For Quick Alerts
ALLOW NOTIFICATIONS  
For Daily Alerts

ನಿಮ್ಮ ಬಳಿ ಹರಿದ, ಕೊಳಕಾದ, ಬಣ್ಣ ತಾಗಿದ ನೋಟುಗಳಿವೆಯೇ..? ಆರ್ಬಿಐ ನಿಯಮಗಳೇನು?

|

ರೂ. 500 ಹಾಗೂ 2 ಸಾವಿರ ರೂಪಾಯಿ ನೋಟಿನ ಮೇಲೆ ಬಣ್ಣ ತಾಗಿದರೆ ಅಥವಾ ಹರಿದಿದ್ದರೆ ಅಂಗಡಿಯವರು ಸ್ವೀಕರಿಸುವುದಿಲ್ಲ. ಏಕೆಂದರೆ ಈ ನೋಟುಗಳ ಚಲಾವಣೆ ಕಷ್ಟ ಎನ್ನುವ ಕಾರಣಕ್ಕೆ ಗ್ರಾಹಕರಿಂದ ನೋಟುಗಳನ್ನು ಸ್ವೀಕರಿಸುವುದಿಲ್ಲ. ಹೋಳಿ ಹಬ್ಬದ ಸಂದರ್ಭದಲ್ಲಿ ನೋಟುಗಳಿಗೆ ಬಣ್ಣ ತಾಗುವುದು ಸಾಮಾನ್ಯವಾಗಿರುವುದರಿಂದ ಈ ಮಾಹಿತಿಯನ್ನು ಪರಿಗಣಿಸುವುದು ಸೂಕ್ತ.

ನಿಮ್ಮ ಬಳಿ ಬಣ್ಣ ತಾಗಿದ ಅಥವಾ ಸ್ವಲ್ಪ ಹರಿದ ನೋಟುಗಳಿದ್ದರೆ ಚಿಂತಿಸುವ ಅಗತ್ಯವಿಲ್ಲ. ನೋಟುಗಳನ್ನು ಬ್ಯಾಂಕ್ ಗೆ ನೀಡಬಹುದಾಗಿದ್ದು, ಎಲ್ಲ ಬ್ಯಾಂಕುಗಳು ಇಂಥ ನೋಟುಗಳನ್ನು ತೆಗೆದುಕೊಳ್ಳುತ್ತವೆ.

ಕೆಲವೊಂದು ನೋಟುಗಳನ್ನು ಬ್ಯಾಂಕುಗಳು ಕೂಡ ಸ್ವೀಕರಿಸುವುದಿಲ್ಲ. ಹೊಸದಾದ ಅಸಲಿ ರೂ. 500, 2000 ಮುಖಬೆಲೆಯ ನೋಟುಗಳು ನಿಮ್ಮ ಬಳಿಯಿದ್ದರೂ ಬ್ಯಾಂಕ್ ಸ್ವೀಕರಿಸುವುದಿಲ್ಲ.

ನೋಟಿನ ಮೌಲ್ಯ ರದ್ದು
 

ನೋಟಿನ ಮೌಲ್ಯ ರದ್ದು

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಇದಕ್ಕೆ ಸಂಬಂಧಿಸಿದಂತೆ 2017ರಲ್ಲಿಯೇ ನಿಯಮವೊಂದನ್ನು ಜಾರಿಗೆ ತಂದಿದೆ. ನಿಯಮದ ಪ್ರಕಾರ, ನೋಟಿನ ಮೇಲೆ ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಯ ಕುರಿತಾದ ಸ್ಲೋಗನ್ ಇರಬಾರದು. ಪ್ರಚಾರ ದೃಷ್ಟಿಯ ಅಥವಾ ಇನ್ನಿತರ ಸ್ಲೋಗನ್ ಇದ್ದರೆ ಯಾವುದೇ ಬ್ಯಾಂಕ್ ನೋಟುಗಳನ್ನು ಸ್ವೀಕರಿಸುವುದಿಲ್ಲ. ಆರ್ಬಿಐ ಕೂಡ ಇದನ್ನು ಸ್ವೀಕರಿಸುವುದಿಲ್ಲ. ನೋಟಿನ ಮೌಲ್ಯ ಎಷ್ಟೇ ಇದ್ದರೂ ಅದು ರದ್ದಾಗುತ್ತದೆ.

ಬಣ್ಣ ಬಳಿದ, ಹರಕು ನೋಟು

2017ರ ಸಾಲಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಣ್ಣ ಬಳಿದ, ಹರಕು ನೋಟುಗಳನ್ನು ಸ್ವೀಕರಿಸಲಾಗುವುದಿಲ್ಲವೆಂದು ಸುದ್ದಿ ಹರಡಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ್ದ ಆರ್ಬಿಐ ಬಣ್ಣ ತಾಗಿದ ನೋಟುಗಳನ್ನು ಎಲ್ಲ ಬ್ಯಾಂಕುಗಳು ಸ್ವೀಕರಿಸುತ್ತದೆ. ಆದರೆ ಉದ್ದೇಶಪೂರ್ವಕವಾಗಿ ನೋಟನ್ನು ಹಾಳು ಮಾಡಬೇಡಿ ಎಂದು ಸೂಚನೆ ನೀಡಿತ್ತು.

ನೋಟು ವಿನಿಮಯ ಕಾನೂನು ತಿದ್ದುಪಡಿ

ನೋಟು ನಿಷೇಧದ ನಂತರದಲ್ಲಿ ಚಲಾವಣೆಗೆ ಬಂದಿರುವ ರೂ. 200, ರೂ. 2000 ಮುಖಬೆಲೆಯ ನೋಟುಗಳನ್ನು ಬದಲಾಯಿಸಿಕೊಡಲು ಈ ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಇದರಿಂದಾಗಿ ಸಾರ್ವಜನಿಕರು ಕಷ್ಟ ಅನುಭವಿಸುವಂತಾಗಿತ್ತು. ಆದರೆ ಜನಸಮಾನ್ಯರ ಸಮಸ್ಯೆ ಅರಿತ ಆರ್ಬಿಐ ಹಾಗು ಹಣಕಾಸು ಸಚಿವಾಲಯ ಕಾಯಿದೆ ತಿದ್ದುಪಡಿಗೆ ೨೦೧೮ರ ಆಗಸ್ಟ್ ನಲ್ಲಿ ಒಪ್ಪಿಗೆ ಸೂಚಿಸಿವೆ. ಹೀಗಾಗಿ ನೋಟುಗಳನ್ನು ಬ್ಯಾಂಕ್ ಗಳಲ್ಲಿ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗಲಿದೆ.

Read more about: rbi money notes
English summary

know rbi rules of coloured currency notes on holi

know rbi rules of coloured currency notes on holi.
Story first published: Thursday, March 21, 2019, 14:00 [IST]
Company Search
Enter the first few characters of the company's name or the NSE symbol or BSE code and click 'Go'

Find IFSC

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more