For Quick Alerts
ALLOW NOTIFICATIONS  
For Daily Alerts

ಜಿಯೋ ಧಮಾಕಾ! ಮುಕೇಶ್ ಅಂಬಾನಿ ಘೋಷಿಸಿರುವ ಪ್ಲಾನ್ ಗಳ ವಿವರ ಇಲ್ಲಿದೆ ನೋಡಿ..

|

ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರಿಸ್ ಲಿಮಿಟೆಡ್ 42ನೇ ವಾರ್ಷಿಕ ಸಭೆ ಜರುಗಿದ್ದು, ಸಭೆಯಲ್ಲಿ ಕಂಪನಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಜಿಯೋ ಸಂಸ್ಥೆಯ ಸಾಧನೆಗಳ ಬಗ್ಗೆ ವಿವರಿಸಿದ್ದಾರೆ.

ಜಿಯೋ ಬಳಕೆದಾರರ ಸಂಖ್ಯೆ 340 ಮಿಲಿಯನ್ ತಲುಪಿದ್ದು, ಒಂದೇ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಶ್ವದ ಎರಡನೇ ದೊಡ್ಡ ಕಂಪನಿಯಾಗಿ ಜಿಯೋ ಹೊರಹೊಮ್ಮಿದೆ ಎಂದಿದ್ದಾರೆ. ಈ ಸಂದರ್ಭದಲ್ಲಿ ಜಿಯೋ ಗಿಗಾಫೈಬರ್ ಪ್ಲಾನ್ ಗಳ ಬಗ್ಗೆ ಕೂಡ ಮಾಹಿತಿ ನೀಡಿದ್ದಾರೆ.

ರೂ. 700 ಬ್ರಾಡ್ ಬ್ಯಾಂಡ್ಪ್ಯಾಕ್
 

ರೂ. 700 ಬ್ರಾಡ್ ಬ್ಯಾಂಡ್ಪ್ಯಾಕ್

ಜಿಯೋ ಗಿಗಾಫೈಬರ್ ಬ್ರಾಡ್‍ಬ್ಯಾಂಡ್ ವಲಯದಲ್ಲಿ ಕ್ರಾಂತಿ ಮಾಡಲು ಸಜ್ಜಾಗಿದ್ದು, ಸೆಪ್ಟೆಂಬರ್ 5 ರಂದು ಅಧಿಕೃತವಾಗಿ ಆರಂಭವಾಗಲಿದೆ. ಅಮೆರಿಕದಲ್ಲಿರುವ ವೇಗದ ಡೇಟಾಕ್ಕಿಂತಲೂ ವೇಗದ ಡೇಟಾ ಸೇವೆ ನೀಡಲಿದೆ ಎಂದು ಅಂಬಾನಿ ತಿಳಿಸಿದ್ದಾರೆ. ಜಿಯೋ ಗಿಗಫೈಬರ್ ಪ್ಯಾಕ್ ತಿಂಗಳಿಗೆ ರೂ. 700 ಕನಿಷ್ಟ, ರೂ. 10 ಸಾವಿರ ಗರಿಷ್ಟ ಪ್ಯಾಕ್ ಸಿಗಲಿದೆ. ದೇಶೀಯ ಕರೆಗಳು ಸಂಪೂರ್ಣ ಉಚಿತವಾಗಿದ್ದು, ವಿದೇಶದ ಕರೆಗಳೂ ಕಡಿಮೆ ದರದಲ್ಲಿ ಸಿಗಲಿದೆ. ಅದರಲ್ಲೂ ಅಮೆರಿಕ ಮತ್ತು ಕೆನಡಾ ದೇಶಗಳಿಗೆ ತಿಂಗಳಿಗೆ ರೂ. 500 ಪಾವತಿಸಿದರೆ ಅನಿಯಮಿತ ಕರೆ ಮಾಡಬಹುದು.

ಉಚಿತ ಎಲ್‍ಇಡಿ ಟಿವಿ ಮತ್ತು ಸೆಟ್ ಟಾಪ್ ಬಾಕ್ಸ್

ಉಚಿತ ಎಲ್‍ಇಡಿ ಟಿವಿ ಮತ್ತು ಸೆಟ್ ಟಾಪ್ ಬಾಕ್ಸ್

ಟೆಲಿಕಾಂ ಕ್ಷೇತ್ರಕ್ಕೆ 2016ರಲ್ಲಿ ಜಿಯೋ ಪ್ರವೇಶಾತಿ ಮಾಡಿದಾಗ ಮೂರು ತಿಂಗಳು ವೆಲ್ ಕಂ ಆಫರ್ ಬಿಡುಗಡೆ ಮಾಡಿತ್ತು. ಆರಂಭದ ಮೂರು ತಿಂಗಳು ಉಚಿತ ಡೇಟಾ ಆಫರ್ ನೀಡಿ ಭರ್ಜರಿ ಯಶಸ್ವಿ ಕಂಡಿದ್ದ ಜಿಯೋ, ಇದೀಗ ಇದೇ ರೀತಿಯ ಉಚಿತ ಆಫರ್ ಬಿಡುಗಡೆ ಮಾಡಲು ಸಜ್ಜಾಗಿದೆ. ಒಂದು ವರ್ಷದ ವಾರ್ಷಿಕ ಪ್ಲಾನ್ ಖರೀದಿಸುವ ಗ್ರಾಹಕರಿಗೆ ಉಚಿತವಾಗಿ 4ಕೆ ಎಲ್‍ಇಡಿ ಟಿವಿ ಮತ್ತು 4ಕೆ ಸೆಟ್ ಟಾಪ್ ಬಾಕ್ಸ್ ಸೌಲಭ್ಯ ಸಿಗಲಿದೆ. ಇದಕ್ಕೆ ಸಂಬಂಧಿಸಿದ ಹೆಚ್ಚಿನ ವಿವರ ಸೆಪ್ಟೆಂಬರ್ 5 ರಂದು ಸಿಗಲಿದೆ.

ಜಿಯೋ ಫಸ್ಟ್ ಡೇ ಫಸ್ಟ್ ಶೋ

ಜಿಯೋ ಫಸ್ಟ್ ಡೇ ಫಸ್ಟ್ ಶೋ

ಗ್ರಾಹಕರನ್ನು ಆಕರ್ಷಿಸಲು ವಿಶೇಷ ತಂತ್ರಗಳನ್ನು ಅನುಸರಿಸುವ ಜಿಯೋ ಮತ್ತೊಂದು ಆಫರ್ ಬಿಡುಗಡೆಗೆ ಮುಂದಾಗಿದೆ. ಮನೆಯಲ್ಲಿ ಕುಳಿತು ಬಿಡುಗಡೆಯಾದ ದಿನವೇ ಚಿತ್ರವನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಿದೆ. ಈ ಯೋಜನೆ 2020ರ ಮಧ್ಯಂತರಲ್ಲಿ ಜಾರಿಯಾಗಲಿದ್ದು, ಇದನ್ನು ಜಿಯೋ ಫಸ್ಟ್ ಡೇ ಫಸ್ಟ್ ಶೋ ಎಂದು ಕರೆದಿದೆ.

ಹೈ ಡೇಟಾ ಸ್ಪೀಡ್
 

ಹೈ ಡೇಟಾ ಸ್ಪೀಡ್

ಮುಕೇಶ್ ಅಂಬಾನಿ ಹೇಳಿರುವಂತೆ ಅಮೆರಿಕದಲ್ಲಿ ಸಾಧಾರಾಣ ಡೇಟಾ ಸ್ಪೀಡ್ 90 ಎಂಬಿಪಿಎಸ್ (mbps) ಇದ್ದರೆ, ಜಿಯೋ ಕಡಿಮೆ ಸ್ಪೀಡ್ 100 ಎಂಬಿಪಿಎಸ್ ಇರಲಿದೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ 1 ಜಿಬಿಪಿಎಸ್ (gbps) ವೇಗದಲ್ಲಿ ಸೇವೆ ಒದಗಿಸಲಾಗುವುದು ಎಂದು ಹೇಳಿದ್ದಾರೆ.

ವಿಶೇಷ ಬೆನಿಫಿಟ್ಸ್

ವಿಶೇಷ ಬೆನಿಫಿಟ್ಸ್

ಜಿಯೋ ಗಿಗಾಫೈಬರ್ ನೊಂದಿಗೆ ಈ ಕೆಳಗಿನ ಸೇವೆಗಳು ಇರಲಿವೆ.

- 1 ಜಿಬಿಪಿಎಸ್ ಬ್ರಾಡ್ಬ್ಯಾಂಡ್ ವೇಗ

- ಲ್ಯಾಂಡ್ ಲೈನ್ ಫೋನ್, ಅಲ್ಟ್ರಾ ಹೈ ಡೆಫಿನಿಷನ್ ಮನರಂಜನೆ

- ವರ್ಚುವಲ್ ರಿಯಾಲಿಟಿ ಕನ್ಟೆಂಟ್

- ಮಲ್ಟಿ-ಪಾರ್ಟಿ ವಿಡಿಯೋ ಕಾನ್ಫರೆನ್ಸಿಂಗ್

- ವಾಯ್ಸ್ ಎನೇಬಲ್ಡ್ ವರ್ಚುವಲ್ ಅಸಿಸ್ಟೆಂಟ್

- ಇಂಟರ್ ಆಕ್ಟಿವ್ ಗೇಮಿಂಗ್, ಹೋಮ್ ಸೆಕ್ಯೂರಿಟಿ ಹಾಗೂ ಸ್ಮಾರ್ಟ್ ಹೋಮ್ ಇತ್ಯಾದಿ ಸೇವೆಗಳು ಸಿಗಲಿವೆ.

ಜಿಯೊ ಗಿಗಾಫೈಬರ್ ಆರಂಭ?

ಜಿಯೊ ಗಿಗಾಫೈಬರ್ ಆರಂಭ?

ಜಿಯೊ ಗಿಗಾಫೈಬರ್ ಹೊಸ ಯೋಜನೆಗಳು ಸೆಪ್ಟೆಂಬರ್ 5, 2019 ರಿಂದ ಆರಂಭವಾಗಲಿದ್ದು, ತದನಂತರದಲ್ಲಿ ಜಿಯೊ ಗಿಗಾ ಫೈಬರ್ ಗ್ರಾಹಕರಿಗೆ ಸಿಗಗಲಿದೆ. ಮುಂದಿನ ದಿನಗಳಲ್ಲಿ 100 ಎಂಬಿಪಿಎಸ್ ವೇಗದಿಂದ 1 ಜಿಬಿಪಿಎಸ್ ವೇಗದವರೆಗೆ ಸೇವೆ ಲಭ್ಯವಾಗಲಿದೆ.

ಜಿಯೋ ತಕಧಿಮಿತ! ಈ ಮೂರು ಪ್ಲಾನ್ ಗಳು ಗ್ರಾಹಕರನ್ನು ಸೆಳೆಯುತ್ತಿವೆ..

ಜಿಯೋ ಧಮಾಕಾ! ಸದ್ದು ಮಾಡುತ್ತಿರುವ 5 ಪ್ಲಾನ್, ಏನೆಲ್ಲ ಉಚಿತ ಇದೆ ನೋಡಿ..

English summary

Jio GigaFiber: Mukesh Ambani announced plans, Everything to know

The JIOFIBER is launching on September 5 and while the details are still not fully revealed Ambani has said that customers who opt for long-term JIOFIBER plans will get free TVs.
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more