For Quick Alerts
ALLOW NOTIFICATIONS  
For Daily Alerts

ಬೆಂಗಳೂರಿನ ಐಟಿ ಪಾರ್ಕ್ ಮಾರಾಟ ಮಾಡಲಿದೆ ಕೆಫೆ ಕಾಫಿ ಡೇ

|

ಬೆಂಗಳೂರು, ಆಗಸ್ಟ್ 09 : ವಿ. ಜಿ. ಸಿದ್ದಾರ್ಥ ಸಾವಿನ ಬಳಿಕ ಕೆಫೆ ಕಾಫಿ ಡೇ ಭವಿಷ್ಯವೇನು? ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಸಿಡಿಇಎಲ್ ಬೆಂಗಳೂರಿನಲ್ಲಿರುವ 90 ಎಕರೆ ಐಟಿ ಪಾರ್ಕ್ ಮಾರಾಟ ಮಾಡಲು ತೀರ್ಮಾನಿಸಿದೆ.

 

ಕೆಫೆ ಕಾಫಿ ಡೇ ವ್ಯವಹಾರ ನೋಡಿಕೊಳ್ಳುತ್ತಿರುವ ಕಾಫಿ ಡೇ ಎಂಟರ್‌ಪ್ರೈಸಸ್ ಲಿ.(ಸಿಡಿಇಎಲ್) ಐಟಿ ಪಾರ್ಕ್ ಮಾರಾಟ ಮಾಡಲು ತೀರ್ಮಾನಿಸಿದೆ. ಈ ಮೂಲಕ ಕಾಫಿ ಡೇಯನ್ನು ನಷ್ಟದಿಂದ ಹೊರತರಲು ಯೋಜನೆ ರೂಪಿಸಿದೆ.

ಪ್ರಥಮ ಗುಟುಕಲ್ಲೇ 'ಕಹಿ'ಯಾದ 'ಕಾಫಿ' ಡೇ ಷೇರುಗಳು

ಬೆಂಗಳೂರಿನ 90 ಎಕರೆ ಪ್ರದೇಶದಲ್ಲಿ ಗ್ಲೋಬಲ್ ವಿಲೇಲ್ ಇದೆ. ಇದು ವಿ. ಜಿ. ಸಿದ್ದಾರ್ಥಗೆ ಸೇರಿದ ಆಸ್ತಿಯಾಗಿದೆ. ಇದನ್ನು ಮಾರಾಟ ಮಾಡಲು ಮುಂದಾಗಿದ್ದು, ನ್ಯೂಯಾರ್ಕ್ ಮೂಲದ ಬ್ಲಾಕ್ ಸ್ಟೋನ್ ಗ್ರೂಪ್ ಖರೀದಿಗೆ ಆಸಕ್ತಿ ತೋರಿದೆ.

ಬೆಂಗಳೂರಿನ ಐಟಿ ಪಾರ್ಕ್ ಮಾರಾಟ ಮಾಡಲಿದೆ ಕೆಫೆ ಕಾಫಿ ಡೇ

ಗ್ಲೋಬಲ್ ವಿಲೇಜ್ ಮಾರಾಟ ಮಾಡುವ ಪ್ರಕ್ರಿಯೆ ನಡೆಯುತ್ತಿರುವುದನ್ನು ಸಿಸಿಡಿ ಖಚಿತಪಡಿಸಿದೆ. ಗುರುವಾರ ನಡೆದ ಸಿಡಿಇಎಲ್ ಆಡಳಿತ ಮಂಡಳಿ ಸಭೆಯಲ್ಲಿ ನಷ್ಟವನ್ನು ಕಡಿಮೆ ಮಾಡಲು ಮೂರು ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.

ವಿ. ಜಿ. ಸಿದ್ದಾರ್ಥ ಕಂಪನಿ ಉದ್ಯೋಗಿಗಳಿಗೆ ಬರೆದಿದ್ದಾರೆ ಎನ್ನಲಾದ ಪತ್ರದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಪತ್ರದ ಸತ್ಯಾಸತ್ಯತೆ ತಿಳಿಯಲು ಫೋರೆನ್ಸಿಕ್ ಆಡಿಟ್ ಫಿರ್ಮ್ ನೇಮಕ ಮಾಡಿಕೊಳ್ಳಲು ಸಹ ಚರ್ಚೆ ನಡೆದಿದೆ.

ಸಿಡಿಇಎಲ್ ಜೂನ್ ವರೆಗಿನ ಆರ್ಥಿಕ ಪರಿಸ್ಥಿತಿ ಕುರಿತು ಚರ್ಚಿಸಲು ಆಗಸ್ಟ್ 8ರಂದು ಸಭೆ ನಿಗದಿ ಮಾಡಲಾಗಿತ್ತು. ಆದರೆ, ವಿ. ಜಿ. ಸಿದ್ದಾರ್ಥ ಸಾವಿನ ಹಿನ್ನಲೆಯಲ್ಲಿ ಹಲವು ಬೆಳವಣಿಗೆಗಳು ನಡೆದವು. ಆದರೆ, ನಿಗದಿಯಂತೆ ಸಭೆ ನಡೆಸಲಾಯಿತು.

ವಿ. ಜಿ. ಸಿದ್ದಾರ್ಥ ನಂತರವೂ ಉದ್ಯಮವನ್ನು ಮುಂದುವರೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಶೀಘ್ರದಲ್ಲಿಯೇ strategic corporate adviser ನೇಮಕ ಮಾಡಲು ಸಹ ತೀರ್ಮಾನಿಸಲಾಗಿದೆ.

ಜುಲೈ 31ರಂದು ತುರ್ತು ಸಭೆ ನಡೆಸಿದ್ದ ಸಿಡಿಇಎಲ್ ವಿ. ಜಿ. ಸಿದ್ದಾರ್ಥ ಪತ್ನಿ ಮಾಳವಿಕಾ ಹೆಗಡೆ ಅವರನ್ನು ಮಂಡಳಿ ಹೆಚ್ಚುವರಿ ಸದಸ್ಯರಾಗಿ ನೇಮಕ ಮಾಡಿತ್ತು. ಸಿಇಓ ಮಟ್ಟದ ತೀರ್ಮಾನಗಳನ್ನು ಕೈಗೊಳ್ಳಲು ಅವರನ್ನು ನೇಮಿಸಲಾಗಿತ್ತು.

 

ಸಿಡಿಇಎಲ್ ಸಲ್ಲಿಕೆ ಮಾಡಿರು ಬ್ಯಾಲೆನ್ಸ್ ಶೀಟ್ ಪ್ರಕಾರ ಸಿಡಿಇಲ್ 11,259 ಕೋಟಿ ರೂ. ಆಸ್ತಿಯನ್ನು ಹೊಂದಿದೆ.

English summary

Coffee Day Enterprises Ltd To Sell 90 acre IT Park

After the death of V.G.Siddhartha Coffee Day Enterprises Ltd decided to sell the group's 90 acre technology park in Bengaluru, Karnataka.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X