ಪಿಪಿಎಫ್, ಎನ್ಪಿಸಿ, ಸುಕನ್ಯಾ ಸಮೃದ್ಧಿ ಖಾತೆ ಹೊಂದಿರುವವರು ಮಾ.31 ರೊಳಗೆ ಈ ಕೆಲಸ ಮುಗಿಸಿ..
ಏಪ್ರಿಲ್ 1, 2019 ರಿಂದ ಹೊಸ ಹಣಕಾಸು ವರ್ಷ ಆರಂಭವಾಗಲು ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿವೆ.
ಹೀಗಾಗಿ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಎನ್ಪಿಸಿ ಅಥವಾ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಖಾತೆ ತೆರೆದರೆ ಕೆಲ ಸಂಗತಿಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ.
ಏಪ್ರಿಲ್ 1, 2019 ರ ಮೊದಲು ಮಹತ್ವದ ಕೆಲಸ ಮಾಡಬೇಕಾಗುತ್ತದೆ. ಈ ಯೋಜನೆಯಡಿ ವಾರ್ಷಿಕವಾಗಿ ನಿರ್ದಿಷ್ಟ ಮೊತ್ತದ ಹಣ ಹೂಡಿಕೆ ಮಾಡಬೇಕಾಗುತ್ತದೆ. ಹೂಡಿಕೆ ಮಾಡದೆ ಹೋದರರೆ ನಿಮ್ಮ ಖಾತೆ ಸ್ಥಗಿತಗೊಳ್ಳಬಹುದು. ಮಾರ್ಚ್ 31 ಹತ್ತಿರ ಬರುತ್ತಿದ್ದು, ಈ ಹಣಕಾಸು ವರ್ಷದಲ್ಲಿ ಹಣ ಹೂಡಿಕೆಯಾಗಿದೆಯೇ ಎಂಬುದನ್ನು ಪರಿಶೀಲಿಸಿ. ಹಣ ಹೂಡಿಕೆಯಾಗದೆ ಹೋದರೆ ಇಂದೇ ಹಣ ಹೂಡಿಕೆ ಮಾಡಿ..

ಸುಕನ್ಯಾ ಸಮೃದ್ಧಿ
ಹೆಣ್ಣು ಮಕ್ಕಳಿಗಾಗಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ನೀವು ಖಾತೆ ತೆರೆದಿದ್ದರೆ ಹಣಕಾಸು ವರ್ಷದಲ್ಲಿ ರೂ. 250 ಪಾವತಿ ಮಾಡಬೇಕು. ಮಾರ್ಚ್ 31ರೊಳಗೆ ಹಣ ಪಾವತಿ ಮಾಡದೆ ಹೋದಲ್ಲಿ ರೂ. 50 ರೂಪಾಯಿ ದಂಡ ವಿಧಿಸಲಾಗುತ್ತದೆ. ರೂ. 50 ರೂಪಾಯಿ ದಂಡ ಪಾವತಿ ಮಾಡಿದರೆ ನಿಮ್ಮ ಖಾತೆ ಮತ್ತೆ ಚಾಲ್ತಿಯಾಗಲಿದೆ.

ಪಿಪಿಎಫ್
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಖಾತೆಯಲ್ಲಿ ವಾರ್ಷಿಕವಾಗಿ ರೂ. 500 ಪಾವತಿ ಮಾಡಬೇಕು. ಪ್ರಸ್ತುತ ಹಣಕಾಸು ವರ್ಷದಲ್ಲಿ ರೂ. 500 ಪಾವತಿ ಮಾಡದೇ ಹೋದರೆ 50 ರೂಪಾಯಿ ದಂಡ ವಿಧಿಸಲಾಗುತ್ತದೆ.

ಎನ್ಪಿಎಸ್
ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ಪಿಎಸ್) ಯಲ್ಲಿ ಖಾತೆ ತೆರೆದಿರುವ ಗ್ರಾಹಕರು ಒಂದು ವರ್ಷಕ್ಕೆ ರೂ. 1000 ಹೂಡಿಕೆ ಮಾಡಬೇಕು. ಮಾರ್ಚ್ 31ರೊಳಗೆ ಹಣ ಪಾವತಿ ಮಾಡದೆ ಹೋದಲ್ಲಿ ಖಾತೆ ಬಂದ್ ಆಗಲಿದ್ದು, ಇದಾದ ನಂತರ ರೂ. 100 ದಂಡ ಪಾವತಿಸಿ ಖಾತೆಯನ್ನು ಮರು ಸ್ಥಾಪಿಸಬೇಕಾಗುತ್ತದೆ.