For Quick Alerts
ALLOW NOTIFICATIONS  
For Daily Alerts

ಗೋಲ್ಡನ್ ಗ್ಲೋಬ್ ಟೈಗರ್ಸ್ ಪ್ರಶಸ್ತಿ 2019: ಜಿಯೋಗೆ ಸಂದಿದೆ 3 ಗೌರವ

|

ಈ ಪ್ರಶಸ್ತಿಗಳು ಜಿಯೊ ಮಾರುಕಟ್ಟೆ ನಾಯಕತ್ವಕ್ಕೆ; ಜಿಯೋ ಫೋನ್ - ಭಾರತ ಸ್ಮಾರ್ಟ್ಫೋನ್; ಮತ್ತು ಹೊಸ ಸಂವಾದಾತ್ಮಕ ಗೇಮಿಂಗ್ ಪ್ಲಾಟ್ಫಾರ್ಮ್ ಜಿಯೊ ಕ್ರಿಕೆಟ್ ಪ್ಲೇ ಅಲಾಂಗ್ಗೆ ಲಭ್ಯವಾಗಿದೆ.

ಡಿಜಿಟಲ್ ಸೇವೆಗಳನ್ನು ನೀಡುತ್ತಿರುವ ಜಿಯೋ ಬ್ರಾಂಡ್ ಎಲ್ಲರನ್ನು ಮತ್ತು ಎಲ್ಲವನ್ನು ಸಂಪರ್ಕಿಸಸುವ ಯೋಜನೆಯನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಟೈಗರ್ ಪ್ರಶಸ್ತಿಯಲ್ಲಿ ಮೂರು ಅಗ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಭಾರತೀಯರಿಗೆ ಡಿಜಿಟಲ್ ಜೀವನದ ಅನನ್ಯ ಮತ್ತು ಅರ್ಥಪೂರ್ಣ ಲಾಭಗಳನ್ನು ತಲುಪಿಸುವಲ್ಲಿ ಜಿಯೋ ಮತ್ತು ಅದರ ಪ್ರವರ್ತಕಗಳು ಮಾಡುತ್ತಿರುವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ('ಜಿಯೋ') ವಿಶ್ವದ ಅತಿದೊಡ್ಡ ಮೊಬೈಲ್ ಡಾಟಾ ನೆಟ್‌ವರ್ಕ್‌ ಆಗಿದ್ದು ಸುಮಾರು 300 ದಶಲಕ್ಷ ಭಾರತೀಯರನ್ನು ಸಂಪರ್ಕಿಸುತ್ತಿದೆ, ಈ ಹಿನ್ನಲೆಯಲ್ಲಿ 'ಮಾರುಕಟ್ಟೆ ನಾಯಕತ್ವ ಪ್ರಶಸ್ತಿ'ಯನ್ನು ಪಡೆದುಕೊಂಡಿದೆ. ಜಿಯೋ 4G LTE ತಂತ್ರಜ್ಞಾನದೊಂದಿಗೆ ಜಾಗತಿಕ ದರ್ಜೆಯ ಆಲ್-ಐಪಿ ಡೇಟಾ ನೆಟ್ವರ್ಕ್ ನೀಡುತ್ತಿದೆ. ಜಿಯೋ ಇಂದು ವಿಶ್ವದ ಅತಿದೊಡ್ಡ ಮೊಬೈಲ್ ಡೇಟಾ ನೆಟ್ವರ್ಕ್ ಮತ್ತು ಭಾರತದ ಅತಿದೊಡ್ಡ ವೈರ್ಲೆಸ್ ಬ್ರಾಡ್ಬ್ಯಾಂಡ್ ಸೇವೆಯನ್ನು ನೀಡುತ್ತಿರುವ ಕಂಪನಿಯಾಗಿದೆ. ರಿಲಯನ್ಸ್ ಜಿಯೋ ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಮುಂಚೂಣಿಯಲ್ಲಿದ್ದು, ಭಾರತೀಯ ಡಿಜಿಟಲ್ ಸೇವೆಗಳಲ್ಲಿ ರೂಪಾಂತರದ ಬದಲಾವಣೆಗೆ ಕಾರಣವಾಗಿದೆ ಮತ್ತು ಭಾರತವನ್ನು ಡಿಜಿಟಲ್ ಅರ್ಥವ್ಯವಸ್ಥೆಯಲ್ಲಿ ಜಾಗತಿಕ ನಾಯಕತ್ವವನ್ನು ದೊರೆಯುವಂತೆ ಮಾಡಿದೆ.

ಗೋಲ್ಡನ್ ಗ್ಲೋಬ್ ಟೈಗರ್ಸ್ ಪ್ರಶಸ್ತಿ 2019: ಜಿಯೋಗೆ ಸಂದಿದೆ 3 ಗೌರವ

 

ಅತ್ಯುತ್ತಮ ಕ್ಯಾಂಪೇನ್ - ಆಡ್ವರ್ಟೈಸಿಂಗ್ ಇನ್ ಮೊಬೈಲ್ ಗೇಮಿಂಗ್ ಎನ್ವಿರಾನ್ಮೆಂಟ್ ಪ್ರಶಸ್ತಿಯನ್ನು ಜಿಯೊ ಕ್ರಿಕೆಟ್ ಪ್ಲೇ ಅಲಾಂಗ್ (ಜೆಸಿಪಿಎ) ಪಡೆದುಕೊಂಡಿದೆ. ದೇಶದಲ್ಲಿ ಹೆಚ್ಚು ಜನಪ್ರಿಯ ಕ್ರೀಡಾಕೂಟವನ್ನು ಆಚರಿಸಲು ಜನರನ್ನು ಒಂದೆಡೆ ಸೇರಿಸಿದ ಕಾರಣಕ್ಕೆ ಈ ಪ್ರಶಸ್ತಿ ದೊರೆತಿದೆ. ಅಪರಿಚಿತರನ್ನು ಒಂದು ಮಾಡುವ ಮೂಲಕ, ಭಾರತೀಯರನ್ನು ಇನ್ನಷ್ಟು ಕ್ರಿಕೆಟ್‌ಗೆ ಹತ್ತಿರ ತರುವ ಮತ್ತು ಅವರ ನೆಚ್ಚಿನ ತಂಡಗಳು ಮತ್ತು ಆಟಗಾರರೊಂದಿಗೆ ಸಮಯ ಕಳೆಯುವ ಅವಕಾಶವನ್ನು ಇದು ಮಾಡಿಕೊಟ್ಟಿತ್ತು.

ಬಳಕೆದಾರರು ಟಿವಿಯಲ್ಲಿ ಕ್ರಿಕೆಟ್ ನೋಡುವುದರ ಜೊತೆಗೆ ತಮ್ಮ ಮೊಬೈಲ್ನಲ್ಲಿ ಜಿಯೋ ಕ್ರಿಕೆಟ್ ಪ್ಲೇ ಆಡಬಹುದಾಗಿತ್ತು. ಈ ಪರಿಕಲ್ಪನೆಯು ವೀಕ್ಷಕರಿಗೆ ತಮ್ಮ ನೆಚ್ಚಿನ ತಂಡದ ಆಟವನ್ನು ನೋಡುವುದು ಮಾತ್ರವಲ್ಲದೇ ತಾವು ಆ ಆಟದಲ್ಲಿ ಭಾಗಿಯಾಗುವಂತೆ ಮಾಡಲು ಯಶಸ್ವಿಯಾಗಿತ್ತು. ಇದು ನೇರ ಪಂದ್ಯದ ಫಲಿತಾಂಶವನ್ನು ಊಹಿಸುವ ಅವಕಾಶವನ್ನು ಮಾಡಿಕೊಟ್ಟಿತ್ತು. ಜಿಯೋ ಮತ್ತು ಜಿಯೋ ಬಳಸದ ಚಂದಾದಾರರಿಗೂ ಈ ಆಟವು ಲಭ್ಯವಿದೆ.

ಬೆಸ್ಟ್‌ ಮೊಬೈಲ್ ಸ್ಟ್ರಾಟಜಿ ಪ್ರಶಸ್ತಿಗೆ ಭಾರತದ ಮೊಬೈಲ್ ಜಗತ್ತಿನಲ್ಲಿ ಹೊಸ ಚಾಪು ಮೂಡಿಸಿದ ಭಾರತದ ಸ್ಮಾರ್ಟ್ಫೋನ್ 'ಜಿಯೋಫೋನ್' ಪಾತ್ರವಾಗಿದೆ . ಡಿಜಿಟಲ್ ಸೇವೆಗಳ ಶಕ್ತಿಯನ್ನು ಪ್ರತಿ ಭಾರತೀಯರಿಗೆ ವರ್ಗಾಹಿಸುವ ಉದ್ದೇಶದಿಂದ ಜಿಯೋಫೋನ್ ಅನ್ನು ಪ್ರಾರಂಭಿಸಲಾಯಿತು, ಅದರಲ್ಲೂ ವಿಶೇಷವಾಗಿ ಸ್ಮಾರ್ಟ್ ಫೋನ್ ಖರೀದಿಸಲು ಸಾಧ್ಯವಾಗದವರಿಗೆ ಜಿಯೋ ಪೋನ್ ವರದಾನವಾಯಿತು. ಇದರಿಂದಾಗಿ ಭಾರತದಲ್ಲಿದ್ದ ಲಕ್ಷಾಂತರ ಫೀಚರ್ ಫೋನ್ ಬಳಕೆದಾರರು ಜಿಯೋ ಡಿಜಿಟಲ್ ಲೈಫ್ಗೆ ಪರಿವರ್ತನೆ ಹೊಂದಿ, ಡೇಟಾ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಜಿಯೋಫೋನ್ ಒಂದು ಸಮೃದ್ಧ ಡಿಜಿಟಲ್ ಲೈಫ್ ಪರಿಸರ ವ್ಯವಸ್ಥೆಯನ್ನು ನೀಡುವ ಮೂಲಕ ಬಳಕೆದಾರರಿಗೆ ಹೆಚ್ಚಿನ ಸ್ವಾತಂತ್ರ ನೀಡಿತು.

ಈ ವರ್ಷ ಪ್ರಮುಖ ಜಾಗತಿಕ ಬ್ರಾಂಡ್‌ಗಳು ಪ್ರಶಸ್ತಿ ಸ್ಪರ್ಧೆಯಲ್ಲಿದ್ದವು, ಆದರೂ ಈ ಮೂರು ವಿಭಾಗಗಳಲ್ಲಿ ಜಿಯೋ ಗೌರವವನ್ನು ಪಡೆದುಕೊಂಡಿದೆ. ಮಲೇಶಿಯಾದ ಕೌಲಾಲಂಪುರ್ ಆಯೋಜಿಸಲಾದ ವಿಶೇಷ ಸಂಜೆ ಕಾರ್ಯಕ್ರಮದಲ್ಲಿ ಗೋಲ್ಡನ್ ಗ್ಲೋಬ್ ಟೈಗರ್ ಪ್ರಶಸ್ತಿಗಳು 2019 ಅನ್ನು ವಿಜೇತರಿಗೆ ನೀಡಲಾಯಿತು.

 

ಗೋಲ್ಡನ್ ಗ್ಲೋಬ್ ಟೈಗರ್ಸ್ ಪ್ರಶಸ್ತಿಗಳು ಮಾರ್ಕೆಟಿಂಗ್, ಬ್ರ್ಯಾಂಡಿಂಗ್ ಸಿಎಸ್ಆರ್ ಮತ್ತು ಸಾಮಾಜಿಕ ನಾವೀನ್ಯತೆ, ಶಿಕ್ಷಣ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಇರುವ ವ್ಯಕ್ತಿಗಳು ಮತ್ತು ಸಂಘಟನೆಗಳ ನಡುವೆ "ಟೈಗರ್ಸ್" ಅನ್ನು ಗುರುತಿಸುವ ಗುರಿ ಹೊಂದಿದೆ ಗೋಲ್ಡನ್ ಗ್ಲೋಬ್ ಟೈಗರ್ಸ್ ಪ್ರಶಸ್ತಿಗಳು ಮಲ್ಟಿಫಂಕ್ಷನಲ್ ಆಗಿದೆ, ವಿಭಾಗಗಳು ಮತ್ತು ಕೈಗಾರಿಕಾ ಕೇಂದ್ರೀಕೃತವಾಗಿದೆ.

English summary

Reliance Jio wins 3 awards at Golden Globe Tigers Award 2019

India’s leading company Reliance Jio on Tuesday Jio has won 3 awards at Golden Globe Tigers Award 2019. Reliance Jio Infocomm Ltd. (‘Jio’) was conferred the Market Leadership Award for connecting over 300 million Indians on the world’s largest mobile data network.
Story first published: Tuesday, May 7, 2019, 17:43 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more