For Quick Alerts
ALLOW NOTIFICATIONS  
For Daily Alerts

ಸರ್ಕಾರಿ ಸ್ವಾಮ್ಯದ 10 ಪ್ರಮುಖ ಬ್ಯಾಂಕುಗಳ ಮಹಾ ವಿಲೀನ

|

ಕೇಂದ್ರ ಸರ್ಕಾರವು ಆರ್ಥಿಕ ಸುಧಾರಣಾ, ಬ್ಯಾಂಕುಗಳ ಬಲವರ್ಧನೆ ಕಾರ್ಯಸೂಚಿಯ ಭಾಗವಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಸರ್ಕಾರಿ ಸ್ವಾಮ್ಯದ 10 ಪ್ರಮುಖ ಬ್ಯಾಂಕುಗಳ ಮಹಾ ವಿಲೀನ

 

ಪಿಎನ್ಬಿ + ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ + ಯುನೈಟೆಡ್ ಬ್ಯಾಂಕ್

ಪಂಜಾಬ್ ನ್ಯಾಷನಲ್ ಬ್ಯಾಂಕ್, ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ವಿಲೀನದ ನಂತರ ದೇಶದ ಎರಡನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎನಿಸಲಿದ್ದು, ಇದು ರೂ. ೧.೭೫ ಲಕ್ಷ ಕೋಟಿ ವಹಿವಾಟು ಹೊಂದಿದೆ. ಬ್ಯಾಂಕ್ ಒಟ್ಟು 11.437 ಶಾಖೆಗಳನ್ನು ಹೊಂದಲಿದೆ.

ಕೆನರಾ + ಸಿಂಡಿಕೇಟ್ ಬ್ಯಾಂಕ್

ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ವಿಲೀನಗೊಳ್ಳಲಿದ್ದು, ಇದು ರೂ. 15.20 ಲಕ್ಷ ಕೋಟಿ ವ್ಯವಹಾರದೊಂದಿಗೆ ನಾಲ್ಕನೇ ಅತಿದೊಡ್ಡ ಪಿಎಸ್‌ಬಿ ಆಗಿ ಹೊರಹೊಮ್ಮಲಿದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ + ಆಂಧ್ರ ಬ್ಯಾಂಕ್ + ಕಾರ್ಪೊರೇಷನ್

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ವಿಲೀನದೊಂದಿಗೆ ದೇಶದ ಐದನೇ ದೊಡ್ಡ ಬ್ಯಾಂಕ್ ಎನಿಸಲಿದೆ. ಇದು ರೂ. 14.59 ವ್ಯವಹಾರ ಹೊಂದಿದೆ.

ಇಂಡಿಯನ್ + ಅಲಹಾಬಾದ್ ಬ್ಯಾಂಕ್

ಇಂಡಿಯನ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್ ವಿಲೀನಗೊಂಡು ರೂ. 8.08 ಲಕ್ಷ ಕೋಟಿಗಳ ವ್ಯವಹಾರದೊಂದಿಗೆ 7 ನೇ ಅತಿದೊಡ್ಡ ಪಿಎಸ್‌ಬಿ ಆಗಲಿದೆ.

ಈ ಎಲ್ಲಾ ಪಿಎಸ್‌ಬಿ ವ್ಯವಹಾರಗಳಲ್ಲಿ ಶೇಕಡಾ 88ರಷ್ಟು ಈ ವಿಲೀನಗೊಂಡ ಬ್ಯಾಂಕುಗಳೊಂದಿಗೆ ಇರುತ್ತದೆ.

ಪ್ರಾದೇಶಿಕ ಉಪಸ್ಥಿತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಯುಕೊ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ತಮ್ಮ ಪ್ರಬಲ ಪ್ರಾದೇಶಿಕ ಬ್ಯಾಂಕುಗಳ ಕಾರಣದಿಂದಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತವೆ.

ಬಂಡವಾಳದ ವಿಘಟನೆ

10 ಪಿಎಸ್‌ಬಿಗಳ ಒಟ್ಟು ರೂ. 55,250 ಕೋಟಿ ಒಡೆದು ಹೋದ ವಿವರ ಇಲ್ಲಿದೆ:

ಪಂಜಾಬ್ ನ್ಯಾಷನಲ್ ಬ್ಯಾಂಕ್ - ರೂ. 16,000 ಕೋಟಿ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ - ರೂ. 11,700 ಕೋಟಿ

ಬ್ಯಾಂಕ್ ಆಫ್ ಬರೋಡಾ - ರೂ. 7,000 ಕೋಟಿ

ಕೆನರಾ ಬ್ಯಾಂಕ್ - ರೂ. 6,500 ಕೋಟಿ

ಇಂಡಿಯನ್ ಬ್ಯಾಂಕ್ - ರೂ. 2,500 ಕೋಟಿ

ಇಂಡಿಯನ್ ಓವರ್‌ಸೀಸ್ ಬ್ಯಾಂಕ್ - ರೂ. 3,800 ಕೋಟಿ

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ - ರೂ. 3,300 ಕೋಟಿ

ಯುಕೋ ಬ್ಯಾಂಕ್ - ರೂ. 2,100 ಕೋಟಿ

ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ - ರೂ. 1,600 ಕೋಟಿ

ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ - ರೂ. 750 ಕೋಟಿ

ಬ್ಯಾಂಕುಗಳ ವಿಲೀನಕ್ಕಾಗಿ ದೇಶದ ಉನ್ನತ ಹತ್ತು ಸರ್ಕಾರಿ ಬ್ಯಾಂಕುಗಳ ಮುಖ್ಯ ಅಧಿಕಾರಿಗಳೊಂದಿಗೆ ಹಣಕಾಸು ಸಚಿವಾಲಯ ಸಭೆ ಕರೆದಿತ್ತು.. ಅಲಹಾಬಾದ್ ಬ್ಯಾಂಕ್, ಆಂಧ್ರ ಬ್ಯಾಂಕ್, ಕೆನರಾ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಒಬಿಸಿ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕುಗಳನ್ನು ಸಭೆಗೆ ಆಹ್ವಾನಿಸಲಾಗಿತ್ತು.

English summary

10 public sector banks to be merged into four

Nirmala Sitharaman on Friday announced the merger of Punjab National Bank, Oriental Bank of Commerce and United Bank with business of ₹7.95 trillion to make India’s second-largest bank.
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more