For Quick Alerts
ALLOW NOTIFICATIONS  
For Daily Alerts

ಮಹಿಳೆಯರಗಾಗಿ ಅಡ್ವಾಂಟೇಜ್ ವುಮನ್ ಔರಾ ಸೇವಿಂಗ್ಸ್ ಯೋಜನೆ, ಸಾಕಷ್ಟು ಲಾಭ ಪಡೆಯಿರಿ

ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್ ಮಹಿಳೆಯರಿಗಾಗಿ ಅಡ್ವಾಂಟೇಜ್ ವುಮನ್ ಔರಾ ಸೇವಿಂಗ್ಸ್ ಖಾತೆಯನ್ನು ನಡೆಸುತ್ತಿದೆ. ಕೆಲಸ ಮಾಡುವ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ಆರಂಭಿಸಲಾಗಿದೆ.

|

ಮಹಿಳೆಯರ ಸಬಲೀಕರಣ ಹಾಗು ಆರ್ಥಿಕ ಸದೃಢತೆಗಾಗಿ ಸರ್ಕಾರಗಳು, ಬ್ಯಾಂಕುಗಳು ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತವೆ.

ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್ ಮಹಿಳೆಯರಿಗಾಗಿ ಅಡ್ವಾಂಟೇಜ್ ವುಮನ್ ಔರಾ ಸೇವಿಂಗ್ಸ್ ಖಾತೆಯನ್ನು ನಡೆಸುತ್ತಿದೆ. ಕೆಲಸ ಮಾಡುವ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ಆರಂಭಿಸಲಾಗಿದೆ.
ಇದರಲ್ಲಿ ಉಚಿತ ವಿಮೆ, ಕ್ಯಾಶ್ಬ್ಯಾಕ್, ರಿಯಾಯಿತಿ ಮತ್ತು ಯಾವುದೇ ಎಟಿಎಂನಲ್ಲಿ ಅನಿಯಮಿತ ವಹಿವಾಟು ಸೌಲಭ್ಯ ನಡೆಸಬಹುದಾಗಿದೆ.

ಅಡ್ವಾಂಟೇಜ್ ವುಮನ್ ಔರಾ ಸೇವಿಂಗ್ಸ್

ಅಡ್ವಾಂಟೇಜ್ ವುಮನ್ ಔರಾ ಸೇವಿಂಗ್ಸ್

ಇತರ ಸಾಮಾನ್ಯ ಮಹಿಳಾ ಉಳಿತಾಯ ಖಾತೆಗಳಿಗಿಂತ ಅಡ್ವಾಂಟೇಜ್ ವುಮನ್ ಔರಾ ಸೇವಿಂಗ್ಸ್ ಖಾತೆಯನ್ನು ಕಾರ್ಯನಿರತ ಮಹಿಳೆಯರ ಅಗತ್ಯತೆಗಳಿಗೆ ಅನುಗುಣವಾಗಿ ಹೊಂದಿಸಲಾಗಿದೆ. ಈ ಯೋಜನೆ ಕೆಲಸದ ಮಹಿಳೆಯರ ಅಗತ್ಯತೆಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸುತ್ತದೆ. ವಸತಿ ಸೌಕರ್ಯ, ಶಾಪಿಂಗ್, ಪ್ರಯಾಣ, ಜ್ಞಾನ ವರ್ಧನೆ ಮತ್ತು ಇನ್ನೂ ಹೆಚ್ಚಿನ ಕೊಡುಗೆಗಳೊಂದಿಗೆ ಈ ಖಾತೆಯು ಜೀವನಕ್ಕೆ ಒಡನಾಡಿಯಾಗಿದೆ.

ಖಾತೆ ತೆರೆಯುವಿಕೆ

ಖಾತೆ ತೆರೆಯುವಿಕೆ

ಅಡ್ವಾಂಟೇಜ್ ವುಮನ್ ಔರಾ ಸೇವಿಂಗ್ಸ್ ಖಾತೆಯನ್ನು ಐದು ರೀತಿಯಲ್ಲಿ ತೆರೆಯಬಹುದಾಗಿದೆ. ಬೇರೆ ಬೇರೆ ಖಾತೆಯಲ್ಲಿ ಬೇರೆ ಬೇರೆ ಸೌಲಭ್ಯ, ರಿಯಾಯಿತಿ ಸಿಗಲಿದೆ. ಈ ಉಳಿತಾಯ ಖಾತೆಯ ಮೂಲಕ ಕ್ಯಾನ್ಸರ್ ರಕ್ಷಣೆಯ ಪ್ರಯೋಜನಗಳನ್ನು ಮಹಿಳೆಯರು ಪಡೆಯಬಹುದಾಗಿದೆ.

ಸಾಲ ರಿಯಾಯಿತಿ, ಕ್ಯಾಶ್ಬ್ಯಾಕ್
 

ಸಾಲ ರಿಯಾಯಿತಿ, ಕ್ಯಾಶ್ಬ್ಯಾಕ್

ಮಹಿಳೆಯರು ಖಾತೆ ಜೊತೆ ಡೆಬಿಟ್ ಕಾರ್ಡ್ ಪಡೆದರೆ ಪ್ರತಿ ತಿಂಗಳು ರೂ. 750 ಕ್ಯಾಶ್ಬ್ಯಾಕ್ ಸಿಗಲಿದೆ. ಲಾಕರ್ ವ್ಯವಸ್ಥೆ ಪಡೆಯಲು ಶೇ. 50ರಷ್ಟು ರಿಯಾಯಿತಿ ಸಿಗಲಿದೆ. ಈ ಖಾತೆಯಲ್ಲಿ ಮಹಿಳೆಯರು ಗೃಹ ಹಾಗೂ ವಾಹನ ಸಾಲ ಪಡೆದರೆ ಸಾಲ ಪಡೆಯುವ ವೇಳೆ ವಿಧಿಸಲಾಗುವ ಪ್ರಕ್ರಿಯೆ ಶುಲ್ಕದಲ್ಲಿ ಶೇ. 50 ರಷ್ಟು ರಿಯಾಯಿತಿ ಸಿಗಲಿದೆ. ಯಾವುದೇ ಬ್ಯಾಂಕ್ ಎಟಿಎಂನಲ್ಲಿ ಹಣ ಡ್ರಾ ಮಾಡಿದರೂ ಯಾವುದೇ ಶುಲ್ಕ ವಿಧಿಸುವುದಿಲ್ಲ.

Read more about: icici insurance savings money
English summary

Know benefits of ICICI Bank Advantage Woman Aura Savings Account

Advantage Woman Aura Savings Account is tailored to suit the needs of working women. It comes with a host of unique offers, complementing the needs and aspirations of working women.
Story first published: Friday, March 8, 2019, 14:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X