For Quick Alerts
ALLOW NOTIFICATIONS  
For Daily Alerts

ಕೇಂದ್ರದಿಂದ ಗುಡ್ ನ್ಯೂಸ್! ತೊಂದರೆಗೀಡಾದ ಸಣ್ಣ ಸಾಲಗಾರರ ಸಾಲ ಮನ್ನಾ

|

ಕೇಂದ್ರ ಸರ್ಕಾರ ದೇಶದ ಸಣ್ಣ ಸಾಲಗಾರರಿಗೆ ಸಂತಸದ ಸುದ್ದಿ ನೀಡುವ ಸುಳಿವು ನೀಡಿದೆ. ದಿವಾಳಿತನ ಕಾನೂನಿನ ಚೌಕಟ್ಟಿನಡಿಯಲ್ಲಿ, ಸಾಲದ ಸುಳಿಯಲ್ಲಿ ಸಿಲುಕಿ ತೊಂದರೆಗಿಡಾಗಿರುವ ಸಣ್ಣ ಸಾಲಗಾರರ ಸಾಲವನ್ನು ಮನ್ನಾ ಮಾಡುವ ಬಗ್ಗೆ ಸರ್ಕಾರ ಯೋಜನೆ ರೂಪಿಸುತ್ತಿದೆ.

ಕಾರ್ಪೊರೇಟ್ ವ್ಯವಹಾರಗಳ ಕಾರ್ಯದರ್ಶಿ ಶ್ರೀನಿವಾಸ್ ಅವರು, ಆರ್ಥಿಕವಾಗಿ ದುರ್ಬಲ ವಿಭಾಗದಿಂದ (ಇಡಬ್ಲ್ಯೂಎಸ್) ಸಾಲಗಾರರಿಗೆ ಉದ್ದೇಶಿತ ಮನ್ನಾ ಮಾಡುವ ಮಾನದಂಡಗಳ ಬಗ್ಗೆ ಮೈಕ್ರೊ ಫೈನಾನ್ಸ್ ಇಂಡಸ್ಟ್ರಿಯೊಂದಿಗೆ ಉದ್ಯಮದೊಂದಿಗೆ ಚರ್ಚೆ ನಡೆಸಲಾಗಿದೆ ಎಂದಿದ್ದಾರೆ.

ಸುಸ್ತಿದಾರರಿಗೆ ಅನ್ವಯ
 

ಸುಸ್ತಿದಾರರಿಗೆ ಅನ್ವಯ

ಸರ್ಕಾರದ ಸಣ್ಣ ಸಾಲಗಾರರ ಸಾಲ ಮನ್ನಾ ಯೋಜನೆಯು ವ್ಯಕ್ತಿಗತ ದಿವಾಳಿತನ ಅಂದರೆ ಸಾಲ ಪಡೆದು ತೀರಿಸಲಾಗದೇ ಸುಸ್ತಿದಾರರಾದವರಿಗೆ ಅನ್ವಯ ಆಗಲಿದೆ. ಮುಖ್ಯವಾಗಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ (ಇಡಬ್ಲ್ಯೂಎಸ್) ಪೈಕಿ ಕಡು ಬಡತನ ಇರುವಂತಹ ಕುಟುಂಬಗಳಿಗೆ ಆದ್ಯತೆ ನೀಡಲಾಗುತ್ತದೆ.

ರೂಪುರೇಷೆ ಹೇಗಿದೆ?

ರೂಪುರೇಷೆ ಹೇಗಿದೆ?

ಆರ್ಥಿಕವಾಗಿ ಹಿಂದುಳಿದ ವರ್ಗಗಳ (ಇಡಬ್ಲ್ಯೂಎಸ್) ಸಾಲಮನ್ನಾ ಯೋಜನೆಯ ಕರಡು ರೂಪುರೇಷೆ ಅನ್ವಯ, ಒಂದು ಬಾರಿ ಸಾಲ ಮನ್ನಾ ಪ್ರಯೋಜನ ಪಡೆದರೆ ಮುಂದಿನ ಐದು ವರ್ಷಗಳವರೆಗೆ ಈ ಪ್ರಯೋಜನ ಪಡೆಯುವಂತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಮೈಕ್ರೋ ಫೈನಾನ್ಸ್ ಉದ್ಯಮಕ್ಕೆ ಆರ್ಥಿಕವಾಗಿ ಧಕ್ಕೆ ಆಗದ ರೀತಿಯಲ್ಲಿ ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.

ನಿಯಮ ಮತ್ತು ಅರ್ಹತೆ

ನಿಯಮ ಮತ್ತು ಅರ್ಹತೆ

ಈ ಸಾಲ ಮನ್ನಾ ನಿಯಮಗಳ ಪ್ರಕಾರ ಸಾಲಗಾರನ ವಾರ್ಷಿಕ ಆದಾಯ ರೂ. 60,000 ಮೀರುವಂತಿರಬಾರದು. ಸಾಲಗಾರನ ಆಸ್ತಿ ರೂ. 20,000 ಮೀರಿರಬಾರದು ಮತ್ತು ಆತನ ಸಾಲ ರೂ. 35,000 ರೂಪಾಯಿಯನ್ನು ಮೀರಿರಬಾರದು. ಇದಲ್ಲದೇ ಸಾಲಗಾರನಿಗೆ ಸ್ವಂತ ಮನೆ ಇರಬಾರದು. ಈ ಎಲ್ಲಾ ಮಾನದಂಡಗಳ ಆಧಾರದ ಮೇಲೆ ಸಾಲಗಾರರ ಸಾಲ ಮನ್ನಾ ಮಾಡಲಾಗುವುದು.

ಐಬಿಸಿ ನಿಬಂಧನೆ
 

ಐಬಿಸಿ ನಿಬಂಧನೆ

ಇದಲ್ಲದೆ, ಪಾಲುದಾರಿಕೆ ಮತ್ತು ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಕಾರ್ಪೊರೇಟ್ ಸಾಲಗಾರ ವೈಯಕ್ತಿಕ ಖಾತರಿಗಾರನಿಗೆ ಸಂಬಂಧಿಸಿದ ಐಬಿಸಿ ನಿಬಂಧನೆಗಳು ತಕ್ಷಣದಿಂದ ಜಾರಿಗೆ ಬರಲಿವೆ. ಮಾರುಕಟ್ಟೆ ಆಧಾರಿತ ಮತ್ತು ಸಮಯಕ್ಕೆ ಅನುಗುಣವಾದ ಪ್ರಕ್ರಿಯೆಯ ಮೂಲಕ ತೊಂದರೆಗೀಡಾದ ಸ್ವತ್ತುಗಳೊಂದಿಗೆ ವ್ಯವಹರಿಸಲು ಐಬಿಸಿ ಚೌಕಟ್ಟನ್ನು ಒದಗಿಸುತ್ತದೆ.

ಕೊನೆ ಮಾತು

ಕೊನೆ ಮಾತು

ದಿವಾಳಿತನ ಸಂಹಿತೆ ಕೋಡ್(ಐಬಿಸಿ) ಅಡಿಯಲ್ಲಿ 'ಫ್ರೆಶ್ ಸ್ಟಾರ್ಟ್' ನಿಬಂಧನೆಗಳ ಭಾಗವಾಗಿ ಉದ್ದೇಶಿತ ಮನ್ನಾವನ್ನು ನೀಡಲಾಗುವುದು. ಸಾಲ ಮನ್ನಾ ವೈಯಕ್ತಿಕ ದಿವಾಳಿತನದ ಭಾಗವಾಗಿ ಇಡಬ್ಲ್ಯೂಎಸ್ ನಲ್ಲಿ ಹೆಚ್ಚು ತೊಂದರೆಗೀಡಾದವರಿಗೆ ಎಂದು ಒತ್ತಿ ಹೇಳಲಾಗಿದೆ.

English summary

Central Govt plans debt waiver for 'small distressed borrower's

The government plans to give debt waiver for "small distressed borrowers" under the insolvency law framework, according to a senior official.
Story first published: Monday, August 19, 2019, 12:29 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more