇನ್ ಫ್ರಾಸ್ಟ್ರಕ್ಚರ್ ಬಾಂಡ್ ನಂಥದ್ದರ ಮೂಲಕ ಕೂಡ ಸಂಗ್ರಹಿಸಲಾಗುತ್ತದೆ.

ಸರಕಾರವು ವಾರ್ಷಿಕ ವೆಚ್ಚ 75 ಸಾವಿರ ಕೋಟಿ ರುಪಾಯಿಯನ್ನು ಪ್ರಧಾನ ಮಂತ್ರಿ ಕಿಸನ್ ಸಮ್ಮಾನ್ ನಿಧಿಗೆ ಮೀಸಲಿಟ್ಟಿದೆ. ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಆದಾಯ ಖಾತ್ರಿ ಯೋಜನೆ ಇದಾಗಿದ್ದು, ಅವರ ಜನ್ ಧನ್ ಖಾತೆಗೆ ಜಮೆ ಆಗುತ್ತದೆ ಇದರಿಂದ ಬ್ಯಾಂಕಿಂಗ್ ವಲಯಕ್ಕೆ ಇನ್ನಷ್ಟು ಬಲ ಬಂದಂತಾಗುತ್ತದೆ. ಅದರಲ್ಲೂ ಠೇವಣಿಗಿಂತ ಸಾಲ ಹೆಚ್ಚುತ್ತಿರುವ ಅವಧಿಯಲ್ಲಿ ಇದು ಪ್ರಮುಖವಾಗಿದೆ. ಅಪನಗದೀಕರಣದ ನಂತರ ಜನ್ ಧನ್ ಖಾತೆ ಠೇವಣಿ ಹೆಚ್ಚಳವಾಗಿದೆ.

English summary

FD rate of interest likely to increase by banks

To meet credit growth of 13-14% on average, banks will have to raise about Rs 20 lakh crore fresh deposits over the two fiscals, estimates rating company Crrisil. Due to this reason banks may increase FD rate of interest.
Story first published: Wednesday, February 6, 2019, 14:45 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more