For Quick Alerts
ALLOW NOTIFICATIONS  
For Daily Alerts

ಬಜೆಟ್ 2019: ಕಂಪನಿಗಳು ಎಂಪಿಎಸ್ ಶೇ. 35ರಷ್ಟು ಕಾಯ್ದುಕೊಳ್ಳಬೇಕು

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಪಟ್ಟಿ ಮಾಡಿದ ಕಂಪನಿಗಳು ಕನಿಷ್ಟ ಸಾರ್ವಜನಿಕ ಷೇರು(ಎಂಪಿಎಸ್) ಶೇ. 35ರಷ್ಟು ಕಾಯ್ದುಕೊಳ್ಳಬೇಕಾಗಬಹುದು ಎಂದು ತಮ್ಮ ಚೊಚ್ಚಲ ಕೇಂದ್ರ ಬಜೆಟ್‌ನಲ್ಲಿ ತಿಳಿಸಿದ್ದಾರೆ.

|

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಪಟ್ಟಿ ಮಾಡಿದ ಕಂಪನಿಗಳು ಕನಿಷ್ಟ ಸಾರ್ವಜನಿಕ ಷೇರು(ಎಂಪಿಎಸ್) ಶೇ. 35ರಷ್ಟು ಕಾಯ್ದುಕೊಳ್ಳಬೇಕಾಗಬಹುದು ಎಂದು ತಮ್ಮ ಚೊಚ್ಚಲ ಕೇಂದ್ರ ಬಜೆಟ್‌ನಲ್ಲಿ ತಿಳಿಸಿದ್ದಾರೆ.

 

ಬಜೆಟ್ 2019: ಕಂಪನಿಗಳು ಎಂಪಿಎಸ್ ಶೇ. 35ರಷ್ಟು ಕಾಯ್ದುಕೊಳ್ಳಬೇಕು

ಪಟ್ಟಿ ಮಾಡಿದ ಕಂಪನಿಗಳಿಗೆ ಎಂಪಿಎಸ್ ಹೆಚ್ಚಳವನ್ನು ಶೇ. 25 ರಿಂದ ಶೇ. 35 ಕ್ಕೆ ಹೆಚ್ಚಿಸುವಂತೆ ಸೆಬಿಯನ್ನು ಕೇಳುತ್ತೇವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಎಂಪಿಎಸ್ ಹೆಚ್ಚಳ ಘೋಷಿಸುತ್ತಿದ್ದಂತೆ ಬೆಳಿಗ್ಗೆ 11:51ಕ್ಕೆ ಷೇರುಕಟ್ಟೆ 135 ಪಾಯಿಂಟ್‌ಗಳ ಕುಸಿತ ಕಂಡಿತು. ಈ ಕ್ರಮವು ಈಕ್ವಿಟಿ ಮಾರುಕಟ್ಟೆಗಳಲ್ಲಿ ಸಾರ್ವಜನಿಕ ಹೂಡಿಕೆಯನ್ನು ಖಚಿತಪಡಿಸುತ್ತದೆ. ಇದು ಕಾರ್ಪೊರೇಟ್‌ಗಳನ್ನು ಸಾರ್ವಜನಿಕ ಕೊಡುಗೆಯೆತ್ತ ಹೋಗಲು ಒತ್ತಾಯಿಸುತ್ತದೆ. ಹೀಗಾಗಿ ಸಾರ್ವಜನಿಕ ಕೊಡುಗೆಗಳಿಗೆ ಸಂಬಂಧಿಸಿದ ಅನೇಕ ನಿಯಮಗಳನ್ನು ಸೆಬಿ ಬದಲಾಯಿಸುವ ಅಗತ್ಯವಿದೆ. ಕಂಪೆನಿಗಳಿಗೆ ನಿರ್ಧಿಷ್ಟ ಟೈಮ್‌ಲೈನ್ ಯಾವುದು ಎಂಬುದು ಸ್ಪಷ್ಟವಾಗಿಲ್ಲ. ಇದನ್ನು ಮುಂದಿನ ತಿಂಗಳುಗಳಲ್ಲಿ ಸೆಬಿ ನಿರ್ದಿಷ್ಟಪಡಿಸಬೇಕಾಗುತ್ತದೆ.
2013ರಲ್ಲಿ ಮೊದಲ ಬಾರಿ ಪಟ್ಟಿಮಾಡಿದ ಕಂಪೆನಿಗಳು ಶೇ. 25 ಎಂಪಿಎಸ್ ಹೊಂದಿರಬೇಕಾಗಿತ್ತು. ಇದನ್ನು ಶೇ. 10 ರಿಂದ ಶೇ. 25ಕ್ಕೆ ಏರಿಸಲಾಯಿತು. ಪಟ್ಟಿ ಮಾಡಿದ ಸಂಸ್ಥೆಗಳಿಗೆ ಇದೊಂದು ದೊಡ್ಡ ಸವಾಲಾಗಿತ್ತು ಮತ್ತು ಶೇ. 25ರಷ್ಟು ಎಂಪಿಎಸ್ ಅನ್ನು ಅನುಸರಿಸದ ಕಾರಣ ಸೆಬಿ 100ಕ್ಕೂ ಹೆಚ್ಚು ಕಂಪನಿಗಳಿಗೆ ದಂಡ ವಿಧಿಸಿದೆ. ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಆಗಸ್ಟ್ 2017 ರ ಗಡುವನ್ನು ನೀಡಿ, ತದನಂತರ ಇದನ್ನು 2018ವರೆಗೆ ವಿಸ್ತರಿಸಲಾಯಿತು. ಪಟ್ಟಿ ಮಾಡಿರುವ ಸಾರ್ವಜನಿಕ ಮತ್ತು ಖಾಸಗಿ ಕಂಪನಿಗಳ ನಡುವೆ ಸಾಮ್ಯತೆಯನ್ನು ಸರ್ಕಾರ ಖಚಿತಪಡಿಸಿದೆ.

English summary

Budget 2019: Listed companies will need to maintain 35% of public float

listed companies may need to maintain 35% of minimum public shareholding (MPS), according to the statement by the finance minister.
Story first published: Friday, July 5, 2019, 16:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X