For Quick Alerts
ALLOW NOTIFICATIONS  
For Daily Alerts

ಪೇಟಿಎಂ ಮನಿಯಿಂದ ಸ್ಟಾಕ್ ಬ್ರೋಕಿಂಗ್ ಸೇವೆಗೆ ಸೆಬಿ ಅನುಮತಿ

|

ಬೆಂಗಳೂರು, ಏಪ್ರಿಲ್ 4: ಮ್ಯೂಚುವಲ್ ಫಂಡ್ ಹೂಡಿಕೆಗೆ ಭಾರತದ ಅತಿದೊಡ್ಡ ವೇದಿಕೆಯಾದ 'ಪೇಟಿಎಂ ಮನಿ'ಗೆ ಸ್ಟಾಕ್ ಬ್ರೋಕಿಂಗ್ ಮಾಡಲು ಸೆಬಿ (ಎಸ್‍ಇಬಿಐ) ಅನುಮತಿ ನೀಡಿದೆ. ಸದಸ್ಯತ್ವಕ್ಕಾಗಿ 'ಪೇಟಿಎಂ ಮನಿ' ಗೆ ಬಾಂಬೆ ಸ್ಟಾಕ್ ಎಕ್ಸೆಂಜ್ (ಬಿಎಸ್‍ಇ) ಹಾಗೂ ನ್ಯಾಶನಲ್ ಸ್ಟಾಕ್ ಎಕ್ಸೆಂಜ್ (ಎನ್‍ಎಸ್‍ಇ) ನಿಂದ ಅನುಮೋದನೆ ದೊರೆತಿದೆ.

ತನ್ನ ಆ್ಯಪ್ ಮೂಲಕ ಹಣಹೂಡಿಕೆ ಹಾಗೂ ಟ್ರೇಡಿಂಗ್ ಸೌಲಭ್ಯವನ್ನು ಷೇರು, ಉತ್ಪನ್ನ (ಡೆರಿವೆಟಿವ್ಸ್), ಕರೆನ್ಸಿ, ಸರಕು (ಕಮೊಡಿಟಿಸ್), ಎಕ್ಸೆಂಜ್-ಟ್ರೇಡೆಡ್ ಫಂಡ್ (ಇಟಿಎಫ್) ಹಾಗೂ ಇತರ ಎಕ್ಸೆಂಜ್ ಟ್ರೇಡೆಡ್ ಉತ್ಪನ್ನಗಳಲ್ಲಿ ಶುರು ಮಾಡಲು ಸಂಸ್ಥೆಯು ಯೋಜನೆ ರೂಪಿಸಿದೆ.

ಭಾರತದಲ್ಲಿ ಮಿ ಪೇ ಆಪ್ ಬಿಡುಗಡೆ, ಪೇಟಿಎಂ - ಗೂಗಲ್ ಪೇಗೆ ಟಕ್ಕರ್!

 

"ಸೆಬಿಯ ಅನುಮೋದನೆಯಿಂದ 'ಪೇಟಿಎಂ ಮನಿ'ಯು ಪೂರ್ತಿ ಸ್ಟಾಕ್ ಸಂಪತ್ತಿನ ನಿರ್ವಹಣ ವೇದಿಕೆ (ಸ್ಟಾಕ್ ವೆಲ್ತ್ ಮ್ಯಾನೆಜ್‍ಮೆಂಟ್ ಪ್ಲಾಟ್‍ಫರ್ಮ್) ಕಡೆಗೆ ಹೆಜ್ಜೆ ಇಟ್ಟಿದೆ. ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಸುಲಭಗೊಳಿಸಿ ಸಂಪತ್ತು ಗಳಿಕೆ ಅವಕಾಶವನ್ನು ಲಕ್ಷಾಂತರ ಭಾರತೀಯರಿಗೆ ನೀಡಬೇಕೆನ್ನುವುದು ನಮ್ಮ ಮಿಷನ್.

ಪೇಟಿಎಂ ಮನಿಯಿಂದ ಸ್ಟಾಕ್ ಬ್ರೋಕಿಂಗ್ ಸೇವೆಗೆ ಸೆಬಿ ಅನುಮತಿ

ಇನ್ನು ಕೆಲವೇ ತಿಂಗಳಲ್ಲಿ ಈ ಸೇವೆಯನ್ನು ನೀಡುವುದರ ಜತೆಗೆ ಗ್ರಾಹಕರಿಗೆ ಎಲ್ಲಾ ರೀತಿಯ ಎಕ್ಸೆಂಜ್ ಟ್ರೆಡೆಡ್ ಉತ್ಪನ್ನಗಳಲ್ಲಿ ಹೂಡಿಕೆ ಮಾಡಲು ಅವಕಾಶ ನೀಡಲಾಗುವುದು" ಎಂದು 'ಪೇಟಿಎಂ ಮನಿ'ಯ ಪೂರ್ಣ ಕಾಲಿಕ ನಿರ್ದೇಶಕ ಪ್ರವೀಣ್ ಜಾಧವ್ ಹೇಳಿದರು.

ಸ್ಟಾಕ್ ಟ್ರೆಡಿಂಗ್ ಸೇವೆ ಶುರು ಮಾಡಿದ ಬಳಿಕ ಉತ್ಪನ್ನ, ಕೊಡುಗೆಗಳು, ವೈಶಿಷ್ಟ್ಯ, ದರ ಹಾಗೂ ಇತರ ಅಗತ್ಯಗಳ ವಿವರಗಳ ಬಗ್ಗೆ ಮಾಹಿತಿಯನ್ನು ಸಂಸ್ಥೆಯು ನೀಡುತ್ತದೆ.

ಇ-ವ್ಯಾಲೆಟ್ (e-wallets) ಫೆಬ್ರವರಿ ಅಂತ್ಯದ ವೇಳೆಗೆ ಬಂದ್ ಆಗಲಿದೆ!

ಪ್ರಾರಂಭಿಸಿದ ಕೆಲವೇ ತಿಂಗಳಲ್ಲಿ 'ಪೇಟಿಎಂ ಮನಿ' ಯು ಒಂದು ದಶಲಕ್ಷ ಗ್ರಾಹಕರನ್ನು ತನ್ನ ವೇದಿಕೆಯಲ್ಲಿ ನೊಂದಾಯಿಸಿಕೊಂಡಿದೆ. ಇದರಿಂದಾಗಿ ನೇರ ಮ್ಯೂಚುವಲ್ ಫಂಡ್‍ನಲ್ಲಿ ಶುಲ್ಕ ರಹಿತವಾಗಿ ಹೂಡಿಕೆ ಮಾಡಲು ಭಾರತದ ಅತಿದೊಡ್ಡ ವೇದಿಕೆಯಾಗಿ ಮಾರ್ಪಟ್ಟಿದೆ. ಇನ್ವೆಸ್ಟ್‍ಮೆಂಟ್ ಪ್ಯಾಕ್ ಎಂಬ ಹೊಸ ಸೇವೆಯನ್ನು 'ಪೇಟಿಎಂ ಮನಿ'ಯು ಇತ್ತಿಚೀಗೆ ಶುರು ಮಾಡಿದೆ.

ಇದೊಂದು ಆಂತರಿಕ ಸಲಹಾ ತಂಡದ ಸಂಶೋಧನೆಯಿಂದ ಸಿದ್ದಪಡಿಸಿದ ಮ್ಯೂಚುವಲ್ ಫಂಡ್‍ನಲ್ಲಿ ಹೂಡಿಕೆ ಮಾಡಲು ಸಂಗ್ರಹಿಸಲಾದ ಪಟ್ಟಿಯಾಗಿದೆ. ಹೂಡಿಕೆ ಸುಲಭಗೊಳಿಸುವ ಉದ್ದೇಶದಿಂದ ಸಂಸ್ಥೆಯು ಅನೇಕ ವೈಶಿಷ್ಟ್ಯಗಳನ್ನು ಸಹ ಪರಿಚಯಿಸಿದೆ.

English summary

Paytm Money receives SEBI Approval to start Stock Broking

Paytm Money - India's largest online platform for mutual fund investments and the wholly owned subsidiary of One97 Communications Limited that owns & operates Paytm, today announced that it has received approval from SEBI (Securities & Exchange Board of India) to offer Stock Broking service to its users.
Company Search
Enter the first few characters of the company's name or the NSE symbol or BSE code and click 'Go'
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more