For Quick Alerts
ALLOW NOTIFICATIONS  
For Daily Alerts

ಬಿಎಸ್ಎನ್ಎಲ್ ಮುಚ್ಚಲು ಚಿಂತನೆ! ಉದ್ಯೋಗಿಗಳ ಭವಿಷ್ಯವೇನು?

|

ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ ಬಿಎಸ್ಎನ್ಎಲ್ ಆದಾಯವು ಖಾಸಗಿ ಕಂಪನಿಗಳ ತೀವ್ರ ಪೈಪೋಟಿಯಿಂದಾಗಿ ಗಣನೀಯವಾಗಿ ಕುಸಿತ ಕಂಡಿದೆ. 2017-18 ರ ಅಂತ್ಯದ ವೇಳೆಗೆ ಬಿಎಸ್ಎನ್ಎಲ್ ಒಟ್ಟು ನಷ್ಟ ರೂ. 31,287 ಕೋಟಿಗೆ ತಲುಪಿದೆ. ಈ ಹಿನ್ನೆಲೆಯಲ್ಲಿ ಬಿಎಸ್ಎನ್ಎಲ್ ಅನ್ನು ಮುಚ್ಚುವ/ಕಾಯಕಲ್ಪ ನೀಡುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.

ಸರ್ವೈವಲ್ ರಿಪೋರ್ಟ್
 

ಸರ್ವೈವಲ್ ರಿಪೋರ್ಟ್

ಬಿಎಸ್ಎನ್ಎಲ್ ಮುಂದಿನ ಭವಿಷ್ಯದ ಕುರಿತಾಗಿ ಚಿಂತನೆ ನಡೆಸಿರುವ ಕೇಂದ್ರ ಸರ್ಕಾರ, ಬಂಡವಾಳ ಹಿಂತೆಗೆತ ಅಥವಾ ಮುಚ್ಚುವ ಬಗ್ಗೆ ಪರಿಶೀಲನೆ ನಡೆಸಿದೆ.

ಕಾಯಕಲ್ಪ ನೀಡುವ ಕುರಿತು ಪರಿಶೀಲನೆ ನಡೆಸಿದ್ದು ಕೇಂದ್ರ ಸರ್ಕಾರ ಸರ್ವೈವಲ್ ರಿಪೋರ್ಟ್ (survival report) ಸಿದ್ದಪಡಿಸಲು ಹೇಳಿದೆ. ಸರ್ಕಾರ ಯಾವ ನಿರ್ಧಾರ ಕೈಗೊಳ್ಳಬಹುದು ಎಂಬ ಆತಂಕ ನೌಕರರ ವಲಯದಲ್ಲಿ ಮೂಡಿಸಿದೆ.

ವರದಿ ಆಧಾರದ ಮೇಲೆ ನಿರ್ಧಾರ?

ವರದಿ ಆಧಾರದ ಮೇಲೆ ನಿರ್ಧಾರ?

ಸಂಸ್ಥೆಯ ಪುನರುಜ್ಜೀವನಕ್ಕೆ ಸಹಾಯವಾಗಬಲ್ಲ ಮಾರ್ಗಗಳನ್ನು ಸೂಚಿಸಲು ಹಾಗು ಮತ್ತೆ ಲಾಭದಾಯಕವಾಗಿಸಲು ಕೈಗೊಳ್ಳಬಹುದಾದ ಯೋಜನೆಗಳ ಬಗ್ಗೆ ಮಾಹಿತಿ ಕೇಳಲಾಗಿದೆ. ಈ ವರದಿ ಆಧಾರದ ಮೇಲೆ ಯಾವ ನಿರ್ಧಾರ ಕೈಗೊಳ್ಳುವುದು ಸೂಕ್ತ ಎಂಬುದರ ಕುರಿತಾಗಿ ಪರಿಶೀಲನೆ ನಡೆಸಿ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು.

ಜಿಯೋ ಪ್ರವೇಶಾತಿ ಹೊಡೆತ

ಜಿಯೋ ಪ್ರವೇಶಾತಿ ಹೊಡೆತ

ಜಿಯೋ ಪ್ರವೇಶಾತಿ ಬಳಿಕ ಬಿಎಸ್ಎನ್ಎಲ್ ಆದಾಯ ಗಣನೀಯ ಪ್ರಮಾಣದಲ್ಲಿ ಕುಸಿದಿದ್ದು, ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ಎದುರಾಗಿದೆ. ಬಿಎಸ್ಎನ್ಎಲ್ ಸಂಸ್ಥೆಯಲ್ಲಿ ಭಾರಿ ಸಂಖ್ಯೆಯ ಸಿಬ್ಬಂದಿಗಳಿದ್ದು, ಅದರಲ್ಲಿಯೂ ಹಿರಿಯರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಇದೆ.

ಅತಿ ಹೆಚ್ಚು ನಷ್ಟ
 

ಅತಿ ಹೆಚ್ಚು ನಷ್ಟ

ಬಿಎಸ್ಎನ್ಎಲ್ ಹೊಂದಿರುವ ರೂ. 15,000 ಕೋಟಿ ಮೌಲ್ಯದ ಕಟ್ಟಡಗಳು, ಇತರೆ ಆಸ್ತಿಗಳ ಮೂಲಕ ಸಂಪನ್ಮೂಲ ಸಂಗ್ರಹಿಸುವ ಪ್ರಸ್ತಾಪವನ್ನು ಮುಂದಿಡಲಾಗಿದೆ. ಸ್ವಯಂ ನಿವೃತ್ತಿ ಯೋಜನೆಗೆ ಅರ್ಹ ವಯೋಮಿತಿಯನ್ನು ಸಡಿಲಿಸಿದರೆ ಅದಕ್ಕೆ ತಗಲುವ ವೆಚ್ಚ ಕೂಡ ಏರಿಕೆಯಾಗುತ್ತದೆ.

ಸಾರ್ವಜನಿಕ ಕಂಪನಿಗಳ ಪೈಕಿ ಅತಿ ಹೆಚ್ಚು ನಷ್ಟವನ್ನು ಬಿಎಸ್ಎನ್ಎಲ್ ದಾಖಲಿಸಿದ್ದು, ಈ ಕಾರಣಗಳಿಂದ ಮುಚ್ಚುವ ಬಗ್ಗೆ ಪರಿಶೀಲನೆ ನಡೆದಿದೆ ಎಂದು ಹೇಳಲಾಗಿದೆ.

ಮೂರು ಆಯ್ಕೆಗಳು?

ಮೂರು ಆಯ್ಕೆಗಳು?

ಆದರಿಂದ, ಬಿಎಸ್ಎನ್ಎಲ್ ಗಾಗಿ ಸರ್ಕಾರ ಈ ಮೂರು ಅಂಶಗಳನ್ನು ಪರಿಗಣಿಸುತ್ತಿದೆ ಎಂಬುದನ್ನು ನಾವು ಗಮನಿಸಬಹುದು.

ಮುಚ್ಚುವಿಕೆ: ಬಿಎಸ್ಎನ್ಎಲ್ ಮತ್ತು ಅದರ ಎಲ್ಲ ಕಾರ್ಯಚರಣೆಗಳನ್ನು ಸ್ಥಗಿತಗೊಳಿಸದಂತಾಗುತ್ತದೆ.

ಕಾರ್ಯತಂತ್ರದ ಹೂಡಿಕೆ: ಬಿಎಸ್ಎನ್ಎಲ್ ಚಾಲನೆಯಲ್ಲಿರುವ ಸಲುವಾಗಿ ಖಾಸಗಿ ಸಂಸ್ಥೆಗಳ ಪ್ರವೇಶವ ಕ್ಕೆ ಅವಕಾಶ ನೀಡಬೇಕಾಗುತ್ತದೆ.

ಫಂಡ್: ಸಂಸ್ಥೆಯ ಕಾರ್ಯಾಚರಣೆಗಳನ್ನು ಉಳಿಸಿಕೊಳ್ಳಲು ಸರಕಾರದಿಂದ ಹೆಚ್ಚಿನ ಹಣವನ್ನು ಅಳವಡಿಸುವುದು.

Read more about: bsnl jobs money business
English summary

BSNL Can Be Shut Down Over Mounting Losses; what is employees future?

BSNL’s total losses have now reached Rs 31,287 crore, at the end of 2017-18. And this has unsettled the Govt., and making them anxious.
Story first published: Thursday, February 14, 2019, 14:06 [IST]
Company Search
COVID-19
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more