For Quick Alerts
ALLOW NOTIFICATIONS  
For Daily Alerts

ಜಿಯೋಗೆ ಟಕ್ಕರ್! ಟಾಟಾ ಸ್ಕೈ ಚಂದಾದಾರರಿಗೆ 400ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್ ವೀಕ್ಷಿಸಲು ಭರ್ಜರಿ ಆಫರ್

|

ಜಿಯೋ ಬ್ರಾಂಡ್ಬ್ಯಾಂಡ್ ಕ್ಷೇತ್ರಕ್ಕೆ ಕಾಲಿಟ್ಟ ನಂತರ ಉಳಿದ ಕಂಪನಿಗಳಲ್ಲಿ ದುಗುಡ ಆರಂಭವಾಗಿದೆ! ರಿಲಯನ್ಸ್ ಜಿಯೋ ಫೈಬರ್ ಬ್ರಾಡ್ಬ್ಯಾಂಡ್ ಮಾರುಕಟ್ಟೆಯನ್ನು ಆವರಿಸಲು ಸಜ್ಜಾಗುತ್ತಿದ್ದಂತೆ ಉಳಿದ ಸ್ಪರ್ಧಿಗಳು ಹೊಸ ಆಫರ್ ಗಳೊಂದಿಗೆ ಗ್ರಾಹಕರನ್ನು ಆಕರ್ಷಿಸಲು ಸಜ್ಜಾಗಿವೆ.

ಈಗಾಗಲೇ ಏರ್ಟೆಲ್ ಏಕ್ಸ್ -ಸ್ಟ್ರೀಮ್ ಬಾಕ್ಸ್ ಮತ್ತು ಸ್ಟಿಕ್ ಆಫರ್ ಘೋಷಿಸಿದೆ. ಇದೀಗ ಟಾಟಾ ಸ್ಕೈ ಸರದಿ. ಇದು ಮೊಬೈಲ್ ಅಪ್ಲಿಕೇಶನ್ ಗೆ ಡಿಟಿಹೆಚ್ ಸಂಪರ್ಕಿಸಿದೆ. ಈಗಾಗಲೇ ಟಾಟಾ ಸ್ಕೈ ದೇಶದ ಎಲ್ಲಾ ಡಿಟಿಎಚ್ ಆಪರೇಟರ್‌ಗಳಿಗಿಂತ ಉತ್ತಮವಾದ ಸೇವೆಯನ್ನು ಹೊಂದಿದೆ.

400ಕ್ಕಿಂತ ಹೆಚ್ಚಿನ ಲೈವ್ ಟಿವಿ ಚಾನೆಲ್
 

400ಕ್ಕಿಂತ ಹೆಚ್ಚಿನ ಲೈವ್ ಟಿವಿ ಚಾನೆಲ್

ಟಾಟಾ ಸ್ಕೈ ಮೊಬೈಲ್ ಅಪ್ಲಿಕೇಶನ್ ಮೂಲಕ ಗ್ರಾಹಕರು ತಮ್ಮ ಡಿಟಿಹೆಚ್ ಖಾತೆಯನ್ನು ನಿರ್ವಹಿಸಬಹುದು.ಇದರ ಜೊತೆಗೆ ಲೈವ್ ಟಿವಿ ಸೇವೆಯನ್ನು ಆನಂದಿಸಬಹುದಾಗಿದೆ. ಗ್ರಾಹಕರು ಬೇರೆ ಯಾವುದೇ ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಅಗತ್ಯವಿಲ್ಲ. ಒಂದೇ ಅಪ್ಲಿಕೇಶನ್ ನಲ್ಲಿ ಲೈವ್ ಟಿವಿ ವೀಕ್ಷಣೆ ಮಾಡಬಹುದು. ಟಾಟಾ ಸ್ಕೈ ಚಂದಾದಾರರು ವೆಬ್ ವರ್ಷನ್ ಮೂಲಕ 400ಕ್ಕಿಂತ ಹೆಚ್ಚಿನ ಲೈವ್ ಟಿವಿ ಚಾನೆಲ್ ಗಳನ್ನು ವಿಕ್ಷಿಸಬಹುದು.

ಎಲ್ಲಾ ಚಾನೆಲ್ ಗಳನ್ನು ಟಾಟಾ ಸ್ಕೈ ಚಂದಾದಾರರು ಅಪ್ಲಿಕೇಶನ್ ನಲ್ಲಿಯೇ ವಿಕ್ಷೀಸಬಹುದು. ಸ್ಮಾರ್ಟ್ ಟಿವಿ ಇದ್ದರೆ, ನೀವು ಅದರ ಮೇಲೆ ಬ್ರೌಸರ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಲ್ಲದೇ ವೆಬ್ಸೈಟ್ ತೆರೆದು ಲೈವ್ ಟಿವಿ ವೀಕ್ಷಣೆ ಮಾಡಬಹುದು. ಟಾಟಾ ಸ್ಕೈ ವೆಬ್ಸೈಟ್ ಗೆ ಹೋಗಲು watch.tatasky.com ಕ್ಲಿಕ್ ಮಾಡಬೇಕು.

ಟಾಟಾ ಸ್ಕೈ ಲೈವ್ ಟಿವಿ ವಿಶೇಷತೆ

ಟಾಟಾ ಸ್ಕೈ ಲೈವ್ ಟಿವಿ ವಿಶೇಷತೆ

ಈಗಾಗಲೇ ಟಾಟಾ ಸ್ಕೈ ದೇಶದ ಎಲ್ಲಾ ಡಿಟಿಎಚ್ ಆಪರೇಟರ್‌ಗಳಿಗಿಂತ ಉತ್ತಮವಾದ ಮೊಬೈಲ್ ಅಪ್ಲಿಕೇಶನ್‌ಗಳನ್ನು ಹೊಂದಿದೆ. ಟಾಟಾ ಸ್ಕೈ ಮೊಬೈಲ್ ಅಪ್ಲಿಕೇಶನ್ ಬಳಕೆದಾರರಿಗೆ ತಮ್ಮ ಡಿಟಿಎಚ್ ಖಾತೆಯನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಅದೇ ಸಮಯದಲ್ಲಿ, ಡಿಟಿಎಚ್ ಆಪರೇಟರ್ ಅಪ್ಲಿಕೇಶನ್‌ನಲ್ಲಿಯೇ ಲೈವ್ ಟಿವಿ ಸೇವೆಯನ್ನು ಒದಗಿಸುತ್ತಿದೆ. ಲೈವ್ ಟಿವಿಗಾಗಿ ಪ್ರತ್ಯೇಕ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಅವಶ್ಯಕತೆಯಿಲ್ಲ.

ಸೆಟ್ ಟಾಪ್ ಬಾಕ್ಸ್

ಸೆಟ್ ಟಾಪ್ ಬಾಕ್ಸ್

ಟಾಟಾ ಸ್ಕೈ ಮೊಬೈಲ್ ಅಪ್ಲಿಕೇಶನ್ ಬಳಕೆದಾರರು ತಮ್ಮ ಸೆಟ್-ಟಾಪ್ ಬಾಕ್ಸ್‌ನಲ್ಲಿ ಚಂದಾದಾರರಾಗಿರುವ ಚಾನೆಲ್‌ಗಳನ್ನು ವೀಕ್ಷಿಸಬಹುದು. ಹೆಚ್ಚುವರಿಯಾಗಿ, ಒಟಿಟಿ ಕಂಟೆಂಟ್ ಗಾಗಿ ಕಂಪನಿಯ ವೆಬ್ ಪೋರ್ಟಲ್ ಆಗಿರುವ ಟಾಟಾ ಸ್ಕೈ ವಾಚ್ ತನ್ನ ಬಳಕೆದಾರರಿಗೆ ಡೆಸ್ಕ್‌ಟಾಪ್ ಬ್ರೌಸರ್‌ನಲ್ಲಿ ಲೈವ್ ಟಿವಿಯನ್ನು ವೀಕ್ಷಿಸಲು ಅನುಮತಿಸುತ್ತದೆ. ನೀವು ಸ್ಮಾರ್ಟ್ ಟಿವಿ ಹೊಂದಿದ್ದರೆ, ನೀವು ಬ್ರೌಸರ್ ಅನ್ನು ಡೌನ್‌ಲೋಡ್ ಮಾಡಬಹುದು ಮತ್ತು ಟಾಟಾ ಸ್ಕೈನಿಂದ ಲೈವ್ ಟಿವಿಯನ್ನು ಉಚಿತವಾಗಿ ವೀಕ್ಷಿಸಲು ಈ ವೆಬ್ಸೈಟ್ ತೆರೆಯಬಹುದು. ಆದಾಗ್ಯೂ, ಮೊಬೈಲ್ ಅಪ್ಲಿಕೇಶನ್ ಅಥವಾ ಟಾಟಾ ಸ್ಕೈ ವಾಚ್ ವೆಬ್ಸೈಟ್‌ನಲ್ಲಿನ ಕಂಟೆಂಟ್ನ್ನು ವೀಕ್ಷಿಸಲು ನಿಮ್ಮ ಖಾತೆಯಲ್ಲಿ ಸಕ್ರಿಯ ಚಂದಾದಾರಿಕೆ ಅಗತ್ಯವಿದೆ.

ಟಾಟಾ ಸ್ಕೈ ವೆಬ್ ವರ್ಷನ್: ಪ್ರವೇಶಿಸುವುದು ಮತ್ತು ಲಾಗಿನ್ ಮಾಡುವುದು ಹೇಗೆ?
 

ಟಾಟಾ ಸ್ಕೈ ವೆಬ್ ವರ್ಷನ್: ಪ್ರವೇಶಿಸುವುದು ಮತ್ತು ಲಾಗಿನ್ ಮಾಡುವುದು ಹೇಗೆ?

ಟಾಟಾ ಸ್ಕೈ ವೆಬ್ ಆವೃತ್ತಿಯನ್ನು (watch.tatasky.com) ಯಾವುದೇ ಟಾಟಾ ಸ್ಕೈ ಚಂದಾದಾರರು ತಮ್ಮ ಲ್ಯಾಪ್‌ಟಾಪ್ ಅಥವಾ ಪಿಸಿಯಲ್ಲಿ ಟಾಟಾ ಸ್ಕೈ ಮೂಲಕ ಲೈವ್ ಟಿವಿ ಸೇವೆಯನ್ನು ಪ್ರವೇಶಿಸಲು ಬಯಸುವವರಿಗೆ ಅನುಕೂಲಕರವಾಗಿದೆ. ಟಾಟಾ ಸ್ಕೈ ಮೊಬೈಲ್ ಅಪ್ಲಿಕೇಶನ್‌ನಿಂದಾಗಿ ಟಾಟಾ ಸ್ಕೈ ನೀಡುವ ಲೈವ್ ಟಿವಿ ಚಾನೆಲ್‌ಗಳು ಸ್ಮಾರ್ಟ್‌ಫೋನ್‌ನಲ್ಲಿ ಸುಲಭವಾಗಿ ವಿಕ್ಷಿಸಬಹುದಾದರೂ, ಟಿವಿಗೆ ಪ್ರವೇಶವಿಲ್ಲದಿದ್ದಲ್ಲಿ ಪ್ರದರ್ಶನಗಳನ್ನು ಸ್ವಲ್ಪ ದೊಡ್ಡ ಪರದೆಯಲ್ಲಿ ವೀಕ್ಷಿಸಲು ಬಯಸುವ ಬಳಕೆದಾರರು ಟಾಟಾ ಸ್ಕೈ ವೆಬ್ ಆವೃತ್ತಿಯನ್ನು ಬಳಸಬೇಕಾಗುತ್ತದೆ. ಅದಕ್ಕಾಗಿ ಚಂದಾದಾರರು ಮೊದಲು ಟಾಟಾ ಸ್ಕೈ ವೆಬ್ ಆವೃತ್ತಿಯನ್ನು ತೆರೆಯಬೇಕಾಗುತ್ತದೆ.

ಉಪವಿಭಾಗಗಳ ವಿಂಗಡನೆ

ಉಪವಿಭಾಗಗಳ ವಿಂಗಡನೆ

ಇಲ್ಲಿ, ಬಳಕೆದಾರರು ವೆಬ್ಸೈಟ್ ಅನ್ನು ಹೋಮ್, ಲೈವ್ ಟಿವಿ, ಆನ್ ಡಿಮ್ಯಾಂಡ್, ವಾಚ್‌ಲಿಸ್ಟ್ ಮತ್ತು ಮೈ ಬಾಕ್ಸ್ ಅನ್ನು ಒಳಗೊಂಡಿರುವ ಕೆಲವು ಉಪವಿಭಾಗಗಳಾಗಿ ವಿಂಗಡಿಸಲಾಗಿದೆ. ಈಗ ವೆಬ್ಸೈಟ್‌ನ ಸಂಪೂರ್ಣ ಬಳಕೆಗಾಗಿ, ಟಾಟಾ ಸ್ಕೈ ಚಂದಾದಾರರು ವೆಬ್ ಆವೃತ್ತಿಗೆ ಲಾಗ್ ಇನ್ ಆಗಬೇಕಾಗುತ್ತದೆ. ಲಾಗಿನ್ ಬಟನ್ ಟ್ಯಾಪ್ ಮಾಡುವಾಗ, ಬಳಕೆದಾರರು ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ಒಟಿಪಿ ಅಥವಾ ಟಾಟಾ ಸ್ಕೈ ಲಾಗಿನ್ ಪಾಸ್‌ವರ್ಡ್‌ನೊಂದಿಗೆ ಲಾಗ್ ಇನ್ ಆಗಬೇಕಾಗುತ್ತದೆ.

ಟಾಟಾ ಸ್ಕೈ ವೆಬ್ ಆವೃತ್ತಿಯ ಹೆಚ್ಚಿನ ವೈಶಿಷ್ಟ್ಯಗಳು

ಟಾಟಾ ಸ್ಕೈ ವೆಬ್ ಆವೃತ್ತಿಯ ಹೆಚ್ಚಿನ ವೈಶಿಷ್ಟ್ಯಗಳು

ಹೋಮ್ ವಿಭಾಗದಲ್ಲಿ ಲೈವ್ ಸ್ಪೋರ್ಟ್ಸ್, ಲೈವ್ ನ್ಯೂಸ್, ಕಿಡ್ಸ್ ಟಿವಿ ಶೋಗಳು, ಲೈವ್ ಟಿವಿ ಶೋಗಳು, ವಾರದ ಆಯ್ಕೆ ಮತ್ತು ಹೆಚ್ಚಿನದನ್ನು ಒಳಗೊಂಡಿರುವ ಪ್ರದರ್ಶನಗಳಿಗೆ ಸಂಬಂಧಿಸಿದಂತೆ ಚಂದಾದಾರರು ಅವಕಾಶಗಳನ್ನು ಪಡೆಯುತ್ತಾರೆ. ಚಂದಾದಾರರು ಈ ವಿಭಾಗದಲ್ಲಿ ಟಾಟಾ ಸ್ಕೈ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಬಳಕೆದಾರರು ತಮ್ಮ ಇಚ್ಚೆಯಂತೆ ಕಂಡುಕೊಳ್ಳುವ ಎರಡನೇ ವಿಭಾಗವೆಂದರೆ ಲೈವ್ ಟಿವಿ ವಿಭಾಗ. ಅಲ್ಲಿ ಅವರು ತಮ್ಮ ನೆಚ್ಚಿನ ಶೋ ಮತ್ತು ಚಲನಚಿತ್ರಗಳನ್ನು, ಚಾನೆಲ್‌ಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಬಳಕೆದಾರರು ತಾವು ವೀಕ್ಷಿಸಲು ಬಯಸುವ ಆಯ್ಕೆಯನ್ನು ಹುಡುಕಲು ಅನುಕೂಲಕರವಾಗಿರುತ್ತದೆ.

Read more about: jio telecom money business trai
English summary

Tata Sky Allows its Subscribers to Watch Over 400 Live TV Channels

Tata Sky already has one of the finest mobile apps from any DTH operators in the country.
Story first published: Saturday, September 7, 2019, 9:03 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more