For Quick Alerts
ALLOW NOTIFICATIONS  
For Daily Alerts

ಬಜೆಟ್ 2019: ನಿರ್ಮಲಾ ಸೀತಾರಾಮನ್ ಘೋಷಿಸಿರುವ ಜನಪ್ರಿಯ ಯೋಜನೆಗಳ ಸಂಪೂರ್ಣ ವಿವರ..

|

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎರಡನೇ ಅವಧಿಯ ಮೊದಲ ಬಜೆಟ್-2019 ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ.

ಎನ್ಡಿಎ ಸರ್ಕಾರ ಕಳೆದ ಅವಧಿಯಲ್ಲಿ ಎದುರಿಸಿದ್ದ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಿ ಕುಂಠಿತಗೊಂಡಿರುವ ಆರ್ಥಿಕತೆಯನ್ನು ಸಮತೋಲನಕ್ಕೆ ತರುವ ಮಹತ್ವದ ಜವಾಬ್ದಾರಿ ನಿರ್ಮಲಾ ಸೀತಾರಾಮನ್ ಮೇಲಿದೆ.

ಮೊದಲ ಬಾರಿ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿರುವ ಪ್ರಮುಖ ಜನಪ್ರಿಯ ಯೋಜನೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ನೋಡೋಣ ಬನ್ನಿ..

ದೇಶ ಮೊದಲು
 

ದೇಶ ಮೊದಲು

ದೇಶ ಪ್ರಜಾಪ್ರಭುತ್ವದ ಉತ್ಸವ ಆಚರಿಸುತ್ತಿದೆ. ಸದೃಢ ದೇಶಕ್ಕಾಗಿ ಸದೃಢ ನಾಗರಿಕರು. ಸದೃಢ ದೇಶಕ್ಕಾಗಿ ಸದೃಢ ನಾಗರೀಕರು ನಮ್ಮ ಸರ್ಕಾರದ ಧ್ಯೇಯವಾಗಿದೆ. ದೇಶ ಮೊದಲು ಮಂತ್ರದ ಮೂಲಕ ಸರ್ಕಾರದ ಯೋಜನೆ.

ಸರಳ ಪ್ರಕ್ರಿಯೆ

ಸರಳ ಪ್ರಕ್ರಿಯೆ

ಸರ್ಕಾರದ ಪ್ರಕ್ರಿಯೆಗಳನ್ನು ಸರಳಗೊಳಿಸುತ್ತೇವೆ. ಇದರ ಮೂಲಕ ಸರ್ಕಾರವು ಜನಸಾಮಾನ್ಯರಿಗೆ ಹತ್ತಿರವಾಗಲಿದೆ. ಜನರ ಭಾಗವಹಿಸುವಿಕೆಯೊಂದಿಗೆ ಟೀಮ್ ಇಂಡಿಯಾ ಬಲಗೊಳಿಸಲಾಗುವುದು.

೫ ಟ್ರಿಲಿಯನ್ ಆರ್ಥಿಕತೆ ಯೋಜನೆ

೫ ಟ್ರಿಲಿಯನ್ ಆರ್ಥಿಕತೆ ಯೋಜನೆ

ಭಾರತೀತ ಆರ್ಥಿಕತೆಯು ಶರವೇಗದಲ್ಲಿ ಬೆಳೆಯುತ್ತಿದ್ದು, ಐದು ವರ್ಷಗಳ ಹಿಂದೆ ಜಾಗತಿಕವಾಗಿ ಭಾರತದ ಆರ್ಥಿಕತೆ ೧೧ನೇ ಸ್ಥಾನದಲ್ಲಿತ್ತು. ಆದರೆ ಪ್ರಸ್ತುತ ೫ನೇ ಸ್ಥಾನದಲ್ಲಿದೆ. ಭಾರತವು ಪ್ರಸ್ತುತ ವರ್ಷದಲ್ಲಿಯೇ ೩ ಟ್ರಿಲಿಯನ್ ದೇಶವಾಗಲಿದೆ. ೫ ಟ್ರಿಲಿಯನ್ ಆರ್ಥಿಕತೆಗೆ ಯೋಜನೆ ರೂಪಿಸಲಾಗಿದೆ.

ಉಡಾನ್ ಯೋಜನೆ

ಉಡಾನ್ ಯೋಜನೆ

ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆ, ಇಂಡಸ್ಟ್ರಿಯಲ್‌ ಕಾರಿಡಾರ್‌, ಉಡಾನ್‌ ಸೇರಿದಂತೆ ರೈಲ್ವೆ ಸಂಪರ್ಕ ಕ್ರಾಂತಿ ಆರ್ಥಿಕತೆಗೆ ಉತ್ತೇಜ ನೀಡಿದೆ. ಮೂಲಸೌಕರ್ಯ, ಡಿಜಿಟಲೀಕರಣಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಉಡಾನ್‌ ಯೋಜನೆಯಿಂದ ಸಾಮಾನ್ಯರ ಬದುಕಿಗೆ ಆಶಾಕಿರಣ.

ಉಜ್ವಲ, ಮುದ್ರಾ ಯೋಜನೆ
 

ಉಜ್ವಲ, ಮುದ್ರಾ ಯೋಜನೆ

ಉಜ್ವಲ ಯೋಜನೆಯಿಂದ ಮಹಿಳೆಯರು ಹೊಗೆ ಮುಕ್ತರಾಗಿದ್ದಾರೆ. ಮುದ್ರಾ ಯೋಜನೆಯ ಫಲವಾಗಿ ಜನಸಾಮಾನ್ಯರ ಜೀವನದಲ್ಲಿ ಮಹತ್ತರ ಬದಲಾವಣೆಯಾಗಿದೆ.

ಮೆಟ್ರೋ ಯೋಜನೆ, ರಸ್ತೆಗಳ ಅಭಿವೃದ್ಧಿ

ಮೆಟ್ರೋ ಯೋಜನೆ, ರಸ್ತೆಗಳ ಅಭಿವೃದ್ಧಿ

ಸುಮಾರು 300 ಕಿ.ಮೀ ಮೆಟ್ರೋ ಯೋಜನೆಗೆ ಅನುಮೋದನೆ ಸಿಕ್ಕಿದೆ. ಭಾರತಮಾಲಾ , ಸಾಗರ್‌ ಮಾಲಾ ಯೋಜನೆಗಳ ಮೂಲ ರಸ್ತೆಗಳ ಅಭಿವೃದ್ಧಿ ನಡೆಯಲಿದೆ. ವಿಶೇಷ ಆರ್ಥಿಕ ವಲಯಗಳ ಮೂಲಕ ಅಂತರಾಷ್ಟ್ರೀಯ ಉದ್ಯಮದಾರಿಗೆ ಅವಕಾಶ. ಗಂಗಾನದಿಯಲ್ಲಿ ಒಳನಾಡು ಸಾರಿಗೆಗೆ ಆಧ್ಯತೆ ಮೂಲಕ ಜಲ ಮಾರ್ಗ ಯೋಜನೆಗೆ ಒತ್ತು ನೀಡಲಾಗುವುದು.

ಎಲೆಕ್ಟ್ರಾನಿಕ್ ವಾಹನಗಳಿಗೆ ಅನುದಾನ

ಎಲೆಕ್ಟ್ರಾನಿಕ್ ವಾಹನಗಳಿಗೆ ಅನುದಾನ

ಎಲೆಕ್ಟ್ರಾನಿಕ್ ವಾಹನಗಳ ತಯಾರಿಕೆಗೆ ಹಾಗು ಬಳಕೆಗೆ ಎಲ್ಲಾ ರೀತಿಯ ಸಹಕಾರ, ಸೌಲಭ್ಯ ನೀಡಲಾಗುವುದು. ಎಲೆಕ್ಟ್ರಿಕ್‌ ವಾಹನಗಳಿಗೆ ಪ್ರೋತ್ಸಾಹ ಧನ ಘೋಷಣೆ.

ಉದಯ್‌ ಯೋಜನೆ

ಉದಯ್‌ ಯೋಜನೆ

ಅಡುಗೆ ಅನಿಲ ಸಾಗಾಟ ಸೌಕರ್ಯಕ್ಕಾಗಿ ಉದಯ್‌ ಯೋಜನೆ ಘೋಷಣೆ. ಒಂದು ದೇಶ ಒಂದು ಗ್ರೀಡ್ ಯೋಜನೆ ಮೂಲಕ ಪ್ರತಿ ರಾಜ್ಯಗಳಿಗೂ ವಿದ್ಯುತ್ ನ್ನು ಸಮಾನವಾಗಿ ಹಂಚಿಕೆ ಮಾಡಲಾಗುವುದು.

ಕರ್ಮಯೋಗಿ ಮಾನ್‌ ಸಮ್ಮಾನ್ ಯೋಜನೆ

ಕರ್ಮಯೋಗಿ ಮಾನ್‌ ಸಮ್ಮಾನ್ ಯೋಜನೆ

ಕರ್ಮಯೋಗಿ ಮಾನ್‌ ಸಮ್ಮಾನ್ ಯೋಜನೆ ಮೂಲಕ ವ್ಯಾಪಾರಿಗಳಿಗೆ ನೆರವು ನೀಡಲಾಗುವುದು. 3 ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಪೆನ್ಷನ್ ಯೋಜನೆ ಜಾರಿ, ಇದಕ್ಕಾಗಿ ಕರ್ಮಯೋಗಿ ಮಾನ್‌ ಸಮ್ಮಾನ್ ಯೋಜನೆ.

ರೆಲ್ವೆ, ರಾಷ್ಟ್ರೀಯ ಹೆದ್ದಾರಿಗೆ ಅನುದಾನ

ರೆಲ್ವೆ, ರಾಷ್ಟ್ರೀಯ ಹೆದ್ದಾರಿಗೆ ಅನುದಾನ

ರೈಲು ಮೂಲಭೂತ ಸೌಕರ್ಯ ಅಭಿವೃದ್ಧಿಗೆ ರೂ. 50 ಕೋಟಿ ಅನುದಾನ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ರೂ. 26 ಸಾವಿರ ಕೋಟಿ ಅನುದಾನ ಬಿಡುಗಡೆ. ಸೌಕರ್ಯ ಕ್ಷೇತ್ರದಲ್ಲಿ ಎಫ್ಟಿಐ, ಎಫ್ಪಿಐ ಹೂಡಿಕೆಗೆ ಆಧ್ಯತೆ ನೀಡಲಾಗುವುದು. ಎನ್‌ಆರ್‌ ಐಗಳ ಹೂಡಿಕೆ ಹೆಚ್ಚಿಸಲು ಎಫ್ಪಿಐ ನೀತಿ ಏಕೀಕರಣ ಸಾಧ್ಯತೆ.

ಗಾಂವ್‌, ಕಿಸಾನ್‌, ಗರೀಬ್

ಗಾಂವ್‌, ಕಿಸಾನ್‌, ಗರೀಬ್

ಗ್ರಾಮ್ ಸ್ವರಾಜ್ ಕಲ್ಪನೆಯ ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಗಾಂವ್‌ (ಹಳ್ಳಿ), ಕಿಸಾನ್ (ರೈತ)‌, ಗರೀಬ್ (ಬಡವ)‌ ಕೇಂದ್ರದ ಯೋಜನೆಗಳ ಕೇಂದ್ರ ಬಿಂದುವಾಗಲಿದೆ.

ಸಣ್ಣ ಉದ್ಯೋಗಿಗಳಿಗೆ ಸಾಲ

ಸಣ್ಣ ಉದ್ಯೋಗಿಗಳಿಗೆ ಸಾಲ

ಸಣ್ಣ ಉದ್ಯೋಗಿಗಳಿಗೆ 59 ಸೆಕೆಂಡ್‌ಗಳಲ್ಲಿ ಸಾಲ ನೀಡುವ ವ್ಯವಸ್ಥೆ. ಪ್ರತಿಯೊಬ್ಬರಿಗೂ ಗೃಹ ನಿರ್ಮಾಣ. ವಿಮೆ ಕ್ಷೇತ್ರದಲ್ಲಿ ಶೇ. 100 ರಷ್ಟು FDI ಹೂಡಿಕೆಗೆ ಅನುಮತಿ.

ಸ್ಪೇಸ್‌ ಇಂಡಿಯಾ ಲಿಮಿಟೆಡ್‌

ಸ್ಪೇಸ್‌ ಇಂಡಿಯಾ ಲಿಮಿಟೆಡ್‌

ಬಾಹ್ಯಾಕಾಶದ ಕ್ಷೇತ್ರದಲ್ಲಿ ಭಾರತವು ದೊಡ್ಡ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಈ ಶಕ್ತಿಯನ್ನು ವಾಣಿಜ್ಜೀಕರಣವಾಗಿ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಹೊಸ ಸ್ಪೇಸ್‌ ಇಂಡಿಯಾ ಲಿಮಿಟೆಡ್‌ ನ್ನು ಸಾರ್ವಜನಿಕ ವಿಭಾಗದ ಸಂಸ್ಥೆಯನ್ನು ಸ್ಥಾಪಿಸಲಾಗುವುದು.

ಗ್ರಾಮೀಣ ಕುಟುಂಬಗಳಿಗೆ ಸೌಲಭ್ಯ

ಗ್ರಾಮೀಣ ಕುಟುಂಬಗಳಿಗೆ ಸೌಲಭ್ಯ

ಗ್ರಾಮೀಣ ಕುಟುಂಬಗಳಿಗೆ ಸೌಲಭ್ಯ

2022 ರ ವೇಳೆಗೆ ದೇಶದ ಪ್ರತಿ ಗ್ರಾಮೀಣ ಕುಟುಂಬಕ್ಕೂ ವಿದ್ಯುತ್‌ ಸೌಲಭ್ಯ. ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಡಿ 1.95 ಮನೆಗಳ ನಿರ್ಮಾಣಕ್ಕೆ ನಿರ್ಧಾರ ಕೈಗೊಳ್ಳಲಾಗಿದ್ದು, ಪ್ರತೀ ಮನೆಗೂ ಶೌಚಾಲಯ, ವಿದ್ಯುತ್‌ ಮತ್ತು ಎಲ್‌ಪಿಜಿ ಸೌಲಭ್ಯ ಒದಗಿಸಲಾಗುವುದು.

ಸರ್ವಋತು ಸಾರಿಗೆ ಸೌಲಭ್ಯ

ಸರ್ವಋತು ಸಾರಿಗೆ ಸೌಲಭ್ಯ

ಗ್ರಾಮಗಳಿಗೆ ಶೇ. 97 ರಷ್ಟು ಸರ್ವಋತು ಸಾರಿಗೆ ಸೌಲಭ್ಯ ಒದಗಿಸಲಾಗುವುದು. ಮುಂಬರುವ ಐದು ವರ್ಷದಲ್ಲಿ 25 ಸಾವಿರ ಕಿ . ಮೀ. ರಸ್ತೆ ನಿರ್ಮಾಣ ಕೈಗೊಳ್ಳಲಾಗುವುದು. 1.25 ಲಕ್ಷ ಕಿ. ಮೀ. ರಸ್ತೆ ಮೇಲ್ದರ್ಜೆಗೆ ಏರಿಸಲು ನಿರ್ಧಾರ.

ಸಾಂಪ್ರದಾಯಿಕ ಉದ್ಯಮಕ್ಕೆ ಉತ್ತೇಜನ

ಸಾಂಪ್ರದಾಯಿಕ ಉದ್ಯಮಕ್ಕೆ ಉತ್ತೇಜನ

ಕೇಂದ್ರ ಸಕಾ್ರ ಸಾಂಪ್ರದಾಯಿಕ ಉದ್ದಿಮೆಗಳಿಗೆ ಉತ್ತೇಜನ ನೀಡಲು ನಿರ್ಧಾರ ಕೈಗೊಂಡಿದ್ದು, ಜೇನು, ಬಿದಿರು ಖಾದಿ ಉದ್ಯಮಗಳಿಗೆ ಹೆಚ್ಚಿನ ಉತ್ತೇಜನ ಸಿಗಲಿದೆ.

ಇಲ್ಲಿ ಪ್ರತಿ ವರ್ಷ 50 ಸಾವಿರ ಜನರಿಗೆ ನೆರವು ನೀಡಲಾಗುವುದು.

ಶೂನ್ಯ ಬಂಡವಾಳ ಕೃಷಿ

ಶೂನ್ಯ ಬಂಡವಾಳ ಕೃಷಿ

ಕೃಷಿ ಪ್ರಮುಖ ಆದ್ಯತೆ ವಲಯವಾಗಿದ್ದು, ಶೂನ್ಯ ಬಂಡವಾಳ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಕೃಷಿ ಆಧಾರಿತ ಕೈಗಾರಿಕೆಗಳಲ್ಲಿ ಖಾಸಗಿ ಹೂಡಿಕೆಗೆ ಒತ್ತು. ಕೃಷಿಕರಿಗೆ ಸೂಕ್ತ ಬೆಲೆ ಮತ್ತು ಮಾರುಕಟ್ಟೆ ವ್ಯವಸ್ಥೆಗಾಗಿ 10 ಸಾವಿರ ಹೊಸ ಕೃಷಿಕರ ಸಂಘ ಸ್ಥಾಪನೆ.

ಆವಾಸ್‌ ಯೋಜನೆಗೆ ಒತ್ತು

ಆವಾಸ್‌ ಯೋಜನೆಗೆ ಒತ್ತು

ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿಯಲ್ಲಿ 81 ಲಕ್ಷ ಮನೆಗಳ ನಿರ್ಮಾಣ ಮಾಡಲಾಗುವುದು. ಈಗಾಗಲೇ 26 ಲಕ್ಷ ಮನೆಗಳು ನಿರ್ಮಾಣವಾಗಿದ್ದು, 24 ಲಕ್ಷ ಕುಟುಂಬಗಳಿಗೆ ಸೂರು ಭಾಗ್ಯ ಸಗಲಿದೆ. ಸ್ವಚ್ಛ ಭಾರತ್‌ ಯೋಜನೆಯಡಿ 9.6 ಕೋಟಿ ಶೌಚಾಲಯ ನಿರ್ಮಾಣ.

ಜಲ ಜೀವನ ಮಿಷನ್‌ ಯೋಜನೆ

ಜಲ ಜೀವನ ಮಿಷನ್‌ ಯೋಜನೆ

ಹೆಚ್ಚಿನ ರಾಜ್ಯಗಳು ಜಲದ ಕ್ಷಾಮ ಮತ್ತು ಬರದಿಂದ ತ್ತ್ರಿಸಿವೆ. ಮಳೆ ಕೊಯ್ಲು ಅಂತರ ಹೆಚ್ಚಿಸಲು ಜಲ ಜೀವನ ಮಿಷನ್‌ ಯೋಜನೆ ತರಲು ನಿರ್ಧರಿಸಲಾಗಿದೆ.

ಜಲ ಶಕ್ತಿ ಸಚಿವಾಲಯ ಸ್ಥಾಪನೆ

ಜಲ ಶಕ್ತಿ ಸಚಿವಾಲಯ ಸ್ಥಾಪನೆ

ಕೇಂದ್ರ ಸಕಾ್ರವು ಜಲ ಶಕ್ತಿ ಸಚಿವಾಲಯ ಸ್ಥಾಪನೆ ಮಾಡಲು ನಿರ್ಧರಿಸಿದ್ದು, ಕುಡಿಯುವ ನೀರು , ಜಲ ಸಂವರ್ಧನೆ ಯೋಜನೆಗೆ ಮೊದಲ ಆಧ್ಯತೆ. ಹರ್‌ ಘರ್‌ ಜಲ್ ಯೋಜನೆ ಜಾರಿ ಮಾಡಲಾಗುವುದು. ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲಾಗುವುದು.

ವಿಶ್ವಮಾನ್ಯತೆ ವಿದ್ಯಾಸಂಸ್ಥೆಗಳು

ವಿಶ್ವಮಾನ್ಯತೆ ವಿದ್ಯಾಸಂಸ್ಥೆಗಳು

ಭಾರತದ ಮೂರು ವಿದ್ಯಾಸಂಸ್ಥೆಗಳಿಗೆ ವಿಶ್ವ ಮಾನ್ಯತೆ ನೀಡಲಾಗುವುದು. ಐಐಟಿ, ಐಐಎಂ. ಐಐಎಸ್ಸಿ ಸಂಸ್ಥೆಗಳಿಗೆ 400 ಕೋಟಿ ಅನುದಾನ ಘೋಷಣೆ. ವಿಶ್ವ ಮಟ್ಟದ ಶಿಕ್ಷಣ ಸಂಸ್ಥೆಗಳನ್ನಾಗಿ ರೂಪಿಸುವ ಸಲುವಾಗಿ ಬೃಹತ್ ಅನುದಾನ.

ಗ್ಯಾನ್ ಯೋಜನೆ

ಗ್ಯಾನ್ ಯೋಜನೆ

ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚ ಒತ್ತು ನೀಡಲಾಗಿದ್ದು, ರಾಷ್ಟ್ರೀಯ ಸಂಶೋಧನಾ ಫೌಂಡೇಶನ್ ಸ್ಥಾಪಿಸಲಾಗುವುದು. ಶಿಕ್ಷಣ ಸಂಶೋಧನೆಗೆ ಒತ್ತು ನೀಡುವ ಉದ್ದೇಶದಿಂದ 'ಗ್ಯಾನ್' ಯೋಜನೆ ಮೂಲಕ ಐಐಎಂ, ಐಐಟಿ, ಐಐಎಸ್ಸಿ ಜಂಟಿ ಅಧ್ಯಯನ.

ಗಾಂಧೀಪಿಡಿಯಾ ಅಭಿವೃದ್ಧಿ

ಗಾಂಧೀಪಿಡಿಯಾ ಅಭಿವೃದ್ಧಿ

ಮಹಾತ್ಮ ಗಾಂಧೀಜಿಜಿಯವರ 150ನೇ ಜನ್ಮದಿನಾಚರಣೆ ಅಕ್ಟೋಬರ್‌ 2ರ ವೇಳೆಗೆ ಭಾರತ ಬಯಲು ಬಹಿರ್ದೆಸೆ ಮುಕ್ತವಾಗಿಸುವ ಗುರಿ. ಗಾಂಧೀಪಿಡಿಯಾ ಪುಸ್ತಕ ಅಭಿವೃದ್ಧಿಪಡಿಸಲಾಗುತ್ತಿದ್ದು, ಗಾಂಧೀಜಿಯವರ ತತ್ವ ಹಾಗೂ ಆದರ್ಶಗಳನ್ನು ಜಗತ್ತಿಗೆ ತಿಳಿಸುವ ಪ್ರಯತ್ನ ಇದಾಗಿದೆ.

ಕ್ರೀಡಾ ಶಿಕ್ಷಣ ಪ್ರಾಧಿಕಾರ

ಕ್ರೀಡಾ ಶಿಕ್ಷಣ ಪ್ರಾಧಿಕಾರ

ರಾಷ್ಟ್ರೀಯ ಮಟ್ಟದ ಕ್ರೀಡಾ ಶಿಕ್ಷಣ ಪ್ರಾಧಿಕಾರ ನಿರ್ಮಾಣ ಮಾಡಲಾಗುವುದು. ಜೊತೆಗೆ 10 ಲಕ್ಷ ಯುವಕರಿಗೆ ಕೌಲಶ್ಯ ಅಭಿವೃದ್ಧಿ ತರಬೇತಿ ಒದಗಿಸಲಾಗುವುದು. 3ಡಿ ಪ್ರಿಂಟಿಂಗ್ ಅಧ್ಯಯನಕ್ಕಾಗಿ ಯುವಕರಿಗೆ ನೆರವು ನೀಡಲಾಗುವುದು.

ಸ್ಟ್ಯಾಂಡ್ ಅಪ್, ಸ್ಟಾರ್ಟ್ಅಪ್ ಯೋಜನೆ

ಸ್ಟ್ಯಾಂಡ್ ಅಪ್, ಸ್ಟಾರ್ಟ್ಅಪ್ ಯೋಜನೆ

ಸ್ಟ್ಯಾಂಡ್ ಅಪ್ ಯೋಜನೆಗಳ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಹಣಕಾಸು ನೆರವು ನೀಡಲಾಗುವುದು. ಸ್ಟಾರ್ಟ್ಅಪ್ ಯೋಜನೆಗಳ ಮಾಹಿತಿಗಾಗಿ ದೂರದರ್ಶನದ ಸಹಭಾಗಿತ್ವದಲ್ಲಿ ಚಾನೆಲ್ ಆರಂಭಿಸಲಾಗುವುದು.

ಎಲ್ ಇಡಿ ಬಳಕೆ ಉತ್ತೇಜನ

ಎಲ್ ಇಡಿ ಬಳಕೆ ಉತ್ತೇಜನ

ಎಲ್ ಇಡಿ ಬಳಕೆ ಉತ್ತೇಜಿಸಲು 60 ಕೋಟಿ ಬಲ್ಬ್ ವಿತರಣೆ, ಎಲ್ ಇಡಿ ಬಳಕೆಯಿಂದ ಪ್ರತಿವರ್ಷ 18 ಸಾವಿರ ಕೋಟಿ ಉಳಿತಾಯ ವಾಗುತ್ತಿದೆ. ಸೋಲಾರ್ ಮೂಲಕ ಎಲ್ ಇಡಿ ಬಳಕೆಗೆ ಉತ್ತೇಜನ ಮಾಡಲಾಗುವುದು. ಉಜಾಲಾ ಮೂಲಕ ಎಲ್ ಇಡಿ ಬಲ್ಬ್ ಬಳಕೆ ಉತ್ತೇಜಿಸಲು ನಿರ್ಧಾರ

ಹಿರಿಯರಿಗೆ ಪಿಂಚಣಿ

ಹಿರಿಯರಿಗೆ ಪಿಂಚಣಿ

60 ವರ್ಷ ಮೇಲ್ಪ ಟ್ಟ ಹಿರಿಯ ಕಾರ್ಮಿಕರಿಗೆ ತಿಂಗಳಿಗೆ ರೂ. 3 ಸಾವಿರ ಪಿಂಚಣಿ ಒದಗಿಸಲಾಗುವುದು. ಅಟಲ್‌ ಪಿಂಚಣಿ, ನ್ಯಾಷನಲ್‌ ಪೆನ್ಷನ್‌ ಯೋಜನೆ ಪಿಎಫ್ಆರ್‌ಡಿಐ ಜೊತೆ ಜೋಡಣೆ.

ನಾರಿ ಟು ನಾರಾಯಣಿ ಯೋಜನೆ

ನಾರಿ ಟು ನಾರಾಯಣಿ ಯೋಜನೆ

ನಾರಿ ಟು ನಾರಾಯಣಿ ಮಂತ್ರ. ಗ್ರಾಮೀಣ ಅರ್ಥ ವ್ಯವಸ್ಥೆಯಲ್ಲಿ ಮಹಿಳೆ ಪಾತ್ರ ತುಂಬಾ ದೊಡ್ಡದು. ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಕ್ರಮ ಕೈಗೊಳ್ಳಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯ ಪಾಲುದಾರಿಕೆಗೆ ಹೆಚ್ಚಿನ ಒತ್ತು. ಲಿಂಗ ತಾರತಮ್ಯ ನಿವಾರಣೆಗೆ ಕ್ರಮ. ಮುದ್ರಾ ಯೋಜನೆಯಡಿ ಮಹಿಳೆಯರಿಗೆ 1 ಲಕ್ಷದ ವರೆಗೆ ಸಾಲ ಸೌಲಭ್ಯ ಒದಗಿಸಲಾಗುವುದು.

ಬಡ್ಡಿ ವಿನಾಯಿತಿಯ ಸಾಲ

ಬಡ್ಡಿ ವಿನಾಯಿತಿಯ ಸಾಲ

ಜನ್‌ಧನ್‌ ಖಾತೆ ಹೊಂದಿರುವ ಮಹಿಳೆಯರಿಗೆ ರೂ. 5 ಸಾವಿರದವರೆಗೆ ಓವರ್‌ ಡ್ರಾಫ್ಟ್ ಒದಗಿಸಲಾಗುವುದು. ದೇಶದ ಎಲ್ಲಾ ಮಹಿಳಾ ಸಂಘಗಳಿಗೆ ವಿನಾಯಿತಿಯಲ್ಲಿ ಬಡ್ಡಿ ಸಾಲ ನೀಡಲಾಗುವುದು.

ಎನ್ಪಿಎ

ಎನ್ಪಿಎ

ಬ್ಯಾಂಕುಗಳ 1 ಲಕ್ಷ ಕೋಟಿ ಅನುತ್ಪಾದಕ ಆಸ್ತಿ ಎನ್ಪಿಎಯನ್ನು ರಿಕವರಿ ಮಾಡಲಾಗುವುದು. ಕಳೆದ ವರ್ಷ ಕಮರ್ಷಿಯಲ್‌ ಬ್ಯಾಂಕ್‌ ಎನ್‌ಪಿಎ ರೂ. 1ಲಕ್ಷ ಕೋಟಿಗಿಂತ ಹೆಚ್ಚು ಕಡಿಮೆಯಾಗಿದೆ. ಬ್ಯಾಂಕುಗಳ ಏಕೀಕರಣಕ್ಕೆ ಕ್ರಮ ಜರೂಗಿಸಲಾಗುವುದು. ಸಾರ್ವಜನಿಕ ರಂಗದ ಬ್ಯಾಂಕುಗಳಿಗೆ 70 ಸಾವಿರ ಕೋಟಿ ರೂಪಾಯಿ ಮರುಪೂರಿಸಲಾಗುವುದು.

100 ಲಕ್ಷ ಕೋಟಿ ಅನುದಾನ

100 ಲಕ್ಷ ಕೋಟಿ ಅನುದಾನ

ಮುಂಬರಲಿರುವ ಐದು ವರ್ಷಗಳಲ್ಲಿ ದೇಶದ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ರೂ. 100 ಲಕ್ಷ ಕೋಟಿ ಅನುದಾನ ಒದಗಿಸಲಾಗುವುದು.

ಬುಡಕಟ್ಟು ಸಂಸ್ಕೃತಿ ಉತ್ತೇಜನಕ್ಕೆ ಸರ್ಕಾರದ ಕ್ರಮ ಕೈಗೊಳ್ಳಲಿದೆ.

ತೆರಿಗೆದಾರರಿಗೆ ಬಂಪರ್

ತೆರಿಗೆದಾರರಿಗೆ ಬಂಪರ್

ವಾರ್ಷಿಕವಾಗಿ ರೂ. 5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವವರಿಗೆ ತೆರಿಗೆ ಇಲ್ಲ. ನೇರ ತೆರಿಗೆ ರೂ. 11 ಲಕ್ಷ ಕೋಟಿಗೆ ಏರಿಕೆಯಾಗಿದೆ. ನೇರ ತೆರಿಗೆ ಸಂಗ್ರಹದಲ್ಲಿ ಶೇ. ೭೮ರಷ್ಟು ಏರಿಕೆ. ವಾರ್ಷಿಕ ಆದಾಯ ರೂ. 400 ಕೋಟಿ ಹೊಂದಿದ ಉದ್ಯಮಕ್ಕೆ ಶೇ. 25 ರಷ್ಟು ತೆರಿಗೆ.

ಎಲೆಕ್ಟ್ರಿಕ್ ವಾಹನಗಳ ಜಿಎಸ್ಟಿ ಇಳಿಕೆ

ಎಲೆಕ್ಟ್ರಿಕ್ ವಾಹನಗಳ ಜಿಎಸ್ಟಿ ಇಳಿಕೆ

ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ರೂ. 1.25 ಲಕ್ಷದವರೆಗೆ ಸಬ್ಸಿಡಿ ಒದಗಿಸಲಾಗವುದು. ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿಗಳಿಗೆ ಶೇ. 5 ರಷ್ಟು ಜಿಎಸ್ ಟಿ ಇಳಿಕೆ ಮಾಡಲಾಗಿದೆ.

7 ಲಕ್ಷ ಸಹಾಯಧನ

7 ಲಕ್ಷ ಸಹಾಯಧನ

ಮದ್ಯಮ ವರ್ಗದ ಜನರು ೧೫ ವರ್ಷಗಳ ಅವಧಿಯ ಗೃಹ ಸಾಲ ಪಡೆದರೆ ರೂ. ೭ ಲಕ್ಷ ರೂಪಾಯಿ ಸಹಾಯಧನ ಒದಗಿಸಲಾಗುವುದು.

ಪ್ಯಾನ್‌ ಕಡ್ಡಾಯವಲ್ಲ

ಪ್ಯಾನ್‌ ಕಡ್ಡಾಯವಲ್ಲ

ತೆರಿಗೆ ಪಾವತಿಗೆ ಇನ್ನು ಪ್ಯಾನ್‌ ಕಾರ್ಡ್‌ ಅಥವಾ ಆಧಾರ್‌ ಕಾರ್ಡ್‌ ಇದ್ದರೆ ಸಾಕು. ಪ್ಯಾನ್‌ ಕಾರ್ಡ್‌ ಕಡ್ಡಾಯವಲ್ಲ. ಆದಾಯ ತೆರಿಗೆ ರಿಟರ್‌ನ್ಸ್ ಸಲ್ಲಿಸಲು ಆಧಾರ್‌ ಕಾರ್ಡ್‌ ಇದ್ದರೆ ಸಾಕು. ಪ್ಯಾನ್‌ ಕಾರ್ಡ್‌ ಹಾಗೂ ಆಧಾರ್ ಕಾರ್ಡ್ ಜೋಡಣೆಗೆ ಕೇಂದ್ರ ವಿನಾಯಿತಿ ನೀಡಿದೆ.

ಜಿಎಸ್ಟಿ ನೀತಿ ಸಡಿಲಿಕೆ

ಜಿಎಸ್ಟಿ ನೀತಿ ಸಡಿಲಿಕೆ

ಜಿಎಸ್ಟಿಯಿಂದ ೧೭ ತೆರಿಗೆಗಳು ಮತ್ತು ೩೦ ನೀತಿಗಳನ್ನು ರದ್ದುಗೊಳಿಸಲಾಗಿದೆ. ಸ್ಟಾರ್ಟ್‌ ಅಪ್‌ ಕಂಪೆನಿಗಳಿಗೆ ತೆರಿಗೆ ತಪಾಸಣೆ ವಿನಾಯಿತಿ ನೀಡಲಾಗುವುದು. ರೂ. 2 ಕೋಟಿ ಮೇಲ್ಪಟ್ಟಿರುವ ಆದಾಯದಾರರಿಗೆ ಸರ್ ಚಾರ್ಜ್ ವಿಧಿಸಲಾಗುವುದು.

ರಕ್ಷಣಾ ಸಾಮಾಗ್ರಿಗಳಿಗೆ ಕಸ್ಟಮ್ಸ್ ತೆರಿಗೆ ಇಲ್ಲ

ರಕ್ಷಣಾ ಸಾಮಾಗ್ರಿಗಳಿಗೆ ಕಸ್ಟಮ್ಸ್ ತೆರಿಗೆ ಇಲ್ಲ

ರಕ್ಷಣಾ ಸಾಮಾಗ್ರಿಗಳಿಗೆ ಕಸ್ಟಮ್ಸ್ ತೆರಿಗೆ ಇಲ್ಲ. ಸ್ವದೇಶಿ ಎಲೆಕ್ಟ್ರಾನಿಕ್ ವಸ್ತುಗಳಿಗೆ ತೆರಿಗೆ ವಿನಾಯಿತಿ ಒದಗಿಸಲಾಗುವುದು. ಆಮದದು ಮಾಡಲಾಗುವ ಪುಸ್ತಕಗಳಿಗೆ ಶೇ. 5 ರಷ್ಟು ತೆರಿಗೆ ವಿಧಿಸಲಾಗಿದೆ. ಭಾರತದಲ್ಲಿ ಉತ್ಪಾದನೆಯಾಗುವ ರಕ್ಷಣಾ ಸಲಕರಣೆಗಳಿಗೆ ಕಸ್ಟಮ್ಸ್ ತೆರಿಗೆ ಇಲ್ಲ.

ಚಿನ್ನ, ಪೆಟ್ರೋಲ್ ತುಟ್ಟಿ

ಚಿನ್ನ, ಪೆಟ್ರೋಲ್ ತುಟ್ಟಿ

ಪೆಟ್ರೋಲ್‌, ಡಿಸೇಲ್‌ ಬೆಲೆ ರೂ. 1 ರೂಪಾಯಿ ಏರಿಕೆ. ಚಿನ್ನಾಭರಣಗಳ ಮೇಲೆ ಕಸ್ಟಮ್ಸ್‌ ಸುಂಕ 10 ರಿಂದ 12.5 ಕ್ಕೆ ಏರಿಕೆ ಮಾಡಲಾಗಿದೆ. ಡಿಜಿಟಲ್ ಪಾವತಿಗೆ ಉತ್ತೇಜನ. ಕ್ರೆಡಿಟ್ ಕಾರ್ಡ್ ಮೇಲೆ ಶುಲ್ಕ ವಿಧಿಸುವಂತಿಲ್ಲ.

English summary

Budget 2019: Complete Details of Nirmala Sitharaman's Budget

Finance Minister Nirmala Sitharaman is set to present the maiden budget of Narendra Modi 2.0 government in Lok Sabha on Friday, July 5, 2019.
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more