For Quick Alerts
ALLOW NOTIFICATIONS  
For Daily Alerts

ಜಿಎಸ್‍ಟಿ ದರ ಕಡಿತವು ರಿಯಲ್ ಎಸ್ಟೇಟ್ ಮಾರುಕಟ್ಟೆ ಪ್ರಗತಿಗೆ ಸಹಕಾರಿ : ಕ್ರಡೈ

|

ಬೆಂಗಳೂರು, ಫೆಬ್ರವರಿ 27: ಜಿಎಸ್‍ಟಿ ದರ ಕಡಿತದ ಘೋಷಣೆಯನ್ನು ಜಿಎಸ್‍ಟಿ ಕೌನ್ಸಿಲ್ ಆಫ್ ಇಂಡಿಯಾ ಘೋಷಿಸುತ್ತಿದ್ದಂತೆ ರಿಯಾಲ್ಟಿ ಮಾರುಕಟ್ಟೆಯಲ್ಲಿ ಸಾಕಷ್ಟು ಹೆಚ್ಚಿನ ಉತ್ತೇಜನ ಕಂಡು ಬರುತ್ತಿದೆ. ನಿರ್ಮಾಣ ಹಂತದಲ್ಲಿರುವ ಆಸ್ತಿಗಳ ಮೇಲಿನ ಜಿಎಸ್‍ಟಿ ದರ ಶೇ.12ರಿಂದ ಶೇ.5ಕ್ಕೆ ಇಳಿಕೆಯಾಗಿದೆ. ಇನ್ನು ಕೈಗೆಟುಕುವ ಮನೆಗಳ ಮೇಲಿನ ಜಿಎಸ್‍ಟಿ ಶೇ.8 ರಿಂದ ಶೇ.1ಕ್ಕೆ ಇಳಿಕೆಯಾಗಿದೆ.

ಇದು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಖರೀದಿಯ ಅವಕಾಶವನ್ನು ಹೆಚ್ಚು ಮಾಡಿದೆ. ಮನೆಗಳ ಮೇಲೆ ಹೂಡಿಕೆ ಮಾಡಲು ಉತ್ತಮ ಅವಕಾಶಕ್ಕಾಗಿ ದಶಕಗಳಿಂದ ಕಾಯುತ್ತಿದ್ದವರಿಗೆ ಇದೊಂದು ಉತ್ತಮ ಅವಕಾಶ ಒದಗಿಬಂದಿದೆ. ಸಾಕಷ್ಟು ಸಂಖ್ಯೆಯ ಸಂಭವನೀಯ ಕೊಳ್ಳುಗರು ಡೆವಲಪರ್ ಗಳನ್ನು ಸಂಪರ್ಕಿಸಿದ್ದು ಆದಷ್ಟು ಶೀಘ್ರ ಮನೆ ಕೊಂಡುಕೊಳ್ಳುವ ಸಂಬಂಧ ಮಾತುಕತೆ ನಡೆಸಿದ್ದಾರೆ.

 

ಲೋಕಸಭೆ ಚುನಾವಣೆಗೂ ಮುನ್ನ ಅಪಾರ್ಟ್ಮೆಂಟ್ ಖರೀದಿದಾರರಿಗೆ ಶುಭ ಸುದ್ದಿ

ಜಿಎಸ್‍ಟಿ ದರ ಕಡಿತದ ಪರಿಣಾಮ, ವಸತಿ ಮನೆಗಳ ಮಾರಾಟ ಹಾಗೂ ಹೊಸ ಯೋಜನೆಗಳ ಆರಂಭ ಹೆಚ್ಚಾಗಲಿದೆ, ಕ್ರಡೈ (ದಿ ಕಾನ್ಫಿಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ) ಬೆಂಗಳೂರು ವಿಭಾಗವು ತನ್ನ ಮೊದಲನೇ ಆವೃತ್ತಿಯ ವಾರ್ಷಿಕ ರಿಯಲ್ ಎಸ್ಟೇಟ್ ಎಕ್ಸ್ ಪೋ-2019ನ್ನು ಘೋಷಿಸಿದೆ.

ಜಿಎಸ್‍ಟಿ ದರ ಕಡಿತವು ರಿಯಲ್ ಎಸ್ಟೇಟ್ ಮಾರುಕಟ್ಟೆ ಪ್ರಗತಿಗೆ ಸಹಕಾರಿ

ಈ ಎಕ್ ಪೋ ನಿರಂಥರವಾಗಿ ಎರಡು ವಾರಾಂತ್ಯ ನಡೆಯಲಿದೆ. 2019ರ ಮಾ. 2-3 ರಂದು ಬೆಂಗಳೂರಿನ ಕುಮಾರಕೃಪ ರಸ್ತೆಯಲ್ಲಿರುವ ಅಶೋಕಾ ಹೋಟೆಲ್‍ನಲ್ಲಿ ಹಾಗೂ 2019ರ ಮಾ.9-10ರಂದು ಮಾರತ್‍ಹಳ್ಳಿಯ ರ್ಯಾಡಿಸನ್ ಬ್ಲೂ (ಪಾರ್ಕ್ ಪ್ಲಾಜಾ)ದಲ್ಲಿ ನಡೆಯಲಿದೆ. ಕಳೆದ ಬಜೆಟ್‍ನಲ್ಲಿ ಘೋಷಿಸಲಾದ ಹೊಸ ತೆರಿಗೆ ಅನುಕೂಲಗಳು, ಸ್ಥಿರ ಬೆಲೆಗಳು, ಆಕರ್ಷಕ ತಾಣಗಳು ಕೂಡ ಮನೆ ಕೊಳ್ಳುಗರನ್ನು ಉತ್ಸುಕರಾಗುವಂತೆ ಮಾಡಿದ ಕಾರಣಗಳಾಗಿವೆ. ಅಲ್ಲದೇ ಇವರು ಕ್ರಡೈ ರಿಯಾಲ್ಟಿ ಎಕ್ಸ್‍ಪೋದಲ್ಲಿ ಭಾಗಿಯಾಗುವಂತೆ ಕೂಡ ಇವು ಮಾಡಲಿವೆ ಎಂಬ ನಿರೀಕ್ಷೆ ಹೊಂದಲಾಗಿದೆ.

30 ಮಂದಿ ಡೆವಲಪರ್ ಗಳು ಎಕ್ಸ್ ಪೋನಲ್ಲಿ ಭಾಗವಹಿಸುತ್ತಿದ್ದು, ಲಲಿತ್ ಅಶೋಕ್ ಹೋಟೆಲ್‍ನಲ್ಲಿ ಎಕ್ಸ್ ಪೋ 2019ರ ಮಾ.2ರಂದು ಆರಂಭವಾಗಲಿದೆ. ಹೆಚ್ಚುವರಿಯಾಗಿ 7 ಆರ್ಥಿಕ ಸಂಸ್ಥೆಗಳು ಕೂಡ ಪಾಲ್ಗೊಳ್ಳುತ್ತಿದ್ದು, ಎಕ್ಸ್ ಪೋ ನಡೆಯುವ ಸ್ಥಳದಲ್ಲಿ ನಿರಂತರವಾಗಿ ಉಪಸ್ಥಿತರಿದ್ದು, ಗೃಹ ಕರೀದಿದಾರರಿಗೆ, ಆಸಕ್ತರಿಗೆ ಗೃಹ ಸಾಲದ ಹಾಗೂ ಅದರ ಅನುಕೂಲಗಳ ಕುರಿತು ವಿವರಿಸಲಿದ್ದಾರೆ. ತಮ್ಮ ಸಾಲ ಯೋಜನೆಯನ್ನು ವಿವರಿಸಲಿದ್ದಾರೆ. ಈ ಎಕ್ಸ್‍ಪೋ ಮೂಲಕ ಕ್ರಡೈ ಬೆಂಗಳೂರು ಸಂಸ್ಥೆ ಒಂದು ಸೂರಿನ ಅಡಿ ಎಲ್ಲಾ ವಿಧದ ಗೃಹ ಖರೀದಿಯ ಸವಲತ್ತುಗಳನ್ನು ತರುವ ಯತ್ನ ಮಾಡಿದೆ.

20 ಸಾವಿರ ಕೋಟಿ ಜಿಎಸ್ಟಿ ವಂಚನೆ

ಬೆಂಗಳೂರಿನಲ್ಲಿ ವಸತಿ ಆಸ್ತಿ ಮಾರಾಟ ಕಳೆದ ಆರು ತಿಂಗಳಲ್ಲಿ ಸಾಕಷ್ಟು ಉತ್ತಮ ಪ್ರಗತಿ ಕಂಡಿರುವುದು ಗಮನಕ್ಕೆ ಬರುತ್ತಿದೆ. ವರದಿಯ ಪ್ರಕಾರ 2017ನೇ ವರ್ಷಕ್ಕೆ ಹೋಲಿಸಿದರೆ 2018ರ ವರ್ಷದ ಎರಡನೇ ಭಾಗದಲ್ಲಿ ನಗರದಲ್ಲಿ ವಸತಿ ಆಸ್ತಿ ಮಾರಾಟ ಪ್ರಕ್ರಿಯೆಯಲ್ಲಿ ಶೇ.35ರಷ್ಟು ಪ್ರಗತಿ ಕಂಡುಬಂದಿದೆ.

ಅಂಚೆ ಮತ್ತು ನೋಂದಣಿ ಇಲಾಖೆ ನೀಡಿರುವ ದಾಖಲೆ ಪ್ರಕಾರ 2018ರ ಕಡೆಯ 7 ತಿಂಗಳಲ್ಲಿ ಆಸ್ತಿ ನೋಂದಣಿ ಮೂಲಕ ಬರುವ ಆದಾಯದಲ್ಲಿ 2017ಕ್ಕೆ ಹೋಲಿಸಿದರೆ ಶೇ.20ರಷ್ಟು ಹೆಚ್ಚಳವಾಗಿದ್ದು, ಇದು ರಿಯಲ್ ಎಸ್ಟೇಟ್ ಮಾರುಕಟ್ಟೆ ಪ್ರಗತಿಗೆ ಪೂರಕ ಸೂಚನೆ ನೀಡಿದೆ ಎಂದು ತಿಳಿಸಿದೆ.

ಇದನ್ನು ಗಮನಿಸಿದರೆ ಅರಿವಾಗುವ ವಿಚಾರವೆಂದರೆ ಆಸ್ತಿ ಖರೀದಿದಾರರು ಇನ್ನಷ್ಟು ದಿನ ಕಾಯುವುದಿಲ್ಲ. ಇದರಿಂದ ಇವರಿಗೆ ಅನುಕೂಲ ಒದಗಿಸಲು ಬೆಂಗಳೂರು ನಗರವು ಉತ್ತಮ ವಸತಿ ಆಸ್ತಿಗಳನ್ನು ಉತ್ತಮ ಬೆಲೆಗೆ ನೀಡುತ್ತಿದೆ.

English summary

GST rate cut lead to realty market uptick - CREDAI Bengaluru announces Realty Expos

In the wake of GST rate cuts, increasing residential sales and new project launches, CREDAI (The Confederation of Real Estate Developers Association of India) Bengaluru has announced its first edition of Annual Realty Expo 2019. The expo is going to be held on two consecutive weekends starting on March 2-3, 2019 at Hotel Lalit Ashok, Kumara Krupa High Grounds and on March 9-10, 2019 at RadissionBlu (Park Plaza), Marathahalli.
Story first published: Thursday, February 28, 2019, 14:52 [IST]
Company Search
Enter the first few characters of the company's name or the NSE symbol or BSE code and click 'Go'
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more