For Quick Alerts
ALLOW NOTIFICATIONS  
For Daily Alerts

ವಸೂಲಾಗದ ಸಾಲ (ಎನ್ಪಿಎ) 9.34 ಲಕ್ಷ ಕೋಟಿಗೆ ಇಳಿಕೆ

|

ಸರ್ಕಾರವು ಕೈಗೊಂಡ ಕ್ರಮಗಳ ಹಿನ್ನಲೆಯಲ್ಲಿ ವಾಣಿಜ್ಯ ಬ್ಯಾಂಕುಗಳು ಹೊಂದಿರುವ ವಸೂಲಾಗದ ಸಾಲವು 2018-19ರ ಆರ್ಥಿಕ ವರ್ಷದಲ್ಲಿ ರೂ. 1.02 ಲಕ್ಷ ಕೋಟಿಯಿಂದ ರೂ. 9.34 ಲಕ್ಷ ಕೋಟಿಗೆ ಇಳಿದಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ವಸೂಲಾಗದ ಸಾಲ (ಎನ್ಪಿಎ) 9.34 ಲಕ್ಷ ಕೋಟಿಗೆ ಇಳಿಕೆ

 

ದೇಶದ ವಾಣಿಜ್ಯ ಬ್ಯಾಂಕುಗಳು ಹೊಂದಿರುವ ಒಟ್ಟು ವಸೂಲಾಗದ ಸಾಲದ ಮೊತ್ತದಲ್ಲಿ ಇಳಿಕೆಯಾಗಿದ್ದು, ಪ್ರಸ್ತುತ ಬ್ಯಾಂಕುಗಳಲ್ಲಿ ರೂ. 9.34 ಲಕ್ಷ ಕೋಟಿ ಎನ್‌ಪಿಎ ಇದೆ. ವಸೂಲಾಗದಿರುವ ಸಾಲಗಳ ನಿರ್ವಹಣೆಗೆ ಸರಕಾರ ಕೈಗೊಂಡಿರುವ ಕ್ರಮಗಳು ಫಲಿತಾಂಶ ಕೊಡುತ್ತಿವೆ ಎಂದು ನಿರ್ಮಲಾ ಸೀತಾರಾಮನ್ ರಾಜ್ಯಸಭೆಗೆ ಮಂಗಳವಾರ ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಬ್ಯಾಂಕಿಂಗ್ ವಲಯವನ್ನು ಕಾಡುತ್ತಿದ್ದ ವಸೂಲಾಗದಿರುವ ಸಾಲದ ಹೊರೆ ನಿಯಂತ್ರಿಸಲು ನಾಲ್ಕು ಕಾರ್ಯತಂತ್ರಗಳನ್ನು ಅನುಸರಿಸಿತ್ತು. ವಸೂಲಾಗದ ಸಾಲಗಳನ್ನು (ಎನ್‌ಪಿಎ) ಪಾರದರ್ಶಕವಾಗಿ ಗುರುತಿಸುವುದು, ವಿಲೇವಾರಿಯ ನಿರ್ಧಾರ ಮತ್ತು ಎನ್‌ಪಿಎಯ ಮೌಲ್ಯ ನಿಗದಿ, ಸಾರ್ವಜನಿಕ ಬ್ಯಾಂಕುಗಳಿಗೆ ಮರು ಬಂಡವಾಳ ಮತ್ತು ಸಾರ್ವಜನಿಕ ಬ್ಯಾಂಕ್‌ಗಳ ಸುಧಾರಣೆಯಂತ ಪ್ರಮುಖ ಕಾರ್ಯತಂತ್ರಗಳನ್ನು ಅನುಸರಿಸಿತ್ತು.

ಕಂಪನಿಗಳ ದಿವಾಳಿತನ ನೀತಿ ಸಂಹಿತೆ (ಐಬಿಸಿ) ಅಸ್ತಿತ್ವಕ್ಕೆ ಬಂದ ನಂತರ ಸಾಲದ ವಹಿವಾಟಿನಲ್ಲಿ ಸಾಕಷ್ಟು ಬದಲಾವಣೆಗಳುಂಟಾಗಿವೆ. ಬ್ಯಾಂಕು ಹಾಗೂ ಸಾಲಗಾರರ ಸಂಬಂಧಗಳಲ್ಲಿ ಪರಿವರ್ತನೆಯಾಗುತ್ತಿದ್ದು, ಸಾಲ ಮರುಪಾವತಿಸದೆ ಸುಸ್ತಿ ಸಾಲಗಾರರಾಗಿರುವ ಉದ್ಯಮಿಗಳಿಗೆ ಅವರ ಕಂಪನಿಗಳ ಮಾಲಿಕತ್ವ/ನಿಯಂತ್ರಣ ಕೈತಪ್ಪುವ ಭೀತಿ ಇರುವುದರಿಂದ ಸಾಲ ಮರುಪವತಿ ಅಥವಾ ಇತ್ಯರ್ಥಕ್ಕೆ ಸ್ವಯಂ ಮುಂದಾಗುತ್ತಿದ್ದಾರೆ.

2018-19ರ ಅವಧಿಯಲ್ಲಿ, 1 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಒಳಗೊಂಡ ಗರಿಷ್ಠ ಸಂಖ್ಯೆಯ ವಂಚನೆಗಳ ಪೈಕಿ ಐಸಿಐಸಿಐ ಬ್ಯಾಂಕ್ ನಲ್ಲಿ 374 ಗರಿಷ್ಠ ವಂಚನೆ ವರದಿಯಾಗಿವೆ. ನಂತರ ಕೋಟಕ್ ಮಹೀಂದ್ರಾ ಬ್ಯಾಂಕ್ (338), ಎಚ್‌ಡಿಎಫ್‌ಸಿ ಬ್ಯಾಂಕ್ (273), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (273), ಆಕ್ಸಿಸ್ ಬ್ಯಾಂಕ್ (195) ಮತ್ತು ಅಮೇರಿಕನ್ ಎಕ್ಸ್ ಪ್ರೆಸ್ ಬ್ಯಾಂಕಿಂಗ್ ಕಾರ್ಪೊರೇಷನ್ (190) ವಂಚನಾ ಪ್ರಕರಣಗಳು ವರದಿಯಾಗಿವೆ.

Read more about: banking money npa
English summary

Banks bad loans down at Rs 9.34 lakh crore

Total bad loans of commercial banks declined by Rs 1.02 lakh crore to Rs 9.34 lakh crore in the 2018-19 fiscal on the back of steps taken by the government.
Story first published: Wednesday, July 17, 2019, 16:42 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more