For Quick Alerts
ALLOW NOTIFICATIONS  
For Daily Alerts

ಪಿ ಚಿದಂಬರಂ ಬಂಧನ, ಅವರು ಭಾಗಿಯಾದ ಹಗರಣಗಳ ಪಟ್ಟಿ ಇಲ್ಲಿದೆ..!

|

ಕಾಂಗ್ರೆಸ್ ಮುಖಂಡ ಹಾಗು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ರನ್ನು ಐಎನ್‌ಎಕ್ಸ್‌ ಮೀಡಿಯಾ ಹೌಸ್‌ ಹಗರಣದಲ್ಲಿ ಸಿಲುಕಿರುವ ಕಾರಣ ಸಿಬಿಐ ಅಧಿಕಾರಿಗಳು ಬುಧವಾರ ರಾತ್ರಿ ಬಂಧಿಸಿದ್ದಾರೆ.

ಬುಧವಾರ ನಡೆದ ದಿಢೀರ್‌ ಬೆಳವಣಿಗೆಯಿಂದ ಕಾಂಗ್ರೆಸ್ ನಲ್ಲಿ ಅಲ್ಲೋಲ ಕಲ್ಲೊಲವೇ ಉಂಟಾಯಿತು. ನಿನ್ನೆ ರಾತ್ರಿ ಚಿದಂಬರಂ ರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು, ಸಿಬಿಐ ಅಧಿಕಾರಿಗಳ ವಾಹನದಲ್ಲಿ ಸಿಬಿಐ ಮುಖ್ಯ ಕಚೇರಿಗೆ ಕರೆದೊಯ್ಯಲಾಯಿತು.

ಐಎನ್ಎಕ್ಸ್ ಮೀಡಿಯಾ ಹೌಸ್‌ ಹಗರಣ
 

ಐಎನ್ಎಕ್ಸ್ ಮೀಡಿಯಾ ಹೌಸ್‌ ಹಗರಣ

ಐಎನ್ಎಕ್ಸ್ ಮೀಡಿಯಾ ಸಂಸ್ಥೆಗೆ ರೂ. ೩೦೫ ಕೋಟಿವಿದೇಶಿ ಬಂಡವಾಳ ಸ್ವೀಕರಿಸಲು ವಿದೇಶಿ ಬಂಡವಾಳ ಹೂಡಿಕೆ ಉತ್ತೇಜನ ಸಂಸ್ಥೆ (ಎಫ್ಐಪಿಬಿ) ಒಪ್ಪಿಗೆ ಪಡೆಯುವ ಸಂದರ್ಭದಲ್ಲಿ ಅವ್ಯವಹಾರ ನಡೆದಿರುವ ಪ್ರಕರಣ ಇದಾಗಿದೆ. ಈ ಅವ್ಯವಹಾರ ನಡೆದ ಸಂದರ್ಭದಲ್ಲಿ ಪಿ. ಚಿದಂಬರಂ ಅವರೇ ಹಣಕಾಸು ಸಚಿವರಾಗಿದ್ದರು. ಹೀಗಾಗಿ ಈ ಪ್ರಕರಣ ಅವರಿಗೆ ಉರುಳಾಗಿದೆ!

೧೦ ಲಕ್ಷ ವ್ಯವಹಾರ!

೧೦ ಲಕ್ಷ ವ್ಯವಹಾರ!

ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಇಂದ್ರಾಣಿ ಮುಖರ್ಜಿ ಜೊತೆ ಚಿದಂಬರಂ ಮಗ ಕಾರ್ತಿ ಕೂಡ ಪ್ರಕರರಣದಲ್ಲಿ ಭಾಗಿಯಾಗಿದ್ದಾರೆ. ಐಎನ್ಎಕ್ಸ್ ಮೀಡಿಯಾ ಪರವಾಗಿ ಮಂಡಳಿಯ ಒಪ್ಪಿಗೆ ಪಡೆಯಲು ಕಾರ್ತಿ ಮತ್ತು ಮುಖರ್ಜಿ ನಡುವೆ ಹತ್ತು ಲಕ್ಷ ವ್ಯವಹಾರ ನಡೆದಿದೆ. ಈ ಅವ್ಯವಹಾರದ ಬಗ್ಗೆ ಇಂದ್ರಾಣಿ ಸಿಬಿಐ ವಿಚಾರಣೆಯಲ್ಲಿ ಹೇಳಿಕೆ ನೀಡಿದ್ದರು.

ಮೋಡಸ್ ಒಪೆರಾಂಡಿ

ಮೋಡಸ್ ಒಪೆರಾಂಡಿ

ಸರ್ಕಾರದ ಮೂಲಗಳ ಪ್ರಕಾರ, ಪಿ ಚಿದಂಬರಂ ಅವರು ಅಕ್ರಮ ವಿದೇಶಿ ಹೂಡಿಕೆ (ಎಫ್‌ಐಪಿಬಿ) ಅನುಮತಿ ನೀಡಿರುವ ಸುತ್ತ ತಿರುಗುತ್ತದೆ. ಅವರ ಮಗ ಕಾರ್ತಿ ಚಿದಂಬರಂ ಅವರು ವಿವಿಧ ಶೆಲ್ ಕಂಪನಿಗಳ ಮೂಲಕ ಎಫ್‌ಐಪಿಬಿ ಪಾವತಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಭಾರತ ಮತ್ತು ವಿದೇಶಗಳಲ್ಲಿ ನೋಂದಾಯಿಸಲಾದ ಇಂತಹ ಹಲವಾರು ಶೆಲ್ ಕಂಪನಿಗಳನ್ನು ತನಿಖಾ ಸಂಸ್ಥೆಗಳು ಗುರುತಿಸಿವೆ. ಈ ಶೆಲ್ ಕಂಪೆನಿ ಒಂದರಲ್ಲಿ ರೂ. 300 ಕೋಟಿ ಅವ್ಯವಹಾರ ನಡೆದಿದೆ.

ಹಣ ವರ್ಗಾವಣೆ
 

ಹಣ ವರ್ಗಾವಣೆ

ಶೆಲ್ ಕಂಪೆನಿಗಳಲ್ಲಿನ ಹಣವನ್ನು ಚಿದಂಬರಂ ಅವರ ಕುಟುಂಬಕ್ಕೆ ಮರುಪಾವತಿ ಮಾಡಲಾಗಿದ್ದು, ಅವುಗಳನ್ನು ವೈಯಕ್ತಿಕ ಖರ್ಚುಗಳಿಗೆ ಬಳಸಲಾಗುತ್ತಿತ್ತು ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಈ ಶೆಲ್ ಕಂಪನಿಗಳಲ್ಲಿನ ಠೇವಣಿಗಳನ್ನು ಪಿ. ಚಿದಂಬರಂ ಮತ್ತು ಕಾರ್ತಿ ಚಿದಂಬರಂ ಅವರ ವೈಯಕ್ತಿಕ ಖರ್ಚುಗಳನ್ನು ಪೂರೈಸಲು, ೧೨ಕ್ಕಿಂತಲೂ ಹೆಚ್ಚು ವಿದೇಶಿ ಬ್ಯಾಂಕ್ ಖಾತೆ ತೆರೆಯಲು ಮತ್ತು ಹಣ ಠೇವಣಿ ಮಾಡಲಾಗಿದೆ. ಮಲೇಷ್ಯಾ, ಸ್ಪೇನ್, ಯುಕೆ, ಇತ್ಯಾದಿಗಳಲ್ಲಿ ಹಲವಾರು ಆಸ್ತಿಗಳನ್ನು ಖರೀದಿಸಲು ಬಳಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪಿ ಚಿದಂಬರಂ ಅವರ ಮೊಮ್ಮಗಳ ಮೂಲಕ ಹಣವನ್ನು ಕುಟುಂಬಕ್ಕೆ ಮರುಪಾವತಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಪ್ರಮುಖ ಶೆಲ್ ಕಂಪನಿಯ ಷೇರುದಾರರು ಮತ್ತು ನಿರ್ದೇಶಕರು ಶೆಲ್ ಕಂಪನಿಯ ಸಂಪೂರ್ಣ ಷೇರುಗಳನ್ನು ಪಿ. ಚಿದಂಬರಂ ಅವರ ಮೊಮ್ಮಗಳ ಮತ್ತುಕಾರ್ಯನಿರ್ವಾಹಕ ಕಾರ್ತಿ ಚಿದಂಬರಂಗೆ ವರ್ಗಾವಣೆ ಮಾಡಿದ್ದಾರೆ.

ಕಾರ್ತಿ ಸಿಎ ಭಾಸ್ಕರರಾಮನ್ ಬಂಧನ

ಕಾರ್ತಿ ಸಿಎ ಭಾಸ್ಕರರಾಮನ್ ಬಂಧನ

ಅವ್ಯವಹಾರದ ಮೂಲಕ ಗಳಿಸಿದ ಹಣವನ್ನು ನಿರ್ವಹಣೆ ಮಾಡುವ ಬಗ್ಗೆ ಸಲಹೆ ನೀಡುತ್ತಿದ್ದ್ ಆರೋಪದಲ್ಲಿ ಕಾರ್ತಿ ಅವರ ಸಿಎ ಭಾಸ್ಕರರಾಮನ್ ಅವರ ಬಂಧನವಾಯಿತು. ಭಾಸ್ಕರರಾಮನ್ ಬಂಧನದ ನಂತರ, ಎಎಸಿಪಿಎಲ್ ಗೆ ಎಫ್ಐಪಿಬಿ ಅನುಮತಿ ಸಿಗಲು 35 ಲಕ್ಷ, 20,000 ಯುಎಸ್ ಡಾಲರ್, ರೂ. 60 ಲಕ್ಷ ಹಾಗೂ 500,000 ಯುಎಸ್ ಡಾಲರ್ ಮೊತ್ತ ಕಿಕ್ ಬ್ಯಾಕ್ ನೀಡಲಾಗಿತ್ತು. ಇದಕ್ಕೆ ಸಂಬಂಧಿಸಿದ ವೋಚರ್ ಗಳು ಕಾರ್ತಿ ಕಚೇರಿಯಲ್ಲೇ ಸಿಕ್ಕಿದೆ. ಐಎನ್ಎಕ್ಸ್ ಮೀಡಿಯಾಕ್ಕೆ ಹೂಡಿಕೆ ವಿತ್ತ ಸಚಿವಾಲಯದ ಅನುಮತಿ ಸಿಕ್ಕ (2008) ಸಂದರ್ಭಕ್ಕೆ ವೋಚರ್ಸ್ ದಿನಾಂಕ ತಾಳೆ ಆಗುತ್ತಿದೆ.

ಕಾರ್ತಿ ಬಂಧನ

ಕಾರ್ತಿ ಬಂಧನ

೨೦೧೮ರ ಫೆಬ್ರವರಿಯಲ್ಲಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಸಿಬಿಐ ಅಧಿಕಾರಿಗಳು ಕಾರ್ತಿಯನ್ನು ಬಂಧಿಸಿದರು. ನಂತರ ೨೩ ದಿನಗಳ ತರುವಾಯ ಕಾರ್ತಿಗೆ ಜಾಮೀನು ಸಿಗುತ್ತದೆ. ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿ ನಿರೀಕ್ಷಣಾ ಜಾಮೀನು ಕೋರಿ ದೆಹಲಿ ಹೈಕೋರ್ಟ್ ಅರ್ಜಿ ಸಲ್ಲಿಸಲಾಯಿತು.

೫೪ ಕೋಟಿ ಮುಟ್ಟಗೋಲು

೫೪ ಕೋಟಿ ಮುಟ್ಟಗೋಲು

೨೦೧೮ರ ಅಗಸ್ಟ್ ನಲ್ಲಿ ಭಾರತ, ಬ್ರಿಟನ್, ಸ್ಪೇನ್ ನಲ್ಲಿಕಾರ್ತಿ ಚಿದಂಬರಂಗೆ ಸೇರಿದರೂ ೫೪ ಕೋಟಿ ಮೊತ್ತ, ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿತು.

ಲುಕ್ ಔಟ್ ನೋಟಿಸ್ ಜಾರಿ

ಲುಕ್ ಔಟ್ ನೋಟಿಸ್ ಜಾರಿ

ಕಾರ್ತಿ ವಿರುದ್ಧ ೨೦೧೭ರ ಆಗಸ್ಟ್ 14ರಂದು ಹೈಕೋರ್ಟ್ ಆದೇಶ ರದ್ದುಪಡಿಸಿ, ಮತ್ತೆ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಯಿತು. ಆಗಸ್ಟ್ 10ರಂದು ಲುಕ್ ಔಟ್ ನೋಟಿಸ್ ಗೆ ತಡೆ ಮದ್ರಾಸ್ ಹೈಕೋರ್ಟ್ ನೀಡಿತು. ಜೂನ್ 16, 2017ಕ್ಕೆ Foreigner Regional Registration Officer (FRRO) ಗೃಹ ಸಚಿವಾಲಯ, ವಿದೇಶಾಂಗ ಸಚಿವಾಲಯದಿಂದ ಕಾರ್ತಿ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಯಿತು. ಇದಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಮೇ ತಿಂಗಳಿನಲ್ಲಿ ಆರ್ಥಿಕ ಅವ್ಯವಹಾರದ ಆರೋಪದ ಮೇಲೆ ಪಿ. ಚಿದಂಬರಂ ವಿರುದ್ಧ ಸಿಬಿಐ ಎಫ್ಐಆರ್ ಹಾಕಿ, ದೋಷರೋಪಣ ಪಟ್ಟಿ ಸಿದ್ಧಪಡಿಸಿತ್ತು.

ಚಿದಂಬರಂ ವಕೀಲ ಅಭಿಶೇಕ್ ಸಿಂಘ್ವಿ ಹೇಳಿದ್ದೇನು?

ಚಿದಂಬರಂ ವಕೀಲ ಅಭಿಶೇಕ್ ಸಿಂಘ್ವಿ ಹೇಳಿದ್ದೇನು?

ಇದೊಂದು ರಾಜಕೀಯ ಪ್ರೇರಿತ ಪ್ರಕರಣ ಎಂದು ಪಿ.ಚಿದಂಬರಂ ಅವರ ಬಂಧನದ ಬಳಿಕ ಸುದ್ದಿಗಾರರೊಂದಿಗೆ ವಕೀಲ ಅಭಿಶೇಕ್ ಸಿಂಘ್ವಿ ಮಾತನಾಡಿದರು. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ನಡೆದ ರೀತಿ ನೋಡಿದರೆ ಪ್ರಕರಣದ ಹಿಂದಿನ ಅಸಲಿಯೆತ್ತು ಊಹೆ ಮಾಡಿಕೊಳ್ಳಬಹುದು. ಎಫ್‌ಐಆರ್‌ನಲ್ಲಿ ಹೆಸರೇ ಇಲ್ಲ, ಆರೋಪಿಯೇ ಅಲ್ಲದ, ಸಿಬಿಐ ನೀಡಿರುವ ಎಲ್ಲ ಸಮನ್ಸ್ಗಳಿಗೂ ಉತ್ತರಿಸಿ ಹಾಜರಾಗಿರುವ ವ್ಯಕ್ತಿಯೊಬ್ಬರನ್ನು ಬಂಧಿಸಲು ಸಿಬಿಐ ತೋರಿಸಿದ ಆತುರ ಅನುಮಾನ ಉಂಟು ಮಾಡುತ್ತಿದೆ ಎಂದು ಅಭಿಶೇಕ್ ಸಿಂಘ್ವಿ ಹೇಳಿದ್ದಾರೆ.

English summary

P Chidambaram Arrested: Here are the major scams list

P Chidambaram, who is currently trying to evade arrest in INX media case, found himself running from pillar to post to appear in several corruption cases in the past few years.
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more