For Quick Alerts
ALLOW NOTIFICATIONS  
For Daily Alerts

ಗುಡ್ ನ್ಯೂಸ್!! ಕೇವಲ 59 ನಿಮಿಷದಲ್ಲಿ ಗೃಹ, ಕಾರು, ವೈಯಕ್ತಿಕ, ಶಿಕ್ಷಣ ಸಾಲ ಅನುಮೋದನೆ

|

ದೇಶದ ಮಂದಗತಿಯ ಆರ್ಥಿಕತೆಗೆ ಕ್ರಾಂತಿಕಾರಕ ವೇಗ ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು ತ್ವರಿತಗತಿಯ ಸಾಲ ವಿತರಣೆಗೆ ಬ್ಯಾಂಕುಗಳಿಗೆ ಸೂಚನೆ ನೀಡಿದೆ.

ಸಾರ್ವಜನಿಕ ವಲಯದ ಬ್ಯಾಂಕುಗಳು ತಮ್ಮ ಚಿಲ್ಲರೆ ಸಾಲ ವ್ಯವಹಾರವನ್ನು ವಿಸ್ತರಿಸುವ ಉದ್ದೇಶದಿಂದ ಗೃಹ, ಶಿಕ್ಷಣ ಮತ್ತು ವಾಹನ ಸಾಲ ಸೇರಿದಂತೆ ಚಿಲ್ಲರೆ ಉತ್ಪನ್ನಗಳನ್ನು 'psbloansin59minutes' ಪೋರ್ಟಲ್ ಮೂಲಕ ಪರಿಚಯಿಸಲು ಸಜ್ಜಾಗುತ್ತಿವೆ. ಈ ಅಂತರ್ಜಾಲ ತಾಣದ ಮೂಲಕ ಗೃಹ ಸಾಲ, ವಾಹನ ಸಾಲ, ಶಿಕ್ಷಣ, ವೈಯಕ್ತಿಕ ಸಾಲ ಸೇರಿದಂತೆ ಸೌಲಭ್ಯಗಳು ಸಿಗಲಿವೆ. ಹೀಗಾಗಿ ಇನ್ನುಮುಂದೆ ಕೇವಲ 59 ನಿಮಿಷದಲ್ಲಿ ಗೃಹ, ಕಾರು, ವೈಯಕ್ತಿಕ, ಶಿಕ್ಷಣ ಸಾಲ ಲಭ್ಯವಾಗಲಿದೆ.

ರೂ. 1 ಕೋಟಿ ತ್ವರಿತ ಸಾಲ
 

ರೂ. 1 ಕೋಟಿ ತ್ವರಿತ ಸಾಲ

ಪ್ರಸ್ತುತ, psbloansin59minutes ಪೋರ್ಟಲ್ ಮೂಲಕ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‌ಎಂಇ) ಕೇವಲ 59 ನಿಮಿಷಗಳಲ್ಲಿ ಅಥವಾ ಒಂದು ಗಂಟೆಗಿಂತ ಕಡಿಮೆ ಅವಧಿಯಲ್ಲಿ ರೂ. 1 ಕೋಟಿಗಳವರೆಗೆ ತ್ವರಿತಗತ ಸಾಲಕ್ಕೆ ಅನುಮೋದನೆ ನೀಡಿದೆ.

ಈ ಬ್ಯಾಂಕುಗಳಲ್ಲಿ 5 ಕೋಟಿ ಸಾಲ

ಈ ಬ್ಯಾಂಕುಗಳಲ್ಲಿ 5 ಕೋಟಿ ಸಾಲ

ಕೇಂದ್ರದ ಸೂಚನೆಗೆ ಒಪ್ಪಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಮತ್ತು ಕಾರ್ಪೊರೇಷನ್ ಬ್ಯಾಂಕ್ ಸೇರಿದಂತೆ ಕೆಲವು ಬ್ಯಾಂಕುಗಳು psbloansin59minutes ಪೋರ್ಟಲ್ ಮೂಲಕ ರೂ. 5 ಕೋಟಿ ಸಾಲಕ್ಕೆ ಅನುಮೋದನೆ ನೀಡಲು ನಿರ್ಧರಿಸಿವೆ.

ಒಂದು ಗಂಟೆ ಅವಧಿಯಲ್ಲಿ ಸಾಲ ಅನುಮೋದನೆ

ಒಂದು ಗಂಟೆ ಅವಧಿಯಲ್ಲಿ ಸಾಲ ಅನುಮೋದನೆ

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಚಿಲ್ಲರೆ ಸಾಲದ ವಹಿವಾಟನ್ನು ವೇಗವಾಗಿ ವಿಸ್ತರಿಸಿ ಒಂದು ಗಂಟೆಗಿಂತ ಕಡಿಮೆ ಅವಧಿಯಲ್ಲಿ ಸಾಲ ಅನುಮೋದನೆ ನೀಡುವ ಅಂತರ್ಜಾಲ ತಾಣ psbloansin59minutes ಸೌಲಭ್ಯವನ್ನು ಬಳಸಿಕೊಳ್ಳಲು ಸಿದ್ದತೆ ನಡೆಸಿವೆ.

ಸಾಲ ಪ್ರಕ್ರಿಯೆಗಳ ವಹಿವಾಟು
 

ಸಾಲ ಪ್ರಕ್ರಿಯೆಗಳ ವಹಿವಾಟು

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ) ಅರ್ಹತಾ ಪತ್ರ ಮತ್ತು ತಾತ್ವಿಕ ಅನುಮೋದನೆಯನ್ನು ಕೇವಲ 59 ನಿಮಿಷಗಳಲ್ಲಿ ಪಡೆಯುವ ರೀತಿಯಲ್ಲಿ ಈ ಸಾಲ ಪ್ರಕ್ರಿಯೆಯು ವಹಿವಾಟು ಸಮಯವನ್ನು ಕಡಿಮೆ ಮಾಡಿದೆ. ಅನುಮೋದನೆ ಪಡೆದ ಒಂದು ಗಂಟೆಯ ನಂತರದಲ್ಲಿ ಸಾಲವನ್ನು 7-8 ಕೆಲಸದ ದಿನಗಳಲ್ಲಿ ವಿತರಿಸುವ ನಿರೀಕ್ಷೆಯಿದೆ.

ನರೇಂದ್ರ ಮೋದಿ ಕೊಡುಗೆ

ನರೇಂದ್ರ ಮೋದಿ ಕೊಡುಗೆ

ದೇಶದ ಅತಿದೊಡ್ಡ ಆನ್ಲೈನ್ ಸಾಲ ನೀಡುವ ವೇದಿಕೆಯೆಂದು ಹೆಸರಿಸಲಾದ ಈ psbloansin59minutes ಪೋರ್ಟಲ್ ಅನ್ನು ಎಂಎಸ್‌ಎಂಇಗಳಿಗೆ ತ್ವರಿತ ಸಾಲ ಪ್ರವೇಶ ಮತ್ತು ಬ್ಯಾಂಕಿಂಗ್ ಪಾರದರ್ಶಕತೆ ಸಾಧಿಸಲು ಪ್ರಧಾನಿ ನರೇಂದ್ರ ಮೋದಿ ನವೆಂಬರ್ 2018 ರಲ್ಲಿ ಪ್ರಾರಂಭಿಸಿದರು. ಪ್ರಾರಂಭವಾದ ನಾಲ್ಕು ತಿಂಗಳಲ್ಲಿ ಪೋರ್ಟಲ್ ರೂ. 35,000 ಕೋಟಿ ರೂ.ಗಳ ಸಾಲವನ್ನು ಮಂಜೂರು ಮಾಡಿದೆ. ಮಾರ್ಚ್ 31, 2019 ರ ಹೊತ್ತಿಗೆ, 50,706 ಕ್ಕೂ ಹೆಚ್ಚು ಪ್ರಸ್ತಾಪಗಳಿಗೆ ತಾತ್ವಿಕ ಅನುಮೋದನೆ ದೊರೆತಿದ್ದು, ಅವುಗಳಲ್ಲಿ 27,893 ಮನವಿಗಳು ಮಂಜೂರಾಗಿವೆ.

English summary

PSU banks to introduce home, auto loans within 59 minutes

Public sector banks are gearing up to introduce retail products, including housing and auto loans, on 'psbloansin59minutes' portal with a view to expand their retail loan business.
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more