For Quick Alerts
ALLOW NOTIFICATIONS  
For Daily Alerts

ಐಟಿ ವಲಯಕ್ಕೆ ಶಾಕ್! ಮೈಂಡ್ ಟ್ರೀ ಸ್ವಾಧಿನಕ್ಕಾಗಿ ಎಲ್​&ಟಿ ಜಬರದಸ್ತ್ ನಡೆ; ಇದು ಪ್ರೀತಿ, ಯುದ್ದವಲ್ಲ ಎಂದ ಎಲ್​&ಟಿ!

|

ಐಟಿ ದಿಗ್ಗಜ ಸಂಸ್ಥೆ ಎಲ್‌ಆ್ಯಂಡ್‌ಟಿ ಮಾಹಿತಿ ತಂತ್ರಜ್ಞಾನ ಕಂಪನಿಯಾದ ಮೈಂಡ್‌ ಟ್ರೀಯನ್ನು ಖರೀದಿಸಲು ಮುಂದಾಗಿದ್ದು, ಕೆಫೆ ಕಾಫಿ ಡೇ ಸ್ಥಾಪಕ ಹಾಗೂ ಮಾಜಿ ಮುಖ್ಯಮಂತ್ರಿ ಎಸ್‌.ಎಂ ಕೃಷ್ಣ ಅವರ ಅಳಿಯ ವಿ.ಜಿ ಸಿದ್ಧಾರ್ಥ ಅವರು ಹೊಂದಿರುವ ಶೇ. 20.4ರಷ್ಟು ಷೇರುಗಳನ್ನು ಎಲ್‌ಆ್ಯಂಡ್‌ಟಿ ಖರೀದಿಸಲಿದೆ. ಸುಮಾರು ರೂ. 100 ಕೋಟಿ ಡಾಲರ್‌ ಆದಾಯವಿರುವ ಮೈಂಡ್‌ ಟ್ರೀ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಐಟಿ ಕಂಪನಿಗಳಲ್ಲಿ ಒಂದಾಗಿದೆ.

ಮೈಂಡ್‌ ಟ್ರೀಯನ್ನು ಸ್ವಾಧೀನಪಡಿಸಿಕೊಳ್ಳುವ ಎಲ್‌ಆ್ಯಂಡ್‌ಟಿ ಕ್ರಮ ವಿರೋಧಿಯಾಗಿ ಕಾಣಬಾರದು. ಎರಡು ಸಂಸ್ಥೆಗಳ ಷೇರುದಾರರು ಈ ಪ್ರಕ್ರಿಯೆಯನ್ನು ಪ್ರೀತಿ ವಿಶ್ವಾಸದಿಂದ ಕಾಣಬೇಕು. ಇದು ಪ್ರೀತಿ, ಯುದ್ದವಲ್ಲ (It's pyaar, not war) ಎಂದು ಎಲ್‌ಆ್ಯಂಡ್‌ಟಿ ಸಿಇಒ ಸುಬ್ರಮಣ್ಯನ್ ಹೇಳಿದ್ದಾರೆ.

ಬಲವಂತದ ಖರೀದಿ
 

ಬಲವಂತದ ಖರೀದಿ

ಮೈಂಡ್ ಟ್ರೀ ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನವನ್ನು ಬಲವಂತದ ಖರೀದಿ ಎಂದು ಮೈಂಡ್‌ ಟ್ರೀಯ ಸ್ಥಾಪಕ ಹಾಗೂ ಮಾಜಿ ಸಿಇಒ ಸುಬ್ರತೊ ಬಾಗ್ಚಿ ಆರೋಪಿಸಿದ್ದಾರೆ.

ಮೈಂಡ್‌ ಟ್ರೀ ಸಂಸ್ಥೆಯನ್ನು ಬಲವಂತವಾಗಿ ಖರೀದಿ ಮಾಡುವ ಅಪಾಯದ ಹಿನ್ನೆಲೆಯಲ್ಲಿ ಒಡಿಶಾ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥ ಹುದ್ದೆಗೆ ರಾಜೀನಾಮೆ ನೀಡಿ ಬೆಂಗಳೂರಿಗೆ ಬಂದಿದ್ದೇನೆ ಎಂದಿದ್ದಾರೆ.

ಸುಬ್ರತೊ ಟ್ವೀಟ್

ಮೈಂಡ್‌ ಟ್ರೀ ಎಂಬ ಹೆಮ್ಮರವನ್ನು ಕಡಿಯಲು ಬುಲ್ಡೋಜರ್ ಮತ್ತು ಗರಗಸಗಳೊಂದಿಗೆ ಜನ ಬರುತ್ತಿದ್ದು, ಮರವನ್ನು ಕಡಿದು ಆ ಜಾಗದಲ್ಲಿ ಶಾಪಿಂಗ್‌ ಮಾಲ್ ಕಟ್ಟಬಹುದು. ಆದರೆ ಇದನ್ನು ತಡೆಯಬೇಕಾಗಿದೆ ಎಂದು ಸುಬ್ರತೊ ಟ್ವೀಟ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಸಿದ್ಧಾರ್ಥಗೆ 3,300 ಕೋಟಿ

ಎರಡು ದಶಕಗಳ ಹಳೆಯ ಮೈಂಡ್‌ ಟ್ರೀಯಲ್ಲಿ ಸಿದ್ಧಾರ್ಥ ಶೇ. 20.4 ಷೇರುಗಳನ್ನು ಹೊಂದಿದ್ದರು. ಇದನ್ನು ರೂ. 3,300 ಕೋಟಿಗೆ ಎಲ್‌ಆ್ಯಂಡ್‌ಟಿ ಖರೀದಿಸಲು ಮುಂದಾಗಿದೆ. ವಿ.ಜಿ ಸಿದ್ಧಾರ್ಥ ಅವರ ಷೇರನ್ನು ಎಲ್​&ಟಿ ಖರೀದಿಸಿದ ನಂತರ ಉಂಟಾಗಬಹುದಾದ ದುಷ್ಪಪರಿಣಾಮಗಳ ಬಗ್ಗೆ ಮೈಂಡ್​ಟ್ರೀ ಸಂಸ್ಥೆ ನಿರ್ವಹಣಾ ಮಂಡಳಿ ಕಳವಳ ವ್ಯಕ್ಯಪಡಿಸಿದೆ.

ಮೈಂಡ್ ಟ್ರೀ ಸ್ವಾಧೀನದ ಉದ್ದೇಶ?
 

ಮೈಂಡ್ ಟ್ರೀ ಸ್ವಾಧೀನದ ಉದ್ದೇಶ?

ಕಾಪೋರೇಟ್ ಜಗತ್ತಿನಲ್ಲಿ ಸ್ವಾಧೀನ ಪ್ರಕ್ರಿಯೆಗಳು ಸಾಮಾನ್ಯ. ಎಲ್​&ಟಿ ಸಂಸ್ಥೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಮೈಂಡ್ ಟ್ರೀ ಸ್ವಾಧೀನಕ್ಕೆ ಮುಂದಾಗಿದೆ. ಎಲ್​&ಟಿ ಸಿದ್ಧಪಡಿಸಿರುವ ಲಕ್ಷ್ಯ 2021 ವಿಷನ್ ಪ್ರಕಾರ ಐಟಿ ವಲಯ ಬಹಳ ಪ್ರಮುಖ ಉದ್ಯಮವಾಗಿದ್ದು, ಸ್ವಾಧೀನ ಪಡಿಸಿಕೊಳ್ಳುವುದು ಕಡ್ಡಾಯ ಎಂದು ಹೇಳಿದೆ.

ಐಟಿ ವಲಯಕ್ಕೆ ಬಿಗ್ ಶಾಕ್

ಮೈಂಡ್ ಟ್ರೀ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಐಟಿ ವಲಯವನ್ನು ಬೆಚ್ಚಿ ಬೀಳಿಸಿದೆ. ಕೆಲ ವಿಧಾನಗಳಿಂದ ಸ್ವಾಧೀನ ಪ್ರಕ್ರಿಯೆಯನ್ನು ದುಬಾರಿಯನ್ನಾಗಿ ಮಾಡಬಹುದು. ಹಾಗಾಗಿ ಇದರಿಂದ ಒಮ್ಮೊಮ್ಮೆ ಸ್ವಾಧೀನ ಪ್ರಕ್ರಿಯೆಯಿಂದ ಸಂಸ್ಥೆ ಹಿಂದೆ ಸರಿಯುವ ಸಾಧ್ಯತೆ ಇರುತ್ತದೆ ಎಂದು ಕ್ರೈಸಿಲ್​ನ ಮುಖ್ಯ ಆರ್ಥಿಕ ಸಲಹೆಗಾರ ಡಿ.ಕೆ. ಶ್ರೀವಾಸ್ತವ ಅಬಿಪ್ರಾಯಿಸಿದ್ದಾರೆ.

Read more about: it business money shares
English summary

It's pyaar, not war: L&T CEO Subrahmanyan on move to acquire Mindtree

L&T's move to acquire Mindtree should not be seen as hostile, said the firm's CEO SN Subrahmanyan.
Company Search
Enter the first few characters of the company's name or the NSE symbol or BSE code and click 'Go'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more