For Quick Alerts
ALLOW NOTIFICATIONS  
For Daily Alerts

ಗ್ರಾಹಕರಿಗೆ ಕಹಿಸುದ್ದಿ! ಮೇ 1ರಿಂದ ಆಗಲಿದೆ 6 ದೊಡ್ಡ ಬದಲಾವಣೆ, ಇಲ್ಲಿದೆ ಪಟ್ಟಿ..

|

ಏಪ್ರಿಲ್, ಮೇ ತಿಂಗಳುಗಳಲ್ಲಿ ಸಾಮಾನ್ಯವಾಗಿ ಹಲವಾರು ಬದಲಾವಣೆಯಾಗುತ್ತವೆ. ಜೊತೆಗೆ ಹೊಸ ನಿಯಮಗಳು ಜಾರಿಯಾಗುತ್ತವೆ. ಅವುಗಳಲ್ಲಿ ಕೆಲ ನಿಯಮಗಳು ದುಬಾರಿ ಎನಿಸಿದರೆ ಕೆಲವು ಪ್ರಯೋಜನಕಾರಿಯಾಗಿರುತ್ತವೆ.

ಗ್ರಾಹಕರ ದೈನಂದಿನ ಜೀವನದಲ್ಲಿ ಮೇ 1 ರಿಂದ ಕೆಲವೊಂದು ಮಹತ್ವದ ಬದಲಾವಣೆಯಾಗುತ್ತಿದ್ದು, ಜನಸಾಮಾನ್ಯರ ಜೇಬಿನ ಮೇಲೆ ಇದು ನೇರ ಪರಿಣಾಮ ಬೀರಲಿದೆ.

ರೈಲು ಪ್ರಯಾಣಿಕರ ಗಮನಕ್ಕೆ
 

ರೈಲು ಪ್ರಯಾಣಿಕರ ಗಮನಕ್ಕೆ

ರೈಲು ಪ್ರಯಾಣಿಕರಿಗೆ ಮೇ ತಿಂಗಳಿನಿಂದ ಹೊಸ ಸೌಲಭ್ಯ ಸಿಗಲಿದ್ದು, ರೈಲಿನ ಚಾರ್ಟ್ ತಯಾರಿಸಲು ನಾಲ್ಕು ಗಂಟೆ ಮೊದಲು ಪ್ರಯಾಣಿಕರು ಬೋರ್ಡಿಂಗ್ ಸ್ಟೇಷನ್ ಬದಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ 24 ಗಂಟೆಗಳ ಮೊದಲು ಸ್ಟೇಷನ್ ಬದಲಿಸಬಹುದಾಗಿತ್ತು. ಟಿಕೇಟ್ ಬುಕಿಂಗ್ ಸಂದರ್ಭ ಒಂದು ನಿಲ್ದಾಣದ ಹೆಸರು ನೀಡಿದ್ದು, ನಂತರ ಬದಲಿಸುವ ಅನಿವಾರ್ಯ ಬಂದಲ್ಲಿ ನಾಲ್ಕು ಗಂಟೆ ಮೊದಲು ಸ್ಟೇಷನ್ ಬದಲಿಸಬಹುದು. ಸ್ಟೇಷನ್ ಬದಲಿಸಿ ಟಿಕೆಟ್ ರದ್ದು ಮಾಡಿದರೆ ಇಲಾಖೆ ಹಣ ವಾಪಸ್ ನೀಡುವುದಿಲ್ಲ.

ಎಸ್ಬಿಐ ಬಡ್ಡಿದರ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆಯಿಂದ ಗ್ರಾಹಕರ ಮೇಲೆ ನೇರ ಪರಿಣಾಮ ಆಗಲಿದೆ. ಎಸ್ಬಿಐ ಠೇವಣಿ ಹಾಗೂ ಸಾಲದ ಮೇಲಿನ ಬಡ್ಡಿ ಆರ್ಬಿಐ ರೆಪೋ ದರದ ಜೊತೆ ಲಿಂಕ್ ಆಗಲಿದೆ. ರೆಪೋ ದರ ಬದಲಾದ ತಕ್ಷಣ ಸಾಲದ ಮೇಲಿನ ಬಡ್ಡಿಯಲ್ಲಿ ಬದಲಾವಣೆಯಾಗಲಿದೆ.

ಪಿಎನ್ಬಿ ಕಿಟ್ಟಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಡಿಜಿಟಲ್ ವಾಲೆಟ್ ಪಿಎನ್ಬಿ ಕಿಟ್ಟಿಯನ್ನು (PNB Kitty) ಮೇ 1ರ ನಂತರ ಸ್ಥಗಿತಗೊಳಿಸುತ್ತಿದೆ.. ಈ ಬಗ್ಗೆ ಬ್ಯಾಂಕ್ ಈಗಾಗಲೇ ಸೂಚನೆ ನೀಡಿದ್ದು, ಏಪ್ರಿಲ್ 30ರೊಳಗೆ ವಾಲೆಟ್ ನಲ್ಲಿರುವ ಹಣ ಖರ್ಚು ಮಾಡಿ. ಇಲ್ಲವೆ ಖಾತೆಗೆ ಹಣ ವರ್ಗಾಯಿಸಿ ಎಂದು ಸೂಚನೆ ನೀಡಿತ್ತು.

ಏರ್ ಇಂಡಿಯಾ
 

ಏರ್ ಇಂಡಿಯಾ

ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಪ್ರಯಾಣಿಕರಿಗೆ ಖುಷಿ ಸುದ್ದಿ ನೀಡಿದ್ದು, ಟಿಕೆಟ್ ರದ್ದತಿ ಮೇಲೆ ಯಾವುದೇ ಶುಲ್ಕವನ್ನು ವಿಧಿಸುತ್ತಿಲ್ಲ. ಏರ್ ಇಂಡಿಯಾದಲ್ಲಿ ಟಿಕೇಟ್ ಬುಕ್ ಮಾಡಿದ 24 ಗಂಟೆಯೊಳಗೆ ಟಿಕೇಟ್ ರದ್ದು ಮಾಡಿದರೆ ಅಥವಾ ಬದಲಾವಣೆ ಮಾಡಿದರೆ ಯಾವುದೇ ಶುಲ್ಕ ಪಾವತಿಸುವಂತಿಲ್ಲ.

ಎಲ್ಪಿಜಿ ದರ

ಪ್ರತಿ ತಿಂಗಳಂತೆ ಮೇ ತಿಂಗಳಿನಲ್ಲಿ ಅಡುಗೆ ಅನಿಲ ಎಲ್ಪಿಜಿ ಹೊಸ ದರ ಜಾರಿಗೆ ಬಂದಿದೆ. ಏಪ್ರಿಲ್ 1ರಂದು ಅಡುಗೆ ಅನಿಲ ದರದಲ್ಲಿ ಏರಿಕೆಯಾಗಿತ್ತು. ಮೇ ತಿಂಗಳಲ್ಲೂ ಕೂಡ ಎಲ್ಪಿಜಿ ದರ ಏರಿಕೆ ಕಂಡಿದ್ದು, ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ ಬೆಲೆ ರೂ. 5 ಹಾಗು ಸಬ್ಸಿಡಿ ಸಿಲಿಂಡರ್ ಬೆಲೆ 25 ಪೈಸೆ ಏರಿಕೆಯಾಗಿದೆ.

ಕಚ್ಚಾತೈಲ ಆಮದು ರದ್ದು ಪರಿಣಾಮ

ಇರಾನ್ ನಿಂದ ಕಚ್ಚಾತೈಲದ ಆಮದು ಮೇಲೆ ಮೇ ಒಂದರ ನಂತರ ವಿನಾಯಿತಿ ನೀಡದಿರಲು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದಾರೆ. ಯುಎಸ್ ನ ಈ ನಿರ್ಧಾರದಿಂದ ಭಾರತ ಮತ್ತು ಚೀನಾದ ಮೇಲೆ ಅತೀವ ಪರಿಣಾಮ ಬೀಳಲಿದೆ. ಈ ನಡೆಯಿಂದ ಕಚ್ಚಾ ತೈಲ ಬೆಲೆ ಏರಲಿದೆ. .

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಒಂದು ಬ್ಯಾರೆಲ್ ಗೆ 72 ಡಾಲರ್ ಗಳಾಗಿವೆ. ಇರಾನ್ ನಂದ ತೈಲ ಸರಬರಾಜು ಸ್ಥಗಿತಗೊಂಡರೆ ಮೇ 2 ರ ನಂತರ ಕಚ್ಚಾತೈಲ ಬೆಲೆಗಳು ಏರಬಹುದೆಂದು ತಜ್ಞರು ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ಸಮಸ್ಯೆಗಳು ಹೆಚ್ಚಾಗಲಿದ್ದು, ಪೆಟ್ರೋಲ್ ಡೀಸೆಲ್ ದುಬಾರಿಯಾಗಲಿವೆ. ಅಲ್ಲದೆ, ಹಣದುಬ್ಬರವನ್ನು ಹೆಚ್ಚಿಸುವುದು ಏರಿಕೆಯಾಗಿ, ಇದು ದೇಶದ ಆರ್ಥಿಕ ಬೆಳವಣಿಗೆಯ ಮೇಲೆ ನಕಾರಾತ್ಮಕ ಪ್ರಭಾವವನ್ನು ಬೀರುವ ಸಾಧ್ಯತೆ ಇದೆ. ಏಪ್ರಿಲ್ 1 ರಿಂದ ಪ್ರಮುಖ 6 ಬದಲಾವಣೆಗಳು ಆಗಲಿವೆ, ಸಿದ್ದರಾಗಿ..

Read more about: money business sbi lpg
English summary

Major changes from May 1: Here are the list

1st may 2019 changes lpg gas cylinder, state bank of india onlinesbi, punjab national bank pnbindia,railway.
Story first published: Thursday, May 2, 2019, 12:47 [IST]
Company Search
Enter the first few characters of the company's name or the NSE symbol or BSE code and click 'Go'
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more