For Quick Alerts
ALLOW NOTIFICATIONS  
For Daily Alerts

ಬ್ಯಾಂಕುಗಳ ವಿಲೀನದಂತೆ ವಿಮಾ ಕಂಪನಿಗಳ ವಿಲೀನ ಸಾಧ್ಯವಾಗುವುದೆ?

|

ಕೇಂದ್ರ ಸರ್ಕಾರವು ಸರಕಾರಿ ಸ್ವಾಮ್ಯದ ಬ್ಯಾಂಕುಗಳ ವಿಲೀನದಂತೆಯೇ ವಿಮಾ ಕಂಪನಿಗಳ ವಿಲೀನಕ್ಕೆ ಮುಂದಾಗಿದೆ. ಬೃಹತ್ ಗಾತ್ರದ ವಿಮಾ ಕಂಪನಿಗಳನ್ನು ಚಿಕ್ಕ ಗಾತ್ರದ ಮೂರು ಕಂಪನಿಗಳಾಗಿ ವಿಭಾಗಿಸುವ ಆಯ್ಕೆಯನ್ನು ಪರಾಮರ್ಶಿಸುತ್ತಿದ್ದು, ಕೇಂದ್ರ ಸರ್ಕಾರಕ್ಕೆ ಕೆಲವು ಅಡ್ಡಿಗಳು ಎದುರಾಗಿವೆ.

ಬ್ಯಾಂಕುಗಳ ವಿಲೀನದಂತೆ ವಿಮಾ ಕಂಪನಿಗಳ ವಿಲೀನ ಸಾಧ್ಯವಾಗುವುದೆ?

 

ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ಮೂರು ಸರ್ಕಾರಿ ಸ್ವಾಮ್ಯದ ವಿಮಾ ಸಂಸ್ಥೆಗಳಾದ ನ್ಯಾಷನಲ್ ಇನ್ಶುರೆನ್ಸ್ ಕಂಪನಿ, ಓರಿಯಂಟಲ್ ಇನ್ಶುರೆನ್ಸ್ ಕಂಪನಿ ಮತ್ತು ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿಗಳನ್ನು ವಿಲೀನ ಮಾಡಲು ಹಣಕಾಸು ಸಚಿವಾಲಯ ಮುಂದಾಗಿತ್ತು.

ದೊಡ್ಡ ಕಂಪನಿಗಳನ್ನು ಚಿಕ್ಕ ಕಂಪನಿಗಳಾಗಿ ವಿಭಜಿಸಿ ಆ ಚಿಕ್ಕ ಘಟಕಗಳನ್ನು ಖಾಸಗಿ ವಲಯದ ಕಂಪನಿಗಳಿಗೆ ಮಾರಾಟ ಮಾಡುವ ಚಿಂತನೆ ಸರ್ಕಾರದ ಮುಂದಿದೆ. ಬಜೆಟ್‌ನಲ್ಲೂ ಈ ಬಗ್ಗೆ ಘೋಷಣೆ ಮಾಡಲಾಗಿತ್ತು, ಆದರೆ ಆಡಳಿತಾತ್ಮಕವಾಗಿ ಸಮಸ್ಯೆಗಳು ಎದುರಾಗಿದ್ದವು.

ಕಳೆದ ಎರಡು ವರ್ಷಗಳಿಂದ ಬಾಕಿ ಇರುವ ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳ ಷೇರು ಮಾರಾಟವನ್ನು ತ್ವರಿತಗತಿಯಲ್ಲಿ ನಡೆಸುವ ಆಲೋಚನೆ ಇದೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರಿ ಸ್ವಾಮ್ಯದ ಪ್ರಮುಖ ಮೂರು ಇನ್ಷೂರೆನ್ಸ್ ಕಂಪನಿಗಳಲ್ಲಿ ಎರಡು ಕಂಪನಿಗಳು ಭಾರೀ ನಷ್ಟದಲ್ಲಿವೆ. ಕಳೆದ ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಈ ಮೂರು ಕಂಪನಿಗಳ ಒಟ್ಟು ನಷ್ಟ ರೂ. 1,800 ಕೋಟಿ ದಾಟಿದೆ. ಕೆಲವು ಇನ್ಷೂರೆನ್ಸ್‌ ಕಂಪನಿಗಳು ಮಾರುಕಟ್ಟೆ ಪಾಲನ್ನೂ ಕಳೆದುಕೊಂಡಿದ್ದು, ಹೀಗಾಗಿ ವಿಭಜಿಸುವ ಯೋಜನೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ.

ಸರ್ಕಾರಿ ಸ್ವಾಮ್ಯದ ನಾಲ್ಕು ಪ್ರಮುಖ ಸಂಸ್ಥೆಗಳು ಒಳಗೊಂಡಂತೆ ಜನರಲ್‌ ಇನ್ಷೂರೆನ್ಸ್‌ ಮಾರುಕಟ್ಟೆಯಲ್ಲಿ 27 ಕಂಪನಿಗಳಿವೆ. 23 ಖಾಸಗಿ ಕಂಪನಿಗಳು, ಅದರಲ್ಲಿ 6 ಕಂಪನಿಗಳು ಆರೋಗ್ಯ ವಿಮೆಗೆ ಒತ್ತು ನೀಡಿವೆ.

Read more about: insurance money lic
English summary

government now looks to de-merge 3 PSU insurers then look for strategic sale

Government is exploring various consolidation options including merger of state-owned general insurance companies with New India Assurance with a view to create synergy and unlock value.
Story first published: Monday, June 24, 2019, 17:40 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more