For Quick Alerts
ALLOW NOTIFICATIONS  
For Daily Alerts

ಆರ್ಬಿಐ ರೆಪೊ ದರ ಕಡಿತ, ಸಾಲ ಅಗ್ಗವಾಗಲಿದೆ..

|

2019-20ರ ಹಣಕಾಸು ವರ್ಷದ ಮೊದಲ ದ್ವೈಮಾಸಿಕ ಹಣಕಾಸು ನೀತಿಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಇಂದು ಪ್ರಕಟಿಸಿದ್ದು, ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಸಿಹಿಸುದ್ದಿ ನೀಡಿದೆ.

ಆರ್ಬಿಐ ರೆಪೊ ದರ ಕಡಿತ, ಸಾಲ ಅಗ್ಗವಾಗಲಿದೆ..

 

ಆರ್ಬಿಐ ಹಣಕಾಸು ನೀತಿ ಸಮಿತಿಯು ರೆಪೋ ದರವನ್ನು ಶೇ. 0.25ರಷ್ಟು ಕಡಿತಗೊಳಿಸಿ ಶೇ. 6ಕ್ಕೆ ನಿಗದಿಪಡಿಸಿದೆ. ಆದರೆ ತಟಸ್ಥ ಮಟ್ಟದಲ್ಲಿರುವ ಹಣಕಾಸು ನೀತಿ ನಿಲುವನ್ನು ಈ ಬಾರಿಯೂ ಹಾಗೆಯೇ ಉಳಿಸಿಕೊಂಡಿದೆ.

ಆರ್‌ಬಿಐ ಫೆಬ್ರವರಿಯಲ್ಲಿ 25 ಬೇಸ್ ಪಾಯಿಂಟ್ ಬಡ್ಡಿ ದರ ಕಡಿತ ಮಾಡಿತ್ತು. ಅಂದರೆ ಶೇ. 6.50ರಷ್ಟಿದ್ದ ಬಡ್ಡಿ ದರವನ್ನು ಶೇ. 6.25ಕ್ಕೆ ಕಡಿತಗೊಳಿಸಿತ್ತು.

ಆರ್‌ಬಿಐ ಬಡ್ಡಿ ದರವನ್ನು ಸತತವಾಗಿ 2ನೇ ಬಾರಿಗೆ ಕಡಿತಗೊಳಿಸುತ್ತಿರುವುದು ಗಮನಾರ್ಹವಾಗಿದ್ದು, ಈ ಮೂಲಕ ಆರ್ಬಿಐ ಕಳೆದ ಒಂದು ವರ್ಷದಲ್ಲಿ ತನ್ನ ಬಡ್ಡಿ ದರವನ್ನು ಕನಿಷ್ಠ ಮಟ್ಟಕ್ಕೆ ತಂದು ನಿಲ್ಲಿಸಿದೆ. ದೇಶದಲ್ಲಿನ ಹಣದುಬ್ಬರ ಸ್ಥಿತಿ ಮೃದುವಾಗುತ್ತಿರುವುದೇ ಇದಕ್ಕೆ ಕಾರಣವಾಗಿದೆ ಎಂದು ಸಮರ್ಥನೆ ನೀಡಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್‌ ಶಕ್ತಿಕಾಂತ ದಾಸ್‌ ನೇತೃತ್ವದಲ್ಲಿ ಪ್ರಕಟವಾಗುತ್ತಿರುವ ಎರಡನೇ ಹಣಕಾಸು ನೀತಿ ಇದಾಗಿದೆ. ಬಡ್ಡಿ ದರ ಕಡಿತಕ್ಕೆ 4:2ರ ಅಂತರದಲ್ಲಿ ಸಮಿತಿಯ ಅನುಮೋದನೆ ಲಭಿಸಿದೆ.

2017-18ರಲ್ಲಿ ಶೇ. 6.6ರ ಅಂದಾಜಿಸಲಾಗಿದ್ದ ಜಿಡಿಪಿ ಬೆಳವಣಿಗೆಯನ್ನು, 2018-19ರ ಹಣಕಾಸು ವರ್ಷದಲ್ಲಿ ಶೇ. 7.4ರ ಮಟ್ಟಕ್ಕೆ ಏರುವುದೆಂದು ಆರ್ಬಿಐ ಅಂದಾಜಿಸಿದೆ.

ಸ್ವಂತ ಮನೆ, ಕಾರು ಹೊಂದಬೇಕೆಂಬ ಕನಸು ಕಾಣುತ್ತಿರುವವರಿಗೆ ಇದು ಶುಭ ಸುದ್ದಿ. ಆರ್ಬಿಐ ರೆಪೊ ಕಡಿತಗೊಳಿಸಿದ್ದು, ಗೃಹ ಸಾಲಗಳ ಮೇಲಿನ ಬಡ್ಡಿ ದರ ಇಳಿಕೆಯಾಗಲಿದೆ.

Read more about: banking money loan rbi repo rate
English summary

RBI Cuts Key Interest Rate, Loans Set To Get Cheaper

The Reserve Bank of India's Monetary Policy Committee on Thursday announced a reduction in repo rate by 25 basis points or 0.25 per cent to 6 per cent
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more