For Quick Alerts
ALLOW NOTIFICATIONS  
For Daily Alerts

ಆರ್ಬಿಐ: ವೈಯಕ್ತಿಕ ಸಾಲಗಾರರಿಂದ ಸಾಲ ಸ್ವತ್ತು ಮರುಸ್ವಾಧೀನ ದಂಡ ರದ್ದು

|

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ), ವೈಯಕ್ತಿಕ ಸಾಲಗಾರರು ಸಮಯಕ್ಕೆ ಮೊದಲೇ ಸಾಲ ಮರುಪಾವತಿ ಮಾಡಿದರೆ ಬ್ಯಾಂಕೇತರ ಹಣಕಾಸು ಕಂಪನಿಗಳಿಂದ ವಸೂಲಿ ಮಾಡುವ ಶುಲ್ಕವನ್ನು ನಿಷೇಧಿಸಿದೆ. ಬ್ಯಾಂಕೇತರ ಹಣಕಾಸು ಕಂಪನಿಗಳು (NBFCs) ವೈಯಕ್ತಿಕ ಸಾಲಗಾರರಿಂದ ಪೂರ್ವ-ಪಾವತಿ ದಂಡ ಅಥವಾ ಸ್ವತ್ತು ಮರುಸ್ವಾಧೀನ ಶುಲ್ಕ ವಿಧಿಸುವುದನ್ನು ಆರ್ಬಿಐ ನಿರ್ಬಂಧಿಸಿದೆ.

ಆರ್ಬಿಐ: ವೈಯಕ್ತಿಕ ಸಾಲಗಾರರಿಂದ ಸಾಲ ಸ್ವತ್ತು ಮರುಸ್ವಾಧೀನ ದಂಡ ರದ್ದು

 

ವ್ಯವಹಾರ ಉದ್ದೇಶಗಳನ್ನು ಹೊರತುಪಡಿಸಿ ಇನ್ನಿತರೆ ಕಾರ್ಯಗಳಿಗೆ ತೆಗೆದುಕೊಳ್ಳುವ ಸಾಲವನ್ನು ಸಮಯಕ್ಕಿಂತ ಮೊದಲು ಪಾವತಿ ಮಾಡಿದರೆ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಹೇಳಿದೆ.

ಆರ್ಬಿಐನ ಈ ಹೊಸ ನಿಯಮ ಯಾವಾಗಿನಿಂದ ಜಾರಿಯಾಗಲಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಮೇ 2014 ರಲ್ಲಿ, ಆರ್‌ಬಿಐ ವಾಣಿಜ್ಯ ಬ್ಯಾಂಕುಗಳಿಗೆ ಅಂತಹ ಶುಲ್ಕಗಳು ಅಥವಾ ವೈಯಕ್ತಿಕ ಸಾಲಗಾರರಿಂದ ಅಡಮಾನ ಸಾಲವನ್ನು ವಿಧಿಸುವುದನ್ನು ನಿರ್ಬಂಧಿಸಿತ್ತು ಎಂಬುದು ಗಮನಿಸಬಹುದು. ಆದರೆ ಬ್ಯಾಂಕುಗಳು ವೈಯಕ್ತಿಕ ಸಾಲಗಳಂತಹ ಸುರಕ್ಷಿತವಲ್ಲದ ಸಾಲಗಳ ಮೇಲೆ ದಂಡ ವಿಧಿಸಲು ಮುಕ್ತವಾಗಿವೆ. ಇದರಿಂದ ಗೃಹ ಮತ್ತು ವಾಹನ ಸಾಲಗಾರರಿಗೆ ಕೊಂಚ ನೆಮ್ಮದಿ ಸಿಗಲಿದೆ.

ಅನೇಕ ಬಾರಿ ಗ್ರಾಹಕರು ಒಂದೇ ಸಲ ಸಾಲ ಮರುಪಾವತಿ ಮಾಡಿ ಬಡ್ಡಿ ಉಳಿಸಲು ಮುಂದಾಗುತ್ತಿದ್ದರು. ಆದರೆ ಒಂದೇ ಬಾರಿ ಸಾಲ ಮರುಪಾವತಿ ಮಾಡಿದರೆ ಬ್ಯಾಂಕುಗಳು ಶುಲ್ಕ ವಿಧಿಸುತ್ತಿದ್ದವು.

Read more about: ಆರ್ಬಿಐ rbi loan banking
English summary

RBI bans NBFCs from charging loan foreclosure penalties

the Reserve Bank on Friday barred non-banking finance companies from charging pre-payment penalties or foreclosure charges from individual borrowers.
Story first published: Saturday, August 3, 2019, 20:30 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more