For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ ಕುಸಿತ, ಷೇರು ಮಾರುಕಟ್ಟೆ ಮೇಲೆ ಪ್ರಭಾವ ಬೀರಿದ 5 ಅಂಶಗಳು

|

ಮಂದಗತಿಯಲ್ಲಿ ಸಾಗುತ್ತಿರುವ ಆರ್ಥಿಕತೆಯ ಚೇತರಿಕೆಗೆ ಕೇಂದ್ರ ಸರ್ಕಾರ ಯಾವುದೇ ಉತ್ತೇಜನ ನೀಡಲು ಬದ್ದವಾಗಿಲ್ಲದ ಕಾರಣ ದೇಶೀಯ ಷೇರುಪೇಟೆ ಗುರುವಾರ ಭಾರೀ ಕುಸಿತಕ್ಕೆ ಒಳಗಾಯಿತು.

ರಿಯಾಲ್ಟಿ, ಮೆಟಲ್, ಆಟೋ ಮತ್ತು ಪಿಎಸ್‌ಯು ಬ್ಯಾಂಕ್ ಷೇರುಗಳು ಅತೀ ಹೆಚ್ಚು ನಷ್ಟ ಅನುಭವಿಸಿದವು. ಬ್ಯಾಂಕಿಂಗ್ ಮತ್ತು ಇಂಧನ ವಲಯದ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದವು.

ಎಫ್‌ಪಿಐ ನಿಯಮಗಳ ಕುರಿತು ಸೆಬಿ ಕೈಗೊಂಡ ಕ್ರಮಗಳು ಉತ್ತಮವಾಗಿವೆ. ಆದರೆ ಬಜೆಟ್ ನಲ್ಲಿ ಮಂಡಿಸಿದ ಎಫ್‌ಪಿಐ ತೆರಿಗೆ ಪ್ರಸ್ತಾಪಗಳ ಕುರಿತು ಸ್ಪಷ್ಟೀಕರಣ ಇಲ್ಲದಿರುವುದರಿಂದ ಹೂಡಿಕೆದಾರರು ಭವಿಷ್ಯದ ಬಗ್ಗೆ ಗೊಂದಲದಲ್ಲಿದ್ದಾರೆ.

ಷೇರುಪೆಟೆ ಮೇಲೆ ಪ್ರಭಾವ ಬೀರಿದ ಪ್ರಮುಖ ಅಂಶಗಳು ಇಲ್ಲಿವೆ:

ಸರ್ಕಾರದ ಬದ್ಧತೆ
 

ಸರ್ಕಾರದ ಬದ್ಧತೆ

ಕೇಂದ್ರ ಸರ್ಕಾರದಿಂದ ಆರ್ಥಿಕ ಉತ್ತೇಜನ ಕೊಡುಗೆಗಳು ಸಿಗುವುದಿಲ್ಲ ಎಂದು ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಕೃಷ್ಣಮೂರ್ತಿ ಸುಬ್ರಮಣಿಯನ್ ಹೇಳಿರುವುದು ಹೂಡಿಕೆದಾರರ ಮೇಲೆ ನಕರಾತ್ಮಕ ಪರಿಣಾಮ ಬೀರಿತು. ಹೂಡಿಕೆದಾರರ ಖರೀದಿಯ ಉತ್ಸಾಹಕ್ಕೆ ತಣ್ಣೀರೆರಚಿತು.

ಜಾಗತಿಕ ತಲ್ಲಣಗಳು

ಜಾಗತಿಕ ತಲ್ಲಣಗಳು

ಯುಎಸ್-ಚೀನಾ ವಾಣಿಜ್ಯ ಸಮರ, ಜಾಗತಿಕ ಆರ್ಥಿಕ ಹಿಂಜರಿತದ ಬಗ್ಗೆ ಹೂಡಿಕೆದಾರರು ಕಳವಳ ವ್ಯಕ್ತಪಡಿಸಿರುವುದು ದೇಶೀ ಮಾರುಕಟ್ಟೆ ಮೇಲೂ ದುಷ್ಪರಿಣಾಮ ಬೀರಿತು.

ಇನ್ನೊಂದೆಡೆ ಯುಎಸ್ ಬಡ್ಡಿದರಗಳ ಅನಿಶ್ಚಿತತೆ ಮತ್ತು ಜಾಗತಿಕ ಹಣಕಾಸು ಪ್ರಚೋದನೆಯ ಫಲವಾಗಿ ಏಷ್ಯಾದ ಷೇರುಗಳು ಕುಸಿತ ಕಂಡಿವೆ. ಕಳೆದ ತಿಂಗಳು ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಕಡಿತಗೊಳಿಸಿದ್ದು ಯುರೋಪಿಯನ್ ಷೇರುಗಳ ಮೇಲೆ ಪ್ರಭಾವ ಉಂಟುಮಾಡಿತ್ತು.

ಆರ್ಥಿಕ ಕುಸಿತ ಭಾರತಕ್ಕೆ ಹೊಡೆತ

ಆರ್ಥಿಕ ಕುಸಿತ ಭಾರತಕ್ಕೆ ಹೊಡೆತ

ಭಾರತದ ಆರ್ಥಿಕ ಬೆಳವಣಿಗೆಯು (ಜಿಡಿಪಿ) ಪ್ರಸಕ್ತ ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ. 5.7ಕ್ಕೆ ಇಳಿಕೆಯಾಗಲಿದೆ ಎಂದು ಜಾಗತಿಕ ಹಣಕಾಸು ಸಂಸ್ಥೆ ನುಮುರಾ ವರದಿ ಮಾಡಿದೆ.

ಗ್ರಾಹಕರ ಅನುಬೋಗ, ಖರಿದಿ ಸಾಮರ್ಥ್ಯ ಕುಸಿರುವುದು, ದುರ್ಬಲ ಹೂಡಿಕೆ ಚಟುವಟಿಕೆಗಳು ಮತ್ತು ಮಂದಗತಿಯ ಸೇವಾ ವಲಯದ ಬೆಳವಣಿಗೆ ಆರ್ಥಿಕ ಪ್ರಗತಿ ದರ (ಜಿಡಿಪಿ) ಕುಸಿತಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ. ಈ ವರದಿ ಹೂಡಿಕೆದಾರರ ಮನೋಭಾವ ಮತ್ತಷ್ಟು ಕುಸಿಯುವಂತೆ ಮಾಡಿತು.

ರೂಪಾಯಿ ಮೌಲ್ಯ
 

ರೂಪಾಯಿ ಮೌಲ್ಯ

ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯವು 42 ಪೈಸೆ ತೀವ್ರ ಕುಸಿತವಾಗಿರುವುದು ಷೇರುಪೇಟೆ ಮೇಲೆ ಕೆಟ್ಟ ಪರಿಣಾಮವನ್ನೇ ಬೀರಿ ಇನ್ನಷ್ಟು ಹದಗೆಡಿಸಿತು. ವಿದೇಶಿ ನಿಧಿಯ ಹೊರಹರಿವಿನ ಮಧ್ಯೆ ರೂಪಾಯಿ ಮೌಲ್ಯ ಕುಸಿಯಿತು. ಇಂದು ದೇಶೀಯ ಕರೆನ್ಸಿ ಮೌಲ್ಯ ರೂ. 71.97 ಕ್ಕೆ ತಲುಪಿದೆ.

ಮಾರುಕಟ್ಟೆಯೆತ್ತ ಒಂದು ನೋಟ!

ಮಾರುಕಟ್ಟೆಯೆತ್ತ ಒಂದು ನೋಟ!

ಬಿಎಸ್ಇ ಸೆನ್ಸೆಕ್ಸ್ 587.44 ಪಾಯಿಂಟ್ ಅಥವಾ ಶೇ. 1.59 ರಷ್ಟು ಕುಸಿದು 36,472.93 ಕ್ಕೆ ತಲುಪಿದ್ದರೆ, ಎನ್‌ಎಸ್‌ಇ ನಿಫ್ಟಿ ಸೂಚ್ಯಂಕವು 180.95 ಪಾಯಿಂಟ್, ಶೇ. 1.67 ರಷ್ಟು ಕುಸಿದು 10,737.75 ಕ್ಕೆ ಕೊನೆಗೊಂಡಿದೆ.

ಯೆಸ್ ಬ್ಯಾಂಕ್ ಕೆಟ್ಟ ಪ್ರದರ್ಶನ ನೀಡಿದ್ದರೆ ಮತ್ತು ಟೆಕ್ ಮಹೀಂದ್ರಾ ಅತ್ಯುತ್ತಮ ಲಾಭ ಗಳಿಸಿತ್ತು. ವೇದಾಂತ, ಬಜಾಜ್ ಫೈನಾನ್ಸ್, ಟಾಟಾ ಮೋಟಾರ್ಸ್ ಮತ್ತು ಎಸ್‌ಬಿಐ ನಷ್ಟ ಕಂಡು, ಶೇಕಡಾ 12 ರಷ್ಟು ಕುಸಿದಿವೆ.

English summary

Sensex tanks 587 points: 5 factors that weighed on Stock market

The domestic stock market slumped over 1.50 per cent on Thursday to hit more than five-month lows after the government remained non-committal on the stimulus package to boost the economy.
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more