For Quick Alerts
ALLOW NOTIFICATIONS  
For Daily Alerts

ರಾಜ್ಯ ಬಜೆಟ್: ಸಣ್ಣ ರೈತರಿಗೆ ಸಿಗಲಿದೆ ಆಭರಣಗಳ ಮೇಲೆ ಸಾಲ

|

ಬೆಂಗಳೂರು, ಫೆಬ್ರವರಿ 8: ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ಎಚ್ ಡಿ ಕುಮಾರಸ್ವಾಮಿ ಕೃಷಿ ಸಹಕಾರ ವಲಯಕ್ಕೆ ಹೊಸ ಘೋಷಣೆಗಳನ್ನು ಮಾಡಿದ್ದಾರೆ.

ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಒದಗಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದಿರುವ ಕುಮಾರಸ್ವಾಮಿ ಕೇರಳದ ಮಾದರಿಯಲ್ಲಿ ರಾಜ್ಯದಲ್ಲಿಯೂ "ಸಾಲ ಪರಿಹಾರ ಆಯೋಗ"ವನ್ನು ಸ್ಥಾಪಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

Karnataka Budget 2019 LIVE : ರೈತರಿಗಾಗಿ 'ಗೃಹಲಕ್ಷ್ಮಿ' ಯೋಜನೆ

ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅವರ ಆಭರಣಗಳ ಮೇಲೆ ಶೇ 3 ರಷ್ಟು ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವ ಗೃಹಲಕ್ಷ್ಮಿ ಬೆಳೆ ಸಾಲ ಯೋಜನೆಯನ್ನು ಪ್ರಕಟಿಸಿದ್ದಾರೆ. ಇದರಿಂದ ಸಾಲದ ತುರ್ತು ಅಗತ್ಯವಿರುವ ರೈತರಿಗೆ ಅನುಕೂಲವಾಗಲಿದೆ

 

ಕೃಷಿ-ಸಹಕಾರ ಕ್ಷೇತ್ರಕ್ಕೆ ಅವರು ಘೋಷಣೆ ಮಾಡಿರುವ ಯೋಜನೆಗಳ ವಿವರ ಇಲ್ಲಿದೆ.

ರೈತ ಕಣಜ ಯೋಜನೆ

ರೈತ ಕಣಜ ಯೋಜನೆ

ರಾಜ್ಯದಲ್ಲಿ 12 ಅಧಿಸೂಚಿತ ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಸಂರಕ್ಷಣಾ ವ್ಯವಸ್ಥೆಯನ್ನು ಆವರ್ತನಾ ನಿಧಿ ಮೂಲಕ ಒದಗಿಸಲು "ರೈತ ಕಣಜ" ಯೋಜನೆ ಜಾರಿ; ರಾಜ್ಯದಲ್ಲಿನ ಎಲ್ಲಾ ಕೃಷಿ ಮಾರುಕಟ್ಟೆಗಳಲ್ಲಿ ವರ್ಷವಿಡೀ ಒಂದು ಶಾಶ್ವತ ಸಂರಕ್ಷಣಾ ಕೇಂದ್ರ ಪ್ರಾರಂಭ; 510 ಕೋಟಿ ರೂ. ಅನುದಾನ.

ಈರುಳ್ಳಿ, ಆಲೂಗಡ್ಡೆ ಹಾಗೂ ಟೊಮೆಟೊ ಉತ್ಪನ್ನಗಳಿಗೆ ಬೆಲೆ ಕುಸಿತದ ಸಂದರ್ಭದಲ್ಲಿ "ಬೆಲೆ ಕೊರತೆ ಪಾವತಿ ಯೋಜನೆ" (Price Deficiency Payment Scheme) ಜಾರಿಗೆ 50 ಕೋಟಿ ರೂ. ಅನುದಾನ.

ಕರ್ನಾಟಕ ಬಜೆಟ್ ಅಧಿವೇಶನ, ಎಚ್ಡಿಕೆ ಬಜೆಟ್ ಮಂಡನೆ, ಬಿಜೆಪಿ ಪ್ರತಿಭಟನೆ : ಚಿತ್ರಗಳು

ಸಿರಿಧಾನ್ಯಗಳಿಗೆ ಉತ್ತೇಜನ

ಸಿರಿಧಾನ್ಯಗಳಿಗೆ ಉತ್ತೇಜನ

ರಾಜ್ಯದಲ್ಲಿ ಸಿರಿಧಾನ್ಯಗಳ ಉತ್ಪಾದನೆ, ಉತ್ತೇಜನಕ್ಕೆ ಕ್ರಮ. ಆರು ಸಿರಿಧಾನ್ಯಗಳಿಗೆ ಲಾಭದಾಯಕ ಬೆಂಬಲ ಬೆಲೆ ನೀಡಿ, ಹಾಪ್‌ಕಾಮ್ಸ್, ನಂದಿನಿ ಔಟ್ಲೆಟ್ ಮುಂತಾದವುಗಳಲ್ಲಿ ಮಾರಾಟ ವ್ಯವಸ್ಥೆ ರೂಪಿಸಲು 10 ಕೋಟಿ ರೂ. ಅನುದಾನ.

ಗದಗ, ಹಾವೇರಿ, ಕುಂದಗೋಳ, ಹುಬ್ಬಳ್ಳಿ ಹಾಗೂ ಅಣ್ಣಿಗೇರಿಯಲ್ಲಿ ಮೆಣಸು ಮತ್ತು ಹೆಸರುಕಾಳು ಬೆಳೆಗಳ

ಗುಣವಿಶ್ಲೇಷಣೆ ಮತ್ತು ಸಂಸ್ಕರಣಾ ಘಟಕ ಪ್ರಾರಂಭಿಸಲು 160 ಕೋಟಿ ರೂ. ಅನುದಾನ.

ಬಜೆಟ್: ಕೃಷಿ ಕ್ಷೇತ್ರಕ್ಕೆ ಕುಮಾರಸ್ವಾಮಿ ನೀಡಿರುವ ಕೊಡುಗೆಗಳು

ಗೃಹಲಕ್ಷ್ಮಿ ಬೆಳೆ ಸಾಲ ಯೋಜನೆ
 

ಗೃಹಲಕ್ಷ್ಮಿ ಬೆಳೆ ಸಾಲ ಯೋಜನೆ

ಸಹಕಾರ ವಲಯದಲ್ಲಿ ಕೃಷಿ ಇಲಾಖೆಯ ರೈತ ಉತ್ಪಾದಕರ ಸಂಸ್ಥೆಯ ಮಾದರಿಯಲ್ಲಿ 500 ಸಂಯುಕ್ತ ಬೇಸಾಯ (Land Operations) ಸಹಕಾರ ಸಂಘಗಳ ಸ್ಥಾಪನೆಗೆ 5 ಕೋಟಿ ರೂ. ಅನುದಾನ.

ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅವರ ಆಭರಣಗಳ ಮೇಲೆ ಶೇ 3 ರಷ್ಟು ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವ ಗೃಹಲಕ್ಷ್ಮಿ ಬೆಳೆ ಸಾಲ ಯೋಜನೆ.

ರಾಜ್ಯದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ 500 ಸ್ವಯಂಚಾಲಿತ ಹಾಲು ಶೇಖರಣೆ ಯಂತ್ರ ಖರೀದಿಗೆ 5 ಕೋಟಿ ರೂ. ಅನುದಾನ.

ಬಜೆಟ್: ರಾಜ್ಯದ ರೈತರಿಗೆ ಕುಮಾರಸ್ವಾಮಿ ಘೋಷಣೆಗಳೇನು?

ವೈಜ್ಞಾನಿಕ ತ್ಯಾಜ್ಯ ನಿರ್ವಹಣಾ ಘಟಕ

ವೈಜ್ಞಾನಿಕ ತ್ಯಾಜ್ಯ ನಿರ್ವಹಣಾ ಘಟಕ

ರಾಜ್ಯದ ಎಲ್ಲ 162 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಸ್ಮಾರ್ಟ್ ವೈಯಿಂಗ್ ಮಷೀನ್ ಪದ್ಧತಿಗೆ 18 ಸಾವಿರ ಮಾರುಕಟ್ಟೆ ಕಾರ್ಯನಿರ್ವಾಹಕರ ಬದಲಾವಣೆ.

ರಾಜ್ಯದ 5 ತರಕಾರಿ ಮಾರುಕಟ್ಟೆಗಳಲ್ಲಿ ಒಟ್ಟು 10 ಕೋಟಿ ರೂ. ವೆಚ್ಚದಲ್ಲಿ "ಸಮಗ್ರ ವೈಜ್ಞಾನಿಕ ತ್ಯಾಜ್ಯ ನಿರ್ವಹಣಾ ಘಟಕ"ಗಳ ಸ್ಥಾಪನೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಪ್ರಾಂಗಣದಲ್ಲಿನ ನಿವೇಶನ, ಗೋದಾಮು, ಅಂಗಡಿ, ಅಂಗಡಿ-ವ-ಗೋದಾಮುಗಳ ಹಂಚಿಕೆಯ ರೈತ ಉತ್ಪಾದಕರ ಸಂಸ್ಥೆಗೆ ಶೇ. 10ರಷ್ಟು ಮೀಸಲಾತಿ; ಶೇ. 50ರ ರಿಂದ ರಿಯಾಯಿತಿ ದರದಲ್ಲಿ ಹಂಚಿಕೆ.

ಸಾಲ ಪರಿಹಾರ ಆಯೋಗ

ಸಾಲ ಪರಿಹಾರ ಆಯೋಗ

ಕೇರಳ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲಿಯೂ ಒಂದು "ಸಾಲ ಪರಿಹಾರ ಆಯೋಗ"ವನ್ನು ಸ್ಥಾಪಿಸುವ ಬಗ್ಗೆ ಪರಿಶೀಲನೆ.

ಕರ್ನಾಟಕ ರಾಜ್ಯ ಉಗ್ರಾಣ ನಿಗಮದಲ್ಲಿ ಕೃಷಿ ಉತ್ಪನ್ನ ಸಂಗ್ರಹಣೆ ಮಾಡಿದ್ದಲ್ಲಿ ರೈತರಿಗೆ ಉಚಿತವಾಗಿ ಗರಿಷ್ಠ 8 ತಿಂಗಳ ವೈಜ್ಞಾನಿಕ ಸಂಗ್ರಹಣೆ ಸೌಲಭ್ಯ, ಅಡಮಾನ ಸಾಲದ ಮೇಲೆ ಭಾಗಶಃ ಬಡ್ಡಿ

ಸಹಾಯಧನ (Interest Subvention) ಹಾಗೂ ಕನಿಷ್ಠ ಸಾಗಾಣಿಕೆ ವೆಚ್ಚ ಒದಗಿಸಲು 200 ಕೋಟಿ ರೂ. ಅನುದಾನ.

ಗ್ರಾಮೀಣ ಸಂತೆಗೆ ಮೂಲಸೌಲಭ್ಯ

ಗ್ರಾಮೀಣ ಸಂತೆಗೆ ಮೂಲಸೌಲಭ್ಯ

ರಾಜ್ಯದಲ್ಲಿ ಮುಂದಿನ 5 ವರ್ಷದಲ್ಲಿ ತಲಾ 1 ಕೋಟಿ ರೂ. ವೆಚ್ಚದಲ್ಲಿ 600 ಗ್ರಾಮೀಣ ಸಂತೆಗಳಿಗೆ ಮೂಲಸೌಲಭ್ಯ ಒದಗಿಸಿ, ಕಿರು ಮಾರುಕಟ್ಟೆಗಳಾಗಿ ಅಭಿವೃದ್ಧಿ. ರೈತರಿಗೆ ನೇರ ಮಾರಾಟಕ್ಕೆ ಅವಕಾಶ ಹಾಗೂ ಸಾಗಾಣಿಕೆ ವೆಚ್ಚ ಉಳಿತಾಯ.

English summary

Karnataka budget 2019 hd kumaraswamy announcements to agriculture cooperative sector

Karnataka budget 2019: Cheif Minister HD Kumaraswamy new announcements for Cooperative sector including Price Deficiency Payment Scheme for agriculture.
Story first published: Friday, February 8, 2019, 16:13 [IST]
Company Search
COVID-19
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more