For Quick Alerts
ALLOW NOTIFICATIONS  
For Daily Alerts

ಓಲಾದಲ್ಲಿ ಸಚಿನ್ ಬನ್ಸಾಲ್ ರೂ. 650 ಕೋಟಿ ಹೂಡಿಕೆ

|

ಫ್ಲಿಪ್ಕಾರ್ಟ್ ನ ಸಹ ಸ್ಥಾಪಕ ಸಚಿನ್ ಬನ್ಸಾಲ್ ಅವರು ವಿಶ್ವದ ಅತಿದೊಡ್ಡ ಬಾಡಿಗೆ ಕಾರು ಕಂಪೆನಿಯಾಗಿರುವ ಓಲಾದಲ್ಲಿ ರೂ. 650 ಕೋಟಿ ಹೂಡಿಕೆ ಮಾಡಿದ್ದಾರೆ.

ಓಲಾದಲ್ಲಿ ಸಚಿನ್ ಬನ್ಸಾಲ್ ರೂ. 650 ಕೋಟಿ ಹೂಡಿಕೆ

 

ಸಚಿನ್ ಬನ್ಸಾಲ್ ಫ್ಲಿಪ್ಕಾರ್ಟ್ ಸಂಸ್ಥೆಯಿಂದ ಹೊರಬಂದ ಎಂಟು ತಿಂಗಳ ನಂತರ ಹೂಡಿಕೆ ಮಾಡಿದ್ದು, ಇವರು ಬಿನ್ನಿ ಬನ್ಸಾಲ್ ರೊಂದಿಗೆ ಸೇರಿ ಒಂದು ದಶಕದ ಹಿಂದೆ ಕಂಪನಿಯನ್ನು ಸ್ಥಾಪಿಸಿದ್ದರು.

ಓಲಾ ಕಂಪನಿ ಭಾರತದ ಅತ್ಯಂತ ಭರವಸೆಯ ಸಂಸ್ಥೆಯಾಗಿದೆ. ಪ್ರಯಾಣಿಕ ಸಾರಿಗೆ ವ್ಯವಸ್ಥೆಯಲ್ಲಿ ಆಳವಾದ ಪ್ರಭಾವವನ್ನು ಮತ್ತು ಶಾಶ್ವತ ಮೌಲ್ಯವನ್ನು ಸೃಷ್ಟಿಸುತ್ತಿದ್ದು, ಪ್ರಯಾಣಿಕ ಸಾರಿಗೆಯಲ್ಲಿ ಜಾಗತಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಓಲಾ ಸಂಸ್ಥೆ ಶತಕೋಟಿ ಭಾರತೀಯರ ವಿವಿಧ ಅಗತ್ಯಗಳನ್ನು ಪೂರೈಸುತ್ತಿರುವ ವಿಶ್ವಾಸಾರ್ಹ ಕಂಪೆನಿಯಾಗಗಿದೆ ಎಂದು ಸಚಿನ್ ಬನ್ಸಾಲ್ ಹೇಳಿದ್ದಾರೆ. ವೇಗವಾಗಿ ಮುನ್ನಡೆಯುತ್ತಿರುವ ಓಲಾ ಪ್ರಗತಿಯ ಪಯಣದಲ್ಲಿ ಭಾಗವಾಗಿರುವುದಕ್ಕೆ ವೈಯಕ್ತಿಕವಾಗಿ ಖುಷಿಯಾಗುತ್ತಿದೆ. ಕಂಪೆನಿಯ ಯಶಸ್ಸಿಗೆ ಸಾಧ್ಯವಾದ ಕೊಡುಗೆ ನೀಡಲು ತಯಾರಿದ್ದೇನೆ ಎಂದಿದ್ದಾರೆ.

ಸಚಿನ್ ಬನ್ಸಾಲ್ ಅವರ ಈ ದೊಡ್ಡ ಮಟ್ಟದ ಹೂಡಿಕೆಯು ಓಲಾದ ಜಾಗತಿಕ ನಿಧಿ ಸಂಗ್ರಹದ ಭಾಗವಾಗಿದೆ. ಇದು ಹೂಡಿಕೆದಾರರಾಗಿ ಬನ್ಸಾಲ್ ಅವರ ವೈಯಕ್ತಿಕ ಸಾಮರ್ಥ್ಯವನ್ನು ತೋರಿಸಿದೆ ಎಂದು ಓಲಾ ಸಂಸ್ಥೆ ಹೇಳಿದೆ. ಓಲಾದಲ್ಲಿ ಸಚಿನ್‍ ಬನ್ಸಾಲ್ ಹೂಡಿಕೆದಾರರಾಗಿರುವುದಕ್ಕೆ ಕಂಪೆನಿ ಹೆಮ್ಮೆ ಪಡುತ್ತಿದೆ ಎಂದು ಓಲಾ ಸಹ-ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರವಾಲ್ ಹೇಳಿದ್ದಾರೆ. ಒಂದು ಶತಕೋಟಿ ಜನರಿಗೆ ಸೇವೆ ಸಲ್ಲಿಸಲು ಬನ್ಸಾಲ್ ಅವರ ಹೂಡಿಕೆಯು ಕಂಪೆನಿಗೆ ದೊಡ್ಡ ಪ್ರೋತ್ಸಾಹವಾಗಿದೆ ಎಂದಿದ್ದಾರೆ.

Read more about: business money investment flipkart
English summary

Flipkart co-founder Sachin Bansal invests Rs 650 crore in Ola

Bansal, founder of Flipkart, has invested Rs 650 crore ($93 million) in cab hailing app Ola.
Story first published: Thursday, February 21, 2019, 12:10 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more