For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಪಾಲಾದ 250ವರ್ಷಗಳ ಇತಿಹಾಸವುಳ್ಳ ಆಟಿಕೆ ಕಂಪನಿ ಹ್ಯಾಮ್ಲೀಸ್

|

ರಿಲಯನ್ಸ್ ಇಂಡಸ್ಟ್ರಿಸ್ ಅಂಗಸಂಸ್ಥೆಯಾದ ರಿಲಯನ್ಸ್ ಬ್ರಾಂಡ್ಸ್ ಲಿಮಿಟೆಡ್, ಹಾಂಗ್ ಕಾಂಗ್ ನಲ್ಲಿರುವ ಸಿ ಬ್ಯಾನರ್ ಇಂಟರ್ನ್ಯಾಷನಲ್ ಹೋಲ್ಡಿಂಗ್ಸ್ ಒಡೆತನದ ಹ್ಯಾಮ್ಲೀಸ್ ಬ್ರ್ಯಾಂಡ್‌ನ ಹ್ಯಾಮ್ಲೀಸ್ ಗ್ಲೋಬಲ್ ಹೋಲ್ಡಿಂಗ್ಸ್ ಲಿಮಿಟೆಡ್‌ನ 100% ಷೇರುಗಳನ್ನು ಸ್ವಾಧೀನಪಡಿಸಿಕೊಂಡಿದೆ. ಈ ಒಪ್ಪಂದಕ್ಕೆ ರಿಲಯನ್ಸ್ ಬ್ರಾಂಡ್ ಮತ್ತು ಸಿ ಬ್ಯಾನರ್ ಇಂಟರ್ನ್ಯಾಷನಲ್ ಸಹಿ ಹಾಕಿದೆ.

1760 ರಲ್ಲಿ ಸ್ಥಾಪಿತವಾದ ಹ್ಯಾಮ್ಲೀಸ್ ಪ್ರಪಂಚದಲ್ಲೇ ಅತಿ ಹಳೆಯ ಮತ್ತು ಅತಿದೊಡ್ಡ ಆಟಿಕೆ ಅಂಗಡಿ ಆಗಿದ್ದು, ಸುಮಾರು 250 ವರ್ಷಗಳ ಇತಿಹಾಸವನ್ನು ಹೊಂದಿದೆ ಮತ್ತು ಆಟಿಕೆಗಳಿಗೆ ಜೀವ ತರುವ ಮೂಲಕ ಪ್ರಪಂಚದಾದ್ಯಂತದ ಮಕ್ಕಳ ನಗುವಿಗೆ ಕಾರಣವಾಗಿದೆ.

ನಾಟಕ, ಮನರಂಜನೆ ಮತ್ತು ಅದರ ಚಿಲ್ಲರೆ ಅನುಭವದೊಂದಿಗೆ ಗುಣಮಟ್ಟ ಮತ್ತು ವ್ಯಾಪಕ ಶ್ರೇಣಿಯ ಗೊಂಬೆಗಳ ಒಂದು ಅನನ್ಯ ಮಾದರಿಯನ್ನು ಹ್ಯಾಮ್ಲೀಸ್ ನಲ್ಲಿ ಕಾಣಬಹುದಾಗಿದೆ. ಜಾಗತಿಕವಾಗಿ, ಹ್ಯಾಮ್ಲೀಸ್ 18 ದೇಶಗಳಲ್ಲಿ 167 ಮಳಿಗೆಗಳನ್ನು ಹೊಂದಿದೆ.

ರಿಲಯನ್ಸ್ ಪಾಲಾದ 250ವರ್ಷಗಳ ಇತಿಹಾಸವುಳ್ಳ ಆಟಿಕೆ ಕಂಪನಿ ಹ್ಯಾಮ್ಲೀಸ್

 

ಭಾರತದಲ್ಲಿ, ರಿಲಯನ್ಸ್ ಹ್ಯಾಮ್ಲೀಸ್ಗೆ ಮಾಸ್ಟರ್ ಫ್ರಾಂಚೈಸ್ ಹೊಂದಿದೆ ಮತ್ತು ಪ್ರಸ್ತುತ 29 ನಗರಗಳಲ್ಲಿ 88 ಮಳಿಗೆಗಳನ್ನು ಹೊಂದಿದೆ. ಈ ಸ್ವಾಧೀನತೆಯು ಜಾಗತಿಕ ಆಟಿಕೆ ಚಿಲ್ಲರೆ ಉದ್ಯಮದಲ್ಲಿ ರಿಲಯನ್ಸ್ ಬ್ರಾಂಡ್ಸ್ ಗೆ ಹೊಸ ಗುರುತು ನೀಡಲಿದೆ. ಈ ಒಪ್ಪಂದದ ಕುರಿತು ಮಾತನಾಡಿದ ರಿಲಯನ್ಸ್ ಬ್ರಾಂಡ್ಸ್ ಅಧ್ಯಕ್ಷ ಮತ್ತು ಸಿಇಒ ದರ್ಶನ್ ಮೆಹ್ತಾ,

"ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಹ್ಯಾಮ್ಲೀಸ್ ಬ್ರ್ಯಾಂಡ್ ನಡಿಯಲ್ಲಿ ಆಟಿಕೆ ಚಿಲ್ಲರೆ ಮಾರಾಟದಲ್ಲಿ ನಾವು ಒಂದು ಗಮನಾರ್ಹವಾದ ಮತ್ತು ಲಾಭದಾಯಕ ವ್ಯಾಪಾರವನ್ನು ನಿರ್ಮಿಸಿದ್ದೇವೆ. ಈ 250 ವರ್ಷದ ಇತಿಹಾಸವಿರುವ ಲಂಡನ್ ಖ್ಯಾತಿಯ ಆಟಿಕೆ ಕಂಪನಿಯು ಚಿಲ್ಲರೆ ವ್ಯಾಪಾರದ ಪರಿಕಲ್ಪನೆಯನ್ನು ಪ್ರಾರಂಭಿಸಿ ದಶಕಗಳ ಹಿಂದಿನಿಂದಲೂ ಹೊಸ ಪರಿಕಲ್ಪನೆಯನ್ನು ಸೃಷ್ಠಿಸುತ್ತಿದೆ ಮತ್ತು ಹೊಸ ಜಾಗತಿಕ ಕಲ್ಪನೆಯನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಜಾಗತಿಕ ಚಿಲ್ಲರೆ ವ್ಯಾಪಾರದ ಮುಂಚೂಣಿಯಲ್ಲಿ ರಿಲಯನ್ಸ್, ಹ್ಯಾಮ್ಲೀಸ್ ಬ್ರಾಂಡ್ ಮತ್ತು ವ್ಯವಹಾರದ ವಿಶ್ವಾದ್ಯಂತ ಸ್ವಾಧೀನಪಡಿಸಿಕೊಂಡಿದೆ" ಎಂದಿದ್ದಾರೆ.

ರಿಲಯನ್ಸ್ ಪಾಲಾದ 250ವರ್ಷಗಳ ಇತಿಹಾಸವುಳ್ಳ ಆಟಿಕೆ ಕಂಪನಿ ಹ್ಯಾಮ್ಲೀಸ್

ಹ್ಯಾಮ್ಲೀಸ್ 1881 ರಲ್ಲಿ ಲಂಡನ್ ಪ್ರಮುಖ ರೆಜೆಂಟ್ ಸ್ಟ್ರೀಟ್‌ನಲ್ಲಿ ಮೊದಲ ಅಂಗಡಿಯ ತೆರೆಯಿತು. ಈ ಅಂಗಡಿಯು 54,000 ಚದರ ಅಡಿ, ಏಳು ಮಹಡಿಗಳನ್ನು ಹೊಂದಿದ್ದು, 50,000 ಕ್ಕಿಂತಲೂ ಹೆಚ್ಚಿನ ಆಟಿಕೆಗಳು ಇಲ್ಲಿ ಮಾರಾಟಕ್ಕಿದೆ. ಇದು ಲಂಡನ್ನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ, ಪ್ರತಿವರ್ಷ 5 ದಶಲಕ್ಷ ಪ್ರವಾಸಿಗರು ಈ ಅಂಗಡಿಗೆ ಬರುತ್ತಾರೆ. ಇಲ್ಲಿ ಪ್ರಪಂಚದಾದ್ಯಂತವಿರುವ ಮಕ್ಕಳು ಮತ್ತು ಹದಿಹರೆಯದವರಿಗಾಗಿ ವರ್ಷಪೂರ್ತಿ ಈವೆಂಟ್ಗಳು, ಮೆರವಣಿಗೆಗಳು, ಪ್ರದರ್ಶನಗಳು ಇರುತ್ತದೆ.

English summary

Reliance acquire 250 year British toy-retailer Hamleys

Reliance Brands Limited Marks Its International Foray With Acquisition Of British Toy Retailer Hamleys.
Story first published: Friday, May 10, 2019, 17:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more