For Quick Alerts
ALLOW NOTIFICATIONS  
For Daily Alerts

ಪ್ರಮುಖ ಬ್ಯಾಂಕುಗಳಿಂದ ಠೇವಣಿ ಮೇಲಿನ ಬಡ್ಡಿದರ ಕಡಿತ

|

ಖಾಸಗಿ ವಲಯದ ಪ್ರಮುಖ ಬ್ಯಾಂಕುಗಳು ತಮ್ಮ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ. 0.25 ವರೆಗೆ ಕಡಿತ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಸಿಐಸಿಐ, ಬಂಧನ್ ಹಾಗೂ ಆಕ್ಸಿಸ್ ಬ್ಯಾಂಕ್ ಬಡ್ಡಿದರ ಕಡಿತದ ಮಹತ್ವದ ನಿರ್ಧಾರ ಕೈಗೊಂಡಿದ್ದು, ಬ್ಯಾಂಕುಗಳ ಈ ನಿರ್ಧಾರ ಗ್ರಾಹಕರ ಮೇಲೆ ನೇರ ಪರಿಣಾಮ ಬೀರಲಿದೆ.

ಪ್ರಮುಖ ಬ್ಯಾಂಕುಗಳಿಂದ ಠೇವಣಿ ಮೇಲಿನ ಬಡ್ಡಿದರ ಕಡಿತ

 

ಈ ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ ಹೊಂದಿರುವ ಗ್ರಾಹಕರಿಗೆ ಶೇ. 0.25ರಷ್ಟು ಕಡಿಮೆ ಲಾಭ ಸಿಗಲಿದೆ. ಈಗಾಗಲೇ ಎಫ್ಡಿ ಮಾಡಿರುವವರಿಗೆ ಇದ್ರಿಂದ ಯಾವುದೇ ನಷ್ಟವಾಗುವುದಿಲ್ಲ.

ಸೋಮವಾರದಿಂದ ಐಸಿಐಸಿಐ ಬ್ಯಾಂಕ್ ತನ್ನ ಸ್ಥಿರ ಠೇವಣಿಗಳ ಮೇಲೆ ಶೇ. 0.10-0.25 ರಷ್ಟು ದರ ಕಡಿತಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರಿಷ್ಕೃತ ದರಗಳ ಅಡಿಯಲ್ಲಿ ರೂ. 2 ಕೋಟಿಗಿಂತ ಕಡಿಮೆ ಇರುವ ದೇಶೀಯ ಠೇವಣಿಗಳ ಮೇಲೆ ಐಸಿಐಸಿಐ ಬ್ಯಾಂಕ್ 290 ದಿನಗಳಿಂದ ಒಂದು ವರ್ಷದ ಠೇವಣಿಗೆ ಶೇ. 6.75 ಮತ್ತು ಎರಡು ವರ್ಷದಿಂದ ಮೂರು ವರ್ಷದೊಳಗಿನ ಠೇವಣಿಗಳಿಗೆ ಶೇ. 7.30 ಬಡ್ಡಿ ಪಾವತಿಸಲಿದೆ.

ಐಸಿಐಸಿಐ ಸ್ಥಿರ ಠೇವಣಿ ಮೇಲೆ ಶೇಕಡಾ 0.10ರಿಂದ ಶೇ. 0.25ರಷ್ಟು ಬಡ್ಡಿ ದರವನ್ನು, ಆಕ್ಸಿಸ್ ಬ್ಯಾಂಕ್ ಶೇ. 0.15ರಷ್ಟು ಬಡ್ಡಿ ದರವನ್ನು ಇಳಿಕೆ ಮಾಡಿದೆ. ಬಂಧನ್ ಬ್ಯಾಂಕ್ ಸ್ಥಿರ ಠೇವಣಿ ಮೇಲೆ ಶೇ. 0.7ರಷ್ಟು ಬಡ್ಡಿ ದರ ಇಳಿಕೆ ಮಾಡಿದೆ. ಹೆಚ್ಡಿಎಫ್ಸಿ ಬ್ಯಾಂಕ್ ಕೂಡ ಠೇವಣಿ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡಿದೆ ಎನ್ನಲಾಗಿದೆ.

English summary

Private banks cut deposit interest rates by up to 0.25%

Top private sector lenders have cut their interest rates on deposits by up to 0.25 per cent over the last week, officials said Monday.
Story first published: Tuesday, June 18, 2019, 16:08 [IST]
Company Search
Enter the first few characters of the company's name or the NSE symbol or BSE code and click 'Go'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more