For Quick Alerts
ALLOW NOTIFICATIONS  
For Daily Alerts

ಶೂನ್ಯ ಬಂಡವಾಳ ಕೃಷಿ ಜೊತೆಗೆ ರೈತವರ್ಗಕ್ಕೆ ಘೋಷಿಸಿರುವ ಪ್ರಮುಖ ಯೋಜನೆಗಳು ಇಲ್ಲಿವೆ

|

ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಮೊದಲ ಬಜೆಟ್ ನಲ್ಲಿ ಮಣ್ಣಿನ ಮಗನಿಗೆ ನಿರೀಕ್ಷೆಯಂತೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮಧ್ಯಂತರ ಬಜೆಟ್ ನಲ್ಲಿ ಭರವಸೆ ನೀಡಿದಂತೆ ರೈತರ ಆದಾಯವನ್ನು ದುಪ್ಪಟ್ಟುಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಾ ಹೇಳಿದರು.

ಶೂನ್ಯ ಬಂಡವಾಳ ಕೃಷಿ ಜೊತೆಗೆ ರೈತವರ್ಗಕ್ಕೆ ಘೋಷಿಸಿರುವ ಪ್ರಮುಖ ಯೋಜನೆ

 

ಪ್ರಮುಖ ಬೆಳೆ ಹಾಗೂ ಮಧ್ಯಂತರ ಬೆಳೆಗಳಿಂದ ಗಳಿಸುವ ಆದಾಯದ ಸಮತೋಲನ ಕಾಯ್ದುಕೊಳ್ಳಲು 'ಶೂನ್ಯ ಬಂಡವಾಳ ಕೃಷಿಗೆ' ಹೆಚ್ಚು ಒತ್ತು ನೀಡಲಾಗುತ್ತಿದೆ. ರಾಸಾಯನಿಕಗಳ ಬಳಕೆಯನ್ನು ಕಡಿಮೆಗೊಳಿಸಿ ಸಗಣಿಯಿಂದ ತಯಾರಿಸಿದ ಗೊಬ್ಬರ, ಗೋಮೂತ್ರ ಬಳಕೆಗೆ ಆದ್ಯತೆ ನೀಡಲು ಯೋಜಿಸಲಾಗಿದೆ. ಪ್ರಸ್ತುತ ಆಂಧ್ರಪ್ರದೇಶ ರಾಜ್ಯದಲ್ಲಿ ಸದ್ಯ ಜಾರಿಯಲ್ಲಿರುವ ಪದ್ಧತಿಯನ್ನು ಎಲ್ಲೆಡೆ ಜಾರಿಗೊಳಿಸಲಾಗುತ್ತದೆ.

- ಹೊಸದಾಗಿ 10 ಸಾವಿರ ಕೃಷಿಕರ ಉತ್ಪಾದಕ ಸಂಸ್ಥೆಗಳ ಸ್ಥಾಪನೆ ಮಾಡಲಾಗುತ್ತಿದ್ದು, ರೈತರಿಗೆ ಸೂಕ್ತ ಬೆಲೆ ಒದಗಿಸಲಾಗುವುದು.

- ಪ್ರಸಕ್ತ ವರ್ಷಕ್ಕೂ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯನ್ನು ಮುಂದುವರೆಸಲಾಗುತ್ತಿದ್ದು, ವಾರ್ಷಿಕ ರೂ. 6 ಸಾವಿರ ಸಹಾಯಧನ ಸರ್ಕಾರ ನೀಡುತ್ತಿದ್ದು, ಸುಮಾರು 14.5 ಕೋಟಿ ರೈತರಿಗೆ ಪ್ರಯೋಜನೆ ಸಿಗಲಿದೆ.

- ಸಾಂಪ್ರದಾಯಿಕ ಕೃಷಿಯನ್ನು ಹೆಚ್ಚು ಉತ್ಪಾದನಾಯುಕ್ತ ಮಾಡಲು ಕ್ಲಸ್ಟರ್ ಮಾದರಿ ಪದ್ಧತಿ ಮೂಲಕ ಸಾಂಪ್ರದಾಯಿಕ ಆಗ್ರೋ ಕೈಗಾರಿಕೆಗಳನ್ನು ಉತ್ತೇಜಿಸಲು ಯೋಜನೆ ರೂಪಿಸಲಾಗಿದೆ.

- 12.5 ಕೋಟಿ ಸಣ್ಣ ಹಾಗೂ ಮಧ್ಯಮ ರೈತರಿಗೆ (2 ಹೆಕ್ಟೇರ್) ವಾರ್ಷಿಕ ರೂ. 6000 (ಮೂರು ಕಂತಿನಲ್ಲಿ). ನೀಡಲಾಗುತ್ತದೆ . ಮೊದಲ ಕಂತಿನಲ್ಲಿ 3.11 ಕೋಟಿ ರೈತರಿಗೆ ಹಾಗೂ ಎರಡನೇ ಕಂತಿನಲ್ಲಿ 2.66 ಕೋಟಿ ರೈತರಿಗೆ ಸೌಲಭ್ಯ ಸಿಗಲಿದೆ.

- ಪ್ರಧಾನ ಮಂತ್ರಿ ಕಿಸಾನ್ ಪಿಂಚಣಿ ಯೋಜನೆ ಮೂಲಕ ಮಾಸಿಕ ರೂ. 3000 ಪಿಂಚಣಿ ನೀಡಲಾಗುವುದು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ (PMKSS) ಅಡಿಯಲ್ಲಿ 60 ವರ್ಷ ಮೇಲ್ಪಟ್ಟ ರೈತರಿಗೆ ಪ್ರತಿ ತಿಂಗಳಿಗೆ ರೂ. 3000 ಕೇಂದ್ರ ಸರ್ಕಾರದಿಂದ ನೀಡಲಿದೆ.

ಬಜೆಟ್ 2019: ನಿರ್ಮಲಾ ಸೀತಾರಾಮನ್ ಘೋಷಿಸಿರುವ ಜನಪ್ರಿಯ ಯೋಜನೆಗಳ ಸಂಪೂರ್ಣ ವಿವರ..

English summary

Union budget 2019: Zero budget farming and other big announcement to farmer

Union budget 2019 FM Nirmala sitharaman announced Zero budget farming and other big schemes to farmer.
Story first published: Friday, July 5, 2019, 13:40 [IST]
Company Search
COVID-19