For Quick Alerts
ALLOW NOTIFICATIONS  
For Daily Alerts

2020 ರ ವೇಳೆಗೆ ಪ್ರಧಾನ ಮಂತ್ರಿ ಅವಾಸ ಯೋಜನೆಯ ಎಲ್ಲರ ಮನೆಗಳು ಮಂಜೂರು

|

ಕೇಂದ್ರ ಸರ್ಕಾರವು ಮಾರ್ಚ್ 2020 ರ ವೇಳೆಗೆ ಪ್ರಧಾನ ಮಂತ್ರಿ ಆವಾಸ ಯೋಜನೆ (ಪಿಎಂಎವೈ) ಅಡಿಯಲ್ಲಿ ಉದ್ದೇಶಿತ 1.12 ಕೋಟಿ ಮನೆಗಳನ್ನು ಮಂಜೂರು ಮಾಡುತ್ತದೆ ಎಂದು ಕೇಂದ್ರ ವಸತಿ ಮತ್ತು ನಗರಾ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ರಾಷ್ಟ್ರೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಮಂಡಳಿಯ 15 ನೇ ವಾರ್ಷಿಕ ಸಮಾವೇಶದಲ್ಲಿ ತಿಳಿಸಿದ್ದಾರೆ.

84 ಲಕ್ಷ ಮನೆ ಮಂಜೂರು
 

84 ಲಕ್ಷ ಮನೆ ಮಂಜೂರು

ಪಿಎಂ ಅವಾಸ ಯೋಜನಯಡಿಯಲ್ಲಿ ನಗರ ಭಾಗದಲ್ಲಿ 1 ಕೋಟಿ ಆರಂಭಿಕ ಗುರಿಯಲ್ಲಿ 84 ಲಕ್ಷ ಮನೆಗಳು ಮಂಜೂರಾಗಿವೆ. ಈಗಾಗಲೇ 84 ಲಕ್ಷ ಮನೆಗಳು ಮಂಜೂರಾಗಿದ್ದು, ಡಿಸೆಂಬರ್ ೨೦೧೯ರ ಅಂತ್ಯದ ವೇಳೆಗೆ 1 ಕೋಟಿ ಮನೆಗಳನ್ನು ಮಂಜೂರು ಮಾಡಲಾಗುವುದು ಎಂದು ಹೇಳಿದ್ದಾರೆ. 12 ಲಕ್ಷ ಹೆಚ್ಚುವರಿ ಮನೆಗಳ ಬೇಡಿಕೆಯಿಂದ ನಮ್ಮ ಗುರಿ 1.12 ಕೋಟಿಗೆ ಏರಿಸಿದ್ದು, 2020ರ ಸಾಲಿನ ಮೊದಲ ಮೂರು ತಿಂಗಳಲ್ಲಿ ಮಂಜೂರು ಮಾಡಲಾಗುವುದು ಎಂದು ಪುರಿ ಹೇಳಿದ್ದಾರೆ.

24 ಲಕ್ಷ ಮನೆ ಹಸ್ತಾಂತರ

24 ಲಕ್ಷ ಮನೆ ಹಸ್ತಾಂತರ

ಮನೆಗಳು ನಿಗಧಿತ ಸಮಯದೊಳಗೆ ಪೂರ್ಣಗೊಳ್ಳಲಿವೆ ಎಂದು ಆಶಯ ವ್ಯಕ್ತಪಡಿಸಿದ ಪುರಿ, 24 ಲಕ್ಷ ಮನೆಗಳನ್ನು ಪಿಎಂಎವೈ ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ ಎಂದರು. 48 ಲಕ್ಷ ಮನೆಗಳ ಕೆಲಸ ಕಾರ್ಯಚರಣೆಯಲ್ಲಿದ್ದು, ಈ ಅಂಕಿ ಅಂಶವು ಶೀಘ್ರದಲ್ಲೇ 75 ಲಕ್ಷವನ್ನು ತಲುಪಲಿದೆ. ಈಗಾಗಲೇ 24 ಲಕ್ಷ ಮನೆಗಳನ್ನು ಹಸ್ತಾಂತರಿಸಿದ್ದು, ಈ ಸಂಖ್ಯೆ ಶೀಘ್ರದಲ್ಲೇ 50 ಲಕ್ಷವನ್ನು ಮುಟ್ಟಲಿದೆ.

ರೇರಾ ಎಫೆಕ್ಟ್

ರೇರಾ ಎಫೆಕ್ಟ್

ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ(ರೇರಾ) ಅನೇಕ ವಿಪತ್ತುಗಳನ್ನು ತೆಗೆದು ಹಾಕಿದೆ. ಆದರೆ ಈ ಕಾಯಿದೆ ಅನುಷ್ಠಾನವಾಗಿ ಕೇವಲ ಎರಡು ವರ್ಷಗಳಾದ್ದರಿಂದ, ಎಲ್ಲಾ ಸಮಸ್ಯೆಗಳನ್ನು ಒಂದೇ ಸಮಯದಲ್ಲಿ ಪರಿಹರಿಸುತ್ತದೆ ಎಂದು ನಿರೀಕ್ಷಿಸಲಾಗುವುದಿಲ್ಲ ಎಂದಿದ್ದಾರೆ. ರೇರಾ ಕಾರ್ಯವಿಧಾನಗಳನ್ನು ಸುವ್ಯವಸ್ಥಿತಗೊಳಿಸುವ ಪ್ರಕ್ರಿಯೆಯಲ್ಲಿದ್ದೇವೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ ಅವರು ರೇರಾದ ಹಲವಾರು ನಿಬಂಧನೆಗಳನ್ನು ತಿದ್ದುಪಡಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಡೆವಲಪರ್ ಮತ್ತು ಮನೆ ಖರೀದಿದಾರರಿಗೆ ಅನುಕೂಲವಾಗಲಿದೆ.

Read more about: pmay housing home loan money
English summary

All PMAY houses to be sanctioned by March 2020

The government would sanction all the targeted 1.12 crore houses under the Pradhan Mantri Awas Yojana (PMAY) by March 2020.
Story first published: Thursday, August 22, 2019, 11:58 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more