For Quick Alerts
ALLOW NOTIFICATIONS  
For Daily Alerts

ಚೆನ್ನೈ ಘಟಕದಲ್ಲಿ ಐದು ದಿನ ರಜೆ ಘೋಷಿಸಿದ ಅಶೋಕ್ ಲೇಲ್ಯಾಂಡ್

|

ಆಟೊಮೊಬೈಲ್ ವಲಯದ ಕುಸಿತದ ಹಿನ್ನೆಲೆಯಲ್ಲಿ ಚೆನ್ನೈ ಪ್ರಧಾನ ವಾಹನ ತಯಾರಕ ಘಟಕದ ಉತ್ಪಾದನೆಯನ್ನು ಅಶೋಕ್ ಲೇಲ್ಯಾಂಡ್ ಶುಕ್ರವಾರದಿಂದ ಐದು ದಿನಗಳವರೆಗೆ ಸ್ಥಗಿತಗೊಳಿಸುವುದಾಗಿ ಪ್ರಕಟಿಸಿದೆ.

ಚೆನ್ನೈ ಘಟಕದಲ್ಲಿ ಐದು ದಿನ ರಜೆ ಘೋಷಿಸಿದ ಅಶೋಕ್ ಲೇಲ್ಯಾಂಡ್

 

ಆರ್ಥಿಕ ಹಿಜರಿತದಿಂದ ಕಂಗೆಟ್ಟಿರುವ ವಾಹನ ಉದ್ಯಮದ ಪ್ರಮುಖ ಕಂಪನಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಎದುರಾಗಿರುವ ನಷ್ಟವನ್ನು ಕಡಿಮೆಗೊಳಿಸಲು ಅಶೋಕ್ ಲೈಲ್ಯಾಂಡ್ ಮುಂದಾಗಿದ್ದು, ತನ್ನ ಉದ್ಯೋಗಿಗಳಿಗೆಗೆ ಐದು ದಿನಗಳವರೆಗೆ ರಜೆ ಘೋಷಿಸಿದೆ. ಚೆನ್ನೈ ತಯಾರಕ ಘಟಕದ ಕಾರ್ಮಿಕರಿಗೆ ಈ ಮಾಹಿತಿ ರವಾನಿಸಲಾಗಿದ್ದು, ಶುಕ್ರವಾರದಿಂದ ಐದು ದಿನ ರಜೆ ಘೋಷಣೆ ಮಾಡಲಾಗಿದೆ.

ವಾಣಿಜ್ಯ ವಾಹನಗಳ ಉತ್ಪಾದನೆ ಮಾಡುವ ಅಶೋಕ್ ಲೈಲ್ಯಾಂಡ್, ವ್ಯಾಪಾರದಲ್ಲಿ ಮಂದಗತಿ ಆಗಿರುವ ಹಿನ್ನಲೆಯಲ್ಲಿ ಈ ಕ್ರಮ ಕೈಗೊಂಡಿದೆ.

ಐದು ದಿನ ಉತ್ಪಾದನಾ ಕಾರ್ಯಾಚರಣೆ ಸ್ಥಗಿತಗೊಳಿಸುವುದರಿಂದ ಐದು ಸಾವಿರ ಉದ್ಯೋಗಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಐದು ದಿನಗಳ ರಜಾ ವೇತನವನ್ನು ನಂತರದಲ್ಲಿ ನಿರ್ಧರಿಸಲಾಗುವುದು ಎಂದು ತಿಳಿಸಿದೆ. ದೇಶದ ಆಟೊಮೊಬೈಲ್ ಕ್ಷೇತ್ರವು ಮಾರಾಟ ಕುಸಿತ ಕಂಡಿದ್ದು, ಜೊತೆಗೆ ಉದ್ಯೋಗ ನಷ್ಟ ಎದುರಿಸಿದೆ.

ಇದಕ್ಕೂ ಮುನ್ನ ಗುರುವಾರ, ಮಾರುತಿ ಸುಜುಕಿ ತನ್ನ ಗುರುಗ್ರಾಮ್ ಮತ್ತು ಮಾನೇಸರ್ ಉತ್ಪಾದನಾ ಘಟಕಗಳನ್ನು ಸೆಪ್ಟೆಂಬರ್ 7 ಮತ್ತು 9 ರಂದು ಎರಡು ದಿನ ಸ್ಥಗಿತಗೊಳಿಸಿತ್ತು. ತೀವ್ರ ಮಂದಗತಿಯಲ್ಲಿ ಸಿಲುಕಿರುವ ಮಾರುತಿ ಸುಜುಕಿ ಇಂಡಿಯಾ ಆಗಸ್ಟ್‌ನಲ್ಲಿ ತನ್ನ ಉತ್ಪಾದನೆಯನ್ನು ಶೇಕಡಾ 33.99 ರಷ್ಟು ಇಳಿಸಿತ್ತು.

Read more about: automobile money business
English summary

Ashok Leyland Announces 5 Non-working Days at Chennai Plant from Today as Auto Sector's Woes Worsen

Chennai-headquartered automaker Ashok Leyland has announced that it will shut down its production facility for five days from Friday due to “contraction in the commercial vehicle market.
Story first published: Friday, September 6, 2019, 16:20 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more