For Quick Alerts
ALLOW NOTIFICATIONS  
For Daily Alerts

‘ಜಿಯೋ-ಒನ್‌ಪ್ಲಸ್ 7 ಸೀರಿಸ್ ಆಫರ್: ರೂ.9,300 ರಷ್ಟು ಲಾಭ

|

ಪ್ರಮುಖ ಪ್ರೀಮಿಯಂ ಸ್ಮಾರ್ಟ್‌ಫೋನ್ ತಯಾರಕ ಕಂಪನಿಯಾದ ಒನ್‌ಪ್ಲಸ್, ಪ್ರಪಂಚದ ಅತಿದೊಡ್ಡ ಮೊಬೈಲ್ ಡಾಟಾ ನೆಟ್‌ವರ್ಕ್‌ ಜಿಯೋ ಜೊತೆಗಿನ ಸಹಯೋಗವನ್ನು ಮುಂದುವರೆಸಿದ್ದು, ಒಂದು ವಿಸ್ತೃತ ಡಿಜಿಟಲ್ ಅನುಭವವನ್ನು ಮಿತಿಯಿಲ್ಲದ ವೇಗ ಡೇಟಾದೊಂದಿಗೆ ಒನ್‌ಪ್ಲಸ್ ಮತ್ತು ಜಿಯೋ ಬಳಕೆದಾರರಿಗೆ ಗ್ರಾಹಕ-ಸ್ನೇಹಿ ಕೊಡುಗೆಯೊಂದನ್ನು ನೀಡುತ್ತಿದೆ.

ಒನ್‌ಪ್ಲಸ್‌ 7 ಸರಣಿಯ ಸ್ಮಾರ್ಟ್‌ಫೋನ್ ಬಿಡುಗಡೆಯ ಸಂದರ್ಭದಲ್ಲಿ ತನ್ನ ಗ್ರಾಹಕರು ಒಂದು ಅನನ್ಯ ಆಫರ್ ನೀಡುವ ಸಲುವಾಗಿ 'ಜಿಯೋ-ಒನ್‌ಪ್ಲಸ್ 7 ಸೀರಿಸ್ ಬಿಯಾಂಡ್ ಸ್ವೀಡ್ ಆಫರ್' ಅನ್ನು ತಲುಪಿಸಲು ಮುಂದಾಗಿದೆ. ಒನ್‌ಪ್ಲಸ್ 7, ಒನ್‌ಪ್ಲಸ್ 7 ಪ್ರೋ ಮತ್ತು ಜಿಯೋ ಬಳಕೆದಾರಿಗೆ ಈ ಆಫರ್ ದೊರೆಯಲಿದೆ.

ಬೆಂಗಳೂರಲ್ಲಿ ಮೇ 15ರಿಂದ ಒನ್‍ಪ್ಲಸ್ 7 ಪ್ರೊ ಖರೀದಿಗೆ ಲಭ್ಯ

 

ಜೆಯೋ-ಒನ್‌ಪ್ಲಸ್ 7 ಸರಣಿ ಬಿಯಾಂಡ್ ಸ್ಪೀಡ್ ಆಫರ್:ಈ ಆಫರ್‌ನಲ್ಲಿ ಜಿಯೋ ಬಳಕೆದಾರರು ರೂ.299ಗೆ ಮೊದಲ ಪ್ರೀಪೇಯ್ಡ್‌ ರಿಚಾರ್ಜ್ ಮಾಡಿಸಿದರೆ ರೂ, 5,400 ತ್ವರಿತ ಕ್ಯಾಷ್‌ಬ್ಯಾಕ್ ದೊರೆಯಲಿದೆ. ಇದು ಮೈ ಜಿಯೋ ಆಪ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ರೂ.150 ಮೌಲ್ಯದ 36 ಕೂಪನ್‌ಗಳು ಬಳಕೆದಾರರಿಗೆ ದೊರೆಯಲಿದೆ. ಇದನ್ನು ಬಳಕೆದಾರರು ರೀಚಾರ್ಜ್ ಮಾಡಿಕೊಳ್ಳುವ ಸಂದರ್ಭದಲ್ಲಿ ಬಳಸಬಹುದಾಗಿದೆ.

ಈ ಆಫರ್ 28 ದಿನಗಳ ವ್ಯಾಲಿಡಿಟಿ

ಈ ಆಫರ್ 28 ದಿನಗಳ ವ್ಯಾಲಿಡಿಟಿ

ಇದರಿಂದಾಗಿ ಗ್ರಾಹಕರಿಗೆ ರೂ. 299 ಮೌಲ್ಯದ ರೀಚಾರ್ಜ್‌ ಕೇಲವ ರೂ.149ಕ್ಕೆ ದೊರೆಯಲಿದೆ. ಈ ಯೋಜನೆಯು 4G ವೇಗದ 3GB ಡೇಟಾವನ್ನು ಪ್ರತಿ ನಿತ್ಯ ನೀಡಲಿದ್ದು, ಈ ಆಫರ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರಲಿದೆ. ಅಲ್ಲದೇ ಅನಿಯಮಿತ ಕರೆಗಳು, ಎಸ್ಎಂಎಸ್ ಮತ್ತು ಜಿಯೋ ಟಿವಿ, ಜಿಯೋ ಸಿಮೆನಾ, ಜಿಯೋ ನ್ಯೂಸ್ ಮತ್ತು ಇತರಂತಹ ಜಿಯೋಗಳ ವಿಶೇಷ ಅಪ್ಲಿಕೇಶನ್‌ಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವ ಅವಕಾಶವು ದೊರೆಯಲಿದೆ.

ರೂ 3,900 ಮೌಲ್ಯದ ಹೆಚ್ಚುವರಿ ಪಾಲುದಾರ ಪ್ರಯೋಜನ

ರೂ 3,900 ಮೌಲ್ಯದ ಹೆಚ್ಚುವರಿ ಪಾಲುದಾರ ಪ್ರಯೋಜನ

ಈ ಆಫರ್ ನಲ್ಲಿ ರೂ. ರೂ 3,900 ಮೌಲ್ಯದ ಹೆಚ್ಚುವರಿ ಪಾಲುದಾರ ಪ್ರಯೋಜನಗಳು ದೊರೆಯಲಿದೆ. ಜೂಮ್‌ ಕಾರ್ ನಲ್ಲಿ ರೂ.2000 ಅಥವಾ 20% ವರೆಗೆ ಕಡಿತವನ್ನು, ಇಸಿ ಮೈಟ್ರಿಪ್ ನಲ್ಲಿ: ಫ್ಲೈಟ್ ಟಿಕೆಟ್ಗಳು, ಹೋಟೆಲ್ ಬುಕಿಂಗ್ ನಲ್ಲಿ ರೂ.1550 ಮತ್ತು ಬಸ್ ಬುಕಿಂಗ್ ನಲ್ಲಿ 15% ಕಡಿತವವನ್ನು ಮತ್ತು ಚಂಬಕ್ನಲ್ಲಿ ರೂ. 1699 ವೆಚ್ಚ ಮಾಡಿದರೆ ರೂ. 350 ರಷ್ಟು ಕಡಿತವನ್ನು ಪಡೆಯಬಹುದಾಗಿದೆ.

ಸ್ಪೀಡ್ ಆಫರ್ ಬಿಯಾಂಡ್ ಆಫರ್
 

ಸ್ಪೀಡ್ ಆಫರ್ ಬಿಯಾಂಡ್ ಆಫರ್

ಜಿಯೋ-ಒನ್‌ಪ್ಲಸ್ 7 ಸೀರಿಸ್ ಸ್ಪೀಡ್ ಆಫರ್ ಬಿಯಾಂಡ್ ಆಫರ್ ಮತ್ತು ಒನ್‌ಪ್ಲಸ್ 7 ಸರಣಿ ಸಾಧನಗಳು: ಜಿಯೋ ಬಿಯಾಂಡ್ ಸ್ಪೀಡ್ ಆಫರ್ ಪಡೆಯಲು ಈಗಾಗಲೇ ಜಿಯೋ ಬಳಸುತ್ತಿರುವ ಗ್ರಾಹಕರು ಮತ್ತು ಹೊಸ ಜಿಯೋ ಬಳಕೆದಾರರು ಒನ್‌ಪ್ಲಸ್ 7 ಮತ್ತು ಒನ್‌ಪ್ಲಸ್ 7 ಪ್ರೋ ಸ್ಮಾರ್ಟ್‌ಪೋನ್ ಅನ್ನು ಮೇ 19, 2019 ನಂತರ ಖರೀದಿಸಬೇಕಾಗಿದೆ.

ಖರೀದಿಸಿದ ನಂತರದಲ್ಲಿ ಈ ಯೋಜನೆಯ ಲಾಭವನ್ನು ಪಡೆಯಲು ಜಿಯೋ.ಕಾಂ, ರಿಲಯನ್ಸ್ ಡಿಜಿಟಲ್ ಅಂಗಡಿಗಳು, ಮೈಜಿಯೋ ಸ್ಟೋರ್ಸ್, ಜಿಯೋ ಚಿಲ್ಲರೆ ವ್ಯಾಪಾರಿಗಳು ಮತ್ತು ಮೈಜಿಯೊ ಅಪ್ಲಿಕೇಶನ್ನಲ್ಲಿ ರೂ.299ಕ್ಕೆ ಮೊದಲ ರೀಚಾರ್ಜ್ ಮಾಡಿಸಿಕೊಳ್ಳಬೇಕಾಗಿದೆ. ನಂತರ ವೋಚರ್ ಮೂಲಕ ರಿಚಾರ್ಜ್ ಮಾಡಿಕೊಳ್ಳಲು MyJio ಆಪ್ ಬಳಕೆ ಮಾಡಿಕೊಳ್ಳಬೇಕಾಗಿದೆ. ಇಲ್ಲಿ ಮಾತ್ರವೇ ಕ್ಯಾಷ್ ಬ್ಯಾಕ್ ಲಾಭ ದೊರೆಯಲಿದೆ.

ಪ್ರಪಂಚದ ಅತಿದೊಡ್ಡ ಮೊಬೈಲ್ ಡಾಟಾ ನೆಟ್‌ವರ್ಕ್‌

ಪ್ರಪಂಚದ ಅತಿದೊಡ್ಡ ಮೊಬೈಲ್ ಡಾಟಾ ನೆಟ್‌ವರ್ಕ್‌

ನೆಟ್ವರ್ಕ್ ಲಾಭ: ಪ್ರಪಂಚದ ಅತಿದೊಡ್ಡ ಮೊಬೈಲ್ ಡಾಟಾ ನೆಟ್‌ವರ್ಕ್‌ ಆದ ಜಿಯೋ, ಭಾರತ ಮತ್ತು ಭಾರತೀಯರಿಗೆ ಹೊಸ ಅವಕಾಶವನ್ನು ಮಾಡಿಕೊಟ್ಟಿದೆ. ಜಿಯೋ ಇಂದು ವಿಶ್ವದ ಅತಿ ದೊಡ್ಡ ಮೊಬೈಲ್ ಡಾಟಾ ನೆಟ್ವರ್ಕ್ ಆಗಿದ್ದು, ದೇಶದಲ್ಲಿ ವೇಗವಾಗಿ ನೆಟ್ವರ್ಕ್ ಅನ್ನು ನೀಡುವುದರಲ್ಲಿ ಮುಂಚುಣಿಯಲ್ಲಿದೆ. ಜಿಯೋ ಮುಂದುವರಿದ ತಂತ್ರಜ್ಞಾನದೊಂದಿಗೆ, ಹೆಚ್ಚಿನ ವೇಗ ಡೇಟಾ, ಉಚಿತ HD ಧ್ವನಿ ಮತ್ತು ಪ್ರೀಮಿಯಂ ಕಂಟೆಟ್‌ ಅನ್ನು ನೀಡುತ್ತಿದೆ.

ಒನ್‌ಪ್ಲಸ್ 7 ಮತ್ತು ಒನ್‌ಪ್ಲಸ್ 7 ಪ್ರೊ ಬಳಕೆದಾರರು ಮಿತಿಯಿಲ್ಲದ ವೇಗದೊಂದಿಗೆ - ವೇಗದ ಡೇಟಾ ಅನುಭವವನ್ನು ಅನುಭವಿಸಲು ಮತ್ತು ಸಾಧನದ ನಿಜವಾದ ಸಾಮರ್ಥ್ಯವನ್ನು ತಿಳಿಯಲು ಜಿಯೋ ಸಹಾಯ ಮಾಡಲಿದೆ. ಸರಿಸಾಟಿಯಿಲ್ಲದ ಅನುಭವವನ್ನು ಒದಗಿಸುವ ಪ್ಯಾನ್-ಇಂಡಿಯಾ 4 ಜಿ-ಡೇಟಾ ಮತ್ತು ಧ್ವನಿ ಸೇವೆಗಳು (VoLTE) ಹೊಂದಿರುವ ಏಕೈಕ ನೆಟ್ವರ್ಕ್ ಜಿಯೋ ಆಗಿದೆ.

English summary

Jio-OnePlus 7 Series Beyond Speed Offer’ to provide benefits worth Rs 9,300

The Jio-OnePlus 7 Series Beyond Speed Offer: This unique offer will provide an instant cashback of Rs 5,400 on the first prepaid recharge of Rs 299. Those availing the offer will get the cashback in the form of 36 vouchers worth Rs 150 each in MyJio app. Customers can redeem these vouchers on subsequent recharges of Rs 299 thereby availing the benefits of the plan at an effective price of Rs 149 only.
Story first published: Thursday, May 16, 2019, 12:46 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more