For Quick Alerts
ALLOW NOTIFICATIONS  
For Daily Alerts

7ನೇ ವೇತನ ಆಯೋಗ: ಸರ್ಕಾರಿ ನೌಕರರ ವೇತನ ಏರಿಕೆ ಇಲ್ಲ! ಯಾಕೆ ಗೊತ್ತಾ?

|

ಕೇಂದ್ರ ಸರ್ಕಾರಿ ನೌಕರರು ಹಲವು ವರ್ಷಗಳಿಂದ ಬೇಡಿಕೆಯಿಟ್ಟಿದ್ದ ಮೂಲ ಕನಿಷ್ಟ ವೇತನ ಏರಿಕೆ ಕನಸಿಗೆ ಸದ್ಯಕ್ಕೆ ತಣ್ಣೀರೆರಚಿದಂತಗಿದೆ!

ಮೋದಿ ಸರ್ಕಾರ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಮತದಾರರನ್ನಿ ಸೆಳೆಯಲು ಉದ್ಯೋಗಿಗಳ ಕನಿಷ್ಟ ವೇತನ ಏರಿಕೆ ಮಾಡುವ ಸಾಧ್ಯತೆಯಿದೆ ಎಂದು ಊಹಿಸಲಾಗಿತ್ತು.

ಆದರೆ 7ನೇ ವೇತನ ಆಯೋಗದಲ್ಲಿ ಮೂಲ ಭತ್ಯೆ ಹಾಗೂ ಇನ್ನಿತರೆ ಭತ್ಯೆಯಲ್ಲಿ ಏರಿಕೆಯ ಕನಸು ಕಾಣುತ್ತಿದ್ದ ಕೇಂದ್ರ ಸರಕಾರಿ ನೌಕರರಿಗೆ ಕಹಿ ಸುದ್ದಿ ಎದುರಾಗಿದೆ.

ಲೋಕಸಭಾ ಚುನಾವಣೆ ಎಫೆಕ್ಟ್
 

ಲೋಕಸಭಾ ಚುನಾವಣೆ ಎಫೆಕ್ಟ್

ಕೇಂದ್ರ ಸರ್ಕಾರದ ಸುಮಾರು 50 ಲಕ್ಷ ಸಿಬ್ಬಂದಿಗಳಿಗೆ ಮೂಲ ಕನಿಷ್ಟ ವೇತನ ಏರಿಸುವ ಬಗ್ಗೆ ಹಾಗೂ ಬಹುದಿನ ಬೇಡಿಕೆಯಾಗಿದ್ದ ಫಿಟ್‌ಮೆಂಟ್‌ ಫ್ಯಾಕ್ಟರ್‌ ಏರಿಕೆಗಾಗಿ ಹೋರಾಟವೇ ನಡೆದಿತ್ತು. ಹೀಗಾಗಿ ಸರ್ಕಾರ ಇದೇ ವಿಚಾರವಾಗಿ ಪ್ರಸ್ತಾಪಿಸಿ ಸಿಬ್ಬಂದಿಗಳಿಗೆ ಶೇ. 3 ರಷ್ಟು ಡಿಎ ಹೆಚ್ಚಳದ ಬಗ್ಗೆ ಹೇಳಿತ್ತು. ಆದರೆ ಲೋಕಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆ ದೇಶದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಈ ಭರವಸೆ ಈಡೇರಲು ಸಾಧ್ಯವಿಲ್ಲ ಎನ್ನುವುದು ಸ್ಪಷ್ಟವಾಗಿದೆ.

ರಾಷ್ಟ್ರವ್ಯಾಪಿ ಪ್ರತಿಭಟನೆ

ನೌಕರರ ಮೂಲಭತ್ಯೆಯನ್ನು ಏರಿಸುವ ಬಗ್ಗೆ ರಾಷ್ಟ್ರವ್ಯಾಪಿ ಬೃಹತ್‌ ಪ್ರತಿಭಟನೆ ನಡೆಸಲಾಗಿತ್ತು. ದೇಶದ ವಿವಿಧ ಭಾಗಗಳಿಂದ ಕೇಂದ್ರ ಸಿಬ್ಬಂದಿಗಳು ದೆಹಲಿಗೆ ಆಗಮಿಸಿ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆಯನ್ನು ನಡೆಸಿದ್ದರು. ಆದರೀಗ ಈ ಎಲ್ಲ ಹೋರಾಟಗಳಿಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿದ್ದು, ಇದೀಗ ಕೇಂದ್ರದ ಯಾವ ಭರವಸೆಗಳು ಈಡೇರುವುದಿಲ್ಲ ಎಂದು ತಿಳಿದು ಬಂದಿದೆ.

ಲೋಕಸಭಾ ಚುನಾವಣೆ ಹಿನ್ನೆಲೆ ನಿರೀಕ್ಷೆ ಇತ್ತು

ದೇಶದಾದ್ಯಂತ ಲೋಕಸಭಾ ಚುನಾವಣೆ ಕಾವು ಜೋರಾಗಿ ಇರುವುದರಿಂದ ನರೇಂದ್ರ ಮೋದಿಯವರ ಸರ್ಕಾರ ನೌಕರರ ಕನಿಷ್ಟ ವೇನತ ಎರಿಕೆ ಮಹತ್ವದ ತೀರ್ಮಾನ ಕೈಗೊಳ್ಳಲು ಮುಂದಾಗಬಹುದು ಎನ್ನಲಾಗಿತ್ತು. ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗುವ ಮುನ್ನವೇ ಕೇಂದ್ರ ಸರ್ಕಾರಿ ನೌಕರರ ಬೇಡಿಕೆ ಈಡೇರುವ ಸಾಧ್ಯತೆ ಇದೆ. ಸರ್ಕಾರ ಏಳನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸುವ ನಿರೀಕ್ಷೆ ಗರಿಗೆದರಿದೆ ಎನ್ನಲಾಗಿತ್ತು.

ಕನಿಷ್ಠ ವೇತನ ಏರಿಕೆ
 

ಕನಿಷ್ಠ ವೇತನ ಏರಿಕೆ

ಪ್ರಸ್ತುತ ಕೇಂದ್ರ ನೌಕರರು ರೂ. 18 ಸಾವಿರ ಕನಿಷ್ಠ ವೇತನ ಪಡೆಯುತ್ತಿದ್ದಾರೆ. ರೂ. 8000 ಹೆಚ್ಚಳಕ್ಕೆ ನೌಕರರು ಬೇಡಿಕೆಯಿಟ್ಟಿದ್ದಾರೆ. 7ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೊಂಡರೆ ಕೇಂದ್ರ ನೌಕರರ ಈಗಿನ ಕನಿಷ್ಠ ವೇತನವಾದ ರೂ. 18,000 ದಿಂದ ರೂ. 26,000 ಕ್ಕೆ ಏರಿಕೆಯಾಗಲಿದೆ.

7ನೇ ವೇತನ ಆಯೋಗದ ಶಿಫಾರಸು ಏನು?

7ನೇ ವೇತನ ಆಯೋಗದ ಪ್ರಕಾರ ನೂತನ ಸಂಬಳ ಹಾಗೂ ಭತ್ಯೆ ವ್ಯವಸ್ಥೆ ಜಾರಿಯಾಗಬೇಕಿದೆ. ಸರಕಾರಿ ನೌಕರರ ಕಾರ್ಯದಕ್ಷತೆಯನ್ನು ಹೆಚ್ಚಿಸಲು 7ನೇ ವೇತನ ಆಯೋಗ ಹಲವಾರು ಸಲಹೆ-ಸೂಚನೆಗಳನ್ನು ನೀಡಿದೆ. ಸೇವೆಯಲ್ಲಿರುವಾಗಲೇ ಸರಕಾರಿ ಅಧಿಕಾರಿಗಳು ತಮ್ಮ ವೃತ್ತಿ ಭವಿಷ್ಯವನ್ನು ಮತ್ತಷ್ಟು ಸುಧಾರಿಸಲು ಜಾರಿಗೆ ತರಲಾದ ಮಾರ್ಪಡಿಸಲಾದ ಆಶ್ವಾಸಿತ ವೃತ್ತಿಜೀವನದ ಪ್ರಗತಿ (The Modified Assured Career Progression - MACP) ಯೋಜನೆಯನ್ನು 7ನೇ ವೇತನ ಆಯೋಗದ ಪ್ರಕಾರ ಮತ್ತೆ ಮಾರ್ಪಡಿಸಲಾಗಿದೆ. ಈ ಹಿಂದಿನ ವ್ಯವಸ್ಥೆಯಲ್ಲಿದ್ದ ಕುಂದು ಕೊರತೆಗಳನ್ನು ನಿವಾರಿಸಿ ನೌಕರರಲ್ಲಿಯ ಅಸಮಾಧಾನ ನಿವಾರಣೆಗೆ ಹೊಸ ವ್ಯವಸ್ಥೆ ಸಹಕಾರಿಯಾಗಲಿದೆ ಎಂದು 7ನೇ ವೇತನ ಆಯೋಗದ ವರದಿ ತಿಳಿಸಿದೆ. 7ನೇ ವೇತನ ಆಯೋಗ: ಫೆಬ್ರವರಿಯಲ್ಲಿ ನೌಕರರ ಕನಿಷ್ಠ ವೇತನ 26 ಸಾವಿರಕ್ಕೆ ಏರಿಕೆ?

Read more about: 7th pay commission salary money
English summary

7th Pay Commission: Central Government Employees not to get any hike in basic pay, fitment factor, here’s why

More than 50 lakh Central Government employees' hopes have been wrecked due to the announcement of the Lok Sabha Elections 2019.
Company Search
Enter the first few characters of the company's name or the NSE symbol or BSE code and click 'Go'
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more