For Quick Alerts
ALLOW NOTIFICATIONS  
For Daily Alerts

ಸಿಹಿಸುದ್ದಿ! ಆರ್ಬಿಐನಿಂದ ರೈತರಿಗೆ ಬಂಪರ್ ಕೊಡುಗೆ..

|

ಆರ್ಬಿಐ ರೆಪೋ ದರ ಕಡಿತ ಮಾಡುವ ಮೂಲಕ ಗೃಹ, ವೈಯಕ್ತಿಕ ಹಾಗೂ ವಾಹನ ಸಾಲ ಪಡೆಯುವ ಬ್ಯಾಂಕ್ ಗ್ರಾಹಕರಿಗೆ ಬಡ್ಡಿದರ ಇಳಿಸಿದೆ.

ಇದೀಗ ದೇಶದ ರೈತರಿಗೂ ಸಿಹಿಸುದ್ದಿ ನೀಡಿರುವ ಆರ್ಬಿಐ, ರೂ. 1 ಲಕ್ಷದವರೆಗೆ ಪಡೆಯುವ ಸಾಲದ ಮಿತಿಯನ್ನು ರೂ. 1.60 ಲಕ್ಷಗಳಿಗೆ ಏರಿಕೆ ಮಾಡಿದೆ.

ಸಾಲದ ಮಿತಿ 1.60 ಲಕ್ಷಕ್ಕೆ ಏರಿಕೆ
 

ಸಾಲದ ಮಿತಿ 1.60 ಲಕ್ಷಕ್ಕೆ ಏರಿಕೆ

ಹೌದು, ಈ ಹಿಂದೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಯಾವುದೇ ಜಾಮೀನು ನೀಡದೆ ರೂ.1 ಲಕ್ಷವರೆಗೆ ಸಾಲ ಪಡೆಯಬಹುದಾಗಿತ್ತು. ಸಾಲ ಪಡೆಯುವ ಈ ಮಿತಿಯನ್ನು ಈಗ ರೂ. 1.60 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ರೈತರು ಜಾಮೀನು ನೀಡದೆ 1 ಲಕ್ಷ ರೂಪಾಯಿ ಸಾಲ ಪಡೆಯುವ ಮಿತಿಯನ್ನು 2010 ರಲ್ಲಿ ನಿಗದಿಪಡಿಸಲಾಗಿತ್ತು. ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಮೊತ್ತವನ್ನು ಏರಿಕೆ ಮಾಡಿದೆ.

ಯಾರಿಗೆ ಲಾಭ?

ಯಾರಿಗೆ ಲಾಭ?

ನಿಮ್ಮ ಬೆಳೆ ಸಾಲ ಮನ್ನಾ ಆಗಿದೆಯೋ? ಇಲ್ಲವೋ? ಇಲ್ಲಿ ಚೆಕ್ ಮಾಡಿ..

ಪಿಎಂ ಕಿಸಾನ್ ಯೋಜನೆಯಡಿ 6 ಸಾವಿರ

ಪಿಎಂ ಕಿಸಾನ್ ಯೋಜನೆಯಡಿ 6 ಸಾವಿರ

ಫೆಬ್ರವರಿ 1 ರಂದು ಮಧ್ಯಂತರ ಬಜೆಟ್ ಮಂಡಿಸಿರುವ ಪಿಯೂಷ್ ಗೋಯಲ್ ಅವರು, ಸಣ್ಣ ಹಿಡುವಳಿದಾರರಿಗೆ ನೆರವಾಗುವ ಉದ್ದೇಶದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಘೋಷಿಸಿದ್ದಾರೆ.

5 ಎಕರೆಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ಸಣ್ಣ ಹಿಡುವಳಿದಾರ ರೈತರಿಗೆ ವಾರ್ಷಿಕ ರೂ. 6,000 ಸಹಾಯ ಧನ ನೀಡಲಾಗುವುದು. ಅಂದರೆ ತಿಂಗಳಿಗೆ ರೂ. 500 ಸಿಗಲಿದೆ. ಪ್ರತಿ 4 ತಿಂಗಳಿಗೊಮ್ಮೆ ಮೂರು ಕಂತುಗಳಲ್ಲಿ ತಲಾ ರೂ. 2000 ಸಹಾಯಧನ ನೀಡಲಾಗುತ್ತದೆ. ರೈತರ ಖಾತೆಗಳಿಗೆ 6,000 ನೇರವಾಗಿ ಜಮಾ ಆಗಲಿದೆ. ಪಿಎಂ ಕಿಸಾನ್ ಯೋಜನೆ: ರೈತರು 6 ಸಾವಿರ ಸಹಾಯಧನ ಪಡೆಯುವುದು ಹೇಗೆ?

English summary

Good news! Now RBI's gift to farmers

The Reserve Bank of India (RBI) Thursday raised the limit of collateral-free agricultural loans to Rs 1.6 lakh from the current Rs 1 lakh with a view to help small and marginal farmers.
Story first published: Friday, February 8, 2019, 11:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more