For Quick Alerts
ALLOW NOTIFICATIONS  
For Daily Alerts

ಜೆಟ್ ಏರ್ ವೇಸ್ ಕಲ್ಲೋಲ; ಒಂದೇ ದಿನ ಷೇರು ಮೌಲ್ಯ ಶೇಕಡಾ 53ರಷ್ಟು ಕುಸಿತ

|

ಜೆಟ್ ಏರ್ ವೇಸ್ ವಿಮಾನ ಯಾನ ಕಂಪೆನಿಯ ಷೇರುಗಳು ಒಂದೇ ದಿನ ಶೇಕಡಾ 53ರಷ್ಟು ಕುಸಿತ ಕಂಡಿದೆ. ಏಪ್ರಿಲ್ 18ನೇ ತಾರೀಕಿನ ಮಂಗಳವಾರದಂದು ವಾರ್ಷಿಕ ಕನಿಷ್ಠ ಮಟ್ಟವಾದ 32.25 ರುಪಾಯಿಯನ್ನು ಈ ಷೇರು ತಲುಪಿತು. ಜೆಟ್ ಏರ್ ವೇಸ್ ನಿಂದ ಬರಬೇಕಾದ ಬಾಕಿ ಮೊತ್ತದ ವಸೂಲಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ದಿವಾಳಿ ಅರ್ಜಿ ಹಾಕಲಾಗಿದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಷೇರು ಮೌಲ್ಯ ನೆಲ ಕಚ್ಚಿದೆ.

ಕಳೆದ ಏಳು ದಿನದಲ್ಲಿ ಕಂಪೆನಿಯು ತನ್ನ ಶೇಕಡಾ 73ರಷ್ಟು ಮೌಲ್ಯವನ್ನು ಕಳೆದುಕೊಂಡಿದೆ. ಸಾಲ ನೀಡಿರುವ ಬ್ಯಾಂಕ್ ಗಳ ಒಕ್ಕೂಟದ ಪರವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಮುಂಬೈನಲ್ಲಿರುವ ನ್ಯಾಷನಲ್ ಕಂಪೆನಿ ಲಾ ಟ್ರಿಬ್ಯೂನಲ್ ಮೊರೆ ಹೋಗಿದೆ. ಜೆಟ್ ಏರ್ ವೇಸ್ ವಿರುದ್ಧ ದಿವಾಳಿ ಅರ್ಜಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಕಿದೆ.

 

ಜೆಟ್ ಏರ್ವೇಸ್ ಗೆ ಮತ್ತೆ ಆಘಾತ: ಮುಖ್ಯ ಹಣಕಾಸು ಅಧಿಕಾರಿ ರಾಜೀನಾಮೆ

ಇಪ್ಪತ್ತಾರು ಬ್ಯಾಂಕ್ ಗಳ ಒಕ್ಕೂಟವು ಸೋಮವಾರದಂದು ಈ ನಿರ್ಧಾರ ಕೈಗೊಂಡಿವೆ ಎಂದು ಎಸ್ ಬಿಐ ತಿಳಿಸಿದೆ. ದಿವಾಳಿ ಕಾನೂನಿನ ಅಡಿಯಲ್ಲಿ ಕೆಲವು ವಿನಾಯಿತಿಯನ್ನು 'ಸೆಬಿ'ಯಿಂದ ನೀಡಿದರೆ ಹೂಡಿಕೆದಾರರು ಜೆಟ್ ಏರ್ ವೇಸ್ ಖರೀದಿಗೆ ಮುಂದಾಗಬಹುದು ಎಂಬ ನಿರೀಕ್ಷೆ ಇದೆ. ಏಪ್ರಿಲ್ ಹದಿನೇಳನೇ ತಾರೀಕು ಜೆಟ್ ಏರ್ ವೇಸ್ ವಿಮಾನಗಳ ಹಾರಾಟ ನಿಲ್ಲಿಸಿದೆ. ಅದಾಗಿ ಎರಡು ತಿಂಗಳಿಗೆ ಈ ನಿರ್ಧಾರಕ್ಕೆ ಬರಲಾಗಿದೆ.

ಜೆಟ್ ಏರ್ ವೇಸ್ ಕಲ್ಲೋಲ; ಷೇರು ಮೌಲ್ಯ ಶೇಕಡಾ 53ರಷ್ಟು ಕುಸಿತ

ಎಥಿಹಾದ್- ಹಿಂದುಜಾ ಒಕ್ಕೂಟದಿಂದ ಜೆಟ್ ಏರ್ ವೇಸ್ ಖರೀದಿಗೆ ಆಸಕ್ತಿ ತೋರಿದರೂ ಗಟ್ಟಿಯಾದ ಪ್ರಸ್ತಾವವನ್ನು ಇನ್ನೂ ಮುಂದಿಟ್ಟಿಲ್ಲ. ಸಾಲ ನೀಡಿರುವವರಿಂದ ವಿನಾಯಿತಿಯನ್ನು ಕೇಳುತ್ತಿದ್ದಾರೆ. ಆಪರೇಷನಲ್ ಸಾಲಗಾರರ ಅಹವಾಲನ್ನು ಮೊದಲಿಗೆ ಟ್ರಿಬ್ಯೂನಲ್ ಜೂನ್ ಇಪ್ಪತ್ತರಂದು ಆಲಿಸಲಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಇಪ್ಪತ್ತಾರು ಬ್ಯಾಂಕ್ ಗಳ ಒಕ್ಕೂಟಕ್ಕೆ ಜೆಟ್ ಏರ್ ವೇಸ್ ಎಂಟು ಸಾವಿರ ಕೋಟಿ ರುಪಾಯಿ ಸಾಲ ನೀಡಬೇಕಾಗಿದೆ. ಅದರ ಒಟ್ಟಾರೆ ನಷ್ಟ ಹದಿಮೂರು ಸಾವಿರ ಕೋಟಿ, ಸಿಬ್ಬಂದಿ ವೇತನ ಮೂರು ಸಾವಿರ ಕೋಟಿ, ಇನ್ನು ಉಳಿದಂತೆ ಹತ್ತು ಸಾವಿರ ಕೋಟಿ ಬಾಕಿ ಉಳಿಸಿಕೊಂಡಿದೆ.

ಜೆಟ್ ಏರ್‌ವೇಸ್ ಷೇರು ಮಾರಾಟ: ಖರೀದಿಗೆ ಭಾರತೀಯರ ನಿರಾಸಕ್ತಿ

ಇಪ್ಪತ್ತೈದು ವರ್ಷಗಳ ಹಿಂದೆ ನರೇಶ್ ಗೋಯಲ್ ಅವರಿಂದ ಆರಂಭವಾದ ಅತಿ ದೊಡ್ಡ ಖಾಸಗಿ ಏರ್ ಲೈನ್ಸ್ ಜೆಟ್ ಏರ್ ಲೈನ್ಸ್. ಕಳೆದ ಏಪ್ರಿಲ್ ಹದಿನೇಳನೇ ತಾರೀಕು ನೂರಕ್ಕೂ ಹೆಚ್ಚು ವಿಮಾನಗಳ ಹಾರಾಟ ನಿಲ್ಲಿಸಿತು. ಮಂಗಳವಾರ ಮಧ್ಯಾಹ್ನ 3.15ರ ಹೊತ್ತಿಗೆ ಜೆಟ್ ಏರ್ ವೇಸ್ ಷೇರಿನ ಬೆಲೆ ನಿಫ್ಟಿ ಸೂಚ್ಯಂಕದಲ್ಲಿ ರು.40.30ರಲ್ಲಿ ವಹಿವಾಟು ಆಗುತ್ತಿತ್ತು.

English summary

Jet Airways share value plunged more than 50 percent in a single day

Jet Airways share value plunged more than 50 percent in a single day, that is on Monday. Media reported that, lenders of 26 banks led by State Bank Of India appealed National Company Law Tribunal for insolvency of airways company.
Story first published: Tuesday, June 18, 2019, 15:34 [IST]
Company Search
Enter the first few characters of the company's name or the NSE symbol or BSE code and click 'Go'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more