For Quick Alerts
ALLOW NOTIFICATIONS  
For Daily Alerts

ಫೆಸ್ಬುಕ್, ಟ್ವಿಟರ್ ಖಾತೆಗಳಿಗೆ ಆಧಾರ್ ಲಿಂಕ್ ಕಡ್ಡಾಯ! ಸರ್ಕಾರದ ಹೊಸ ನಿಯಮ ಯಾಕೆ ಗೊತ್ತಾ?

|

ಪ್ರಮುಖ ಸೋಷಿಯಲ್ ಮೀಡಿಯಾಗಳಾದ ಫೆಸ್ಬುಕ್ ಮತ್ತು ಟ್ವಿಟರ್ ನಂತಹ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹಾಗು ಟ್ರೋಲ್ ಗಳು ವ್ಯಾಪಕವಾಗಿ ಹರಡುತ್ತಿವೆ. ಸುಳ್ಳು ಸುದ್ದಿ ಹರಡುವ, ಶಾಂತಿ ಕದಡುವ, ಕೋಮು ಗಲಭೆಗಳನ್ನು ಪ್ರಚೋದಿಸುವ ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಸರ್ಕಾರ ಶಾಕಿಂಗ್ ಸುದ್ದಿ ನೀಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಟ್ರೋಲಿಂಗ್, ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.

ಆಧಾರ್ ಕಾರ್ಡ್ ಲಿಂಕ್!
 

ಆಧಾರ್ ಕಾರ್ಡ್ ಲಿಂಕ್!

ಟ್ರೋಲ್, ಸುಳ್ಳು ಸುದ್ದಿಗಳು ಹರಡದಂತೆ ತಡೆಗಟ್ಟಲು ಸೋಷಿಯಲ್ ಮೀಡಿಯಾ ಖಾತೆಗಳಿಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಲಿಂಕ್ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಟ್ರೋಲ್ ಗಳ ಮೂಲಕ ಸುಳ್ಳು ಸುದ್ದಿ ಹರಿಬಿಡಲಾಗುತ್ತದೆ. ಅನೇಕ ಸಂದರ್ಭದಲ್ಲಿ ಟ್ರೋಲ್ ಮಾಡುವ ಪೇಜ್ ಗಳು ಯಾರದು ಎನ್ನುವುದೇ ಗೊತ್ತಾಗುವುದಿಲ್ಲ. ಇದಕ್ಕೆಲ್ಲ ಕಡಿವಾಣ ಹಾಕುವ ಉದ್ದೇಶದಿಂದ ಸೋಷಿಯಲ್ ಮೀಡಿಯಾ ಖಾತೆಗಳಿಗೆ ಆಧಾರ್ ಕಾರ್ಡ್, ಪಾಸ್ ಪೋರ್ಟ್, ಮೊಬೈಲ್ ನಂಬರ್ ನಂತಹ ಅಧಿಕೃತ ಗುರುತಿನ ಚೀಟಿ ಜೋಡಣೆ ಮಾಡುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ.

ಐಟಿ ಕಾಯಿದೆಯಡಿ ಕಾನೂನು ಕ್ರಮ

ಐಟಿ ಕಾಯಿದೆಯಡಿ ಕಾನೂನು ಕ್ರಮ

ಆಧಾರ್ ಲಿಂಕ್ ಮಾಡುವುದರಿಂದ ಸುಳ್ಳು ಸುದ್ದಿಗಳಿಗೆ ಅನಧಿಕೃತ ಟ್ರೋಲ್ ಗಳಿಗೆ ಕಡಿವಾಣ ಹಾಕಬಹುದು ಎಂಬುದು ಸರ್ಕಾರದ ವಿಚಾರವಾಗಿದೆ. ಈಗಾಗಲೇ ಅಸ್ತಿತ್ವದಲ್ಲಿರು ಮತ್ತು ಹೊಸ ಬಳಕೆದರರಿಗೆ ನಿಯಮಗಳು, ಅನ್ವಯವಾಗಲಿದೆ. ಸೈಬರ್ ಕ್ರೈಮ್ ನಡೆದರೆ ಹಾಗು ದೂರುಗಳು ಬಂದರೆ ಅಂತಹ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾ ಖಾತೆಗಳ ವಿವರಗಳನ್ನು ಕೇಳಲಾಗುವುದು. ಸಮರ್ಪಕವಾದ ಮಾಹಿತಿ ನೀಡದಿದ್ದರೆ ಅಂತಹ ಪೇಜ್ ಗಳ ಮುಖ್ಯಸ್ಥರ ವಿರುದ್ಧ ಐಟಿ ಕಾಯಿದೆಯಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.

ಒಟಿಪಿ ಪರಿಶೀಲನೆ

ಒಟಿಪಿ ಪರಿಶೀಲನೆ

ನಕಲಿ ಸುದ್ದಿ ಮತ್ತು ಟ್ರೋಲ್ ಗಳನ್ನು ಹರಡುವವರು ನಿರ್ಭಯದಿಮದ ಕಾರ್ಯನಿರ್ವಹಿಸುತ್ತಾರೆ. ಇದಕ್ಕಾಗಿ ಒನ್ ಟೈಮ್ ಪಾಸ್ವರ್ಡ್ (ಒಟಿಪಿ) ಮುಖಾಂತರ ಆಧಾರ್ ಲಿಂಕ್, ಪಾಸ್ಪೋರ್ಟ್, ಇಲ್ಲವೇ ಈಗಾಗಲೇ ಟ್ವಿಟರ್ ಅಳವಡಿಸಿರುವ ನಿಯಮಗಳನ್ನು ಬಳಕೆದಾರರು ಪಾಲಿಸಬೇಕು. ಮಧ್ಯವರ್ತಿ ಪರಿಶೀಲನೆ ಪ್ರಕ್ರಿಯೆಯನ್ನು ನೋಡಬಹುದಾದ ಕೆಲ ವಿಧಾನಗಳು ಇವೆ.

ಮಾಹಿತಿ ತಂತ್ರಜ್ಞಾನ ತಿದ್ದುಪಡಿ ನಿಯಮ
 

ಮಾಹಿತಿ ತಂತ್ರಜ್ಞಾನ ತಿದ್ದುಪಡಿ ನಿಯಮ

ಖಾತೆಯ ಪರಿಶೀಲನೆ ಮಧ್ಯವರ್ತಿ ಮಾರ್ಗಸೂಚಿಗಳ ಭಾಗವಾಗಿರಬಾರದು. ಸರ್ಕಾರ ಈ ವರ್ಷದ ನಂತರ ಬಿಡುಗಡೆ ಮಾಡುವ ಗುರಿ ಹೊಂದಿದೆ. ಫೆಬ್ರವರಿ 14, 2019 ರವರೆಗೂ ಸಾರ್ವಜನಿಕ ಸಮಾಲೋಚನೆಗಾಗಿ ಮಾಹಿತಿ ತಂತ್ರಜ್ಞಾನ [ಮಧ್ಯವರ್ತಿಗಳ ಮಾರ್ಗಸೂಚಿಗಳು (ತಿದ್ದುಪಡಿ) ನಿಯಮಗಳನ್ನು ಎಲೆಕ್ಟ್ರಾನಿಕ್ಸ್ ಅಂಡ್ ಇನ್ಫಾರ್ಮೇಶನ್ ಟೆಕ್ನಾಲಜಿ ಸಚಿವಾಲಯವು ಬಿಡುಗಡೆ ಮಾಡಿತು. ಈ ನಿಯಮಗಳು ಮಧ್ಯವರ್ತಿಗಳ ಮೇಲೆ ಹೆಚ್ಚಿನ ನಿರ್ಬಂಧವನ್ನು ಹೇರಿವೆ. ಕಾನೂನು ಬಾಹಿರ ಕಂಟೆಂಟ್ ಗುರುತಿಸಿ ತೀರ್ಪು ನೀಡುವಲ್ಲಿ ಮುಖ್ಯ ಪಾತ್ರವಹಿಸುತ್ತದೆ.

ನೋಡಲ್ ಅಧಿಕಾರಿ ನೇಮಕ

ನೋಡಲ್ ಅಧಿಕಾರಿ ನೇಮಕ

ಮಧ್ಯವರ್ತಿಗಳು 'ಕಾನೂನುಬಾಹಿರ' ವಿಷಯದ ಮೂಲವನ್ನು ಪತ್ತೆ ಹಚ್ಚಲು ಮತ್ತು ಅಂತಹ ವಿಷಯವನ್ನು 72 ಗಂಟೆಗಳ ಒಳಗಾಗಿ ಕಿತ್ತೊಗೆಯಲು ಸರ್ಕಾರಿ ಸಂಸ್ಥೆಯ ಅನುಮತಿಯಿದೆ.. ಅಲ್ಲದೆ, 50 ಲಕ್ಷಕ್ಕೂ ಹೆಚ್ಚು ಬಳಕೆದಾರರ ಹೊಂದಿರುವ ಸಂಸ್ಥೆಯು ಭಾರತದ ಕಂಪೆನಿ ಕಾನೂನಿನಡಿಯಲ್ಲಿ ಸೇರಿಸಿಕೊಳ್ಳಬೇಕು. ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಹಕರಿಸಲು ಮತ್ತು ಭಾರತೀಯ ಕಾನೂನಿನ ಅಡಿಯಲ್ಲಿ ಮೇಲ್ವಿಚಾರಣೆ ಅನುಸರಣೆಗೆ 24 × 7 ಕ್ಕೆ ನೋಡಲ್ ಅಧಿಕಾರಿಯನ್ನು ನೇಮಕ ಮಾಡಿಕೊಳ್ಳಬೇಕು.

ಚುನಾವಣೆ, ನೀತಿ ಸಂಹಿತೆ, ಚುನಾವಣಾ ಆಯೋಗ

ಚುನಾವಣೆ, ನೀತಿ ಸಂಹಿತೆ, ಚುನಾವಣಾ ಆಯೋಗ

ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನ ಚುನಾವಣಾ ಆಯೋಗವು ಸಾಮಾಜಿಕ ಮಾಧ್ಯಮ ಕಂಪನಿಗಳನ್ನು ತಮ್ಮ ತಹಬದಿಯಲ್ಲಿ ಇಟ್ಟುಕೊಂಡಿರುತ್ತವೆ. ಸಾಮಾಜಿಕ ಮಾಧ್ಯಮಕ್ಕಾಗಿ ನೀತಿ ಸಂಹಿತೆ ನೀಡುವುದರ ಮೂಲಕ ರಾಜಕೀಯ ಜಾಹೀರಾತುಗಳನ್ನು ಖಾತರಿಪಡಿಸುವುದಕ್ಕಾಗಿ ಹಾಗು ನಕಲಿ ಸಾಮಾಜಿಕ ಮಾಧ್ಯಮ ಪ್ರಚಾರದಿಂದ ಮತದಾರರು ತಪ್ಪು ದಾರಿಗೆ ಒಳಗಾಗದಂತೆ ಚುನಾವಣಾ ಆಯೋಗ ಖಚಿತಪಡಿಸುತ್ತದೆ.

Read more about: aadhar facebook frauds money
English summary

Govt New Rule To Link Social Media Accounts To Aadhaar

The Indian government is now reportedly at new ways to curb trolling on social media as part of its sustained effort to reign in the influence of platforms like Facebook and Twitter.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more