For Quick Alerts
ALLOW NOTIFICATIONS  
For Daily Alerts

ಅಮೆಜಾನ್ ಗುಡ್ ನ್ಯೂಸ್! ವಿದ್ಯಾರ್ಥಿಗಳು, ಗೃಹಿಣಿಯರು, ನಿವೃತ್ತ ವೃತ್ತಿಪರರಿಗೆ ಪಾರ್ಟ್ ಟೈಮ್ ಜಾಬ್

|

ಅಮೆಜಾನ್ ಸಂಸ್ಥೆ ದೇಶದ ವಿದ್ಯಾರ್ಥಿಗಳು, ಗೃಹಿಣಿಯರು ಮತ್ತು ನಿವೃತ್ತ ವೃತ್ತಿಪರರಿಗೆ ಪಾರ್ಟ್ ಟೈಮ್ ಉದ್ಯೋಗಗಳನ್ನು ನೀಡಲು ಸಿದ್ಧವಾಗಿದೆ.

ಹೌದು, ಇ-ಕಾಮರ್ಸ್ ಕ್ಷೇತ್ರದ ಅತ್ಯಂತ ಪ್ರಮುಖವಾದ ಭಾಗವೆಂದರೆ ತುಂಬಾ ವೇಗ ಮತ್ತು ವಿಶ್ವಾಸಾರ್ಹತೆ ಮೂಲಕ ಉತ್ಪನ್ನಗಳ ಸರಿಯಾದ ವಿಂಗಡಣೆಯನ್ನು ಮಾಡುವುದು.

ಉತ್ಪನ್ನಗಳ ವಿತರಣೆ
 

ಉತ್ಪನ್ನಗಳ ವಿತರಣೆ

ಅಮೆಜಾನ್ ಇಂಡಿಯಾ ಒಂದು ದಿನ, ಎರಡು ದಿನ ಮತ್ತು ಶೇಡ್ಯೂಲ್ಡ್ ಡೆಲಿವರಿ ಒಳಗೊಂಡಂತೆ ನಿರ್ಣಾಯಕ ಮತ್ತು ವೇಗವಾಗಿ ತಲುಪಿಸುವ ಹಲವಾರು ವಿಧಾನಗಳನ್ನು ಪರಿಚಯಿಸಿದೆ. ಕೆಲವು ಉತ್ಪನ್ನಗಳನ್ನು ಒಂದೇ ದಿನದಲ್ಲಿ ವಿತರಣೆ ಮತ್ತು ಕೆಲ ದಿನಸಿಗಳನ್ನು ಎರಡು ಗಂಟೆಯೊಳಗೆ ವಿತರಣೆ ಮಾಡುವ ಸೌಲಭ್ಯ ಒದಗಿಸುತ್ತದೆ.

ಪ್ರತಿ ಗಂಟೆಗೆ 120-140 ವರೆಗೆ ಗಳಿಸಿ

ಈಗ ಅಮೆಜಾನ್ ಫ್ಲೆಕ್ಸ್ ನೊಂದಿಗೆ ಸಾವಿರಾರು ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಅಮೆಜಾನ್ ಇಂಡಿಯಾ ಸಿದ್ದವಾಗಿದೆ. ಉದ್ಯೋಗಿಗಳಿಗೆ ತಮ್ಮ ಫ್ರೀ ಸಮಯದಲ್ಲಿ ಹೆಚ್ಚುವರಿ ಹಣವನ್ನು ಮಾಡುವ ಅವಕಾಶವನ್ನು ನೀಡುತ್ತದೆ. ವ್ಯಕ್ತಿಯು ದಿನಕ್ಕೆ ನಾಲ್ಕು ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಪ್ಯಾಕೇಜ್ ಗಳನ್ನು ತಲುಪಿಸುವವರಿಗೆ ಪ್ರತಿ ಗಂಟೆಗೆ ರೂ. 120-140 ವರೆಗೆ ಗಳಿಸಬಹುದು. ಪ್ರತಿ ಬುಧವಾರ ವಿತರಣೆ ಪಾಲುದಾರರಿಗೆ ಸಂಬಳ ಪಾವತಿಸಲಾಗುತ್ತದೆ. ಪ್ರತಿ ಗಮಟೆಗೆ 140ರಂತೆ ನಾಲ್ಕು ಗಂಟೆಗಳಿಗೆ 560 (140x4=560) ಗಳಿಸಬಹುದು. ಕೊನೆಪಕ್ಷ ಸರಾಸರಿ 500ರವರೆಗೆ ಆದಾಯ ಗಳಿಸಬಹುದು.

ಅಮೆಜಾನ್ ಫ್ಲೆಕ್ಸ್

ಅಮೆಜಾನ್ ಸಂಸ್ಥೆಯು ಅಮೆಜಾನ್ ಫ್ಲೆಕ್ಸ್ ಅನ್ನು ಪ್ರಾರಂಭಿಸಿದ ಏಳನೇ ದೇಶ ಭಾರತ. ಅಮೆಜಾನ್ ಫ್ಲೆಕ್ಸ್ ಉತ್ತರ ಅಮೆರಿಕಾ, ಜರ್ಮನಿ, ಸ್ಪೇನ್, ಜಪಾನ್, ಸಿಂಗಾಪುರ್ ಮತ್ತು ಯುಕೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ದೇಶಗಳಲ್ಲಿ ವಿತರಣಾ ಸಾಮರ್ಥ್ಯವನ್ನು ಮತ್ತು ಗ್ರಾಹಕರಿಗೆ ವಿತರಣಾ ಪ್ರಮಾಣವನ್ನು ಅಗಾಧವಾಗಿ ಹೆಚ್ಚಿಸಿದೆ.

ಅಮೆಜಾನ್ ನಿಂದ 7 ಲಕ್ಷ ರೂಪಾಯಿ
 

ಅಮೆಜಾನ್ ನಿಂದ 7 ಲಕ್ಷ ರೂಪಾಯಿ

ನೌಕರಿ ತೊರೆದು ಅಮೆಜಾನ್ ನಲ್ಲಿ ಡೆಲಿವರಿ ಸೇವೆ (Delivery Service ) ಶುರು ಮಾಡುವವರಿಗೆ ಆರ್ಥಿಕ ರೂಪದಲ್ಲಿ ಸಹಾಯ ಮಾಡಲಿದೆ. ಅಮೆಜಾನ್ ನೊಂದಿಗೆ ಕೈಜೋಡಿಸುವ ನೌಕರರಿಗೆ 7 ಲಕ್ಷ ರೂಪಾಯಿ ಹಾಗೂ ಇದರೊಂದಿಗೆ ಮೂರು ತಿಂಗಳ ಸಂಬಳವನ್ನು ಕೂಡ ಕಂಪನಿ ನೀಡಲಿದೆ. ಅಮೆಜಾನ್ ದೇಶದಾದ್ಯಂತ ಡೆಲಿವರಿ ಸೇವೆಯನ್ನು ಇನ್ನಷ್ಟು ಭದ್ರಗೊಳಿಸುವ ಉದ್ದೇಶ ಹೊಂದಿದೆ. ಇದಕ್ಕಾಗಿ ಕಂಪನಿ ಸುಂದರ ಒಂದು ಆಫರ್ ನೀಡಿದ್ದು, ನೌಕರಿ ಬಿಟ್ಟು ಡಿಲೆವರಿ ಸೇವೆ ಆರಂಭಿಸಿದರೆ ಹಣಕಾಸು ನೆರವು ನೀಡುವುದಾಗಿ ಕಂಪನಿ ಹೇಳಿದೆ. ನೌಕರಿ ಬಿಡಿ ಬಿಸಿನೆಸ್ ಶುರು ಮಾಡಿ ಎಂದಿದೆ

ಫುಲ್ ಟೈಂ, ಪಾರ್ಟ್ ಟೈಂ ಜಾಬ್

ಅಮೆಜಾನ್ ನಲ್ಲಿ ಕೆಲಸ ಮಾಡುವ ಫುಲ್ ಟೈಂ ಹಾಗೂ ಪಾರ್ಟ್ ಟೈಂ ಉದ್ಯೋಗಿಗಳಿಬ್ಬರೂ ಇದರ ಪ್ರಯೋಜನ ಪಡೆಯಬಹುದಾಗಿದೆ. ಅಮೆಜಾನ್ ಪ್ರೈಂ ಸದಸ್ಯರು ಸರಕು ಖರೀದಿ ಮಾಡಿದ ಎರಡನೇ ದಿನಕ್ಕೆ ಡಿಲೆವರಿ ಆಗುತ್ತಿತ್ತು. ಅದನ್ನು ಒಂದು ದಿನಕ್ಕೆ ಇಳಿಸುವ ಯೋಜನೆಯಲ್ಲಿದೆ.

ಈ ಕಂಪನಿಯೊಂದಿಗೆ ಬಿಸಿನೆಸ್ ಆರಂಭಿಸಿದರೆ 7 ಲಕ್ಷ ನೀಡಲಿದೆ

Read more about: amazon jobs money
English summary

Amazon plans to tap students, housewives to speed up deliveries

Amazon India is set to offer students, homemakers and retired professionals part-time jobs.
Company Search
Enter the first few characters of the company's name or the NSE symbol or BSE code and click 'Go'

Get Latest News alerts from Kannada Goodreturns

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more