For Quick Alerts
ALLOW NOTIFICATIONS  
For Daily Alerts

ವೊಡಾಫೋನ್ ಐಡಿಯಾ ನೂತನ ಸಿಇಒ ರವೀಂದರ್ ಟಕ್ಕರ್

|

ವೊಡಾಫೋನ್ ಐಡಿಯಾ ಲಿಮಿಟೆಡ್ ಕಂಪನಿಯ ನೂತನ ಸಿಇಒ ಆಗಿ ವೊಡಾಫೋನ್ ಗ್ರೂಪ್ಸ್ ಇಂಡಿಯಾ ಪ್ರತಿನಿಧಿಯಾಗಿರುವ ರವೀಂದರ್ ಟಕ್ಕರ್ ನೇಮಕಗೊಂಡಿದ್ದಾರೆ.

ವೊಡಾಫೋನ್ ಐಡಿಯಾ ನೂತನ ಸಿಇಒ ರವೀಂದರ್ ಟಕ್ಕರ್

 

ವೊಡಾಫೋನ್ ಐಡಿಯಾ ಲಿಮಿಟೆಡ್ ನ ಸಿಇಒ ಆಗಿದ್ದ ಬಾಲೇಶ್ ಶರ್ಮಾ ಅವರು ವೈಯಕ್ತಿಕ ಕಾರಣಗಳನ್ನು ನೀಡಿ ರಾಜೀನಾಮೆ ಸಲ್ಲಿಸಿದ್ದಾರೆ. ಇದೀಗ ಅವರ ಸ್ಥಾನವನ್ನು ಭಾರತದ ರವೀಂದರ್ ಟಕ್ಕರ್ ವಹಿಸಲಿದ್ದಾರೆ ಎಂದು ಸಂಸ್ಥೆ ಹೇಳಿದೆ.

ಕಳೆದ ವರ್ಷ ಆಗಸ್ಟ್ ನಲ್ಲಿ ವೊಡಾಫೊನ್, ಐಡಿಯ ವಿಲೀನಗೊಂಡು ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಒಂದು ವರ್ಷದ ಒಳಗಾಗಿ ಶರ್ಮಾ ಅವರ ನಿರ್ಗಮಿಸಿದ್ದಾರೆ. ವಿಲೀನಗೊಂಡ ನಂತರ ಕಂಪನಿಯು ಮಾರುಕಟ್ಟೆಯಲ್ಲಿ ವೈಫಲ್ಯ ಕಂಡಿದೆ. ಕಳೆದ ವರ್ಷದ ಪ್ರತಿ ತ್ರೈಮಾಸಿಕದಲ್ಲಿ ನಷ್ಟವನ್ನು ದಾಖಲಿಸಿದೆ.

ರವೀಂದರ್ ಟಕ್ಕರ್ ಅವರು ವೊಡಾಫೋನ್ ಐಡಿಯಾ ಮತ್ತು ಸಿಂಧೂ ಟವರ್ಸ್ ಮಂಡಳಿಯ ಸದಸ್ಯರಾಗಿದ್ದಾರೆ. ಭಾರತದ ಎಲ್ಲಾ ವೊಡಾಫೋನ್ ಗ್ರೂಪ್ ಹಿತಾಸಕ್ತಿಗಳಿಗೆ ಇವರೇ ಜವಾಬ್ದಾರರು. ಇದಕ್ಕೂ ಮೊದಲು ಅವರು ಮೂರು ವರ್ಷಗಳ ಕಾಲ ವೊಡಾಫೋನ್ ರೊಮೇನಿಯಾದ ಸಿಇಒ ಮತ್ತು ಲಂಡನ್‌ನ ವೊಡಾಫೋನ್ ಪಾಲುದಾರ ಮಾರುಕಟ್ಟೆಗಳ ಸಿಇಒ ಆಗಿದ್ದರು. ಅವರು 1994 ರಿಂದ ವೊಡಾಫೋನ್ ಸಂಸ್ಥೆಯಲ್ಲಿದ್ದಾರೆ.

Read more about: vodafone idea telecom finance news
English summary

Vodafone Idea new CEO Ravinder Takkar

Vodafone Idea Ltd ceo Balesh Sharma has resigned citing “personal reasons" and will be replaced by Vodafone Group’s India representative, Ravinder Takkar.
Story first published: Tuesday, August 20, 2019, 16:00 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more