For Quick Alerts
ALLOW NOTIFICATIONS  
For Daily Alerts

2019ರಲ್ಲಿ ಭಾರತದಲ್ಲಿ ಕೆಲಸ ಮಾಡಲು ಬೆಸ್ಟ್ ಟಾಪ್ 10 ಕಂಪನಿಗಳು

|

ಭಾರತದಲ್ಲಿ ನೀವು ಸಂತೋಷದಾಯಕ ಉದ್ಯೋಗ ಹೊಂದಲು ವೇಗವಾಗಿ ಬೆಳೆಯುತ್ತಿರುವ ಇಂಟರ್ನೆಟ್ ತಂತ್ರಜ್ಞಾನ ಕಂಪನಿಗಳಲ್ಲಿ ಭವಿಷ್ಯ ಕಂಡುಕೊಳ್ಳಬೇಕು. 2019ರಲ್ಲಿ ಭಾರತದಲ್ಲಿ ಕೆಲಸ ಮಾಡಲು ಹಾಗು ಉದ್ಯೋಗಕ್ಕೆ ಆದ್ಯತೆಯಲ್ಲಿರುವ ಅಗ್ರ ಹತ್ತು ಕಂಪನಿಗಳ ಪಟ್ಟಿಯನ್ನು ಲಿಂಕ್ಡ್ ಇನ್ ಬಿಡುಗಡೆಗೊಳಿಸಿದೆ.

ಸಾಮಾಜಿಕ ಜಾಲತಾಣ ಲಿಂಕ್ಡ್ ಇನ್ 54 ಮಿಲಿಯನ್ ಬಳಕೆದಾರರ ಪ್ರತಿಕ್ರಿಯೆ ಆಧರಿಸಿ ಅಗ್ರ ಕಂಪನಿಗಳ ಪಟ್ಟಿಯನ್ನು ಇದು ತಯಾರಿಸಿದೆ.

ಉದ್ಯೋಗ ಮಾಡಲು ಅತ್ಯುತ್ತಮವಾಗಿರುವ ಟಾಪ್ 10 ಕಂಪನಿಗಳ ಪಟ್ಟಿ ಇಲ್ಲಿ ನೀಡಲಾಗಿದೆ.

10. ರಿಲಯನ್ಸ್ ಇಂಡಸ್ಟ್ರೀಸ್
 

10. ರಿಲಯನ್ಸ್ ಇಂಡಸ್ಟ್ರೀಸ್

ಕೈಗಾರಿಕೆ: ತೈಲ ಮತ್ತು ಇಂಧನ

ಕಛೇರಿ: ಮುಂಬೈ

ಮುಂಬೈ ಮೂಲದ ತೈಲ ಮತ್ತು ಇಂಧನ ಕಂಪೆನಿ ರಿಲಯನ್ಸ್ ಇಂಡಸ್ಟ್ರೀಸ್ ಹೈಡ್ರೋಕಾರ್ಬನ್ ಪರಿಶೋಧನೆ ಮತ್ತು ಉತ್ಪಾದನೆ, ಪೆಟ್ರೋಲಿಯಂ ಸಂಸ್ಕರಣ ಮತ್ತು ಮಾರುಕಟ್ಟೆ, ಪೆಟ್ರೊಕೆಮಿಕಲ್ಸ್, ಚಿಲ್ಲರೆ ವ್ಯಾಪಾರ ಮತ್ತು ದೂರಸಂಪರ್ಕ ಕ್ಷೇತ್ರಗಳನ್ನು ಹೊಂದಿದೆ. ಮಾರುಕಟ್ಟೆಯ ಬಂಡವಾಳೀಕರಣದಿಂದಾಗಿ ರಿಲಯನ್ಸ್ ಇಂದು ಭಾರತದ ಅತಿ ದೊಡ್ಡ ಸಾರ್ವಜನಿಕ-ವಹಿವಾಟಿನ ಕಂಪನಿಯಾಗಿದೆ.

9. ಆಲ್ಫಾಬೆಟ್

9. ಆಲ್ಫಾಬೆಟ್

ಉದ್ಯಮ: ಇಂಟರ್ನೆಟ್

ಕಛೇರಿಗಳು: ಬೆಂಗಳೂರು, ಗುರಗಾಂವ್, ಹೈದರಾಬಾದ್ ಮತ್ತು ಮುಂಬೈ

ಟೆಕ್ ದೈತ್ಯ ಗೂಗಲ್ ಮತ್ತು ಅದರ ವೀಡಿಯೋ ಹಂಚಿಕೆ ಸೈಟ್ ಯೂಟ್ಯೂಬ್ ಸಹಕಂಪೆನಿ ಇದಾಗಿದ್ದು, ಭಾರತದ ಮೇಲಿನ ಭಾರೀ ಭರವಸೆಯೊಂದಿಗೆ 2004 ರಲ್ಲಿ ಮೊದಲ ಬಾರಿಗೆ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವಾಗಿ ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿತು.

8. ಝೊಮಾಟೊ

8. ಝೊಮಾಟೊ

ಉದ್ಯಮ: ಗ್ರಾಹಕರ ಸೇವೆಗಳು

ಕಛೇರಿಗಳು: ಬೆಂಗಳೂರು, ಚೆನ್ನೈ, ದೆಹಲಿ, ಗುರಗಾಂವ್ ಮತ್ತು ಗುರುಗ್ರಾಮ್

ಗುರಗಾಂವ್-ಪ್ರಧಾನ ಕಛೇರಿಯನ್ನು ಹೊಂದಿದ್ದ ರೆಸ್ಟೋರೆಂಟ್ ಸಂಯೋಜಕ ಝೊಮಾಟೊ 2008 ರಲ್ಲಿ ಕಾರ್ಯಾರಂಭಿಸಿತು. ಇದೀಗ ಜಗತ್ತಿನ 24 ದೇಶಗಳಲ್ಲಿ 55 ಮಿಲಿಯನ್ ಬಳಕೆದಾರರನ್ನು ಹೊಂದಿದೆ.

7. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್
 

7. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್

ಉದ್ಯಮ: ಮಾಹಿತಿ ತಂತ್ರಜ್ಞಾನ ಮತ್ತು ಸೇವೆಗಳು

ಕಛೇರಿಗಳು: ಅಹಮದಾಬಾದ್, ಬೆಂಗಳೂರು, ಬರೋಡಾ, ಭುವನೇಶ್ವರ್, ಚೆನ್ನೈ, ಕೊಯಮತ್ತೂರು, ದೆಹಲಿ, ಗಾಂಧಿನಗರ, ಗೋವಾ, ಗುರಗಾಂವ್, ಗುವಾಹಟಿ, ಹೈದರಾಬಾದ್, ಭೋಪಾಲ್, ಇಂದೋರ್, ಜಮ್ಶೆಡ್ಪುರ, ಕೊಚ್ಚಿ, ಕೊಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ್, ನೋಯ್ಡಾ, ನಾಶಿಕ್, ಪಾಟ್ನಾ, ಪುಣೆ, ತ್ರಿವೆಂಡ್ರಮ್ ಮತ್ತು ವಾರಣಾಸಿ

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಒಂದು ಮಾಹಿತಿ ತಂತ್ರಜ್ಞಾನ ಸೇವೆ, ಸಲಹಾ ಮತ್ತು ಬಿಸಿನೆಸ್ ಸಲ್ಯೂಷನ್ ಸಂಸ್ಥೆ. ಟಾಟಾ ಸ್ಟೀಲ್, ಟಾಟಾ ಮೋಟರ್ಸ್ (ಜಗ್ವಾರ್ ಲ್ಯಾಂಡ್ ರೋವರ್ ಮಾಲೀಕತ್ವ) ಮತ್ತು ಟಾಟಾ ಕಮ್ಯೂನಿಕೇಶನ್ಸ್ ಸೇರಿದಂತೆ ಹಲವು ಅಂಗಸಂಸ್ಥೆಗಳು ಟಾಟಾ ಗ್ರೂಪ್ ನ ಭಾಗವಾಗಿವೆ.

6. ಸ್ವಿಗ್ಗಿ

6. ಸ್ವಿಗ್ಗಿ

ಉದ್ಯಮ: ಇಂಟರ್ನೆಟ್

ಕಚೇರಿಗಳು: ಅಂಧೇರಿ, ಔರಂಗಾಬಾದ್, ಅಹಮದಾಬಾದ್, ಬೆಂಗಳೂರು, ಭೋಪಾಲ್, ಭುವನೇಶ್ವರ, ಚೆನ್ನೈ, ಹೈದರಾಬಾದ್, ಕೊಲ್ಹಾಪುರ, ಕೋಲ್ಕತಾ, ಮಾಪುಸಾ, ಮುಂಬೈ, ನಾಗ್ಪುರ್, ಪಣಜಿ, ಪುಣೆ, ರಾಯಪುರ್, ಸೋಲಾಪುರ ಮತ್ತು ಸೂರತ್

ಆಹಾರ ವಿತರಣೆ ಸಂಸ್ಥೆಯಾಗಿರುವ ಸ್ವಿಗ್ಗಿ 2014 ರಲ್ಲಿ ಬೆಂಗಳೂರಿನಲ್ಲಿ ಶ್ರೀ ಹರ್ಷ ಮಜೇಟಿ ಮತ್ತು ನಂದನ್ ರೆಡ್ಡಿ ಆರಂಭಿಸಿದರು. ಐದು ವರ್ಷಗಳಲ್ಲಿ, ಕಂಪನಿಯು ಭಾರತದ ಅತಿದೊಡ್ಡ ಕಂಪನಿಯಾಘಿ ಹೊರಹೊಮ್ಮಿದೆ. ಭಾರತದಾದ್ಯಂತ 60 ನಗರಗಳಲ್ಲಿ 50,000 ರೆಸ್ಟೋರೆಂಟ್ ಪಾಲುದಾರರನ್ನು ಹೊಂದಿದೆ.

5. ಉಬರ್

5. ಉಬರ್

ಉದ್ಯಮ: ಇಂಟರ್ನೆಟ್

ಕಛೇರಿಗಳು: ಬೆಂಗಳೂರು ಮತ್ತು ರಾಷ್ಟ್ರವ್ಯಾಪಿ

ಅಂತರಾಷ್ಟ್ರೀಯ ಸೆವಾ ಸಂಸ್ಥೆ ಉಬರ್ ಭಾರತದಲ್ಲಿ ಮೊದಲ ಬಾರಿಗೆ 2013 ರಲ್ಲಿ ಪ್ರಾರಂಭವಾಯಿತು. ಚೀನಾ ಮತ್ತು ಆಗ್ನೇಯ ಏಷ್ಯಾದ ನಂತರ, ಏಷ್ಯಾದಲ್ಲಿ ಭಾರತ ಪ್ರಬಲ ತಾಣವಾಗಿದೆ. 2019 ರಲ್ಲಿ ಭಾರತದಲ್ಲಿ ತನ್ನ ವ್ಯವಹಾರ ದ್ವಿಗುಣಗೊಳಿಸುವ ಯೋಜನೆ ಹೊಂದಿದೆ.

4. One97 ಕಮ್ಯುನಿಕೇಶನ್ಸ್ (ಪೇಟಿಎಂ)

4. One97 ಕಮ್ಯುನಿಕೇಶನ್ಸ್ (ಪೇಟಿಎಂ)

ದ್ಯಮ: ಇಂಟರ್ನೆಟ್

ಕಛೇರಿಗಳು: ಬೆಂಗಳೂರು, ಚೆನ್ನೈ, ಕೊಲ್ಕತ್ತಾ, ಮುಂಬೈ ಮತ್ತು ಪುಣೆ

One97 ಕಮ್ಯುನಿಕೇಷನ್ಸ್ ಭಾರತೀಯ ಇ-ಪೇಮೆಂಟ್ ಮತ್ತು ಇ-ಕಾಮರ್ಸ್ ಬ್ರ್ಯಾಂಡ್ ಪೇಟಿಎಂನ ಮೂಲ ಕಂಪನಿಯಾಗಿದೆ. ಗ್ರಾಹಕರಿಗೆ ತಮ್ಮ ಮೊಬೈಲ್ ಮೂಲಕ ಪಾವತಿಸಲು ಅವಕಾಶ ನೀಡುತ್ತದೆ. ಇದು 300 ಮಿಲಿಯನ್ ನೋಂದಾಯಿತ ಬಳಕೆದಾರರನ್ನು ಹೊಂದಿದೆ ಮತ್ತು 7 ದಶಲಕ್ಷಕ್ಕೂ ಹೆಚ್ಚಿನ ವ್ಯಾಪಾರಿಗಳು ಈ ವೇದಿಕೆಯನ್ನು ಬಳಸುತ್ತಿದ್ದಾರೆ.

3. ಓಯೋ

3. ಓಯೋ

ಉದ್ಯಮ: ಹಾಸ್ಪಿಟಾಲಿಟಿ

ಕಛೇರಿಗಳು: ಗುರುಗ್ರಾಮ್ ಮತ್ತು ರಾಷ್ಟ್ರವ್ಯಾಪಿ

ಒಯೋ ಭಾರತದ ಅತಿದೊಡ್ಡ ಲಾಡ್ಜಿಂಗ್ ಆತಿಥ್ಯ ಸರಣಿ ಹೊಂದಿರುವ ಅತ್ಯುತ್ತಮ ಕಂಪನಿಯಾಗಿತ್ತು. ತನ್ನ 18 ವರ್ಷ ವಯಸ್ಸಿನ ರಿತೇಶ್ ಅಗರ್ವಾಲ್ ಅವರು 2012 ರಲ್ಲಿ ಒಡಿಶಾದ ಸಣ್ಣ ಪಟ್ಟಣದಲ್ಲಿ ಕಂಪನಿ ಆರಂಭಿಸಿದರು. ಇದೀಗ ಏಳು ದೇಶಗಳಲ್ಲಿ ವ್ಯಾಪಕ ಜಾಲವನ್ನು ಹೊಂದಿದೆ. ನೇರ ಉದ್ಯೋಗಿಗಳಲ್ಲದೇ, ಒಯೋ 10,000 ಕ್ಕೂ ಹೆಚ್ಚಿನ ಪಾಲುದಾರರು ಮತ್ತು ಹೋಟೆಲ್ ಮಾಲೀಕರನ್ನು ಒಳಗೊಂಡಿದೆ.

2. ಅಮೆಜಾನ್

2. ಅಮೆಜಾನ್

ಉದ್ಯಮ: ಇಂಟರ್ನೆಟ್

ಕಚೇರಿಗಳು: ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್ ಮತ್ತು ಮುಂಬೈ

ಜಾಗತಿಕ ದೈತ್ಯ ಸಂಸ್ಥೆ ಅಮೆಜಾನ್ 2013 ರಲ್ಲಿ ಭಾರತದಲ್ಲಿ ಲಾಂಚ್ ಮಾಡಲಾಯಿತು. ಜೆಫ್ ಬೆಜೊಸ್ ಇದರ ಸಂಸ್ಥಾಪಕರಾಗಿದ್ದು, ಭಾರತದಲ್ಲಿ ಇ-ಕಾಮರ್ಸ್ ಪ್ರತಿಸ್ಪರ್ಧಿಯಾದ ಫ್ಲಿಪ್ಕಾರ್ಟ್ ನೊಂದಿಗೆ ಪೈಪೋಟಿ ನೀಡುತ್ತಿದೆ. ತನ್ನ ಸ್ಥಳೀಯ ಕಾರ್ಯಾಚರಣೆಗಳಲ್ಲಿ ಭಾರಿ ಹೂಡಿಕೆ ಮಾಡಿದ್ದು, ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯನ್ನು ಸೆಳೆಯಲು ಮುಂದಾಗಿದೆ. ಇದು ಭಾರತದ ಎರಡನೇ ಅತ್ಯುತ್ತಮ ಉದ್ಯೋಗದಾತ ಸಂಸ್ಥೆಯಾಗಿದೆ ಎಂದು ಲಿಂಕ್ಡ್ಇನ್ ಹೇಳಿದೆ.

1. ಫ್ಲಿಪ್ಕಾರ್ಟ್ (ವಾಲ್ಮಾರ್ಟ್)

1. ಫ್ಲಿಪ್ಕಾರ್ಟ್ (ವಾಲ್ಮಾರ್ಟ್)

ಉದ್ಯಮ: ಇಂಟರ್ನೆಟ್

ಕಛೇರಿಗಳು: ಬೆಂಗಳೂರು ಮತ್ತು ದೆಹಲಿ

ಲಿಂಕ್ಡ್ ಇನ್ ಪ್ರಕಾರ ಫ್ಲಿಪ್ಕಾರ್ಟ್ ಕಂಪನಿ ಉದ್ಯೋಗಕ್ಕೆ ಆದ್ಯತೆಯಿರುವ ಕಂಪನಿಗಳಲ್ಲಿ ಮೊದಲ ಸ್ಥಾನದಲ್ಲಿದೆ. ದೇಶೀಯ ಇ-ಕಾಮರ್ಸ್ ಪ್ಲಾಟ್ಫಾರ್ಮ್ ಫ್ಲಿಪ್ಕಾರ್ಟ್ ಸಂಸ್ಥೆಯನ್ನು 2007 ರಲ್ಲಿ ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಸ್ಥಾಪಿಸಿದರು. ಕಳೆದ ದಶಕದಲ್ಲಿ, ಇದು ದೇಶದ ಅತಿದೊಡ್ಡ ಆನ್ಲೈನ್ ​​ಚಿಲ್ಲರೆ ವ್ಯಾಪಾರಿಯಾಗಿ ಮಾರ್ಪಟ್ಟಿದೆ. ಇದು ಯು.ಎಸ್. ರಿಟೇಲ್ ವಲಯದ ದೈತ್ಯಸಂಸ್ಥೆ ವಾಲ್ ಮಾರ್ಟ್ 2018 ರಲ್ಲಿ ಷೇರು ಖರೀದಿಸಲು ಪ್ರೇರೇಪಿಸಿತು.

Read more about: money amazon flipkart tcs it business
English summary

Top 10 companies to work for in India in 2019

That's according to LinkedIn, which ranked no less than 12 internet and IT businesses among its list of the top 25 companies to work for in India in 2019.
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more