For Quick Alerts
ALLOW NOTIFICATIONS  
For Daily Alerts

ಕನಿಷ್ಠ ಆದಾಯ ಖಾತರಿ ಯೋಜನೆ: ನಿಮ್ಮ ಖಾತೆಗೆ ವರ್ಷಕ್ಕೆ 72 ಸಾವಿರ ತಿಂಗಳಿಗೆ 6 ಸಾವಿರ ಜಮೆ..

|

ಚುನಾವಣೆಗಳು ಬಂತೆಂದರೆ ಅಧಿಕಾರದ ಗದ್ದುಗೆ ಹಿಡಿಯಲು ರಾಜಕೀಯ ಪಕ್ಷಗಳು ಭರವಸೆಗಳ ಮಹಾಪೂರವನ್ನೇ ಹರಿಸುತ್ತಾರೆ. ಮತದಾರರನ್ನು ಸೆಳೆಯಲು ದೊಡ್ಡ ಪ್ರಮಾಣದ ಆಕರ್ಷಕ ಯೋಜನೆಗಳನ್ನು ಪ್ರಣಾಳಿಕೆಯ ಉದ್ದೇಶಗಳನ್ನಾಗಿ ಘೋಷಿಸುವುದು ಮಾಮೂಲು. ಈಗಾಗಲೇ ಬಿಜೆಪಿಯವರು ಪಿಎಂ ಕಿಸಾನ್ ಯೋಜನೆ ಕಾರ್ಯರೂಪಕ್ಕೆ ತಂದಿದ್ದರೆ, ಇದೀಗ ಕಾಂಗ್ರೆಸ್ ಸರದಿ..

2019 ಲೋಕಸಭಾ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಏರಲೇಬೇಕೆಂಬ ಪಣ ತೊಟ್ಟಿರುವ ಕಾಂಗ್ರೆಸ್‌ ಪಕ್ಷವು ತಾವು ಅಧಿಕಾರಕ್ಕೆ ಬಂದರೆ ದೇಶದ ಬಡವರ ಬ್ಯಾಂಕ್‌ ಖಾತೆಗೆ ಪ್ರತಿವರ್ಷ ರೂ. 72,000 ಜಮಾ ಮಾಡುವುದಾಗಿ ಭರವಸೆ ನೀಡಿದೆ.

ಬಡತನ ನಿರ್ಮೂಲನೆಯ ಅಸ್ತ್ರ
 

ಬಡತನ ನಿರ್ಮೂಲನೆಯ ಅಸ್ತ್ರ

ದೇಶದಲ್ಲಿರುವ ಬಡತನ ನಿರ್ಮೂಲನೆಯ ಅಸ್ತ್ರವಾಗಿ ರಾಹುಲ್ ಗಾಂಧಿಯವರು ತಿಂಗಳಿಗೆ ಕನಿಷ್ಠ ಆದಾಯ ಖಾತರಿಯನ್ನು ಘೋಷಿಸಿದ್ದಾರೆ. ಮೊದಲ ಹಂತದ ಮತದಾನಕ್ಕೆ ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲೇ ಬಡತನ ನಿರ್ಮೂಲನಾ ಯೋಜನೆಯನ್ನು ಪ್ರಚಾರದ ಅಸ್ತ್ರವಾಗಿ ಬಳಸಲು ಮುಂದಾಗಿದೆ.

ಕನಿಷ್ಠ ಆದಾಯ ಖಾತರಿ ಯೋಜನೆ

ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ಚುನಾವಣೆ ಪ್ರಣಾಳಿಕೆ ಕುರಿತು ಚರ್ಚೆ ನಡೆಸಿ, ಬಳಿಕ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿಯವರು ದೇಶದಲ್ಲಿ ಬಡತನ ನಿರ್ಮೂಲನೆಯನ್ನು ಮಾಡುವುದು ನಮ್ಮ ಸಂಕಲ್ಪವಾಗಿದ್ದು, ಇದಕ್ಕಾಗಿ ಕಾಂಗ್ರೆಸ್ ಪಕ್ಷ ತಿಂಗಳಿಗೆ ಕನಿಷ್ಠ ಆದಾಯ ಖಾತರಿ ನೀಡಲಿದೆ ಎಂದರು.

ವರ್ಷಕ್ಕೆ ರೂ. 72,000

ದೇಶದಲ್ಲಿನ ಬಡವರಿಗೆ ವರ್ಷಕ್ಕೆ ರೂ. 72,000 ಮೊತ್ತವನ್ನು ತಿಂಗಳಿಗೆ ಕನಿಷ್ಠ ಆದಾಯ ಖಾತರಿ ರೂಪದಲ್ಲಿ ನೀಡಲಿದ್ದು, ಈ ಹಣ ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಆಗಲಿದೆ ಎಂದಿದ್ದಾರೆ.

25 ಕೋಟಿ ಜನರಿಗೆ ಲಾಭ
 

25 ಕೋಟಿ ಜನರಿಗೆ ಲಾಭ

ದೇಶದ ಜನಸಂಖ್ಯೆಯ ಶೇ. 20ರಷ್ಟು ಅಂದರೆ 5 ಕೋಟಿ ಬಡ ಕುಟುಂಬಗಳಿದ್ದು, ಈ ಕುಟುಂಬಗಳ 25 ಕೋಟಿ ಜನರು ತಿಂಗಳಿಗೆ ಕನಿಷ್ಠ ಆದಾಯ ಖಾತರಿ ಯೋಜನೆಯ ನೇರ ಲಾಭ ಪಡೆಯಲಿದ್ದಾರೆ. ಬಡತನದ ವಿರುದ್ಧ ಇದು ಅಂತಿಮ ಪ್ರಹಾರವಾಗಿದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ತಿಂಗಳಿಗೆ ರೂ. 6,000

ಕನಿಷ್ಟ ಉತ್ತಮ ಜೀವನ ನಿರ್ವಹಣೆಗೆ ಪ್ರಸ್ತುತ ಬಡ ಕುಟುಂಬಗಳು ಪ್ರತಿ ತಿಂಗಳು ಕನಿಷ್ಠ ರೂ. 12,000 ವರೆಗೆ ಆದಾಯ ಗಳಿಸಬೇಕು. ಈಗಿನ ವರದಿಗಳ ಪ್ರಕಾರ ಸರಾಸರಿ ರೂ. 6,000 ಆದಾಯ ಗಳಿಸುತ್ತಿವೆ. ಹೀಗಾಗಿ ಅಷ್ಟೇ ಮೊತ್ತದ ಹಣವನ್ನು ಸರ್ಕಾರ ನೀಡಿದರೆ ಆದಾಯ ಎರಡುಪಟ್ಟು ಅಂದರೆ ರೂ. 12,000 ಆಗುತ್ತದೆ. ಹೀಗಾಗಿಯೇ ಈ ಯೋಜನೆಯನ್ನು ಘೋಷಿಸಲಾಗಿದೆ ಎಂದಿದ್ದಾರೆ.

ಸಾಕಷ್ಟು ಅಧ್ಯಯನ, ತಜ್ಞರ ಸಲಹೆ ಪಡೆಯಲಾಗಿದೆ

ಐತಿಹಾಸಿಕ ತಿಂಗಳಿಗೆ ಕನಿಷ್ಠ ಆದಾಯ ಖಾತರಿ ಯೋಜನೆಯನ್ನು ಘೋಷಿಸುವ ಮುನ್ನ ಸಾಕಷ್ಟು ಅಧ್ಯಯನ ಕೈಗೊಳ್ಳಲಾಗಿದೆ. ಈ ಯೋಜನೆ ಖಂಡಿತವಾಗಿ ಜಾರಿಗೊಳಿಸಲು ಅಸಾಧ್ಯವಾದದ್ದಲ್ಲ. ಸಾಕಷ್ಟು ಅಧ್ಯಯನ ನಡೆಸಿದ ಬಳಿಕವೇ ಈ ಘೋಷಣೆ ಮಾಡುತ್ತಿದ್ದೇವೆ ಎಂದು ರಾಹುಲ್ ಹೇಳಿದ್ದಾರೆ.

ದೇಶದ ಆರ್ಥಿಕತೆ ಮೇಲೆ ದುಷ್ಪರಿಣಾಮ ಇಲ್ಲ

ಹೊಸ ಯೋಜನೆ ಜಾರಿ ತರುವುದರಿಂದ ಸಂಪನ್ಮೂಲ ಕ್ರೋಢೀಕರಣ, ವ್ಯವಸ್ಥಿತ ಜಾರಿ ಸವಾಲಿನ ಕೆಲಸವಾಗಿರುತ್ತದೆ. ಹೀಗಾಗಿಯೇ ಪಕ್ಷದ ತಜ್ಞರೊಂದಿಗೆ, ಅರ್ಥಶಾಸ್ತ್ರಜ್ಞರೊಂದಿಗೆ ಕೂಲಂಕಷ ಅಧ್ಯಯನ ನಡೆಸಿ ದೇಶದ ಹಣಕಾಸು ವ್ಯವಸ್ಥೆ ಮೇಲೆ ಯಾವುದೇ ದುಷ್ಪರಿಣಾಮ ಆಗದ ರೀತಿಯಲ್ಲಿ ಈ ಯೋಜನೆ ರೂಪಿಸಲಾಗಿದೆ ಎಂದಿದ್ದಾರೆ. ಪಿ.ಚಿದಂಬರಂ ನೇತೃತ್ವದ ಸಮಿತಿ ಆ ಬಗ್ಗೆ ಅಧ್ಯಯನ ಮಾಡಿ ಸಂಪೂರ್ಣ ಮಾಹಿತಿ ನೀಡಲಿದೆ.

ಅರುಣ್ ಜೇಟ್ಲಿ/ನೀತಿ ಆಯೋಗದ ಪ್ರತಿಕ್ರಿಯೆ

ಬಡವರಿಗೆ ದುಡಿಯದೇ ಆದಾಯ ತಂದುಕೊಡುವುದಾಗಿ ಕಾಂಗ್ರೆಸ್‌ ಅಧ್ಯಕ್ಷರು ಭರವಸೆ ನೀಡುತ್ತಿದ್ದಾರೆ. ಈ ಯೋಜನೆ ದೇಶದ ವಿತ್ತೀಯ ವ್ಯವಸ್ಥೆಯನ್ನು ಹದಗೆಡಿಸಲಿದೆ. ಆದರೆ ಅದನ್ನು ಜಾರಿಗೊಳಿಸಲು ಸಾಧ್ಯವಾಗುವುದಿಲ್ಲ ಎನ್ನುವುದು ವಾಸ್ತವ. -ರಾಜೀವ್‌ ಕುಮಾರ್‌, ನೀತಿ ಆಯೋಗದ ಉಪಾಧ್ಯಕ್ಷ

ಪಕ್ಷಗಳ ಹೇಳಿಕೆಗಳು ಮತ್ತು ಘೋಷಣೆಗಳಿಂದ ಬಡತನ ನಿರ್ಮೂಲನೆ ಆಗದು. ಕಾಂಗ್ರೆಸ್ ಹಲವಾರು ಬಾರಿ ಬಡವರನ್ನು ವಂಚನೆ ಮಾಡಿದೆ. ಇದೀಗ ಅದನ್ನೇ ಮಾಡಲು ಯತ್ನಿಸುತ್ತಿದೆ. -ಅರುಣ್ ಜೇಟ್ಲಿ, ಹಣಕಾಸು ಸಚಿವ

ಯೋಜನೆ ಸಂಕ್ಷೀಪ್ತ ವಿವರ

3,60,000 ಕೋಟಿ - ಈ ಯೋಜನೆಗೆ ಅಗತ್ಯವಿರುವ ಅಂದಾಜು ಮೊತ್ತ

72,000 ಬಡವರ ಖಾತೆಗೆ ವಾರ್ಷಿಕವಾಗಿ ಜಮಾ

5 ಕೋಟಿ ಬಡ ಕುಟುಂಬಗಳ 25 ಕೋಟಿ ಜನರಿಗೆ ಪ್ರಯೋಜನ

12,000 ತಿಂಗಳಿಗೆ ಕನಿಷ್ಠ ಆದಾಯ ಖಾತರಿ ನೀಡುವ ಯೋಜನೆ

English summary

Minimum Income Guarantee Scheme: Rs 72,000 Each Year to Poorest Families

Gandhi said 20 per cent or five crore families belonging to the poorest category with monthly income less than Rs 12,000 would come under the scheme.
Story first published: Tuesday, March 26, 2019, 10:43 [IST]
Company Search
Enter the first few characters of the company's name or the NSE symbol or BSE code and click 'Go'

Find IFSC

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more